Author: ನ್ಯೂಸ್ ಬ್ಯೂರೋ

ಗಂಗೊಳ್ಳಿ: ಡಿ.27ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯು ಮುಂಬರುವ ತಾಪಂ., ಜಿಪಂ., ಹಾಗೂ ವಿಧಾನಸಭಾ ಚುನಾವಣೆಗೆ ಅಡಿಗಲ್ಲಾಗಿದ್ದು, ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ನಿರೀಕ್ಷೆಗೂ ಮೀರಿದ ಮತ ದೊರೆತು ಜಯಗಳಿಸಿದರೆ ಮುಂಬರುವ ಚುನಾವಣೆಗೆ ಹೆಚ್ಚಿನ ಸ್ಫೂರ್ತಿ, ಆತ್ಮವಿಶ್ವಾಸ ದೊರೆಯಲಿದೆ. ಹೀಗಾಗಿ ಈ ಚುನಾವಣೆಯನ್ನು ಯಾರೊಬ್ಬರೂ ಹಗುರವಾಗಿ ಪರಿಗಣಿಸದೆ ಬಿಜೆಪಿಯ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ತ್ರಾಸಿಯ ಪ್ರವಾಸಿ ಮಂದಿರದ ಬಳಿ ವಿಧಾನಪರಿಷತ್ ಚುನಾವಣೆಯ ಪೂರ್ವಭಾವಿಯಾಗಿ ನಡೆದ ತ್ರಾಸಿ ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಪಂ. ಸದಸ್ಯರ ಹಾಗೂ ಪಕ್ಷದ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷವು ಒಂದು ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದ್ದು, ಎಲ್ಲಾ ಗ್ರಾಪಂ., ತಾಪಂ. ಹಾಗೂ ಜಿಪಂ ಸದಸ್ಯರು ಪಕ್ಷದ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕು. ಇನ್ನುಳಿದ ಯಾವುದೇ ಅಭ್ಯರ್ಥಿಗೆ ಪ್ರಥಮ ಅಥವಾ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು…

Read More

ಕುಂದಾಪುರ: ಸ್ವಚ್ಛತೆಯ ಬಗ್ಗೆ ನಾವು ದೊಡ್ಡ ದೊಡ್ಡ ಮಾತನಾಡುತ್ತೇವೆ. ಭಾಷಣಗಳನ್ನು ಬಿಗಿಯುತ್ತೇವೆ. ಸರಕಾರವೂ ಸ್ವಚ್ಛತೆಯ ಅರಿವು ಮೂಡಿಸಲೆಂದೇ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ವಾಸ್ತವವಾಗಿ ಪರಿಸರ ಹಾಗೂ ಸ್ವಚ್ಚತೆಯ ಕಾಳಜಿ ಫೋಟೋಷ್ಟೇ ಸೀಮಿತವಾಗಿದೆ ಎಂಬುದನ್ನು ನಮ್ಮ ಸುತ್ತಮುತ್ತಲಿನ ಹಲವಾರು ನಿದರ್ಶನಗಳು ಸಾಕ್ಷೀಕರಿಸಿವೆ. ಆದರೆ ಕುಂದಾಪುರದ ನಗರದಲ್ಲೊಬ್ಬಳು ಮಹಿಳೆ ಸ್ವಚ್ಚ ಭಾರತ್‌ಗಾಗಿ ಸ್ವಹಿತಾಸಕ್ತಿಯಿಂದಲೇ ಪಣತೊಟ್ಟಿದ್ದಾಳೆ. ಯಾವ ಪ್ರಚಾರವೂ ಬಯಸದೆ, ತನ್ನಷ್ಟಕ್ಕೆ ತಾನು ಪೊರಕೆ ಹಿಡಿದು ಬೀದಿಗಳನ್ನು ಗುಡಿಸುತ್ತಾಳೆ. ಅಂಗಡಿ ಮುಂಗಟ್ಟುಗಳನ್ನು ಸ್ವಚ್ಚಗೊಳಿಸುತ್ತಾಳೆ ಮರು ಮಾತನಾಡದೇ, ಯಾವುದೇ ಪ್ರತಿಫಲಾಪೇಕ್ಷೆಯೂ ಇಲ್ಲದೇ ಮುಂದಕ್ಕೆ ಸಾಗುತ್ತಾಳೆ. [quote font_size=”14″ bgcolor=”#ffffff” arrow=”yes” align=”right”]ಆಕೆ ಯಾರೂ, ಏನು ಎಂಬುದು ತಿಳಿದಿಲ್ಲ. ಬೆಳಿಗ್ಗೆ ಬಂದು ಚರ್ಚ್ ರಸ್ತೆಯ ಬೀದಿಗಳನ್ನು ಗುಡಿಸುತ್ತಿದ್ದುದು ಕಂಡುಬಂತು. ಮಾತನಾಡಿಸಲೂ ಪ್ರಯತ್ನಿಸಿದೆ. ಆದರೆ ಅವಳ ಅಸ್ಪಷ್ಟವಾದ ಮಾತು ಅರ್ಥವಾಗಲಿಲ್ಲ. ಹಿಂದಿ ಮಾತನಾಡುವ ಶೈಲಿ ನೋಡಿದರೆ ಉತ್ತರ ಭಾರತದ ಕಡೆಯವಳು ಎಂದೆನ್ನಿಸುತ್ತದೆ. – ಜೋಯ್ ಜೆ. ಕರ್ವೆಲ್ಲೊ[/quote] ಹೌದು. ಅಂದು ಕುಂದಾಪುದ ಚರ್ಚ್ ರಸ್ತೆಯಲ್ಲಿ ಡಿಢೀರ್ ಪ್ರತ್ಯಕ್ಷಳಾದ ಆ…

Read More

ಕುಂದಾಪ್ರ ಡಾಟ್ ಕಾಂ. ಕುಂದಾಪುರ, ಡಿ15: ಸಪ್ತಕ್ಷೇತ್ರಗಳಲ್ಲೊಂದಾದ ತಾಲೂಕಿನ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಶನಿವಾರದಿಂದ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳು ಕಳೆದ ಮೂರು ದಿನಗಳಿಂದ ವಿಧಿವತ್ತಾಗಿ ನಡೆಯುತ್ತಿದ್ದು ನಡೆಯುತ್ತಿದ್ದು, ಇಂದು ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಮತ್ತು ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ನಾಳೀಕೇರ ಮಹಾಗಣಪತಿ ಯಾಗ ನಡೆಯಿತು. ಮೊಲದ ದಿನ ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ಥಿವಾಚನ, ಗಣಪತಿ ಹೋಮ, ಅಥರ್ವ ಶೀರ್ಷ ಉಪನಿಷತ್ ಹೋಮ, ಸತ್ಯ ಗಣಪತಿ ವೃತ, ಮಹಾ ಪೂಜೆ, ರಾತ್ರಿ ರಂಗ ಪೂಜೆ, ಡೋಲಾರೋಹಣ, ಪಲ್ಲಕಿ ಉತ್ಸವ ನಡೆಯಿತು. ಎರಡನೇ ದಿನ ಉಪನಿಷತ್ ಕಲಶಾಭಿಷೇಕ, ಗಣಪತಿ ಹೋಮ, ಸತ್ಯ ಗಣಪತಿ ವೃತ ಮಹಾಪೂಜೆ ನಡೆಯಿತು. ರಾತ್ರಿ ಪುರಮೆರವಣಿಗೆ ರಂಗ ಪೂಜೆ ಹಾಗೂ ಪಲ್ಲಕಿ ಉತ್ಸವ ನಡೆಯಿತು. ಸಂಜೆ ಗಂಟೆಯಿಂದ ಲಯಾಭಿನಯ ನಾಟ್ಯಧಾಮ ಬೆಂಗಳೂರು ಇವರಿಂದ ಲಲಿತಾ ಸಹಸ್ರನಾಮ ನೃತ್ಯ ರೂಪಕ, ಮೂರನೇ ದಿನ ಮಾರ್ಗಶಿರ…

Read More

ಕುಂದಾಪುರ: ಇಲ್ಲಿನ ನೂತನ ಉಪವಿಭಾಗಾಧಿಕಾರಿಯಾಗಿ ಅಶ್ವಥಿ ಎಸ್. ನಗರದ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಕುಂದಾಪುರ ದಿಂದ ಬೇರೆ ಕಡೆ ವರ್ಗಾವಣೆಗೊಂಡ ಅಸಿಸ್ಟೆಂಟ್ ಕಮೀಷನರ್ ಚಾರುಲತಾ ಸೋಮಲ್ ಅವರ ಅಶ್ವಥಿ ಅವರಿಗೆ ಅಧಿಕಾರ ಹಸ್ತಾಂತರಿಸಿರು. ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೇರಳ ಮೂಲದ ಅಶ್ವಥಿ ಎಸ್. ಅವರು ಹಿಂದೆ ಮೈಸೂರು ನಂತರ ದೆಹಲಿಯಲ್ಲಿ ಕೆಲಸ ನಿರ್ವಹಿಸಿ ಕುಂದಾಪುರ ಎಸಿಯಾಗಿ ನಿಯುಕ್ತಿಗೊಂಡಿದ್ದರೆ.

Read More

ಕುಂದಾಪುರ: ಬಸ್ರೂರು ಶ್ರೀ ಕಾಶೀ ಮಠದಲ್ಲಿ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ 129ನೇ ಪುಣ್ಯ ತಿಥಿ ಮಹೋತ್ಸವ ಕಾಶೀ ಮಠಾದೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು. ಈ ಸಂದರ್ಭ ಶತಕಲಶಾಭೀಷೇಕ, ಸಾನಿದ್ಯ ಹವನ,ಲಘು ವಿಷ್ಣು ಹವನ,ವಾಯುಸ್ತುತಿ ಪ್ರದಕ್ಷಿಣ ನಮಸ್ಕಾರ ಮುಂತಾದ ಧಾರ್ಮಿಕ ವಿದಿ ವಿಧಾನಗಳನ್ನು ವೇ.ಮೂ ದಾಮೋದರ ಆಚಾರ್ಯ,ಬಸ್ರೂರು ಇವರ ನೇತೃತ್ವದಲ್ಲಿ ನಡೆದವು. ಶ್ರೀಮತ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಬೃಂದಾವನ ಮತ್ತು ಶಾಖಾ ಮಠದ ಸುಂದರೀಕರಣ ಕಾರ್ಯವನ್ನು ಶ್ರೀ ದೇವರಿಗೆ ಅರ್ಪಿಸಲಾಯಿತು. ಸಂಜೆ ನಗರೋತ್ಸವ ನಡೆಯಿತು. ರಾತ್ರಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನದಲ್ಲಿ ಗುಣ ಗಾನದ ಅಗತ್ಯತೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಶಿಷ್ಯ ಕೋಟಿಗೆ ಗುರುವಿನ ಸ್ಮರಣೆ ಆದ್ಯ ಕರ್ತವ್ಯವಾಗಿದ್ದು, ಜೀವನದಲ್ಲಿ ಸಮಸ್ತ ಅಭಿವೃದ್ದಿಗೆ ಹಾಗೂ ಜ್ಞಾನ ಸಂಪಾದನೆಗೆ ಗುರುಸ್ಮರಣೆಯೇ ದಾರಿ. ಶ್ರೀಮತ್ ಭುವನೇಂದ್ರ ತೀರ್ಥತು ಶ್ರೀ ಧನ್ವಂತರಿಯ…

Read More

ಕುಂದಾಪುರ: ಮೈಸೂರಿನ ಕರ್ನಾಟಕ ಕಲಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಪಾಡಿಯ ರೋಷನ್ ಭಾಸ್ಕರ್ ಪೂಜಾರಿಯವರು 2015-16ನೇ ಸಾಲಿನಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹಿನ್ನಲೆಯಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದರು. ಈತ ಉದ್ಯಮಿ ಭಾಸ್ಕರ ಗುಲ್ವಾಡಿ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಕಲ್ಪನಾ ಭಾಸ್ಕರ್ ಅವರ ಪುತ್ರ.

