ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವೇದ, ಉಪನಿಷತ್ತು, ದರ್ಶನ, ಸಾಹಿತ್ಯ ಹಾಗೂ ಭಾರತೀಯ ಜ್ಞಾನ ಪರಂಪರೆಯ ಅಪಾರ ಸಂಪತ್ತನ್ನು ತನ್ನೊಳಗೆ ಅಡಕಗೊಳಿಸಿರುವ ಸಂಸ್ಕೃತವು ಕೇವಲ ಒಂದು ಪ್ರಾಚೀನ ಭಾಷೆಯಲ್ಲ, ಜಗತ್ತಿಗೆ ಜ್ಞಾನ ಮತ್ತು ಚಿಂತನೆಯ ಬೆಳಕು ನೀಡಿದ ಸಮೃದ್ಧ ಭಾಷೆಯಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಜಯಶಂಕರ್ ಕಂಗಣ್ಣಾರು ನುಡಿದರು. ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಬುಧವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ‘ಸಂಸ್ಕೃತದ ವಿಶ್ವ ವೈಭವ’ ಕುರಿತು ಮಾತನಾಡಿದ ಅವರು, ಸಂಸ್ಕೃತದ ಮಹತ್ವವನ್ನು ಭಾರತೀಯ ಜ್ಞಾನ ಪರಂಪರೆಯ ಹಿನ್ನೆಲೆಯಲ್ಲಿ ವಿವರಿಸಿದರು. ಸಂಸ್ಕೃತವು ವೇದಗಳ ಮೂಲಕ ಭಾರತೀಯ ಸಾಂಸ್ಕೃತಿಕ ಜಗತ್ತಿಗೆ ಶಾಂತಿ, ಸಹಬಾಳ್ವೆ ಮತ್ತು ಲೋಕಕಲ್ಯಾಣದ ಸಂದೇಶವನ್ನು ನೀಡಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಆಶಯವು ಸಮಸ್ತ ಮಾನವಕುಲದ ಒಳಿತನ್ನು ಬಯಸುವ ಭಾರತೀಯ ಚಿಂತನೆಯ ಪ್ರತೀಕವಾಗಿದೆ. ಸಂಸ್ಕೃತ ಸಾಹಿತ್ಯ ಮತ್ತು ಜ್ಞಾನ ಪರಂಪರೆಯಲ್ಲಿ ವ್ಯಕ್ತಿಯ ಒಳಿತಿನೊಂದಿಗೆ ಜಗತ್ತಿನ ಕಲ್ಯಾಣಕ್ಕೂ ಮಹತ್ವ ನೀಡಲಾಗಿದೆ. ಸಂಸ್ಕೃತದಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್, ಬೌದ್ದ ಸಮುದಾಯದ ಬಾಲಕ ಮತ್ತು ಬಾಲಕಿಯರಿಗೆ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ನವೀಕರಣ ವಿದ್ಯಾರ್ಥಿಗಳ ಸೀಟು ಹಂಚಿಕೆಯಾಗಿ ಉಳಿಕೆ ಸೀಟುಗಳಿಗೆ State Hostel Portal https://shp.karnataka.gov.in ತಂತ್ರಾಂಶದ ಮೂಲಕ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಂದ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿರುತ್ತದೆ. ಒಟ್ಟು ಮಂಜೂರಾತಿ ಸೀಟುಗಳಲ್ಲಿ ಶೆ.75 ಅಲ್ಪಸಂಖ್ಯಾತರು ಮತ್ತು ಶೇ.25 ಇತರೆ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ.ಗಳ ಒಳಗಿದ್ದು ಅರ್ಜಿ ನಮೂನೆಯ ಜೊತೆಗೆ ಜಾತಿ/ಆದಾಯ ಪ್ರಮಾಣ ಪತ್ರ, 2025-26ನೇ ಸಾಲಿನ ವಾರ್ಷಿಕ ಪರೀಕ್ಷೆ ಅಂಕಪಟ್ಟಿ, ಪಡಿತರ ಚೀಟಿ, ಆಧಾರ್ ಕಾರ್ಡ್, ವರ್ಗಾವಣೆ ಪ್ರಮಾಣ ಪತ್ರದ ದೃಢೀಕೃತ ಪ್ರತಿ, ವಾಸಸ್ಥಳದಿಂದ ಪ್ರವೇಶ ಕೋರಿರುವ ಕಾಲೇಜಿಗೆ ಇರುವ ದೂರದ ಬಗ್ಗೆ ಪ್ರಮಾಣ ಪತ್ರ ಹಾಗೂ ಫೋಟೋಗಳೊಂದಿಗೆ ಅರ್ಜಿಯನ್ನು , ಸೆಪ್ಟೆಂಬರ್ 