ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಗಂಗೊಳ್ಳಿ ಸ್ಥಾನೀಯ ಸಮಿತಿ ವತಿಯಿಂದ ಯೋಗ ತರಬೇತಿ ಕಾರ್ಯಕ್ರಮ ಬುಧವಾರ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಯೋಗ ತರಬೇತುದಾರ ರಾಜು ಕೋಟೇಶ್ವರ ಅವರು ಯೋಗ ತರಬೇತಿ ನೀಡಿದರು. ಬಳಿಕ ಮಾತನಾಡಿದ ಅವರು ಮನೋದೈಹಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ, ಅಸ್ತಮಾಗಳಂತಥವುಗಳಿಂದ ಸಂಪೂರ್ಣವಾಗಿ ಹೊರಬರಲು ಯೋಗ ರಾಮಬಾಣ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ, ಔದ್ಯೋಗಿಕವಾಗಿ ಔನ್ನತ್ಯ ಸಾಧಿಸಲು ಹಾಗೂ ಉತ್ತಮ ಸಂಪಾದನೆಗೂ ಅತೀ ಸಹಾಯಕವಾಗಿದೆ. ಸ್ಪರ್ಧಾತ್ಮಕ ಒತ್ತಡ ಯುಗದಲ್ಲಿ ಮನಸ್ಸಿನ ಒತ್ತಡವನ್ನು ದೂರ ಮಾಡಲು ಯೋಗಾಭ್ಯಾಸ ಸಹಾಯಕವಾಗಲಿದೆ ಎಂದರು. ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸಹಸಂಚಾಲಕ ವಾಸುದೇವ ದೇವಾಡಿಗ, ಬಿಜೆಪಿ ಗಂಗೊಳ್ಳಿ ಸ್ಥಾನೀಯ ಸಮಿತಿ ಅಧ್ಯಕ್ಷ ಜಯರಾಮ ದೇವಾಡಿಗ, ಕಾರ್ಯದರ್ಶಿ ಬಿ.ಗಣೇಶ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರಳು ಸಮಸ್ಯೆಯಿಂದಾಗಿ ಇಡೀ ಜಿಲ್ಲೆಯ ಅಭಿವೃದ್ಧಿಯೇ ಸರ್ವನಾಶವಾಗಿದೆ. ಹಸಿರು ಪೀಠಕ್ಕೆ ಮನವರಿಕೆ ಮಾಡಿಕೊಡದಿರುವುದರಿಂದ ಮರಳು ಸಮಸ್ಯೆಗೆ ರಾಜ್ಯ ಸರಕಾರವೇ ಕಾರಣವಾಗಿದ್ದು ಕಾರ್ಮಿಕ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು. ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಬೈಂದೂರು ವತ್ತಿನೆಣಿ ಗುಡ್ಡ ಕುಸಿತದ ಸಮಸ್ಯೆಗೆ ಸರಕಾರದ ನಿರ್ಲಕ್ಷವಾಗಿದ್ದು ಹೆದ್ದಾರಿ ವಿಸ್ತರಣೆಗೆ ಕೇಂದ್ರ ಸರಕಾರ ೧೦೦ ಮೀ.ಕೇಳಿದ್ದು ರಾಜ್ಯ ಸರಕಾರ ೬೦ ಮಿ.ಕೊಟ್ಟಿರುವುದು ಅಲ್ಲದೆ ಅರಣ್ಯ ಇಲಾಖೆಗಳ ತಗಾದೆ ಮಾಡಿದ್ದಾರೆ ಇದು ಯಾರ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಗಮನಿಸಬೇಕು ಎಂದ ಅವರು ಕೇಂದ್ರ ಸರಕಾರದ ಅನುದಾನದಿಂದ ಮಂಜುರಾದ ತಾರಾಪತಿ, ಸೌಡ ಸೇತುವೆ ಅನುದಾನವನ್ನು ರಾಜ್ಯ ಸರಕಾರದೆಂದು ಸ್ಥಳೀಯ ಶಾಸಕರು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗವಾಡಿದರು. ದೇಶದ ಪ್ರಥಮ ಪ್ರಜೆಯೇ ಶ್ರೀಕೃಷ್ಣ ದೇವಸ್ಥಾನಕ್ಕೆ ಬಂದಾಗ ರಾಜ್ಯ ಮುಖ್ಯಮಂತ್ರಿಗಳು ಹಿಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಇವರ ಸಹಯೋಗದೊಂದಿಗೆ ಮೂರನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಉಜಿರೆಯೆ ಎಸ್.ಡಿ.ಎಮ್ ಯೋಗ ಅಧ್ಯಯನ ಕಾಲೇಜಿನ ವಿದ್ಯಾರ್ಥಿ ಡಾ. ಅಶ್ವಿನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ.ಕೆ.ಸತ್ಯನಾರಾಯಣ, ಶಶಿಕಾಂತ ಹತ್ವಾರ್ ರಾಮಚಂದ್ರ ಆಚಾರ್, ಶರಣ್ ಎಸ್.ಜೆ, ಅರುಣ್ ಎ.ಎಸ್, ಪ್ರಶಾಂತ, ಅಂಜನ್ ಕುಮಾರ್ ಎ.ಎಲ್,ಉಜಿರೆಯೆ ಎಸ್.ಡಿ.ಎಮ್ ಯೋಗ ಅಧ್ಯಯನ ಕಾಲೇಜಿನ ವಿದ್ಯಾರ್ಥಿ ಡಾ.ಸೌಂದರ್ಯ ಗೌಡ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕುಂದೇಶ್ವರ ಇಲ್ಲಿನ ರಘುವೀರ್ ನಗರ್ಕರ್ ವಿವೇಕ್ ಪೈ, ವ್ಯಾಸರಾಯ ಮಠದ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅತಿಯಾದ ಕಾರ್ಯಭಾರ, ಮಾನಸಿಕ ಒತ್ತಡ, ಆಧುನಿಕತೆಯ ಸಂಕೀರ್ಣತೆ ಇವೆ ಮುಂತಾದ ಸಾಮಾನ್ಯ ಸಮಸ್ಯೆಗಳು ಪ್ರತಿಯೊಬ್ಬರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕಾಡುತ್ತಿದೆ. ಸದಾ ಕ್ರೀಯಾಶೀಲಯಾಗಿ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸ ನಿರಂತರ ಯೋಗ ಅಭ್ಯಾಸದ ಮೂಲಕ ಸಾಧ್ಯ. ವಿದ್ಯಾರ್ಥಿಗಳಲ್ಲಿ ಹಾಗೂ ಯುವಕರಲ್ಲಿ ಕಾಡುವ ಕ್ರೀಯಾಹೀನತೆ ಪರಿಹಾರವಾಗಿ ಯೋಗಾಭ್ಯಾಸ ಪದ್ಧತಿ ಅನಿವಾರ್ಯವಾಗಿದೆ. ಸನಾತನ ಭಾರತೀಯ ಸಂಸ್ಕ್ರತಿ ಯೋಗದ ಮಹತ್ವದ ಬಗ್ಗೆ ವಿಶೇಷವಾದ ಕಾಳಜಿಯನ್ನು ಹಲವು ಮಹನೀಯರ ಮೂಲಕ ನಮಗೆ ಸಂದೇಶವನ್ನು ನೀಡಿದೆ ಎಂದು ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸಾಯಿಜು.ಕೆ.ಆರ್.ನಾಯರ್ ರವರು ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಶಾಲೆಯ ಎನ್.ಸಿ.ಸಿ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆಗಳ ಕಾಲ ವಿಶೇಷ ಯೋಗ ಚಟುವಟಿಕೆಗಳನ್ನು ಮಾಡಿ ತೋರಿಸಿ, ಉಳಿದ ವಿದ್ಯಾರ್ಥಿಗಳಿಗೆ ವಿಶ್ವಯೋಗ ದಿನಾಚರಣೆಯ ಮಹತ್ವತೆಯನ್ನು ಸಾರಿದರು. ಯೋಗಾಸನ, ಕಪಾಲಬಾತಿ, ಪ್ರಾಣಾಯಾಮ ಮತ್ತು ಧ್ಯಾನವನ್ನು ವಿದ್ಯಾರ್ಥಿಗಳು ಕ್ರಮವಾಗಿ ಮಾಡಿ ತೋರಿಸಿದರು. ಅಲ್ಲದೇ ೧೦ನೇ ತರಗತಿಯ ವಿದ್ಯಾರ್ಥಿಗಳು ಸಭಾ ಕಾರ್ಯಕ್ರಮದಲ್ಲಿ ಯೋಗದಿಂದ ಹೇಗೆ ರೋಗಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯೋಗವು ಬ್ರಹ್ಮಾಂಡ ಮೂಲದಿಂದ ನಮಗೆ ಶಕ್ತಿಯನ್ನು ಒದಗಿಸುವುದರಿಂದ ಯೋಗಾಭ್ಯಾಸವು ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿ ಯೋಗಾಭ್ಯಾಸಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದದ ಶ್ರೀಗುರು ವಿವೇಕ ಯೋಗ ಸಂಘ, ಸುವಿಚಾರ ಬಳಗ, ಜೇಸಿಐ ಘಟಕ, ಟೆಂಪೋ, ಟ್ಯಾಕ್ಸಿ, ರಿಕ್ಷಾ ಚಾಲಕ-ಮಾಲಕರ ಸಂಘ ಶಾಲೆಬಾಗಿಲು ಮತ್ತು ಸೇವಾಸಂಗಮ ಶಿಶುಮಂದಿರ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ವಿಶ್ವಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಸುಖ-ದುಖಃಗಳಗೆ ಮನಸ್ಸೇ ಮೂಲ ಕಾರಣ. ಅಂತಹ ಮನಸ್ಸನ್ನು ಸರಿಪಡಿಸುವ ಕಾರ್ಯ ಯೋಗದಿಂದ ಸಾಧ್ಯವಾಗುತ್ತದೆ. ಯೋಗದಿಂದ ಚಿತ್ತಶುದ್ಧಿಯಾಗಿ ಒಳ್ಳೆಯ ಭಾವನೆಗಳು ಮೂಡುತ್ತದೆ. ಯೋಗದಿಂದ ತಕ್ಷಣ ಸಿಗುವ ಲಾಭ-ನಷ್ಟಕ್ಕಿಂತ ದೀರ್ಘಕಾಲದ ಉಪಯೋಗಗಳ ಬಗ್ಗೆ ದೃಷ್ಠೀಕರಿಸಬೇಕು ಎಂದು ಸಲಹೆ ನೀಡಿದರು. ಯೋಗಶಿಕ್ಷಣವು ವಿಶ್ವದಾದ್ಯಂತ ಯುವಜನರನ್ನು ಆಕರ್ಷಿಸುತ್ತಿರುವುದು ಒಳ್ಳೆಯ ವಿಚಾರ.…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತಾಲೂಕಿನ ತ್ರಾಸಿ ಮೊವಾಡಿ ಕ್ರಾಸ್ ಬಳಿ ಭೀಕರ ಅಪಘಾತ ಘಟಿಸಿ ಒಂದು ವರ್ಷ ಸಂದಿದೆ. ಸುರಿಯುತ್ತಿದ್ದ ಮಳೆಯಲ್ಲಿ ಯಮರೂಪಿಯಾಗಿ ಬಂದ ಬಸ್ಸಿಗೆ ಎಂಟು ಶಾಲಾ ಮಕ್ಕಳು ಬಲಿಯಾಗಿ ಕನಸುಗಳೊಂದಿಗೆ ಕಮರಿಹೋಗಿದ್ದರು. ಹೆಮ್ಮಾಡಿ ಕಡೆಯಿಂದ ಮಕ್ಕಳನ್ನು ಹತ್ತಿಸಿಕೊಂಡು ಬಂದ ಓಮ್ನಿ ಮೋವಾಡಿ ಕ್ರಾಸ್‌ನ ಡಾನ್ ಬಾಸ್ಕೋ ಶಾಲೆಗೆ ತಿರುಗುತ್ತಿದ್ದ ಸಂದರ್ಭ ಗಂಗೊಳ್ಳಿ ಕಡೆಯಿಂದ ಬಂದ ಬಸ್ಸು ಡಿಕ್ಕಿ ಹೊಡೆದಿತ್ತು. ಅಪಘಾತದ ಗಂಭೀರತೆಗೆ ಎರಡು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಆರು ಮಕ್ಕಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಎಳೆಯ ಕಂದಮ್ಮಗಳಿಗಾಗಿ ನಾಡು ಮಮ್ಮಲ ಮರುಗಿತ್ತು. ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಮಕ್ಕಳನ್ನು ಕಳೆದಕೊಂಡ ಕುಟುಂಬ ಮಾತ್ರ ಇನ್ನು ಆ ಆಘಾತದಿಂದ ಹೊರಗೆ ಬಂದಿಲ್ಲ. ಆದರೆ ಅಪಘಾತದ ಸಮಯದಲ್ಲಿ ಅನುಸರಿಸಲಾದ ಸುರಕ್ಷಾ ಕ್ರಮಗಳು ಕೆಲವು ತಿಂಗಳಿಗಷ್ಟೇ ಸೀಮಿತವಾಗಿ ಮತ್ತ ಯಥಾ ಸ್ಥಿತಿಗೆ ತಲುಪಿರುವುದು ಮಾತ್ರ ದುರಂತ. ಆಘಾತದಿಂದ ಹೊರಬಂದಿಲ್ಲ ಕುಟುಂಬ: ಮೃತ ಮಕ್ಕಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಒತ್ತಿನಣೆಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸ್ತಿಕಟ್ಟೆಯ ಮನೆಯೊಂದಕ್ಕೆ ಜೇಡಿ ಮಣ್ಣು ನುಗ್ಗಿ ವಾಸಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಊಟ ಹಾಗೂ ವಸತಿಯಿಲ್ಲದೇ ಅಂತಂತ್ರರಾಗಿರು ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ, ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಬೈಂದೂರು ವಲಯ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಶ್ರೀಗಣೇಶ್ ಗಾಣಿಗ ಉಪ್ಪುಂದ ಹೇಳಿದರು. ಅವರು ಒತ್ತಿನಣೆಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮನೆಯೊಳಕ್ಕೆ ಜೇಡಿಮಣ್ಣು ನುಗ್ಗಿ ಅಂತಂತ್ರರಾಗಿರುವ ಪಾರ್ವತಿ ಶೇಖರ ಶೆಟ್ಟಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಎದುರು ನಡೆದ ಸಭೆಯಲ್ಲಿ ಆಗ್ರಹಿಸಿದರು. ಮಳೆಯಿಂದಾಗಿ ಮಣ್ಣು ಮನೆಯೊಳಕ್ಕೆ ಬಂದು ಕುಳಿತಿದ್ದು ಸುಮಾರು ಐದು ಅಡಿಯಷ್ಟು ಮಣ್ಣು ನಿಂತು ವಾಸಿಸಲಾರದ ಸ್ಥಿತಿ ಬಂದೊದಗಿದೆ. ಆಹಾರ ಸಾಮಾಗ್ರಿಗಳು, ಬಟ್ಟೆ, ಮಕ್ಕಳ ಪುಸ್ತಕವೆಲ್ಲ ಕೆಸರು ಮಣ್ಣಿನಲ್ಲಿ ಮುಳುಗಿ ಹೋಗಿದೆ. ಮಳೆಗಾಲದಲ್ಲಿ ಅವರ ಬದುಕು ಕಷ್ಟದಲ್ಲಿದೆ. ಕೂಡಲೇ ಈ ಅವ್ಯವಸ್ಥೆಗೆ ಕಾರಣವಾದ ಕಂಪೆನಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಲ್ಪಸಂಖ್ಯಾತರನ್ನು ಓಲೈಸುವ ಕಾರಣಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ಹೇಳಿರುವ ಸಚಿವ ರಮಾನಾಥ ರೈ ತುಷ್ಠೀಕರಣದ ರಾಜಕಾರಣ ಮಾಡಿದ್ದಾರೆ. ಹಿಂದೂಗಳು ಬಹಳ ಗೌರವದಿಂದ ಕಾಣುವ ಪ್ರಭಾಕರ ಭಟ್ ಅವರ ಹೆಸರನ್ನು ಗಲಭೆಯೊಂದಿಗೆ ತಳುಕು ಹಾಕಿ ಬಂಧಿಸುವಂತೆ ಒತ್ತಡ ಹೇರಿ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆ. ಇಂತವರು ಆಡಳಿತ ಯಂತ್ರದಲ್ಲಿ ಇರುವುದು ಸರಿಯಲ್ಲ. ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಆಗ್ರಹಿಸಿದರು. ಬೈಂದೂರು ಪೇಟೆಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಸಚಿವ ರಮಾನಾಥ ರೈ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ ಪ್ರಭಾಕರ ಭಟ್ ಅವರ ಮೇಲೆ ಕೇಸ್ ಹಾಕಬೇಕು ಎಂಬ ರಮಾನಾಥ ರೈ ಅವರು ಕಲ್ಲಡ್ಕದ ಪೇಟೆಯಲ್ಲಿ…