Read More

ಬೈಂದೂರು: ಆಚಾರ್ಯ ಶಂಕರ ಭಗವತ್ಪಾದರು ಪ್ಲೇಟೋ, ಐನ್‌ಸ್ಟೇನ್‌ರಂತೆ ವಿಶ್ವದ ಶ್ರೇಷ್ಠ ದಾರ್ಶನಿಕರು. ಇವರ ವಿಚಾರಧಾರೆಗಳು ದೇಶ, ಕಾಲ ಪರಿಧಿಯನ್ನು ಮೀರಿ ಪರಮ ಸತ್ಯದ ಅನ್ವೇಷಣೆ ಮತ್ತು ಅನುಭವಕ್ಕೆ ತಕ್ಕುದಾದುದು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಶೃಂಗೇರಿಯ ಶಾಂಕರ ತತ್ತ್ವ ಪ್ರಸಾರ ಅಭಿಯಾನಂ ಶೃಂಗೇರಿ ಇವರು ಆಯೋಜಿಸಿದ ಶ್ರೀಶಂಕರ ಅಷ್ಟೋತ್ತರ ಶತಮಾನ ಜಪ ಯಜ್ಞವನ್ನು ತಾಲೂಕಿನಾದ್ಯಂತ ನಡೆಸುವ ಸಂಕಲ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿಶ್ವಾದ್ಯಂತ ಭಾರತ ದೇಶವು ಹಿಂಜರಿಕೆ ಮತ್ತು ಕ್ಲ್ಯಷ್ಟಗಳಿಂದ ಮುಕ್ತವಾಗಿ ಮುನ್ನುಗುತ್ತಿರುವ ಈ ದಿನಗಳಲ್ಲಿ ಆಚಾರ್ಯರು ಪ್ರತಿಪಾದಿಸಿದ ಒಂದು ಸತ್ಯ ಒಂದು ರಾಷ್ಟ್ರ. ಆದರೆ ಅನೇಕ ರೂಪುಗಳು, ಭಾವಗಳು ಎಂಬುವುದರಿಂದ ಸ್ಪೂರ್ತಿ ಪಡೆಯಬಹುದು. ಯಾವುದೇ ವಿಚಾರ ನಿಂತ ನೀರಾಗದೆ ಕಾಲಗತಿಯಲ್ಲಿ ಪರಂಪರೆಯಿಂದ ಪುಷ್ಠಿ ಪಡೆಯುವುದು. ಇಲ್ಲಿ ವ್ಯಕ್ತಿ ಮುಖ್ಯವಾಗದೆ ತತ್ತ್ವವೂ ಪ್ರಸ್ತುತವಾಗುತ್ತದೆ ಎಂದರು. ಸಮಿತಿ ಗೌರವಾಧ್ಯಕ್ಷ ಬಿ.ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆವಹಿಸಿದ್ದರು. ಯು. ಅಭಯ ಮಯ್ಯ…

