ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ಹಂಗಳೂರಿನ ಪ್ರಸನ್ನ ಆಂಜನೇಯ ದೇವಸ್ಧಾನಕ್ಕೆ ಚಿತ್ರದುರ್ಗದ ಸಾಹಸಿ ಜೋತಿರಾಜ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಧಾನದ ಸ್ಧಾಪಕರಾದ ಸುರೇಶ ಡಿ. ಪಡುಕೋಣೆ, ದೆಹಲಿಯಲ್ಲಿ ನೆಡೆದ ರಾಷ್ಟ್ರ ಮಟ್ಟದ ವಾಲ್ ಕ್ಲೈಬಿಂಗ್ ಸ್ಪರ್ಧೆಯ ಚಿನ್ನದ ಪದಕ ವಿಜೇತ ಮಾ. ಅರ್ಜುನ್, ವಿಘೇಶ್ವರ ಯುವಕ ಸಂಘದ ಅದ್ಯಕ್ಷ ಕೃಷ್ಣ ದೇವಾಡಿಗ, ಪತ್ರಕರ್ತ ನಾಗರಾಜ ರಾಯಪ್ಪನಮಠ ಮೊದಲಾದವರು ಜೊತೆಗಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಪ್ರದೇಶದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಐದು ವರ್ಷಗಳ ಮುನ್ನೋಟದಿಂದ ಕೂಡಿದ ‘ನಮ್ಮ ಗ್ರಾಮ ನಮ್ಮ ಯೋಜನೆ’ ರೂಪಿಸಲು ರಾಜ್ಯದ ಎಲ್ಲ ಗ್ರಾಮ ಪಂಚಾಯತ್ಗಳಿಗೆ ಸರಕಾರ ನಿರ್ದೇಶನ ನೀಡಿದೆ. ಎಲ್ಲೆಡೆ ಈಗ ಅದರ ಪ್ರಕ್ರಿಯೆ ಆರಂಭವಾಗಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ತಾಳಿದೆ. ಕುಂದಾಪುರ ತಾಲೂಕಿನ ಪಡುವರಿ, ಹಳ್ಳಿಹೊಳೆ, ಸಿದ್ದಾಪುರ, ಕುಂಭಾಶಿ, ವಂಡ್ಸೆ, ಕರ್ಕುಂಜೆ ಗ್ರಾಮ ಪಂಚಾಯತ್ಗಳು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಮತ್ತು ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಬೆಂಬಲದೊಂದಿಗೆ ಮಾದರಿ ಪಂಚ ವಾರ್ಷಿಕ ಯೋಜನೆ ರೂಪಿಸುವ ಕೆಲಸಕ್ಕೆ ಚಾಲನೆ ನೀಡಿದ್ದು ಜಿಲ್ಲಾ ಪಂಚಾಯತ್ ಅದಕ್ಕೆ ಎಲ್ಲ ವಿಧದ ಸಹಕಾರ ನೀಡುತ್ತಿದೆ. ಆರು ಗ್ರಾಮ ಪಂಚಾಯತ್ಗಳು ಈಗಾಗಲೆ ಪೂರ್ವಭಾವಿ ಸಭೆಗಳನ್ನು ನಡೆಸಿ, ಆರಂಭಿಕ ಪ್ರಕ್ರಿಯೆಗಳಿಗಾಗಿ ಕಾರ್ಯತಂಡಗಳನ್ನು ರಚಿಸಿಕೊಂಡಿವೆ. ಈ ತಂಡಗಳು ಗ್ರಾಮದ ಪ್ರಸಕ್ತ ಸ್ಥಿತಿಗತಿ ಅಧ್ಯಯನ, ಮಾಹಿತಿ ಸಂಗ್ರಹದಲ್ಲಿ ನಿರತವಾಗಿವೆ. ಈ ಯೋಜನೆ ಗರಿಷ್ಠ ಜನಸಹಭಾಗಿತ್ವದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮುದಾಯದ ಸಂಘಟನೆಗಳು ತಮ್ಮ ಸದಸ್ಯರಲ್ಲಿ ಧಾರ್ಮಿಕ ಹಾಗೂ ಸಂಘಟನಾ ಮನೋಧರ್ಮ ನಶಿಸದಂತೆ ಮಾಡಲು ಆಗಾಗ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಣ ಸಂಗ್ರಹಿಸಿ ಅದ್ದೂರಿಯ ಸಮಾರಂಭಗಳನ್ನು ಮಾಡುವುದರ ಬದಲಿಗೆ ಜನರನ್ನು ಒಗ್ಗೂಡಿಸುವ, ದುರ್ಬಲರ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಮಾಜಿ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಹೇಳಿದರು. ಉಪ್ಪುಂದ ಸಮೃದ್ಧ್ ಸಭಾಭವನದಲ್ಲಿ ನಡೆದ ಉಪ್ಪುಂದ, ಬಿಜೂರು, ನಂದನವನ ಹಾಗೂ ಕೆರ್ಗಾಲ್ ಗ್ರಾಮ ವ್ಯಾಪ್ತಿಯ ಗಾಣಿಗ ಸೇವಾ ಸಂಘ ಉಪ್ಪುಂದ ಘಟಕದ ತೃತೀಯ ವಾರ್ಷಿಕೋತ್ಸವ, ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಮುದಾಯದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದ ಒಳಿತಿಗಾಗಿ ಯೋಚಿಸಿ, ದೊರೆತ ಅವಕಾಶವನ್ನು ಒಳ್ಳೆಯ ಉದ್ದೇಶಕ್ಕಾಗಿ ಸದುಪಯೋಗ ಪಡಿಸಿಕೊಂಡು ಸತ್ಕಾರ್ಯಗಳನ್ನು ಮಾಡಬೇಕು ಎಂದು ಸಂಘದ ಸದಸ್ಯರಿಗೆ ಸಲಹೆ ನೀಡಿದರು. ಉಪ್ಪುಂದ ಘಟಕದ ಅಧ್ಯಕ್ಷ ಗಣಪಯ್ಯ ಗಾಣಿಗ ಅಧ್ಯಕ್ಷತೆವಹಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರಿಗೆ ಶ್ರೀದೇವರ ಭಕ್ತರೊಬ್ಬರು ಸೇವಾರೂಪದಲ್ಲಿ ಶ್ರೀದೇವರಿಗೆ ವಜ್ರದ ಕಿರೀಟವನ್ನು ಸಮರ್ಪಿಸಿದರು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ನೂತನ ವಜ್ರದ ಕಿರೀಟವನ್ನು ಶ್ರೀ ದೇವರಿಗೆ ಸಮರ್ಪಿಸಿ ಆಶೀರ್ವದಿಸಿದರು. ತಾನು ಮಾಡಿದ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಶ್ರೀದೇವರ ಸೇವೆಗೆ ಮೀಸಲಿರಿಸಬೇಕು. ದೇವರ ಸೇವೆಯನ್ನು ನಿತ್ಯ ನಿರಂತರವಾಗಿ ಮಾಡುವುದರಿಂದ ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ. ದೇವರಿಗೆ ವಜ್ರದ ಕಿರೀಟವನ್ನು ಸಮರ್ಪಿಸಿದ ಭಕ್ತರ ಜೀವನರ ವಜ್ರದಂತೆ ಬೆಳಗಲಿ ಎಂದು ಶ್ರೀಗಳು ಹರಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ಜಿ.ವೆಂಕಟೇಶ ನಾಯಕ್, ಎಂ.ಭಾಸ್ಕರ ಪೈ, ರಾಧಿಕಾ ರಾಮಕೃಷ್ಣ ಪೈ, ವೈದಿಕರು, ಪುರೋಹಿತರು, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಭಜಕರು, ಜಿಎಸ್ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಕುಂದಾಪ್ರ ಡಆಟ್ ಕಾಂ ಸುದ್ದಿ. ಕೋಟ: ಪತ್ರಿಕಾ ವರದಿಗಾರನ ಮೇಲೆ ಪೂರ್ವದ್ವೇಷದಿಂದ ಜಾತಿನಿಂದನೆಯ ಸುಳ್ಳು ದೂರು ದಾಖಲಿಸಿದ್ದು ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ, ಮುಂದೆ ವರದಿಗಾರರಿಗೆ ನಿರ್ಭೀತಿಯಿಂದ ವರದಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಡಿವೈಎಸ್ಪಿಯವರಿಗೆ, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್ರವರ ಮೂಲಕ ಮನವಿ ಮಾಡಲಾಯಿತು. ಶಿರಿಯಾರ ಪಂಚಾಯಿತಿ ವ್ಯಾಪ್ತಿಯ ಮದಗದಿಂದ ಅಕ್ರಮ ಮಣ್ಣು ಸಾಗಾಟವಾಗುತ್ತಿರುವ ಕುರಿತು ವರದಿಗಾರ ಗಣೇಶ್ ಈ ಹಿಂದೆ ವರದಿ ಮಾಡಿದ್ದರು. ಈ ವರದಿಯಲ್ಲಿ ಅಧ್ಯಕ್ಷರ ಹೇಳಿಕೆಯನ್ನು ಪಡೆದಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡಿದ್ದ ಸ್ಥಳೀಯ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅವರು ಮುಂದೆ ಕೇಸ್ ಹಾಕುವುದಾಗಿ ವರದಿಗಾರರಿಗೆ ಸಾರ್ವಜನಿಕವಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಅವಕಾಶಕ್ಕಾಗಿ ಕಾದ ಪಂಚಾಯಿತಿ ಅಧ್ಯಕ್ಷೆ ನಡೆಯದೆ ಇರುವ ಘಟನೆಯಲ್ಲಿ ಸೃಷ್ಠಿಸಿ ವರದಿಗಾರ ಗಣೇಶ್ ಸಾಬ್ರಕಟ್ಟೆಯವರ ಮೇಲೆ ಜಾತಿನಿಂದನೆಯ ಕೇಸು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘವು…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಡುಪಿ ಪೂರ್ಣಪ್ರಜ್ಞಾ ಕಾಲೇಜು ವಿದ್ಯಾರ್ಥಿನಿ ವೃಂದಾ ವಿ. ಕಿಣಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆಯಲ್ಲಿ ಶೇ.97.5 ಅಂಕಗಳನ್ನು ಪಡೆದು ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕನ್ನಡ, ಅಕೌಂಟೆನ್ಸಿ, ಸ್ಟಾಟ್, ಬಿಜಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಶೇ.100 ಅಂಕಪಡೆದು ಒಟ್ಟು 585 ಅಂಕ ಪಡೆದಿದ್ದಳು. ವೃಂದಾ ಬೈಂದೂರಿನ ಉದ್ಯಮಿ ಕೆ. ವೆಂಕಟೇಶ್ ಕಿಣಿ ಮತ್ತು ನಯನ ವಿ. ಕಿಣಿ ದಂಪತಿಯ ಪುತ್ರಿ.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಯಾರ ಬದುಕು ಹೇಗೆ ತಿರುವು ಪಡೆಯುತ್ತದೆ ಎನ್ನೋದಕ್ಕೆ ಬಾಲಕಿ ಬದಲಾದ ಜೀವನವೇ ಸಾಕ್ಷಿ. ಕುಂದಾಪುರ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಎಸ್ಸೆಸ್ಎಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಪಾಸ್! ಕೆದೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕಾವೇರಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿನಿ. ಕಳೆದ ಏಳು ವರ್ಷದ ಹಿಂದೆ ತಾಯಿ ಜೊತೆ ಕುಂದಾಪುರ ಶಾಸ್ತ್ರಿ ವೃತ್ತ, ಬಸ್ ಸ್ಟ್ಯಾಂಡ್ ಬಳಿ ಭಿಕ್ಷೆ ಬೀಡುತ್ತಿದ್ದ ಈಕೆ ಕೆದೂರು ಸ್ಪೂರ್ತಿಧಾಮ ಸೇರಿದ ನಂತರ ಬದುಕೇ ಬದಲಾಯಿತು. ಕಾವೇರಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಹುಟ್ಟೂರು. ತಾಯಿ ರತ್ನಾ, ತಂದೆ ಗಂಗಣ್ಣ. ತಂದೆ ಎಲ್ಲಿದ್ದಾರೋ ಗೊತ್ತಿಲ್ಲ. ತಾಯಿ ತೀರಿಕೊಂಡಿದ್ದು, ಇಬ್ಬರ ತಮ್ಮಂದಿರ ಜೊತೆ ಸ್ಪೂರ್ತಿಯಲ್ಲಿದ್ದಾಳೆ. ಒಬ್ಬ ತಮ್ಮ 1ನೇ ತರಗತಿ ಓದುತ್ತಿದ್ದರೆ, ಮತ್ತೊಬ್ಬ ತಮ್ಮ 3ನೇ ತರಗತಿ ವಿದ್ಯಾರ್ಥಿ. 2008-09ರಲ್ಲಿ ಸ್ಪೂರ್ತಿಧಾಮ ಸೇರಿದ ಕಾವೇರಿ ಕೆದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಗೆ ದಾಖಲಾದ ನಂತರ ಯಾವ ತರಗತಿಯಲ್ಲೂ ಫೇಲ್ ಆಗದೆ ಪಾಸಾಗುತ್ತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೆರ್ಗಾಲು ಗ್ರಾಪಂ ವ್ಯಾಪ್ತಿಯ ನಾಯ್ಕನಕಟ್ಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್ನ ವಿಶೇಷ ಮಹಾಸಭೆಯು ಸಂಜೆ ಜರಗಿತು. ಸುಮಾರು 800 ನೂರು ವರ್ಷ ಇತಿಹಾಸವಿರುವ ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ತೆರವುಗೊಳಿಸಿದ್ದು, ಈಗ ದೇವಸ್ಥಾನವನ್ನು ಅಂದಾಜು ವೆಚ್ಚ ರೂ. 