ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರದ ಸೌಂದರ್ಯವನ್ನು ಆಗಸದೆತ್ತರದಲ್ಲಿ ಕಂಡು ಕಣ್ತುಂಬಿಕೊಳ್ಳಬೇಕೆಂಬ ಇಂಗಿತವಿದೆಯೇ? ನಮ್ಮೂರ ಪ್ರವಾಸಿ ತಾಣಗಳನ್ನು ನಿಮಿಷಗಳಲ್ಲಿ ಸುತ್ತಿ ಬರಬೇಕೆಂಬ ಹಂಬಲವಿದೆಯೇ? ಮತ್ತೇಕೆ ತಡ. ಕೋಟೇಶ್ವರದ ಯುವ ಮೆರಿಡಿಯನ್‌ಗೆ ಬನ್ನಿ. ಕುಂದಾಪುರವನ್ನು ಸುತ್ತುಹೊಡೆಸಲು ತಮಗೊಂದು ಹೆಲಿಕಾಪ್ಟರ್ ಕಾಯ್ತಿದೆ! ಹೌದು ಕುಂದಾಪುರ ಕೋಟೇಶ್ವರದಲ್ಲಿನ ಯುವ ಮೆರಿಡಿಯನ್‌ನಲ್ಲಿ ಹೆಲಿಟೂರಿಸಂ ಆರಂಭಿಸಲು ದೆಹಲಿಯ ಏವಿಯೇಷನ್ ಕಂಪೆನಿಯು ಮುಂದೆ ಬಂದಿದ್ದು ಉಡುಪಿಯಲ್ಲಿ ಆರಂಭಿಸಿದ ಪ್ರಾಯೋಗಿಕ ಹೆಲಿಟೂರಿಸಂ ಈಗ ಕುಂದಾಪುರಕ್ಕೂ ವಿಸ್ತಾರಗೊಂಡಿದೆ. ಪ್ರಯೋಗಾರ್ಥವಾಗಿ ಆರಂಭಿಸಲಾಗಿರುವ ಹೆಲಿಟೂರಿಸಂ ಸೌಲಭ್ಯವು ಏ.27ರಿಂದಲೇ ಆರಂಭಗೊಂಡಿದ್ದು ಮೇ.1ರ ತನಕ ಪ್ರವಾಸಿಗರಿಗೆ ಪ್ರತಿದಿನ ಮಧ್ಯಾಹ್ನ 3 ಗಂಟೆ ಬಳಿಕ ಲಭ್ಯವಾಗಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ರಜೆಯಲ್ಲಿ ಜಾಲಿ ರೈಡ್, ಅಡ್ವೆಂಚರ್ ರೈಡ್: ಹೆಲಿಕಾಪ್ಟರ್‌ನಲ್ಲಿ ಹಾರಾಡಬಯಸುವ ಪ್ರವಾಸಿಗರಿಗೆ ಎರಡು ಬಗೆಯ ಆಫರ್ ನೀಡಲಾಗಿದ್ದು ಜಾಲಿ ರೈಡ್ ಮತ್ತು ಅಡ್ವೆಂಚರ್ ರೈಡ್ ಎಂಬ ಎರಡು ಪ್ಯಾಕೇಜ್ ಒಳಗೊಂಡಿದೆ. ಜಾಲಿ ರೈಡ್‌ನಲ್ಲಿ ಕೋಟೇಶ್ವರ, ಕುಂದಾಪುರ, ಬಬ್ಬುಕುದ್ರು ಮತ್ತು ಸುತ್ತಲಿನ ಹಿನ್ನೀರಿನ ಪ್ರದೇಶಗಳನ್ನು ನೋಡಲು ಅವಕಾಶವಿದ್ದರೇ, ಅಡ್ವೆಂಚರ್ ರೈಡ್‌ನಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಿದ್ಯಾರ್ಥಿಯ ನಡೆ, ನುಡಿ, ಶೀಲ, ಚಾರಿತ್ರ್ಯದಲ್ಲಿ ಗಮನಾರ್ಹ ಬದಲಾವಣೆಗಳಾಗಿ ಒಂದು ಸುಂದರ ವ್ಯಕ್ತಿತ್ವ ನಿರ್ಮಾಣವಾಗುವುದರ ಜೊತೆಗೆ ಸಮಾಜದ ಸತ್ಪ್ರಜೆಯಾಗುವಂತಾದರೇ ಶಿಕ್ಷಣದ ಉದ್ದೇಶ ಸಾರ್ಥಕ್ಯಗೊಳ್ಳಲಿದೆ ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜೀತಕಾಮನಂದಾಜಿ ಮಹಾರಾಜ್ ಹೇಳಿದರು. ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸ್ವಾಮೀ ವಿವೇಕಾನಂದರ ಪುತ್ಥಳಿಯನ್ನು ಅನಾವರಣಗೊಳಿಸಿದ ಬಳಿಕ ಸಾದೃಶ್ಯ ಆರ್ಟ್ ಗ್ಯಾಲರಿ ಲೋಕಾರ್ಪಣೆಗೊಳಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಬುದ್ದಿವಂತರು. ಆದರೆ ಬದುಕಿನ ಸಮಸ್ಯೆಗಳನ್ನು ಎದುರಿಸುವ ಮನೋಬಲದ ಕೊರೆತೆ ಕಾಡುತ್ತಿದೆ. ಶಿಕ್ಷಣದಿಂದ ವಿದ್ಯಾರ್ಥಿಯ ಬುದ್ಧಿಮತ್ತೆಯ ಜೊತೆಗೆ ಆತ್ಮಸ್ಥೈರ್ಯವೂ ಹೆಚ್ಚುವಂತಾಗಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಅಂಕಗಳಿಕೆಗೆ ಪ್ರಾಮುಖ್ಯತೆ ನೀಡಿದಷ್ಟೇ, ಅವರಲ್ಲಿನ ಸೃಜನಾತ್ಮಕ ಪ್ರತಿಭೆಗೆ ಪ್ರೂತ್ಸಾಹ ನೀಡುವಂತಾಗಬೇಕು ಎಂದರು. ಗಿಡ, ಮರಗಳಿಂದ ತುಂಬಿರುವ ಗುರುಕುಲ ಶಿಕ್ಷಣ ಸಂಸ್ಥೆಯು ಅನಾದಿ ಕಾಲದ ಋಷಿಮುನಿಗಳ ಗುರುಕುಲ ಪದ್ದತಿ ನೆನಪಿಸುವಂತಿದೆ. ಇಲ್ಲಿನ ಪರಿಸರ ಮಕ್ಕಳ ಮನಸ್ಸು ಸೃಜನಾತ್ಮಕವಾಗಿ ಅರಳುವಂತೆ ಮಾಡುವಂತೆ ಮಾಡುವುದಲ್ಲದೇ ಪ್ರಕೃತಿಯಲ್ಲಿ ವೈವಿಧ್ಯತೆಯನ್ನು ತುಂಬಿಕೊಂಡು ಬೆಳೆಯುವಂತೆ ಮಾಡುತ್ತದೆ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಹಿಳೆಯೋರ್ವಳನ್ನು ಅಮಾನುಷವಾಗಿ ಕೊಲೆಗೈದು ರಸ್ತೆಯ ಬದಿಯಲ್ಲಿ ಎಸೆದಿದ್ದ ಅಪರಾಧಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ್ ವಿ. ಪಾಟೀಲ್ ಗಲ್ಲುಶಿಕ್ಷೆ ವಿಧಿಸಿದ್ದಾರೆ. ಆರು ವರ್ಷದ (ಜೂನ್ 2010) ಹಿಂದೆ ಅಕ್ಕಯ್ಯ ಯಾನೆ ಜಯಾ ಎಂಬಾಕೆಯನ್ನುಕೊಲೆಗೈದ ಹೆಮ್ಮಾಡಿ ಸತೀಶ್ ಪೂಜಾರಿ (30) ಗಲ್ಲುಶಿಕ್ಷೆಗೆ ಒಳಗಾದ ಆಪರಾಧಿ. ಕೊಲೆ ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಸೂಕ್ತ ಸಾಕ್ಷಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಕುಂದಾಪುರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಯು. ಶ್ರೀನಿವಾಸ ಹೆಗಡೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಘಟನೆಯ ವಿವರ: ಕುಂದಾಪುರದ ಖಾಸಗಿ ಶಾಲಾ ವಾಹನವೊಂದರಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡಿಕೊಂಡಿದ್ದ ಅಕ್ಕಯ್ಯ ಯಾನೆ ಜಯಾ ಎಂಬಾಕೆ ಸತೀಶ್ ಪೂಜಾರಿ ಹಾಗೂ ಆತನ ಭಾವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಸತೀಶ್ ಪೂಜಾರಿಯ ಭಾವನೊಂದಿಗೆ ತನ್ನನ್ನು ಮದುವೆ ಮಾಡಿಕೊಂಡುವಂತೆ ಆತನನ್ನು ಪದೇ ಪದೇ ಪೀಡಿಸುತ್ತಿದ್ದಳು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಲ್ಕುಂದ ನಿವಾಸಿ, ಪ್ರತಿಷ್ಟಿತ ಚೊಲ್ಪಾಡಿ ಮನೆತನದ ನಿವೃತ್ತ ಯೋಧ ಚೋಲ್ಪಾಡಿ ರಮೇಶ್ ಕಾಮತ್‌ರ ಧರ್ಮಪತ್ನಿ ರೇಷ್ಮಾ ಅಲಿಯಾಸ್ ರಾಜೇಶ್ವರಿ ಕಾಮತ್(47) ಅಲ್ಪಕಾಲದ ಅಸೌಖ್ಯದಿಂದ ಎ.೨೮ ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಈಕೆ ಸದೃಹಣಿಯಾಗಿದ್ದು ಇವರ ಪತಿ ಚೋಲ್ಪಾಡಿ ರಮೇಶ್ ಕಾಮತ್ ಭಾರತೀಯ ಸೇನೆಯಲ್ಲಿ ಅಪ್ರತಿಮ ಶೌರ‍್ಯ ಸಾಧನೆಗಾಗಿ ಮೆರಿಟೋರಿಯಸ್ ಅವಾರ್ಡ್ ಪುರಸ್ಕೃತರು. ಮೃತರು ಪತಿ ರಮೇಶ್ ಕಾಮತ್, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಕುಂದಗನ್ನಡದ ಚಿತ್ರ ಬಿಲಿಂಡರ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಚಿತ್ರದ ಎರಡು ಹಾಡುಗಳಿಗೆ ಪವರ್‌ಸ್ಟಾರ್ ಪುನಿತ್, ರೋರಿಂಗ್ ಸ್ಟಾರ್ ಶ್ರೀಮುರಳಿ ಧ್ವನಿಯಾಗಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವುದು ತಿಳಿದೇ ಇದೆ. ಚಿತ್ರ ಬಿಡುಗಡೆಯಾದ ಬಳಕವೂ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚಿಗೆ ಗಳಿಸುತ್ತಿದೆ. ಇನ್ನು ಕುಂದಾಪುರದ ಇತಿಹಾಸದಲ್ಲೇ ಮೊದಲ ಬಾರಿಗೆಂಬಂತೆ ವಿನಾಯಕ ಚಿತ್ರಮಂದಿರ ಎದುರು ಬಿಲಿಂಡರ್ ಚಿತ್ರದ ನಾಯಕ ರವಿ ಬಸ್ರೂರ್ ಅವರ ಕಟೌಟ್ ಎದ್ದು ನಿಂತಿದೆ. ಚಿತ್ರಕಲಾವಿದ ಕಾರ್ತಿಕ್ ಬಸ್ರೂರ್ ಎಂಬುವವರು ಸ್ವತಃ ಆಸಕ್ತಿ ವಹಿಸಿ ತಮ್ಮ ನೆಚ್ಚಿನ ಬಿಲಿಂಡರ್ ಚಿತ್ರಕ್ಕಾಗಿ ಪೆಂಟ್ ಮಾಡಿಕೊಟ್ಟಿದ್ದಾರೆ. ಇದು ಕುಂದಾಪ್ರ ಕನ್ನಡ ಚಿತ್ರವೊಂದಕ್ಕೆ ತೋರುತ್ತಿರವ ಅಭಿಮಾನ ಎಂಬುವುದರಲ್ಲಿ ಎರಡು ಮಾತಿಲ್ಲ. ಕುಂದಾಪುರದ ವಿನಾಯಕ ಚಿತ್ರಮಂದಿರ ಮುಂಭಾಗದಲ್ಲಿ ಹಾಕಲಾಗಿರುವ ಈ ಕಟೌಟ್ ಸಾರ್ವಜನಿಕರು ಹಾಗೂ ಚಿತ್ರರಸಿಕರ ಗಮನ ಸೆಳೆಯುತ್ತಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸ್ಪಷ್ಟ ನಿರ್ಧಾರ, ಸಮರ್ಪಣಾ ಮನೋಭಾವ, ಶ್ರದ್ಧೆ ಈ ಮೂರು ಗುಣಗಳನ್ನು ಬೆಳಸಿಕೊಳ್ಳಬೇಕು. ಅದರ ಜೊತೆಗೆ ಶಿಸ್ತು ಕೇಂದ್ರಿತ ಬದುಕಿಗೆ ಒತ್ತು ಕೊಡುವ ಮೂಲಕ ಸಪ್ಪ್ರಜೆಗಳಾಗಿ ಎಂದು ಸೈಂಟ್ ಮೇರಿಸ್ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಲೂಯಿಸ್ ಜೆ ಫೆರ್ನಾಂಡಿಸ್ ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬೀಳ್ಕೊಡಿಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಸೀತರಾಮ ನಕ್ಕತ್ತಾಯ ಉಪಸ್ಥಿತರಿದ್ದರು. ಪ್ರಾಂಶುಪಾಲ ದೋಮ ಚಂದ್ರಶೇಖರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಉಪನ್ಯಾಸಕಿ ಕು. ಜ್ಯೋತಿ ಮೊಗವೀರ್ ಸ್ವಾಗತಿಸಿದರು. ಉಪನ್ಯಾಸಕ ಸತೀಶ್ ಶೆಟ್ಟಿ ಹೆಸ್ಕತ್ತೂರು ವಂದಿಸಿದರು. ಉಪನ್ಯಾಸಕಿ ಅವಿತಾ ಕೋರಿಯಾ ಕಾರ್ಯಕ್ರಮ ನಿರೂಪಿಸಿದರು.
ಬೈಂದೂರು: ಸಮೀಪದ ಹೇರೂರು ಗ್ರಾಮದ ಮಡ್ಲಗೇರಿ ಎಂಬಲ್ಲಿನ ತುಂಬಿಕೆರೆ ಬಳಿ ಎಸೆಯಲಾಗುತ್ತಿರುವ ಕೋಳಿ ಮತ್ತು ಪ್ರಾಣಿಗಳ ತ್ಯಾಜ್ಯ ತಿಂದ ಏಳು ದನಗಳು ಅಸುನೀಗಿದ್ದು, ಇನ್ನೂ ಆರು ಸಾವಿನ ಅಂಚಿನಲ್ಲಿವೆ. ಹಲವು ಅಸ್ವಸ್ಥವಾಗಿದ್ದು, ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸತ್ತ ಮತ್ತು ಅಸ್ವಸ್ಥ ದನಗಳು ಮಡ್ಲಗೇರಿಯ ಬಾಬು ಆಚಾರಿ, ಹಿತ್ಲುಮನೆ ಗಿರಿಜಾ ಪೂಜಾರಿ, ಸುಬ್ರಾಯ ಆಚಾರಿ ಮತ್ತು ಸಾಧು ಪೂಜಾರಿ ಎಂಬವರಿಗೆ ಸೇರಿವೆ. ತುಂಬಿಕೆರೆ ಅರಣ್ಯ ಇಲಾಖೆಗೆ ಸೇರಿದ ಗೇರುತೋಟದ ನಡುವೆ ಇದೆ. ನಾವುಂದ ಹೇರೂರು ಮಾರ್ಗದಿಂದ ಇಲ್ಲಿಗೆ ಹೋಗಲು ಮಣ್ಣಿನ ರಸ್ತೆ ಇದೆ. ಯಾವುದೋ ಮಂಸಾಹಾರಿ ಹೋಟೆಲ್‌ಗಳ ಕೋಳಿ ಮತ್ತು ಪ್ರಾಣಿಗಳ ತ್ಯಾಜ್ಯವನ್ನು ಚೀಲಕ್ಕೆ ತುಂಬಿಸಿ, ವಾಹನದಲ್ಲಿ ತಂದು ಇಲ್ಲಿ ಎಸೆಯಲಾಗುತ್ತಿದೆ. ಪರಿಸರದ ದನಗಳು ಇಲ್ಲಿಗೆ ಮೇಯಲು ಬರುತ್ತಿದ್ದು, ಹಸಿ ಒಣಗಿ ಮೇವು ಇಲ್ಲವಾದುದರಿಂದ ಅವು ಈ ತ್ಯಾಜ್ಯ ತಿನ್ನುತ್ತಿವೆ. ಇದು ದನಗಳು ಸಾಯಲು ಮತ್ತು ಅಸ್ವಸ್ಥವಾಗಲು ಕಾರಣ ಎಂದು ಜನರು ಹೇಳುತ್ತಿದ್ದಾರೆ. ಪಶು ವೈದ್ಯರು ಇದನ್ನು ಅಲ್ಲಗಳೆಯುತ್ತಿಲ್ಲ. ಹೇರೂರು ಗ್ರಾಮ ಪಂಚಾಯತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರದ ಅಂಕದಕಟ್ಟೆ ಹೆದ್ದಾರಿ ಪಕ್ಕದಲ್ಲಿರುವ ಏಮ್ ಆರ್ ಏಫ್ ಶೋ ರೂಮಿಗೆ ಲಗ್ಗೆಯಿಕ್ಕಿರುವ ಕಳ್ಳರು ಅಂಗಡಿಯ ಸೆಂಟ್ರಲ್ ಲಾಕ್ ಮುರಿದು ಸುಮಾರು ಹದಿನೈದಕ್ಕೂ ಹೆಚ್ಚಿನ ಟಯರುಗಳನ್ನು ಅನಾಯಸವಾಗಿ ಸಾಗಿಸಲು ಯಶಸ್ವಿಯಾಗಿದ್ದಾರೆ. ಕಳ್ಳತನವಾದ ಟಯರುಗಳ ಒಟ್ಟು ಮೌಲ್ಯ ೧.೬೫ಲಕ್ಷ ಎಂದು ಅಂದಾಜಿಸಲಾಗಿದೆ. ಪಕ್ಕದಲ್ಲಿಯೇ ಸೋಲಾರ್ ಉಪಕರಣಗಳ ಮಳಿಗೆಯಿದ್ದರೂ ಕೇವಲ ಟಯರುಗಳ ಕಳ್ಳತನವನ್ನೇ ಟಾರ್ಗೆಟ್ ಆಗಿರಿಸಿದ ಕಳ್ಳರು ಕದ್ದ ಟಯರುಗಳನ್ನು ಸಾಗಿಸಲು ಪಿಕ್ ಅಪ್ ವಾಹನವನ್ನು ಬಳಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಹೆದ್ದಾರಿಯಲ್ಲಿ ಅಲ್ಲಲ್ಲಿ ಪೋಲಿಸ್ ತಪಾಸಣೆ ಇರುವುದರಿಂದ ಒಳದಾರಿ ಬಳಸಿ ತಮ್ಮ ಗಮ್ಯವನ್ನು ಸೇರುವಲ್ಲಿ ಯಶಸ್ವಿಯಾಗಿದ್ದರೆ. ಸುಮಾರು ಐದು ಜನರಿಗಿಂತಲೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಿದ್ದಾರೆಂದು ಸಂಶಯಿಸಲಾಗಿದೆ. ಆದರೆ ಹೆದ್ದಾರಿ ಪಕ್ಕದಲ್ಲಿಯೇ ಇಂತಹ ಬೃಹತ್ ಪ್ರಮಾಣದ ದರೋಡೆ ಜರಗಿದ್ದರೂ ಮುಂಜಾನೆ ಬಳಿಕವೇ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ಇಷ್ಟರ ತನಕ ಕೇವಲ ದೇವಸ್ಥಾನಗಳನ್ನು ಮಾತ್ರ ಗುರಿಯಾಗಿರಿಸುತ್ತಿದ್ದ ಕಳ್ಳರು ಈ ಬಾರಿ ತಮ್ಮ ವರಸೆ ಬದಲಿಸಿ ಟಯರ್…
ಎ.30ಕ್ಕೆ ಧ್ವನಿಪರೀಕ್ಷೆ. ಮೇ.15ಕ್ಕೆ ಕಾರ್ಯಕ್ರಮ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಸುತ್ತಮುತ್ತಲಿನ ಯುವ ಗಾಯಕರಿಗೆ ಉತ್ತಮ ವೇದಿಕೆ ಕಲ್ಪಿಸಿದ ದೂರದರ್ಶನದ ಹಳೆಯ ಚಿತ್ರಗೀತೆಗಳ ವಿಶೇಷ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮವು ಮೇ.15ರಂದು ಸತತ ಮೂರನೇ ಬಾರಿಗೆ ಕುಂದಾಪುರ ಕೊಟೆಶ್ವರದ ಯುವ ಮೆರಿಡಿಯನ್ ಕನ್ವೆನ್ಶನ್ ಸೆಂಟರ್ ನಲ್ಲಿ ದೂರದರ್ಶನ ಬೆಂಗಳೂರು ಚಂದನ ವಾಹಿನಿ , ಬೈಲೂರು ಎಜುಕೇಶನ್ ಟ್ರಸ್ಟ್ , ಎನ್.