ಕುಂದಾಪ್ರ ಡಾಟ್ ಕಾಂ ವರದಿ. ಆಧುನಿಕ ಬದುಕಿನ ನಡುವೆ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಜನರು ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಭತ್ತದ ಕೃಷಿಯನ್ನು ಕಡಿಮೆ ಪರಿಶ್ರಮ, ಕಡಿಮೆ ಗೊಬ್ಬರ, ಕಡಿಮೆ ಬಿತ್ತನೆ ಬೀಜ, ಕಡಿಮೆ ಕೆಲಸಗಾರರನ್ನು ಬಳಸಿಕೊಂಡು ಹೆಚ್ಚು ಲಾಭದಾಯಕ ಕೃಷಿಯನ್ನಾಗಿ ಪರಿವರ್ತಿಸಿಕೊಳ್ಳಬೇಕೆಂಬ ಕೋಟೇಶ್ವರದ ಕೈಗಾರಿಕೊದ್ಯಮಿಯೊಬ್ಬರ ಅಧ್ಯಯನ ಹಾಗೂ ಚಿಂತನೆ, ಈಗ ಪ್ರಾಯೋಗಿಕ ರೂಪು ಪಡೆದಿದ್ದು ನೂತನ ವಿಧಾನದ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸತನದ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕೋಟೇಶ್ವರದ ಸುರೇಶ್ ಕಾಮತ್ ಎಂಬವವರು ಯಶಸ್ವಿ ಕೈಗಾರಿಕೋದ್ಯಮಿ. ತಮ್ಮ ರಾಜಾರಾಮ್ ಪಾಲಿಮರ‍್ಸ್ ಸಂಸ್ಥೆಯ ಮೂಲಕ ಭಾರತದಲ್ಲಿ ಪ್ರಥಮ ಬಾರಿಗೆ ಕೇವಲ ನೀರು ಸಂಗ್ರಹಿಸಿಡುವ ಟ್ಯಾಂಕ್‌ಗಳನ್ನು ಬಹುಉಪಯೋಗಿ ಟ್ಯಾಂಕ್‌ಗಳನ್ನಾಗಿ ನಿರ್ಮಿಸಿ ಜನ ಮನ್ನಣೆಗೆ ಪಾತ್ರರಾದವರು. ಇಂತಹ ಪ್ರಯೋಗಗಳಿಗೆ ಅವರು ತೆರೆದುಕೊಂಡ ಇನ್ನೊಂದು ಕ್ಷೇತ್ರವಿದೆ. ಅದುವೇ ಕೃಷಿ ಕ್ಷೇತ್ರ. ಕಳೆದೆರಡು ವರ್ಷಗಳಿಂದ ನಾಟಿ ಯಂತ್ರವನ್ನು ಉಪಯೋಗಿಸಿ ಮ್ಯಾಟ್ ಪದ್ದತಿ ಹಾಗೂ ದೇಶಿ ದನಗಳ ಸಗಣಿ ಹಾಗೂ ಗೋಮೂತ್ರವನ್ನು ಉಪಯೋಗಿಸಿ ಸುಭಾಷ ಪಾಲೇಕರ್ ಅವರ ಶೂನ್ಯ ಭಂಡವಾಳ ಕ್ರಮದಂತೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ಮನೆಯಲ್ಲಿ ಹಾವು ಕಚ್ಚಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟ ಘಟನೆ ವರದಿಯಾಗಿದ್ದು, ಮಹಿಳೆಯ ಸಾವಿಗೆ ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಬೈಂದೂರು ಯೋಜನಾನಗರ ನಿವಾಸಿ ಗಜಾನನ ಪೂಜಾರಿ ಎಂಬುವವರ ಪತ್ನಿ ವಿಶಾಲಾಕ್ಷಿ (35 ಎಂಬುವವರು ಮೃತ ದುರ್ದೈವಿ. ಯೋಜನಾನಗರದ ವೀಶಾಲಾಕ್ಷಿ ಎಂಬುವವರು ಮಧ್ಯಾಹ್ನ ಅಡುಗೆ ಮಾಡುತ್ತಿದ್ದ ವೇಳೆ ಮನೆಯಲ್ಲಿ ಹಾವು ಕಚ್ಚಿದ್ದರಿಂದ ಅವರನ್ನು ಕೂಡಲೇ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಹಾವು ಕಚ್ಚಿರುವುದಕ್ಕೆ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಕೂಡಲೇ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆಸ್ಪತ್ರೆಯಲ್ಲಿ ಮಹಿಳೆಯ ರಕ್ತ ಪರೀಕ್ಷೆಗಾಗಿ ಸ್ಪಲ್ವ ಕಾಯುವಂತೆ ಸೂಚಿಸಿದ್ದರು. ಆದರೆ ಆತಂಕಗೊಂಡಿದ್ದ ಮನೆಯವರು ಬೇರೆಡೆಗೆ ಚಿಕಿತ್ಸೆಗೆ ಕರೆದೊಯ್ದಿದ್ದರು. ಅಲ್ಲಿಯೂ ಸರಿಯಾದ ಚಿಕಿತ್ಸೆ ಸ್ಪಂದನೆ ದೊರೆಯದೇ ಮತ್ತೆ ಸರಕಾರಿ ಆಸ್ಪತ್ರೆಗೆ ಮರಳಿ ಬರುವ ವೇಳೆಗಾಗಲೇ ವಿಷವೇರಿ ಮಹಿಳೆ ಮೃತಪಟ್ಟಿದ್ದರು. ವೈದ್ಯರ ನಿರ್ಲಕ್ಷ್ಯ ಆರೋಪ: ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು…
