ಸೇವಾಮನೋಭಾವದಿಂದ ಆತ್ಮತೃಪ್ತಿ ದೊರೆಯುತ್ತದೆ : ಜಗನ್ನಾಥ ಶೆಟ್ಟಿ ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವೃತ್ತಿ ಎಂಬುದು ನಮ್ಮ ಬದುಕಿಗಾಗಿಯಾದರೂ ನಮ್ಮಿಂದಾದ ಸಹಾಯವನ್ನು ಅರ್ಹರಿಗೆ ಮಾಡಬೇಕು. ದುಡಿಮೆಯ ಒಂದಂಶ ಅಶಕ್ತರಿಗೆ, ದೀನದಲಿತರಿಗೆ ನೀಡಿ ಅವರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಿದಾಗ ಸಮಾಜದಲ್ಲಿ ಸುಧಾರಣೆ ಸಾಧ್ಯ. ಆರೋಗ್ಯದ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ನೇತ್ರ ತಪಾಸಣಾ ಶಿಬಿರಗಳು ಸಹಾಕಾರಿಯಾಗಿವೆ ಎಂದು ನಿವೃತ್ತ ಐಎಫ್ಎಸ್ ಅಧಿಕಾರಿ ಬಿ.ಜಗನ್ನಾಥ ಶೆಟ್ಟಿಯವರು ನುಡಿದರು. ಅಂಜಲಿ ಆಸ್ಪತ್ರೆ, ಬೈಂದೂರು, ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ, ಸಿನಿಯರ್ ಸಿಟಿಜನ್ ಅಸೋಸಿಯೇಷನ್ ಬೈಂದೂರು ಇವರ ಆಶ್ರಯದಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆ ಕೋಟ, ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ ಚಾರಿಟೀಸ್ (ರಿ.), ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ವಾರಣಾ ವಿಭಾಗ ಉಡುಪಿ, ಲಯನ್ಸ್ ಲಯನೆಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಸಹಯೋಗದಲ್ಲಿ ಅಂಜಲಿ ಆಸ್ಪತ್ರೆಯಲ್ಲಿ ನಡೆದ ಸಂಪೂರ್ಣ ಉಚಿತ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಬೆಳಿಗ್ಗೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಪಾದಾಚಾರಿ ಮಹಿಳೆಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡು ಉಡುಪಿಯ ಖಾಸಗೀ ಆಸ್ಪತ್ರೆಗೆ ದಾಖಲಿಸಿಲಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸಾಲಿಗ್ರಾಮ ಪಾರಂಪಳ್ಳಿಯ ಲಚ್ಚಿ ಪೂಜಾರ್ತಿ (64) ಎಂದು ಗುರುತಿಸಲಾಗಿದೆ. ಇವರು ವಿಶೇಷ ಕಾರ್ಯಕ್ರಮವೊಂದಕ್ಕೆ ಭಾಗವಹಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುವಾಗ ಉಡುಪಿಯಿಂದ ಕೋಟ ಕಡೆಗೆ ತೆರಳುತ್ತಿದ್ದ ಕಾರೊಂದು ಇವರಿಗೆ ಢಿಕ್ಕಿ ಹೊಡೆದ ಪರಿಣಾಮ ಇವರ ತಲೆ ರಸ್ತೆಯ ಡಿವೈಡರ್ಗೆ ಬಡಿದ ಕಾರಣ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಪರಿಶೀಲನೆಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಮಹಿಳೆ ಮೃತಪಟ್ಟಿದ್ದಾರೆ. ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ಗಾಜು ಒಡೆದು ಹೋಗಿದೆ. ಮಹಿಳೆ ನಾಲ್ವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇದೇ ಪ್ರದೇಶದಲ್ಲಿ ಕೆಲವು…
ಕುಂದಾಪ್ರ ಡಾಟ್ ಕಾಂ ವರದಿ | ಸಮಾಜದ ಎಲ್ಲಾ ಸ್ತರದ ಮಕ್ಕಳೂ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಬೇಕು ಎನ್ನುವ ಧ್ಯೇಯದೊಂದಿಗೆ 1982ರಲ್ಲಿ ಪ್ರಾರಂಭಗೊಂಡ ‘ವ್ಯಾಸ ಕುಂಜಿಬೆಟ್ಟು ರಾಮಚಂದ್ರ ಆಚಾರ್ಯ ಸ್ಮಾರಕ ಆಂಗ್ಲಮಾಧ್ಯಮ ಪ್ರೌಢ ಶಾಲೆಯು’ (ವಿ.ಕೆ.ಆರ್. ಆಚಾರ್ಯ) ಕುಂದಾಪುರದ ಪ್ರಥಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಾಗಿದ್ದು ಗುಣಮಟ್ಟದ ಶಿಕ್ಷಣದ ಮೂಲಕ ಇಂದಿಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸತತ 10 ವರ್ಷಗಳಿಂದ ಶೇಕಡಾ 100ರ ಫಲಿತಾಂಶವನ್ನು ದಾಖಲಿಸುತ್ತಾ ಬಂದ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಿಕೆಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ. ಕೇವಲ ಪಾಠವಲ್ಲದೆ ಪಾಠೇತರ ಚಟುವಟಿಕೆಗಳಲ್ಲಿಯೂ ಅಗ್ರಮಾನ್ಯವೆನಿಸಿದ ಈ ಸಂಸ್ಥೆಯು ಹಲವಾರು ವಿಶೇಷತೆಗಳಿಂದ ಕೂಡಿದೆ. ನಿರಂತರ ೫ ವರ್ಷಗಳಿಂದ ಸಾಧಕಶಾಲಾ ಪ್ರಶಸ್ತಿಯನ್ನು ಪಡೆಯುತ್ತಿರುವ ಹೆಗ್ಗಳಿಕೆ ಈ ಸಂಸ್ಥೆಯದ್ದು. ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರದ ಮುಖ್ಯಭಾಗದಲ್ಲಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಾಲಾವಾಹನದ ವ್ಯವಸ್ಥೆ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ನೀಡಿದೆ. ಶಿಸ್ತಿಗೆ ಮೊದಲ ಪ್ರಾಶಸ್ತ್ಯವಿರುವ ಈ ಸಂಸ್ಥೆಯಲ್ಲಿ ಸುಸಜ್ಜಿತ ಒಳಾಂಗಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕುಂದಾಪುರ ತಾಲೂಕು, ಚಿತ್ತೂರು ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ಕದಳಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕದಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಂದ ಮಧ್ಯಸ್ಥರು ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಧ.ಗ್ರಾ.ಯೋಜನೆಯ ತಾಲೂಕು ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಉದಯ ಜಿ.