ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಕುಂದಗನ್ನಡದ ಚಿತ್ರ ಬಿಲಿಂಡರ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಚಿತ್ರದ ಎರಡು ಹಾಡುಗಳಿಗೆ ಪವರ್‌ಸ್ಟಾರ್ ಪುನಿತ್, ರೋರಿಂಗ್ ಸ್ಟಾರ್ ಶ್ರೀಮುರಳಿ ಧ್ವನಿಯಾಗಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವುದು ತಿಳಿದೇ ಇದೆ. ಚಿತ್ರ ಬಿಡುಗಡೆಯಾದ ಬಳಕವೂ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚಿಗೆ ಗಳಿಸುತ್ತಿದೆ. ಇನ್ನು ಕುಂದಾಪುರದ ಇತಿಹಾಸದಲ್ಲೇ ಮೊದಲ ಬಾರಿಗೆಂಬಂತೆ ವಿನಾಯಕ ಚಿತ್ರಮಂದಿರ ಎದುರು ಬಿಲಿಂಡರ್ ಚಿತ್ರದ ನಾಯಕ ರವಿ ಬಸ್ರೂರ್ ಅವರ ಕಟೌಟ್ ಎದ್ದು ನಿಂತಿದೆ. ಚಿತ್ರಕಲಾವಿದ ಕಾರ್ತಿಕ್ ಬಸ್ರೂರ್ ಎಂಬುವವರು ಸ್ವತಃ ಆಸಕ್ತಿ ವಹಿಸಿ ತಮ್ಮ ನೆಚ್ಚಿನ ಬಿಲಿಂಡರ್ ಚಿತ್ರಕ್ಕಾಗಿ ಪೆಂಟ್ ಮಾಡಿಕೊಟ್ಟಿದ್ದಾರೆ. ಇದು ಕುಂದಾಪ್ರ ಕನ್ನಡ ಚಿತ್ರವೊಂದಕ್ಕೆ ತೋರುತ್ತಿರವ ಅಭಿಮಾನ ಎಂಬುವುದರಲ್ಲಿ ಎರಡು ಮಾತಿಲ್ಲ. ಕುಂದಾಪುರದ ವಿನಾಯಕ ಚಿತ್ರಮಂದಿರ ಮುಂಭಾಗದಲ್ಲಿ ಹಾಕಲಾಗಿರುವ ಈ ಕಟೌಟ್ ಸಾರ್ವಜನಿಕರು ಹಾಗೂ ಚಿತ್ರರಸಿಕರ ಗಮನ ಸೆಳೆಯುತ್ತಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸ್ಪಷ್ಟ ನಿರ್ಧಾರ, ಸಮರ್ಪಣಾ ಮನೋಭಾವ, ಶ್ರದ್ಧೆ ಈ ಮೂರು ಗುಣಗಳನ್ನು ಬೆಳಸಿಕೊಳ್ಳಬೇಕು. ಅದರ ಜೊತೆಗೆ ಶಿಸ್ತು ಕೇಂದ್ರಿತ ಬದುಕಿಗೆ ಒತ್ತು ಕೊಡುವ ಮೂಲಕ ಸಪ್ಪ್ರಜೆಗಳಾಗಿ ಎಂದು ಸೈಂಟ್ ಮೇರಿಸ್ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಲೂಯಿಸ್ ಜೆ ಫೆರ್ನಾಂಡಿಸ್ ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬೀಳ್ಕೊಡಿಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಸೀತರಾಮ ನಕ್ಕತ್ತಾಯ ಉಪಸ್ಥಿತರಿದ್ದರು. ಪ್ರಾಂಶುಪಾಲ ದೋಮ ಚಂದ್ರಶೇಖರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಉಪನ್ಯಾಸಕಿ ಕು. ಜ್ಯೋತಿ ಮೊಗವೀರ್ ಸ್ವಾಗತಿಸಿದರು. ಉಪನ್ಯಾಸಕ ಸತೀಶ್ ಶೆಟ್ಟಿ ಹೆಸ್ಕತ್ತೂರು ವಂದಿಸಿದರು. ಉಪನ್ಯಾಸಕಿ ಅವಿತಾ ಕೋರಿಯಾ ಕಾರ್ಯಕ್ರಮ ನಿರೂಪಿಸಿದರು.