35 ಲಕ್ಷ ವೆಚ್ಚದಲ್ಲಿ ಪುನರ್ನಿರ್ಮಾಣ ಮಾಡಲು ಈ ಹಿಂದೆ ಸಮಾಜ ಬಾಂಧವರು ತೀರ್ಮಾನಿಸಿದಂತೆ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ. ನೂತನ ಶ್ರೀ ವೆಂಕಟರಮಣ ದೇವಾಲಯವನ್ನು ಜುಲೈ ಮೊದಲ ವಾರದ ಮೂರು ದಿನಗಳು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪುನಃಪ್ರತಿಷ್ಟಾ ಮಹೋತ್ಸವ ಆಚರಿಸುವಂತೆ ನಿರ್ಧರಿಸಲಾಯಿತು. ಸೇವಾ ಸಮಿತಿಯ ಟ್ರಸ್ಟ್ನ ಅಧ್ಯಕ್ಷ ದಾಮೋದರ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ಸವದ ಕಾಲದಲ್ಲಿ ದೇವಸ್ಥಾನದಲ್ಲಿ ಜರಗುವ ಎಲ್ಲಾ ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಗನ ಸಾವಿನಿಂದ ತೀವ್ರವಾಗಿ ನೊಂದಿದ್ದ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ನಾಡ ಗ್ರಾಮದಲ್ಲಿ ವರದಿಯಾಗಿದೆ. ನಾಡದ ಚಿಕ್ಕು ಮಡಿವಾಳ್ತಿ (೪೮) ಸಾವಿಗೆ ಶರಣಾದವರು. ತಿಂಗಳ ಹಿಂದೆ ಮನೆಯ ಸಮೀಪದ ಹಾಡಿಯೊಂದರಲ್ಲಿ ಮಗ ಮಂಜುನಾಥ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮದುವೆಗೆ ಕೆಲವು ದಿನಗಳಷ್ಟೇ ಬಾಕಿ ಇರುವಾಗ ಇದ್ದ ಒಬ್ಬನೇ ಮಗ ಇದ್ದಕ್ಕಿದ್ದಂತೆ ನೇಣಿಗೆ ಕೊರಳೊಡ್ಡಿದ ಬಳಿಕ ತೀವೃ ನೊಂದುಕೊಂಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮಗ ಮನೆಯಲ್ಲಿ ಇದ್ದವನು ಏಕಾಏಕಿ ನೇಣಿಗೆ ಶರಣಾಗಿದ್ದರಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಚಿಕ್ಕು ಅವರಿಗೆ ದಿಕ್ಕು ತೋಚದಂತಾಗಿತ್ತು. ಆತನ ಸಾವಿನ ನಂತರ ಅವರನ್ನು ಕೆಲದಿನಗಳ ಕಾಲ ಬೆಂಗಳೂರಿನ ಸಂಬಂಧಿಯೋರ್ವರ ಮನೆಗೆ ಕರೆದೊಯ್ಯಲಾಗಿತ್ತು. ಆದರೆ ಎರಡು ದಿನಗಳ ಹಿಂದಷ್ಟೇ ಮರಳಿ ಕೋಟೇಶ್ವರದ ತನ್ನ ತಂಗಿಯ ಮನೆಗೆ ಬಂದ ಅವರು ಭಾನುವಾರ ಬೆಳಿಗ್ಗೆ ನಾಡದ ತನ್ನ ಮನೆಗೆ ಮರಳಿ ಬಂದಿದ್ದರು. ಆಕೆ ಮಧ್ಯಾಹ್ನದ ವೇಳೆಗೆ ಮನೆಯ ಮಾಳಿಗೆಯಲ್ಲಿ ನೇಣಿಗೆ ಶರಣಾಗಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪ್ರಗತಿಪರ ಕೃಷಿಕ ಹಿರಿಯ ಕಾಂಗ್ರೇಸಿಗ ಕಕ್ಕುಂಜೆ ರಾಧಾಕೃಷ್ಣ ಅಡಿಗ (77) ರವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಮಾರು ನಾಲ್ಕು ಅವಧಿಗೆ ಕುಂದಾಪುರ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿಯಾಗಿ, ಎ.ಪಿ.ಯಂ.ಸಿ ಅಧ್ಯಕ್ಷರಾಗಿ, ರಿಕ್ಷಾ-ಟ್ಯಾಕ್ಸಿ-ಮೆಟಾಡೋರ್ ಯೂನಿಯನ್ ಅಧ್ಯಕ್ಷರಾಗಿ ತೆಂಗಿನ ನಾರು ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅಡಿಗರು ಉತ್ತಮ ಕ್ರೀಡಾಪಟುವಾಗಿದ್ದರು. ಮೃತರು ಪತ್ನಿ ಶ್ರೀಮತಿ ರಾಣಿ ಅಡಿಗ ಸಹಿತ ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದಾರೆ. ಅಡಿಗರ ನಿಧನದ ಕುರಿತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಜನಾರ್ದನ್ ಪೂಜಾರಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಗರ ಪ್ರಾಧಿಕಾರದ…