ಪೂಜಾರಿ ಚಿತ್ತೂರು, ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ವಂಡಬಳ್ಳಿ ಜಯರಾಮ ಶೆಟ್ಟಿ, ನಿಕಟಪೂರ್ವಾಧ್ಯಕ್ಷರಾದ ಡಾ|ಅತುಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ನಾರ್ಕಳಿ ಒಕ್ಕೂಟದ ಉದ್ಘಾಟನೆಯೊಂದಿಗೆ ವಲಯದ ೧೪ ಒಕ್ಕೂಟಗಳ ಪದಗ್ರಹಣ ನಡೆಯಿತು. ವಲಯ ಒಕ್ಕೂಟದ ಅಧ್ಯಕ್ಷ ಗುರುರಾಜ್ ವರದಿ ಮಂಡಿಸಿದರು. ಒಕ್ಕೂಟದ ಅಧ್ಯಕ್ಷ ರಘುರಾಮ ಶೆಟ್ಟಿ ಸ್ವಾಗತಿಸಿ, ಚಿತ್ತೂರು ವಲಯ ಮೇಲ್ವಿಚಾರಕ ಪ್ರಭಾಕರ ಕಾರ್ಯಕ್ರಮ ನಿರ್ವಹಿಸಿದರು. ಸೇವಾ ಪ್ರತಿನಿಧಿ ಪ್ರೇಮಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಲ್ಕು ವೇದಗಳ ಸಾರವನ್ನು ಪಡೆದು ಅನಂದ ಮತ್ತು ಅರಿವನ್ನು ಮೂಡಿಸುವ ಸಲುವಾಗಿ ನಾಟ್ಯ, ನಾಟಕಗಳನ್ನು ಭರತನ ಮೂಲಕ ಸೃಷ್ಠಿಮಾಡಿಕೊಂಡ ಐದನೇ ವೇದವಾಗಿದೆ. ಇದರಲ್ಲಿ ಸಂತೋಷ ಹಾಗೂ ಜ್ಞಾನ ಎರಡೂ ಅಡಕವಾಗಿರುವುದರಿಂದ ರಂಗಕಲೆಗಳನ್ನು ಪಂಚಮವೇದ ಎಂದೂ ಕರೆಯುತ್ತಾರೆ ಎಂದು ರಂಗಕರ್ಮಿ, ರಂಗನಿರ್ದೇಶಕ ಶಿರಸಿ ಡಾ. ಶ್ರೀಪಾದ ಭಟ್ ಹೇಳಿದರು. ಬೈಂದೂರು ಶಾರದಾ ವೇದಿಕೆಯಲ್ಲಿ ಸ್ಥಳೀಯ ಸುರಭಿ ಸಂಸ್ಥೆ ನೇತೃತ್ವದಲ್ಲಿ ನಡೆಯುವ ಮೂರು ದಿನಗಳ ಸಾಂಸ್ಕೃತಿಕ ರಂಗವೈಭವ ’ರಂಗ ಸುರಭಿ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವ್ಯಾವಹಾರಿಕೆ ಕಣ್ಣು ಆದಾಯಗಳನ್ನಷ್ಟೇ ನೋಡಿದರೆ, ಕಲಾತ್ಮಕ ಕಣ್ಣು ರಸಸ್ವಾದದ ಜತೆಗೆ ರಮಣೀಯತೆಯನ್ನು ಅನುಭವಿಸುತ್ತದೆ. ಹಾಗೂ ಹೃದಯದಲ್ಲಿ ಭಾವನೆ ಸ್ಪುರಿಸುತ್ತದೆ. ತಾಯಿ ಮಗುವಿಗೆ ಜೋಗುಳ ಹಾಡುತ್ತಾ ಆ ಮೂಲಕ ತಾಯಿ, ಮಗುವಿನ ಆತ್ಮದ ರೂಪವನ್ನು ಅಂದವಾಗಿಸುತ್ತಾಳೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಅನುಭವ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಜನತೆ ಯೋಚಿಸಬೇಕಾಗಿದೆ ಎಂದರು. ಶ್ರೀಸೇನೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚನ್ನಕೇಶವ ಉಪಾಧ್ಯಾಯ ರಂಗವೈಭವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : 12ನೇ ಶತಮಾನದಲ್ಲಿ ಕ್ರಾಂತಿಕಾರ ಬದಲಾವಣೆಯನ್ನು ತಂದ ಬಸವಣ್ಣನವರು ಜಾತ್ಯಾತೀತ ಸಮಾಜ ನಿರ್ಮಾಣ ಮಾಡಲು ಹೊರಟ ಮಹಾನ್ ದಾರ್ಶನಿಕ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ವಿಶ್ವ ಬಂಧುತ್ವದ ವಿಚಾರಗಳನ್ನು ಬಹಳ ಗಂಭೀರವಾಗಿ ಪ್ರತಿಪಾದಿಸಿದ ಬಸವಣ್ಣನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸುಸ್ಥಿರವಾದ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಮೇಲ್ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಬಾವಿಕಟ್ಟೆ ಮೇಲ್ಗಂಗೊಳ್ಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಮೇಲ್ಗಂಗೊಳ್ಳಿ ಮತ್ತು ಪಂಚಗಂಗಾವಳಿ ಒಕ್ಕೂಟದ ಆಶ್ರಯದಲ್ಲಿ ಜರಗಿದ ಬಸವ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು, ಆದರ್ಶದ ದಾರಿದೀಪವಾಗಿರುವ ಅಪ್ಪಣ್ಣ ಹೆಗ್ಡೆಯವರು ಉಡುಪಿ ಜಿಲ್ಲೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ನೇರಳಕಟ್ಟೆಯ ಖ್ಯಾತ ಉದ್ಯಮಿಯೋರ್ವರು ತನ್ನ ಅಂಗಡಿಯ ಗೋದಾಮಿನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ನೇರಳಕಟ್ಟೆ ನಿವಾಸಿ ಬಾಲಕೃಷ್ಣ ಬಾಳಿಗಾ ಅವರ ಪುತ್ರ ಶ್ರೀಪತಿ ಬಾಳಿಗಾ (40) ನೇಣು ಬಿಗಿದು ಮೃತಪಟ್ಟವರು. ಘಟನೆಯ ವಿವರ: ಇಂದು ಬೆಳಿಗ್ಗೆ ನೆರಳಕಟ್ಟೆಯ ತಮ್ಮ ಅಂಗಡಿಗೆ ಬಂದಿದ್ದ ಶ್ರೀಪತಿ ಎಂದಿನಂತೆ ಸಹಜವಾಗಿ ವ್ಯವಹಾರ ನಡೆಸಿದ್ದರು. ಮಧ್ಯಾಹ್ನದ ಸುಮಾರಿಗೆ ಅಂಗಡಿಯ ನೌಕರನೋರ್ವ ಅಡಿಕೆ ಚೀಲವನ್ನು ಹೊತ್ತು ಪಕ್ಕದಲ್ಲಿದ್ದ ಗೋದಾಮಿಗಿಡಲು ತೆರಳಿದಾಗ ಅಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಪತಿ ಅವರ ದೇಹ ಪತ್ತೆಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ನೇರಳಕಟ್ಟೆಯಲ್ಲಿ ಸ್ವಂತ ಅಂಗಡಿಯನ್ನು ಹೊಂದಿದ್ದ ಶ್ರೀಪತಿ ಬಾಳಿಗ ವಾಣಿಜ್ಯ ಕೃಷಿ ಉತ್ಪನ್ನಗಳ ವ್ಯವಹಾರ ಹೊಂದಿದ್ದರು. ಸ್ವಂತ ಪರಿಶ್ರಮದಿಂದ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದ ಶ್ರೀಪತಿಯವರು ಇತ್ತೀಚೆಗೆ ಭೂ ವ್ಯವಹಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಇವರ ಕುರಿತು ನೆರಳಕಟ್ಟೆ ಪರಿಸರದಲ್ಲಿಯೂ ಒಳ್ಳೆಯ ಅಭಿಪ್ರಾಯವಿದ್ದು, ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದರೆನ್ನಲಾಗಿದೆ. ಕುಟುಂಬದೊಂದಿಗೂ ಉತ್ತಮವಾಗಿದ್ದ ಇವರು…