ಬೈಂದೂರು: ಸಮೀಪದ ಹೇರೂರು ಗ್ರಾಮದ ಮಡ್ಲಗೇರಿ ಎಂಬಲ್ಲಿನ ತುಂಬಿಕೆರೆ ಬಳಿ ಎಸೆಯಲಾಗುತ್ತಿರುವ ಕೋಳಿ ಮತ್ತು ಪ್ರಾಣಿಗಳ ತ್ಯಾಜ್ಯ ತಿಂದ ಏಳು ದನಗಳು ಅಸುನೀಗಿದ್ದು, ಇನ್ನೂ ಆರು ಸಾವಿನ ಅಂಚಿನಲ್ಲಿವೆ. ಹಲವು ಅಸ್ವಸ್ಥವಾಗಿದ್ದು, ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸತ್ತ ಮತ್ತು ಅಸ್ವಸ್ಥ ದನಗಳು ಮಡ್ಲಗೇರಿಯ ಬಾಬು ಆಚಾರಿ, ಹಿತ್ಲುಮನೆ ಗಿರಿಜಾ ಪೂಜಾರಿ, ಸುಬ್ರಾಯ ಆಚಾರಿ ಮತ್ತು ಸಾಧು ಪೂಜಾರಿ ಎಂಬವರಿಗೆ ಸೇರಿವೆ. ತುಂಬಿಕೆರೆ ಅರಣ್ಯ ಇಲಾಖೆಗೆ ಸೇರಿದ ಗೇರುತೋಟದ ನಡುವೆ ಇದೆ. ನಾವುಂದ ಹೇರೂರು ಮಾರ್ಗದಿಂದ ಇಲ್ಲಿಗೆ ಹೋಗಲು ಮಣ್ಣಿನ ರಸ್ತೆ ಇದೆ. ಯಾವುದೋ ಮಂಸಾಹಾರಿ ಹೋಟೆಲ್‌ಗಳ ಕೋಳಿ ಮತ್ತು ಪ್ರಾಣಿಗಳ ತ್ಯಾಜ್ಯವನ್ನು ಚೀಲಕ್ಕೆ ತುಂಬಿಸಿ, ವಾಹನದಲ್ಲಿ ತಂದು ಇಲ್ಲಿ ಎಸೆಯಲಾಗುತ್ತಿದೆ. ಪರಿಸರದ ದನಗಳು ಇಲ್ಲಿಗೆ ಮೇಯಲು ಬರುತ್ತಿದ್ದು, ಹಸಿ ಒಣಗಿ ಮೇವು ಇಲ್ಲವಾದುದರಿಂದ ಅವು ಈ ತ್ಯಾಜ್ಯ ತಿನ್ನುತ್ತಿವೆ. ಇದು ದನಗಳು ಸಾಯಲು ಮತ್ತು ಅಸ್ವಸ್ಥವಾಗಲು ಕಾರಣ ಎಂದು ಜನರು ಹೇಳುತ್ತಿದ್ದಾರೆ. ಪಶು ವೈದ್ಯರು ಇದನ್ನು ಅಲ್ಲಗಳೆಯುತ್ತಿಲ್ಲ. ಹೇರೂರು ಗ್ರಾಮ ಪಂಚಾಯತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರದ ಅಂಕದಕಟ್ಟೆ ಹೆದ್ದಾರಿ ಪಕ್ಕದಲ್ಲಿರುವ ಏಮ್ ಆರ್ ಏಫ್ ಶೋ ರೂಮಿಗೆ ಲಗ್ಗೆಯಿಕ್ಕಿರುವ ಕಳ್ಳರು ಅಂಗಡಿಯ ಸೆಂಟ್ರಲ್ ಲಾಕ್ ಮುರಿದು ಸುಮಾರು ಹದಿನೈದಕ್ಕೂ ಹೆಚ್ಚಿನ ಟಯರುಗಳನ್ನು ಅನಾಯಸವಾಗಿ ಸಾಗಿಸಲು ಯಶಸ್ವಿಯಾಗಿದ್ದಾರೆ. ಕಳ್ಳತನವಾದ ಟಯರುಗಳ ಒಟ್ಟು ಮೌಲ್ಯ ೧.೬೫ಲಕ್ಷ ಎಂದು ಅಂದಾಜಿಸಲಾಗಿದೆ. ಪಕ್ಕದಲ್ಲಿಯೇ ಸೋಲಾರ್ ಉಪಕರಣಗಳ ಮಳಿಗೆಯಿದ್ದರೂ ಕೇವಲ ಟಯರುಗಳ ಕಳ್ಳತನವನ್ನೇ ಟಾರ್ಗೆಟ್ ಆಗಿರಿಸಿದ ಕಳ್ಳರು ಕದ್ದ ಟಯರುಗಳನ್ನು ಸಾಗಿಸಲು ಪಿಕ್ ಅಪ್ ವಾಹನವನ್ನು ಬಳಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಹೆದ್ದಾರಿಯಲ್ಲಿ ಅಲ್ಲಲ್ಲಿ ಪೋಲಿಸ್ ತಪಾಸಣೆ ಇರುವುದರಿಂದ ಒಳದಾರಿ ಬಳಸಿ ತಮ್ಮ ಗಮ್ಯವನ್ನು ಸೇರುವಲ್ಲಿ ಯಶಸ್ವಿಯಾಗಿದ್ದರೆ. ಸುಮಾರು ಐದು ಜನರಿಗಿಂತಲೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಿದ್ದಾರೆಂದು ಸಂಶಯಿಸಲಾಗಿದೆ. ಆದರೆ ಹೆದ್ದಾರಿ ಪಕ್ಕದಲ್ಲಿಯೇ ಇಂತಹ ಬೃಹತ್ ಪ್ರಮಾಣದ ದರೋಡೆ ಜರಗಿದ್ದರೂ ಮುಂಜಾನೆ ಬಳಿಕವೇ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ಇಷ್ಟರ ತನಕ ಕೇವಲ ದೇವಸ್ಥಾನಗಳನ್ನು ಮಾತ್ರ ಗುರಿಯಾಗಿರಿಸುತ್ತಿದ್ದ ಕಳ್ಳರು ಈ ಬಾರಿ ತಮ್ಮ ವರಸೆ ಬದಲಿಸಿ ಟಯರ್…
ಎ.30ಕ್ಕೆ ಧ್ವನಿಪರೀಕ್ಷೆ. ಮೇ.15ಕ್ಕೆ ಕಾರ್ಯಕ್ರಮ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಸುತ್ತಮುತ್ತಲಿನ ಯುವ ಗಾಯಕರಿಗೆ ಉತ್ತಮ ವೇದಿಕೆ ಕಲ್ಪಿಸಿದ ದೂರದರ್ಶನದ ಹಳೆಯ ಚಿತ್ರಗೀತೆಗಳ ವಿಶೇಷ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮವು ಮೇ.15ರಂದು ಸತತ ಮೂರನೇ ಬಾರಿಗೆ ಕುಂದಾಪುರ ಕೊಟೆಶ್ವರದ ಯುವ ಮೆರಿಡಿಯನ್ ಕನ್ವೆನ್ಶನ್ ಸೆಂಟರ್ ನಲ್ಲಿ ದೂರದರ್ಶನ ಬೆಂಗಳೂರು ಚಂದನ ವಾಹಿನಿ , ಬೈಲೂರು ಎಜುಕೇಶನ್ ಟ್ರಸ್ಟ್ , ಎನ್.ಸಿ.ಆರ್ ಎಜುಕೇಶನ್ ಟ್ರಸ್ಟ್ ಹಾಗೂ ಯುವ ಇನ್ಪ್ರಾಸ್ಟ್ರಕ್ಚರ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಹಾಡುಗಾರರು, ನೃತ್ಯ ತಂಡಗಳು ತಮ್ಮ ಹೆಸರು, ವಯಸ್ಸು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇತ್ತೀಚಿನ ಭಾವಚಿತ್ರ ಅರ್ಜಿಯೊಂದಿಗೆ ಎಪ್ರಿಲ್ 30ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿರುವ ಯುವ ಮೆರಿಡಿಯನ್ ಕನ್ವೆನ್ಶನ್ ಸೆಂಟರ್‌ಗೆ ಇಲ್ಲಿ ಧ್ವನಿ ಪರೀಕ್ಷೆಗೆ ಹಾಜರಾಗಲು ಸಂಘಟಕರು ತಿಳಿಸಿದ್ದಾರೆ.
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ. ಕುಂದಗನ್ನಡವನ್ನು ಮತ್ತಷ್ಟು ಸಮೃದ್ಧಗೊಳಿಸುವ, ಜನರಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಪುಸ್ತಕ, ಸಾಹಿತ್ಯ, ಹಾಡು, ಸಿನೆಮಾ ಹೀಗೆ ಹತ್ತಾರು ಬಗೆಯಲ್ಲಿ ಕೆಲಸ ಮಾಡಿದವರು ಹತ್ತಾರು ಮಂದಿ. ಪ್ರತಿಭಾರಿಯೂ ಹೀಗೆ ನಡೆಯುವ ಹೊಸ ಹೊಸ ಪ್ರಯತ್ನಗಳನ್ನು ಮೆಚ್ಚುತ್ತಾ, ಪ್ರೋತ್ಸಾಹಿಸುತ್ತಾ ಬಂದವರು ಕುಂದನಾಡಿಗರು. ಅಂತಹದ್ದೇ ಒಂದು ಭಾಷಾಭಿಮಾನದಿಂದ ಮೊದಲ ಭಾರಿಗೆ ಪಣ್ಕ್ ಮಕ್ಕಳ್ ತಂಡದ ಆಲ್ಬಂ ಬಿಡುಗಡೆಯಾದಾಗ, ಮೊಲದ ಭಾರಿಗೆ ಗರ್‌ಗರ್‌ಮಂಡ್ಲ ಎಂಬ ಕಮರ್ಶಿಯಲ್ ಸಿನೆಮಾ ಜನರ ಮುಂದೆ ಬಂದಾಗ ಮನತುಂಬಿ ಸ್ವಾಗತಿಸಿದ್ದ ಪ್ರೇಕ್ಷಕ ಸಮೂಹ ಈಗ ಬಿಡುಗಡೆಗೊಂಡಿರುವ ಕುಂದಾಪ್ರ ಕನ್ನಡದ ’ಬಿಲಿಂಡರ್’ ಸಿನೆಮಾವನ್ನೂ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ಸಿನೆಮಾ ಚನ್ನಾಗಿದೆ ಎಂದು ಜನರು ಸುಮ್ಮನೆ ಮೆಚ್ಚಿಕೊಂಡಿಲ್ಲ. ಒಂದು ಪ್ರಾದೇಶಿಕ ಭಾಷೆಯ ಸಿನೆಮಾ ಸ್ಯಾಂಡಲ್‌ವುಡ್‌ನ ಕಮರ್ಶಿಯಲ್ ಸಿನೆಮಾಗಳಿಗೆ ಸರಿಸಾಟಿಯಾಗಿ ನಿಲ್ಲಬಹುದು ಎಂಬ ಭರವಸೆಯನ್ನು ಹುಟ್ಟಿಹಾಕಿರುವುದು ಇದಕ್ಕೆ ಪ್ರಮುಖ ಕಾರಣ. ಒಟ್ಟಾರೆ ಕುಂದಾಪುರದಂತಹ ಪ್ರದೇಶವನ್ನು ಕೇಂದ್ರವನ್ನಾಗಿಟ್ಟುಕೊಂಡು ದೊಡ್ಡ ಮಟ್ಟದ ಸಿನೆಮಾ ತಯಾರಾಗುತ್ತದೆ, ಜನ ಸಿನೆಮಾ ಥಿಯೇಟರ್‌ನತ್ತ ಮುಖ ಮಾಡುತ್ತಾರೆ ಎಂದರೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಾಸಿಯ ತ್ರಾಸಿ ಬೀಚ್ ಕ್ರಿಕೆಟರ್ಸ್ ಆಶ್ರಯದಲ್ಲಿ ಇಲ್ಲಿನ ಬೀಚ್ ಪರಿಸರದಲ್ಲಿ ನಡೆದ ೩೦ ಗಜಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಲಿಷ್ಠ ಡೆಕ್ಕನ್ ಕ್ರಿಕೆಟರ‍್ಸ್ ಬೆಂಗಳೂರು ತಂಡವು ಅಂತಿಮ ಪಂದ್ಯದಲ್ಲಿ ಪ್ರತಿಸ್ಪರ್ಧಿ ಬೀಚ್ ಬಾಯ್ಸ್ ನಾವುಂದ ತಂಡವನ್ನು ಮಣಿಸಿ ದಿ. ರಿಚರ್ಡ್ ಡಿ ಅಲ್ಮೇಡಾ ಅವರ ಸ್ಮರಣಾರ್ಥ ತ್ರಾಸಿ ಬೀಚ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಗೆದ್ದುಕೊಂಡಿದೆ. ಸಂಜೆ ಜರಗಿದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಯುವಕರು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರದ ಕ್ರೀಡಾ ಪ್ರತಿಭೆಗಳನ್ನು ಹೊರತರುವ ಕಾರ್ಯ ಸಂಘಸಂಸ್ಥೆಗಳಿಂದ ಆಗಬೇಕು ಎಂದರು. ಮುಖ್ಯ ಅತಿಥಿ ತ್ರಾಸಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಖಾರ್ವಿ, ದಿ. ರಿಚರ್ಡ್ ಡಿ ಅಲ್ಮೇಡಾ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಟ್ರೀಜಾ ಡಿಸಿಲ್ವ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಭಾರತೀಯ ಸಂಸ್ಕೃತಿ, ಪರಂಪರೆಗೆ ವಿಶ್ವದಲ್ಲೇ ವಿಶಿಷ್ಟ ಸ್ಥಾನಮಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಮೈಮರೆತಿರುವುದರಿಂದ ಬಲಿಷ್ಠ ಹಿಂದು ಸಮಾಜದ ಮೇಲೆ ವ್ಯವಸ್ಥಿತ ರೀತಿಯಲ್ಲಿ ಷಡ್ಯಂತ್ರಗಳು ನಡೆಯುತ್ತಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ ಮೊದಲಾದವುಗಳು ನಿರಂತರವಾಗಿ ನಮ್ಮ ಸಮಾಜದ ಬುಡಕ್ಕೆ ಕೈಹಾಕಿದೆ. ಸಮಸ್ತ ಹಿಂದುಗಳು ಜಾಗೃತರಾದರೆ ಮಾತ್ರ ಇಂತಹ ಸವಾಲುಗಳಿಗೆ ಉತ್ತರ ನೀಡಲು ಸಾಧ್ಯವಿದೆ. ಹಿಂದು ಸಮಾಜದ ಮೇಲೆ ಆಕ್ರಮಣಗಳು ನಡೆದಾಗ ಸಮಸ್ತ ಹಿಂದು ಸಮಾಜ ಜಾತಿ ಮತ ಬೇಧವಿಲ್ಲದೆ ಎಚ್ಚೆತ್ತುಕೊಳ್ಳಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಕೇಂದ್ರ ಕಾರ್ಯಕಾರಿಣಿ ಚೈತ್ರಾ ಕುಂದಾಪುರ ಹೇಳಿದರು. ಅವರು ಪರಶುರಾಮ ಘಟಕ ಮಲ್ಯರಬೆಟ್ಟು ಗಂಗೊಳ್ಳಿ ಇವರ ಆಶ್ರಯದಲ್ಲಿ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಭಾರತ ಮಾತಾ ಪೂಜನ ಮತ್ತು ರಾಷ್ಟ್ರ ಚಿಂತನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತ ಮಾತೆಯ ಸೇವೆಗೆ, ದೇಶದ ರಕ್ಷಣೆಗೆ ಸಿದ್ಧರಾಗಿರುವ ಯುವ ಜನರು ಪ್ರೋತ್ಸಾಹಿಸುವ ಕೆಲಸ ನಡೆಯಬೇಕು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಶಿರೂರು: ಮಾದರಿ ಗ್ರಾಮವಾಗಿ ರೂಪುಗೊಳ್ಳುತ್ತಿರುವ ಶಿರೂರಿಗೆ ಸುಸಜ್ಜಿತ ಮೀನು ಮಾರುಕಟ್ಟೆ ರಾಜ್ಯ ಸರಕಾರದ ಮಹತ್ವದ ಕೊಡುಗೆ. ಮಾದರಿ ಗ್ರಾಮ ಯೋಜನೆಯನ್ವಯ ಶಿರೂರು ಸಮಗ್ರ ಅಭಿವೃದ್ಧಿ ಸಾಧಿಸಲಿದೆ. ಅಳ್ವೆಗದ್ದೆ ಮೀನುಗಾರಿಕಾ ಬಂದರಿನ ಮೊದಲ ಹಂತದ ಕಾಮಗಾರಿ ಮುಗಿದ ತಕ್ಷಣ ಎರಡನೆ ಹಂತವನ್ನು ಕೈಗೆತ್ತಿಕೊಳ್ಳಲಾಗುವುದು. ಎಲ್ಲ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ, ಆಸ್ಪತ್ರೆ ನಿರ‍್ಮಾಣ ಶೀಘ್ರ ಆಗಲಿವೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಶಿರೂರಿನ ಮಾರುಕಟ್ಟೆ ಪ್ರದೇಶದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ 90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸುಸಜ್ಜಿತ ಮೀನು ಮಾರುಕಟ್ಟೆ ಸಂಕೀರ್ಣಕ್ಕೆ ಮಂಗಳವಾರ ಅವರು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಶಿರೂರು ಗ್ರಾಪಂ ಅಧ್ಯಕ್ಷೆ ಜಿ.ಯು. ದಿಲ್‌ಶಾದ್ ಬೇಗಂ ಅಧ್ಯಕ್ಷತೆವಹಿಸಿದ್ದರು. ಶಿರೂರಿಗೆ ಹೈ-ಟೆಕ್ ಮಾರ್ಕೇಟ್ ನಿರ್ಮಾಕ್ಕೆ ರೂ. ೯೦ ಲಕ್ಷ ಅನುದಾನ ನೀಡಿದ ನೀಡಿದ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವರಿಗೆ ಂಚಾಯತ್ ವತಿಯಿಂದ ಪೌರಸನ್ಮಾನ ನೀಡಲಾಯಿತು. ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪ್ರ ಭಾಷಿ ಉಳ್ಸಕ್ ಬೆಳ್ಸಕ್ ಅಂದೇಳಿ ಮಾಡದ್ ಪ್ರಯತ್ನು ಖುಷಿ ಕೊಟ್ಟಿತ್. ಚಿತ್ರ ಹೌಸ್‌ಪುಲ್ ಪ್ರದರ್ಶನು ಕಾಣ್ತ್‌ಇತ್. ಜನ್ರ್ ಭಾಷಾಭಿಮಾನಕ್ಕೆ ತಲಿಬಾಗ್ತೆ. ದುಡ್ಡ್ ಮಾಡುಕ್ ಚಿತ್ರು ಮಾಡ್ಲ. ಚಟಕ್ಕಾಯಿ ಮಾಡದ್ ಚಿತ್ರಕ್ಕೆ ಜನ್ರ್ ಕೊಟ್ಟ್ ಬೆಂಬ್ಲು ಮಾತ್ರ ಬಾರಿ ದೊಡ್ಡದ್. ನಮ್ದೇನಾರೂ ತಪ್ಪ್ ಇದ್ರೇ ಹೇಳಿ ತಿದ್ದಕಂತು. ಆರೆ ದುಯ್ವಿಟ್ ಕಾಲ್ ಎಳಿಬೇಡಿ. ಕುಂದಾಪುರದ ಶರೋನ್ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ಬಿಲಿಂಡರ್ ಚಿತ್ರದ ನಿರ್ದೇಶಕ ರವಿ ಬಸ್ರೂರ್ ಭಾವುಕರಾಗಿ ಆಡಿದ ಮಾತುಗಳಿವು. ಎ.22ರಂದು ಕುಂದಾಪುರದ ವಿನಾಯಕ ಹಾಗೂ ಉಡುಪಿ ಕಲ್ಪನಾ ಚಿತ್ರಮಂದಿರಗಳಲ್ಲಿ ತೆರೆಕಂಡ ಕುಂದಾಪುರ ಕನ್ನಡದ ಸಿನೆಮಾ ’ಬಿಲಿಂಡರ್’ಗೆ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಅಭಿನಂದಿಸಿದ ಅವರು, ನಮ್ಮ ಹೊಸ ಪ್ರಯತ್ನಗಳನ್ನು ಮೆಚ್ಚಿ ಸಿನೆಮಾ ಮಂದಿರಗಳಿಗೆ ಬರುತ್ತಿರುವುದು ಸಂತೋಷ ನೀಡುತ್ತಿದೆ. ಥಿಯೇಟರ್‌ಗಳಿಗೆ ಪ್ರೇಕ್ಷಕರು ಬರುವುದಿಲ್ಲ ಎನ್ನುವ ಅಪವಾದದ ನಡುವೆ ನಮ್ಮ ಚಿತ್ರ ಹೌಸ್‌ಪುಲ್ ಪ್ರದರ್ಶನ ಕಾಣುತ್ತಿದೆ.…