ಸಿ.ಆರ್ ಎಜುಕೇಶನ್ ಟ್ರಸ್ಟ್ ಹಾಗೂ ಯುವ ಇನ್ಪ್ರಾಸ್ಟ್ರಕ್ಚರ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಹಾಡುಗಾರರು, ನೃತ್ಯ ತಂಡಗಳು ತಮ್ಮ ಹೆಸರು, ವಯಸ್ಸು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇತ್ತೀಚಿನ ಭಾವಚಿತ್ರ ಅರ್ಜಿಯೊಂದಿಗೆ ಎಪ್ರಿಲ್ 30ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿರುವ ಯುವ ಮೆರಿಡಿಯನ್ ಕನ್ವೆನ್ಶನ್ ಸೆಂಟರ್‌ಗೆ ಇಲ್ಲಿ ಧ್ವನಿ ಪರೀಕ್ಷೆಗೆ ಹಾಜರಾಗಲು ಸಂಘಟಕರು ತಿಳಿಸಿದ್ದಾರೆ.
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ. ಕುಂದಗನ್ನಡವನ್ನು ಮತ್ತಷ್ಟು ಸಮೃದ್ಧಗೊಳಿಸುವ, ಜನರಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಪುಸ್ತಕ, ಸಾಹಿತ್ಯ, ಹಾಡು, ಸಿನೆಮಾ ಹೀಗೆ ಹತ್ತಾರು ಬಗೆಯಲ್ಲಿ ಕೆಲಸ ಮಾಡಿದವರು ಹತ್ತಾರು ಮಂದಿ. ಪ್ರತಿಭಾರಿಯೂ ಹೀಗೆ ನಡೆಯುವ ಹೊಸ ಹೊಸ ಪ್ರಯತ್ನಗಳನ್ನು ಮೆಚ್ಚುತ್ತಾ, ಪ್ರೋತ್ಸಾಹಿಸುತ್ತಾ ಬಂದವರು ಕುಂದನಾಡಿಗರು. ಅಂತಹದ್ದೇ ಒಂದು ಭಾಷಾಭಿಮಾನದಿಂದ ಮೊದಲ ಭಾರಿಗೆ ಪಣ್ಕ್ ಮಕ್ಕಳ್ ತಂಡದ ಆಲ್ಬಂ ಬಿಡುಗಡೆಯಾದಾಗ, ಮೊಲದ ಭಾರಿಗೆ ಗರ್‌ಗರ್‌ಮಂಡ್ಲ ಎಂಬ ಕಮರ್ಶಿಯಲ್ ಸಿನೆಮಾ ಜನರ ಮುಂದೆ ಬಂದಾಗ ಮನತುಂಬಿ ಸ್ವಾಗತಿಸಿದ್ದ ಪ್ರೇಕ್ಷಕ ಸಮೂಹ ಈಗ ಬಿಡುಗಡೆಗೊಂಡಿರುವ ಕುಂದಾಪ್ರ ಕನ್ನಡದ ’ಬಿಲಿಂಡರ್’ ಸಿನೆಮಾವನ್ನೂ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ಸಿನೆಮಾ ಚನ್ನಾಗಿದೆ ಎಂದು ಜನರು ಸುಮ್ಮನೆ ಮೆಚ್ಚಿಕೊಂಡಿಲ್ಲ. ಒಂದು ಪ್ರಾದೇಶಿಕ ಭಾಷೆಯ ಸಿನೆಮಾ ಸ್ಯಾಂಡಲ್‌ವುಡ್‌ನ ಕಮರ್ಶಿಯಲ್ ಸಿನೆಮಾಗಳಿಗೆ ಸರಿಸಾಟಿಯಾಗಿ ನಿಲ್ಲಬಹುದು ಎಂಬ ಭರವಸೆಯನ್ನು ಹುಟ್ಟಿಹಾಕಿರುವುದು ಇದಕ್ಕೆ ಪ್ರಮುಖ ಕಾರಣ. ಒಟ್ಟಾರೆ ಕುಂದಾಪುರದಂತಹ ಪ್ರದೇಶವನ್ನು ಕೇಂದ್ರವನ್ನಾಗಿಟ್ಟುಕೊಂಡು ದೊಡ್ಡ ಮಟ್ಟದ ಸಿನೆಮಾ ತಯಾರಾಗುತ್ತದೆ, ಜನ ಸಿನೆಮಾ ಥಿಯೇಟರ್‌ನತ್ತ ಮುಖ ಮಾಡುತ್ತಾರೆ ಎಂದರೇ…