ಕುಂದಾಪ್ರ ಡಾಟ್ ಕಾಂ ಸಂದರ್ಶನ ಕುಂದಾಪುರ: ಆತನದ್ದು ಕುಂದಾಪುರ ಸಮೀಪದ ಮಣೂರು ಎಂಬ ಗ್ರಾಮೀಣ ಪ್ರದೇಶದ ಕೃಷಿ ಕುಟುಂಬ. ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ಆದಾಗ್ಯೂ ಸತತ ಪ್ರಯತ್ನದ ಮೂಲಕ ಛಲ ಬಿಡದೇ ಯುಪಿಎಸ್ಸಿ ಪರೀಕ್ಷೆ ಬರೆದು ೪೦೮ನೇ ರ್ಯಾಂಕ್ನೊಂದಿಗೆ ಐಎಎಸ್ ಪಾಸ್ ಮಾಡಿದ್ದಾರೆ ಮಣೂರಿನ ಯುವಕ ಹರಿಕೃಷ್ಣ ಮಯ್ಯ. ಕೋಟ ಗ್ರಾಮದ ಮಣೂರಿನ ಮಾಧವ ಮಯ್ಯ ಹಾಗೂ ಲಲಿತ ಮಯ್ಯ ದಂಪತಿಗಳ ಪುತ್ರರಾದ ಹರಿಕೃಷ್ಣ ಮಯ್ಯ ಈ ಪರಿಸರದಲ್ಲೇ ಮೊದಲ ಭಾರಿಗೆ ಐಪಿಎಸ್ ಪಾಸ್ ಮಾಡಿ ತನ್ನೂರಿಗೆ ಕೀರ್ತಿ ತಂದಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಣೂರು ರಾಮಪ್ರಸಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಹೈಸ್ಕೂಲ್ ಹಾಗೂ ಪದವಿಪೂರ್ವ ಶಿಕ್ಷಣವನ್ನು ಕೋಟ ವಿವೇಕಾ ಜೂನಿಯರ್ ಕಾಲೇಜಿನಲ್ಲಿ, ಬಿಎ ಪದವಿಯನ್ನು ಬೆಂಗಳೂರಿನ ಶೇಶಾದ್ರಿಪುರಂ ಪದವಿ ಕಾಲೇಜಿನಲ್ಲಿ ಮುಗಿಸಿದ್ದ ಅವರು ಮುಂದೆ ಮನಶಾಸ್ತ್ರದಲ್ಲೇ ಎಮ್ಎಸ್ಸಿ ಪಡೆದು ಎರಡು ವರ್ಷ ನಿಮಾನ್ಸ್ನಲ್ಲಿ ಜೂನಿಯರ್ ರೀಸರ್ಚರ್ ಆಗಿ ಕೆಲಸ ಮಾಡಿದ್ದರು. ಕುಂದಾಪ್ರ ಡಾಟ್ ಕಾಂ. ನಂತರ ಪರೀಕ್ಷೆಗೆ ತಯಾರಿ ನಡೆಸುವ…
ಕುಂದಾಪ್ರ ಡಾಟ್ ಕಾಂ| ಕುಂದಾಪುರ ತಾಲೂಕಿನ ಬಂಟ್ವಾಡಿಯಲ್ಲಿ ನದಿಗೆ ಕಟ್ಟಲಾಗಿರುವ ವೆಂಟೆಡ್ ಡ್ಯಾಂ ಮೋಡ ಮುಸುಕಿದ ವಾತಾವರಣದಲ್ಲಿ ಕಂಡದ್ದು ಹೀಗೆ. ಚಿತ್ರ: ಚಂದ್ರ ಕೆ. ಹೆಮ್ಮಾಡಿ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಸರ್ವ ಭಜಕವೃಂದ ಹಾಗೂ ಲೋಕಕಲ್ಯಾಣಾರ್ಥವಾಗಿ ಪ್ರಪ್ರಥಮ ಬಾರಿಗೆ ಮೇ.21ರ ಸಂಜೆ 6:46ರ ಗೊಧೋಳಿ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ಕ್ರಿಯಾಚರಣೆ ಅಂಗವಾಗಿ ಬೆಳಿಗ್ಗೆ ೭ಕ್ಕೆ ಉಭಯ ದೇವರಿಗೆ ಪೂಜೆಯ ನಂತರ ನಗರೋತ್ಸವ ಶ್ರೀನಿವಾಸ ಪದ್ಮಾವತಿ ದೇವರ ಆಗಮನ, ಸೀಮಂತ ಪೂಜೆ, ಸಾಮೂಹಿಕ ಕುಂಕುಮಾರ್ಚನೆ ಹಾಗೂ ಶ್ರೀವೆಂಕಟರಮಣ ಭಜನಾ ಮಂಡಳಿ ಮೂಡಬಿದಿರೆ ಇವರಿಂದ ಭಕ್ತಿಸಂಗೀತ ನಡೆಯಲಿದೆ. ಸಾಯಂಕಾಲ ವೇದಿಕೆಗೆ ಶ್ರೀ ವೆಂಕಟರಮಣನ ಆಗಮನ, ವಧೂ ನಿರೀಕ್ಷಣೆ, ಶ್ರೀ ಪದ್ಮಾವತಿಯ ಆಗಮನ, ಸ್ವಯಂವರ ಕಾರ್ಯ, ಅರಶಿನ-ಕುಂಕುಮ ಸಮರ್ಪಣೆ, ಧಾರೆಮಣಿ ಕಟ್ಟುವಿಕೆ, ಶ್ರೀನಿವಾಸ ದೇವರಿಗೆ ಮಧುಪರ್ಕ ಸಮರ್ಪಣೆ, ಮಹೂರ್ತ ನಿರೀಕ್ಷೆ, ಮಾಲಾಧಾರಣೆ, ಕನ್ಯಾದಾನ, ಕಂಕಣ, ಮಂಗಲಸೂತ್ರ ಧಾರಣೆ, ಚಿನ್ನಾಭರಣಾಧಿ ಕಪ್ಪ-ಕಾಣಿಕೆಗಳ ಸಮರ್ಪಣೆ, ಅಗ್ನಿ ಪ್ರತಿಷ್ಟಾಪೂರ್ವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಬಳಿಕ ಕಲ್ಯಾಣೋತ್ಸವದ…
