ಪತ್ರಕರ್ತನ ಮೇಲೆ ಜಾತಿ ನಿಂದನೆ ಆರೋಪ. ದೂರು ಪರಾಮರ್ಶಿಸುವಂತೆ ಪತ್ರಕರ್ತರ ಸಂಘದಿಂದ ಮನವಿ

Call us

Call us

Call us

ಕುಂದಾಪ್ರ ಡಆಟ್ ಕಾಂ ಸುದ್ದಿ.
ಕೋಟ: ಪತ್ರಿಕಾ ವರದಿಗಾರನ ಮೇಲೆ ಪೂರ್ವದ್ವೇಷದಿಂದ ಜಾತಿನಿಂದನೆಯ ಸುಳ್ಳು ದೂರು ದಾಖಲಿಸಿದ್ದು ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ, ಮುಂದೆ ವರದಿಗಾರರಿಗೆ ನಿರ್ಭೀತಿಯಿಂದ ವರದಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬ್ರಹ್ಮಾವರ ವಲಯ ಕಾರ‍್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಡಿವೈಎಸ್‌ಪಿಯವರಿಗೆ, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್‌ರವರ ಮೂಲಕ ಮನವಿ ಮಾಡಲಾಯಿತು.

Call us

Click Here

ಶಿರಿಯಾರ ಪಂಚಾಯಿತಿ ವ್ಯಾಪ್ತಿಯ ಮದಗದಿಂದ ಅಕ್ರಮ ಮಣ್ಣು ಸಾಗಾಟವಾಗುತ್ತಿರುವ ಕುರಿತು ವರದಿಗಾರ ಗಣೇಶ್ ಈ ಹಿಂದೆ ವರದಿ ಮಾಡಿದ್ದರು. ಈ ವರದಿಯಲ್ಲಿ ಅಧ್ಯಕ್ಷರ ಹೇಳಿಕೆಯನ್ನು ಪಡೆದಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡಿದ್ದ ಸ್ಥಳೀಯ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅವರು ಮುಂದೆ ಕೇಸ್ ಹಾಕುವುದಾಗಿ ವರದಿಗಾರರಿಗೆ ಸಾರ್ವಜನಿಕವಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಅವಕಾಶಕ್ಕಾಗಿ ಕಾದ ಪಂಚಾಯಿತಿ ಅಧ್ಯಕ್ಷೆ ನಡೆಯದೆ ಇರುವ ಘಟನೆಯಲ್ಲಿ ಸೃಷ್ಠಿಸಿ ವರದಿಗಾರ ಗಣೇಶ್ ಸಾಬ್ರಕಟ್ಟೆಯವರ ಮೇಲೆ ಜಾತಿನಿಂದನೆಯ ಕೇಸು ದಾಖಲಿಸಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ರಹ್ಮಾವರ ವಲಯ ಕಾರ‍್ಯನಿರತ ಪತ್ರಕರ್ತರ ಸಂಘವು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ವರದಿ ಮಾಡುವಾಗ ಕಾನೂನುನನ್ನು ಅಸ್ತ್ರವಾಗಿಸಿಕೊಂಡು ವಿನಾ ಕಾರಣ ದೂರು ನೀಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಇದರಿಂದ ಪತ್ರಿಕಾ ಸ್ವಾತಂತ್ರ್ಯ ಹರಣವಾಗುತ್ತಿದೆ, ಸುಳ್ಳು ದೂರು ದಾಖಲಿಸುವ ಮೂಲಕ ವರದಿಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿ ವ್ಯವಸ್ಥೆಯ ದಾರಿ ತಪ್ಪಿಸುವ ಪ್ರಯತ್ನಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಪುನರ್ ವಿಮರ್ಶಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಎಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಬ್ರಹ್ಮಾವರ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ‍್ಯ, ಕಾರ‍್ಯದರ್ಶಿ ಅಶ್ವಥ್ ಆಚಾರ‍್ಯ ಯಡಬೆಟ್ಟು ಹಾಗೂ ಸದಸ್ಯರಾದ ವಸಂತ್ ಗಿಳಿಯಾರು, ಚಂದ್ರಶೇಖರ ಬೀಜಾಡಿ, ಶೇಷಗಿರಿ ಭಟ್, ಮೋಹನ ಉಡುಪ, ಪ್ರವೀಣ್ ಮುದ್ದೂರು, ಹರ್ಷರಾಜ್ ಕೋಡಿಕನ್ಯಾಣ, ರವೀಂದ್ರ ಕೋಟ, ರಾಜೇಶ ಅಚ್ಲಾಡಿ ಮತ್ತಿತರರು ಉಪಸ್ಥಿತರಿದ್ದರು.

Leave a Reply