30…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಬೆಂಗಳೂರಿನ ಹೆಬ್ಬಾಳದ ಹೋಟೆಲ್ ಅಮೃತ್ ಸಾಗರ್ನಲ್ಲಿ ನೂತನವಾಗಿ ಪ್ರಾರಂಭಗೊಂಡ ಬಿಲ್ಲವ ಯುವ ಬ್ರಿಗೇಡ್ನ ಎರಡನೇ ಪೂರ್ವಭಾವಿ ಸಭೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಹಮ್ಮಿಕೊಂಡಿತು. ಶ್ರೀ ನಾರಾಯಣ ಗುರು ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರೊಂದಿಗೆ ನಾರಾಯಣಗುರುಗಳು ಜಗತ್ತಿಗೆ ನೀಡಿದ ಸಂದೇಶವನ್ನು ವೇದಿಕೆಯಲ್ಲಿದ್ದ ಗಣ್ಯರು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಕರಾವಳಿಯ ಬಡಗಿನ ಯಕ್ಷ ಹಾಸ್ಯ ಕಲಾವಿದ ಚೌಕುಳಮಕ್ಕಿ ಬಸವ ಪೂಜಾರಿ ಅವರನ್ನು ಗೌರವ ಧನ ನೀಡಿ ಸನ್ಮಾನಿಸಲಾಯಿತು. ಸಂಘಟನೆಯ ಮುಖ್ಯಸ್ಥರಾದ ಪ್ರದೀಪ್ ಪೂಜಾರಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ, ಉದ್ದೇಶದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವುದರೊಂದಿಗೆ ಎಲ್ಲರ ಒಗ್ಗಟ್ಟಿನೊಂದಿಗೆ ಸಮುದಾಯ ಬಲಪಡಿಸೋಣ, ಒಂದಾಗಿ ಕಟ್ಟ ಕಡೆಯ ಬಿಲ್ಲವರು ಮುನ್ನೆಲೆಗೆ ಬರುವಂತೆ ಮಾಡುವುದು ನಮ್ಮ ಹೋರಾಟ ಎಂಬುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಅಥಿತಿಗಳು, ಸಂಸ್ಥೆಯ ಸದಸ್ಯರು ಭಾಗಿಯಾಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಾವರ ನಿವಾಸಿ ಸುಧಾಕರ ಶೆಟ್ಟಿ (40) ಎಂಬ ವ್ಯಕ್ತಿಯು ಶಿವಮೊಗ್ಗದ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಆಗಾಗ ಮನೆಗೆ ಬಂದು ಹೋಗುತ್ತಿರುತ್ತಾರೆ. ಮೇ. 07ರಂದು ಬೆಳಗ್ಗೆ 10.30 ರ ಸುಮಾರಿಗೆ ಶಿವಮೊಗ್ಗದಿಂದ ಮನೆಗೆ ಬಂದಿದ್ದು, ಅದೇ ದಿನ ಸಂಜೆ ಶಿವಮೊಗ್ಗಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರೂ ಕೆಲಸಕ್ಕೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಸಾಧಾರಣ ಶರೀರ, ದುಂಡು ಮುಖ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಮೊ.ನಂ: 9480805468, ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರು ಮೊ.ನಂ: 9480805433 ಹಾಗೂ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ಕಛೇರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪವರ್ಲಿಫ್ಟರ್ ವಿಶ್ವನಾಥ ಭಾಸ್ಕರ ಗಾಣಿಗ ಅವರು ಹೊಸ ದಾಖಲೆಯೊಂದಿಗೆ ಮತ್ತೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಉತ್ತರಪ್ರದೇಶದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಇಕ್ವಿಪ್ಡ್ ಸೀನಿಯರ್ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ. ವಿಶ್ವನಾಥ ಭಾಸ್ಕರ ಗಾಣಿಗ ಅವರು 105 ಕೆ.ಜಿ. ವಿಭಾಗದಲ್ಲಿ ಬೆಂಚ್ಪ್ರೆಸ್ನಲ್ಲಿ 222.5 ಕೆ.ಜಿ. ಭಾರ ಎತ್ತಿ ಕಂಚಿನ ಪದಕ, ಡೆಡ್ಲಿಫ್ಟ್ನಲ್ಲಿ 337.5 ಕೆ.ಜಿ. ಭಾರ ಎತ್ತಿ ನೂತನ ರಾಷ್ಟ್ರೀಯ ದಾಖಲೆ ಮಾಡುವುದರ ಜೊತೆಗೆ, ಚಿನ್ನದ ಪದಕ ಪಡೆದು 105 ಕೆ.ಜಿ. ವಿಭಾಗದಲ್ಲಿ ಒಟ್ಟು 885 ಕೆ.ಜಿ. ಭಾರ ಎತ್ತಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಉತ್ತರಪ್ರದೇಶದ ಗಾಜಿಪುರ್ನಲ್ಲಿ ಆಗಸ್ಟ್ 29ರಿಂದ ಸೆಪ್ಟೆಂಬರ್ 3ರ ವರೆಗೆ ಈ ಚಾಂಪಿಯನ್ಷಿಪ್ ನಡೆದಿದೆ. ಇದರೊಂದಿಗೆ ವಿಶ್ವನಾಥ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 6 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 26 ಸೇರಿದಂತೆ ಒಟ್ಟು 32 ಚಿನ್ನದ ಪದಕಗಳನ್ನು ಗಳಿಸಿದಂತಾಗಿದೆ. ಇದರೊಂದಿಗೆ ಅವರು ಎರಡು ರಾಷ್ಟ್ರೀಯ ಮಟ್ಟದ ದಾಖಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅನುಷ್ಠಾನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನೆಯಡಿಯಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿಯಿರುವ ಪಿ & ಒ ಇಂಜಿನಿಯರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. Bachelor of Prosthetic and Orthotics(BPO) Diploma in Prosthetic and Orthotics(DPO)ವಿದ್ಯಾರ್ಹತೆಯೊಂದಿಗೆ ಸದ್ರಿ ಕ್ಷೇತ್ರದಲ್ಲಿ 2 ರಿಂದ 5 ವರ್ಷ ಅನುಭವ ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 17ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ರೆಡ್ ಕ್ರಾಸ್ ಭವನ, ಅಜ್ಜರಕಾಡು, ಉಡುಪಿ ದೂ.ಸಂ: 0820-2533372, 9964583433 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರೋಟರಿ ಕ್ಲಬ್ ತೆಕ್ಕಟ್ಟೆ ವತಿಯಿಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವು ಹೆಸ್ಕುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಟಿ. ರಾಜೀವ್ ಶೆಟ್ಟಿ ಅವರು ಸಂಚಾರ ನಿಯಮ ಪಾಲನೆಯ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿ ನಿವೃತ್ತ ಎಆರ್ಟಿಒ ವಿಶ್ವನಾಥ ನಾಯಕ್ ಅವರು ವೀಡಿಯೊ ಪ್ರದರ್ಶನದ ಮೂಲಕ ರಸ್ತೆ ಸುರಕ್ಷತಾ ನಿಯಮಗಳು ಮತ್ತು ಜವಾಬ್ದಾರಿಯುತ ಚಾಲನೆಯ ಕುರಿತು ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯ ಅಬ್ದುಲ್ ರವೂಫ್ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ದೇವಾಡಿಗ ನಿರೂಪಿಸಿದರು. ಸುಮಾರು 125 ವಿದ್ಯಾರ್ಥಿಗಳು ಭಾಗವಹಿಸಿದರು. ಜಗದೀಶ್ ಎಚ್., ವಿಠ್ಠಲ್ ರಾವ್, ಟಿ. ಸುಧಾಕರ್ ಶೆಟ್ಟಿ, ಸಹಾಯಕ ಗವರ್ನರ್ ಚಂದ್ರಶೇಖರ್ ಶೆಟ್ಟಿ, ಜಂಟಿ ಕಾರ್ಯದರ್ಶಿ ನಿತ್ಯಾನಂದ ಕೋಟಾರಿ ಹಾಗೂ ಕಲಿಕಾ ಸಹಾಯಕ ಸುರೇಶ್ ಬೇಳೂರು ಉಪಸ್ಥಿತರಿದ್ದರು. ಶಿಕ್ಷಕ ಗೋಪಾಲ್ ಸೋಮಯಾಜಿ ವಂದಿಸಿದರು. ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವಿಜ್ಞಾನವನ್ನು ಪಠ್ಯಪುಸ್ತಕದ ಕಲಿಕೆಗೆ ಸೀಮಿತಗೊಳಿಸದೆ, ಪ್ರಯೋಗ, ಅನುಭವ ಮತ್ತು ಸಂಶೋಧನೆಯ ಮೂಲಕ ಅರ್ಥೈಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶದಿಂದ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಎರಡನೇ ಆವೃತ್ತಿಯ ‘ಅಭಿಜ್ಞ’ ವಿಜ್ಞಾನ ಕಾರ್ಯಾಗಾರವನ್ನು ಗುರುವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು, ವಿಜ್ಞಾನವು ಕುತೂಹಲದಿಂದ ಕಲಿಯಬಹುದಾದ, ಪ್ರಯೋಗದ ಮೂಲಕ ಅರ್ಥಮಾಡಿಕೊಳ್ಳಬಹುದಾದ ಮತ್ತು ನೈಜ ಜೀವನದೊಂದಿಗೆ ಸಂಪರ್ಕ ಹೊಂದಿರುವ ಕ್ಷೇತ್ರವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನ ವಿಭಾಗಗಳತ್ತ ಬರಬೇಕು. ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಬಲಗೊಂಡಾಗ ದೇಶದ ಪ್ರಗತಿಗೂ ವೇಗ ದೊರೆಯುತ್ತದೆ. ವಿಜ್ಞಾನ ಬೆಳೆಯಬೇಕು, ದೇಶವೂ ಬೆಳೆಯಬೇಕು ಎಂದರು. ವಿಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರವನ್ನು ಒತ್ತಾಯ ಅಥವಾ ಸಾಮಾಜಿಕ ಒತ್ತಡದಿಂದ ಆಯ್ಕೆ ಮಾಡಬಾರದು. ಆಸಕ್ತಿ ಮತ್ತು ಉತ್ಸಾಹ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಹೊಸತನವನ್ನು ಹುಡುಕಬಹುದು. ಸ್ಥಾಪಿತ ಮಾದರಿಯನ್ನೇ ಅನುಸರಿಸುತ್ತಾ ಹೋಗಬೇಡಿ. ನಿಮ್ಮದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸ್ತವ್ಯವಿದ್ದು ಇಲ್ಲಿಯ ತನಕ ಗ್ರಾಮ ಪಂಚಾಯತುಗಳಿಗೆ ಅರ್ಜಿ ಸಲ್ಲಿಸಿ 11ಬಿ ಪಡೆಯದೆ ಇರುವವರ ಮಾಹಿತಿಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಕಚೇರಿಯಿಂದ ಪ್ರತಿ ಗ್ರಾಮ ಪಂಚಾಯತ್ಗಳಿಗೆ ಕಳುಹಿಸಿಸುವಂತೆ ಆದೇಶಿಸಿದ್ದಾರೆ ಎನ್ನುವ ಮಾಹಿತಿ ದೊರೆತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಬೈಂದೂರು ಬ್ಲಾಕ್ ಕಾಂಗ್ರೆಸ್ ಸಂಯೋಜಕರಾದ ಕೆ. ವಿಕಾಸ್ ಹೆಗ್ಡೆ ಪತ್ರಿಕೆ ಹೇಳಿಕೆ ಮೂಲಕ ತಿಳಿಸಿರುತ್ತಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳು ಕೇವಲ ಮಾಹಿತಿ ಕೇಳಿದರೆ ತೊಂದರೆಯಿಲ್ಲಾ ಆದರೆ ಗ್ರಾಮ ಪಂಚಾಯತ್ ಗಳ ಮೂಲಕ ಮಾಹಿತಿ ಪಡೆದು 11ಬಿ ಪಡೆಯದೆ ಇರುವ ಕುಟುಂಬಗಳ ಮನೆ ಸಂಖ್ಯೆ, ವಿದ್ಯುತ್ ಸಂಪರ್ಕ, ಪಡಿತರ ಚೀಟಿ ಇತ್ಯಾದಿಗಳನ್ನು ಹಿಂಪಡೆಯಲು ಹಾಗೂ ಹೊಸದಾಗಿ ನೀಡಬಾರದು ಎಂದು ಆದೇಶ ಮಾಡಲು ಹೊರಟರೆ ಇದರಿಂದ ಸರ್ಕಾರಿ ಸ್ಥಳದಲ್ಲಿ ವಾಸ್ತವ್ಯವಿರುವ ಅದೆಷ್ಟೋ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆಯಿದೆ. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳೂ ಸಹ ಸರ್ಕಾರಿ ಸ್ಥಳದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ‘ಸಣ್ಣ ಕಥೆಗಳು ಮನುಷ್ಯನ ಜೀವನದಲ್ಲಿ ಅವನನ್ನು ಗಾಢವಾಗಿ ತಟ್ಟುವ ಯಾವುದಾದರೊಂದು ಸನ್ನಿವೇಶವನ್ನು ಕಲಾತ್ಮಕವಾಗಿ ಚಿತ್ರಿಸುತ್ತವೆ. ಅವುಗಳಲ್ಲಿ ಮನುಷ್ಯನನ್ನು ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಬಲ್ಲ ಮೌಲ್ಯ ಸಂದೇಶಗಳಿದ್ದರೆ ಕಥೆಗಳ ಘನತೆ ಇನ್ನೂ ಹೆಚ್ಚಾಗುತ್ತದೆ. ಪಾರ್ವತಿ ಐತಾಳರ ಕಥೆಗಳು ನೋಟಕ್ಕೆ ಸರಳವಾಗಿ ಕಂಡರೂ ಅವುಗಳಲ್ಲಿ ಬದುಕಿನ ಬಗೆಗಿನ ಗಂಭೀರ ಹಾಗೂ ಸೂಕ್ಷ್ಮ ಒಳನೋಟಗಳಿರುವ ಸತ್ಯವನ್ನು ಅಲ್ಲಗಳೆಯುವ ಹಾಗಿಲ್ಲ’ ಎಂದು ಲೇಖಕ-ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಹೇಳಿದರು. ಅವರು ಇಲ್ಲಿನ ಜನಪ್ರತಿನಿಧಿ ಪತ್ರಿಕಾ ಕಚೇರಿಯಲ್ಲಿ ನಡೆದ ಪಾರ್ವತಿ ಜಿ. ಐತಾಳರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ‘ಘಾತ’ ಕಥಾಸಂಕಲನದ ಕುರಿತು ಅವರು ಮಾತನಾಡಿದರು. ಲೇಖಕಿ-ಉಪನ್ಯಾಸಕಿ ಸುಮತಿ ಶೆಣೈ ಅವರು ಪಾರ್ವತಿ ಐತಾಳರ ‘ಮಲೆಯಾಳ ಸಾಹಿತ್ಯದ ಆರಂಭ ಕಾಲ’ ಎಂಬ ಇನ್ನೊಂದು ಕೃತಿಯ ಬಗ್ಗೆ ಮಾತನಾಡಿ ‘ ಯಾವುದೇ ಸಾಹಿತ್ಯದ ಬೆಳವಣಿಗೆಗೆ ಓದುಗರು ಇತರ ಭಾಷೆಯ ಕೃತಿಗಳನ್ನು ಓದುವುದು ಮಾತ್ರವಲ್ಲದೆ ಆ ಭಾಷೆಯ ಸಾಹಿತ್ಯವು ನಡೆದು ಬಂದ ದಾರಿ ಹಾಗೂ ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಈ ದೃಷ್ಟಿಯಿಂದ…