Read More

ಕುಂದಾಪುರ: ಪುತ್ತೂರಿನಲ್ಲಿ ನಡೆದ ರೋಟರಿ 3180 ಇದರ ಜಿಲ್ಲಾ ಕ್ರೀಡಾಕೂಟ ರೋಟಾ ಸ್ಫೋರ್ಟ್ಸ್‌ನಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಕುಂದಾಪುರ ೩೦ಕ್ಕೂ ಅಧಿಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ರೋಟೇರಿಯನ್ ವಿಭಾಗದಲ್ಲಿ ಕ್ರಿಕೆಟ್‌ನಲ್ಲಿ ಪ್ರಥಮ, ಹಗ್ಗ ಜಗ್ಗಾಟದಲ್ಲಿ ದ್ವಿತೀಯ, 100 ಮೀ ಓಟದಲ್ಲಿ ಮನೋಜ್ ನಾಯರ್ ದ್ವಿತೀಯ, ಡಿಸ್ಕಸ್ ತ್ರೋನಲ್ಲಿ ಕಿಶೋರ್ ಕೋಟ್ಯಾನ್ ತೃತೀಯ, ಸ್ಲೋ ಸೈಕಲ್ ರೇಸ್‌ನಲ್ಲಿ ಬಿ.ಕಿಶೋರ್‌ಕುಮಾರ್ ಕುಂದಾಪುರ ತೃತೀಯ ಸ್ಥಾನ ಪಡೆದರು. ಆನ್ಸ್ ವಿಭಾಗದಲ್ಲಿ ತ್ರೋಬಾಲ್ ದ್ವಿತೀಯ, ರೀಲೆಯಲ್ಲಿ ಪ್ರಥಮ, ಟೆನಿಕ್ವಾಟ್‌ನಲ್ಲಿ ಪ್ರಥಮ, 50 ಮೀ., 100 ಮೀ, 200 ಮೀ ಓಟದಲ್ಲಿ ನಯನ ಕಿಶೋರ್ ಕೋಟ್ಯಾನ್ ಪ್ರಥಮ, ಸ್ಟ್ಯಾಂಡಿಂಗ್ ಜಂಪ್, ಶಾಟ್‌ಪುಟ್‌ನಲ್ಲಿ ಗೀತಾಂಜಲಿ ಆರ್. ನಾಯ್ಕ್ ಪ್ರಥಮ, ೨೦೦ಮೀ ಓಟದಲ್ಲಿ ಸುರೇಖಾ ತೃತೀಯ, ಶಾಟ್ ಫುಟ್‌ನಲ್ಲಿ ಶಶಿರೇಖಾ ದ್ವಿತೀಯ,400 ಮೀ ವಾಕಿಂಗ್‌ನಲ್ಲಿ ಭಾರತಿ ಪ್ರಕಾಶ್ ಶೆಟ್ಟಿ ಪ್ರಥಮ, 50 ಮೀ ಓಟದಲ್ಲಿ ದ್ವಿತೀಯ, 100 ಮೀ.ನಲ್ಲಿ ತೃತೀಯ ಸ್ಥಾನ ಪಡೆದರು. ಅನೆಟ್ಸ್ ವಿಭಾಗದಲ್ಲಿ ರೀಲೆಯಲ್ಲಿ ತೃತೀಯ, ಬಾಲಕಿಯರ ಶಾಟ್‌ಪುಟ್‌ನಲ್ಲಿ ಪ್ರಥಮ,…

Read More

ಕೊಲ್ಲೂರು: ಎಲ್ಲಾ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಹಾಗೂ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕು ಎಂಬ ನೆಲೆಯಲ್ಲಿ ಸರಕಾರವು ಹಲವಾರು ಯೋಜನೆಗಳು, ಹೆಚ್ಚಿನ ಅನುದಾನ, ಪ್ರೇರಕ ವಿಷಯಗಳನ್ನು ಅಳವಡಿಸಿ ಕಾರ್ಯತಂತ್ರ ರೂಪಿಸಿದೆ. ಸಮಾಜದಲ್ಲಿ ಸಾಮರಸ್ಯದ ಬದುಕು ಕಾಣಬೇಕಾದರೆ ಶಿಕ್ಷಣದ ಅಗತ್ಯತೆಯಿದೆ ಎಂದು ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಹೇಳಿದರು. ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಆಂಗ್ಲ ಮಾಧ್ಯಮದ ಭರಾಟೆಯಿಂದ ಆಕರ್ಷಿತರಾಗಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರಿಗೆ ಕೀಳರಿಮೆ ಸಲ್ಲದು. ಮಾತೃಭಾಷೆ ಪ್ರಧಾನವಾಗಿದ್ದು, ವಿದ್ಯಾ ಸಂಸ್ಥೆಗಳಲ್ಲಿ ರೂಪುಗೊಂಡ ವಿದ್ಯಾರ್ಥಿಗಳನ್ನು ನಮ್ಮ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಅಲ್ಲದೇ ಸತ್ಯವನ್ನು ವಿಮರ್ಶೆ ಮಾಡುವ ಮನಸ್ಥಿತಿಯ ಮೂಲಕ ಮಕ್ಕಳು ಬೆಳೆಯಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮತ್ತು ಪ್ರತೀ ತರಗತಿಯಲ್ಲಿ ಶೇ.೧೦೦ ಹಾಜರಾತಿ ಹೊಂದಿದ ವಿದ್ಯಾರ್ಥಿಗಳಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.…

Read More

ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ ಸಡಗರದೊಂದಿಗೆ ನೆರವೇರಿತು. ದೇವಳದ ಪ್ರಧಾನ ಅರ್ಚಕ ಗಣಪತಿ ಸುವರ್ಣ, ಉತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ಹೇರಿಕುದ್ರು ಇನ್ನಿತರರು ಉಪಸ್ಥಿತರಿದ್ದರು

Read More