ಗಂಗೊಳ್ಳಿ: ಇತ್ತೀಚೆಗೆ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಸೈರ್ಯಪೇಟೆಯ ಲಯೋಲ ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಟೆನಿಕಾಯ್ಟ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಜ್ವಲ್ ಖಾರ್ವಿ ಭಾಗವಹಿಸಿದ್ದರು. ಇವರು ಗಂಗೊಳ್ಳಿಯ ದೇವಣ್ಣ ಮತ್ತು ಅಂಬಾ ಖಾರ್ವಿ ಅವರ ಪುತ್ರ. ವರದಿ: ನರೇಂದ್ರ ಎಸ್ ಗಂಗೊಳ್ಳಿ
Author: ನ್ಯೂಸ್ ಬ್ಯೂರೋ
ಕುಂದಾಪುರ: ತಾಲೂಕಿನ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರು, ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಕುಂದಾಪುರದ ಸಹಯೋಗದೊಂದಿಗೆ ನ.14,15ರಂದು ರೈತರಿಗಾಗಿ ‘ಪ್ರೇರಣಾ ನೇಗಿಲ ಯೋಗಿ-2015’ ಎಂಬ ಕಾರ್ಯಕ್ರಮವನ್ನು ಚಿತ್ತೂರಿನ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕೆ. ಕಿಸಾನ್ ಕಾರ್ಡ್ ನೋಂದಣಿ ಭತ್ತ, ಅಡಿಕೆ, ತೆಂಗು, ಧಾನ್ಯ ಸೇರಿದಂತೆ ವಿವಿಧ ಬೆಳೆಗಳಿಗೆ ಸುರಕ್ಷಿತ ಕೀಟನಾಶಕ ಬಳಕೆ ಕುರಿತಾಗಿ ತರಬೇತಿ ಕಾರ್ಯಾಗಾರ ನಡೆಯಲಿದೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರೇರಣಾ ಯುವ ವೇದಿಕೆ ಹಮ್ಮಿಕೊಂಡ ಕಾರ್ಯಕ್ರಮ ರೈತರಿಗೆ ಉಪಯುಕ್ತವಾಗಿದ್ದು, ಚಿತ್ತೂರು, ಮಾರಣಕಟ್ಟೆ, ಹೊಸೂರು, ಕೆರಾಡಿ, ಆಲೂರು, ಕಳಿ, ಹಿಜಾಣ ಇಡೂರು, ಜಡ್ಕಲ್ ಭಾಗದ ರೈತರು ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರೇರಣಾ ಯುವ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕಿಸಾನ್ ಕಾರ್ಡ್ ಪ್ರಯೋಜನಗಳು: * ಸಬ್ಸೀಡಿ ಮತ್ತು ಬೆಳೆ ಸಾಲ ಪಡೆಯಲು ಪದೇ ಪದೇ RTC ಕೊಡುವ ಅಗತ್ಯವಿಲ್ಲ *…
ಕುಂದಾಪ್ರ ಡಾಟ್ ಕಾಂ ವಿಶೇಷ ಕುಂದಾಪುರ: ಕೋಟೇಶ್ವರ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮಿಜಿಯವರ ಚಾತುರ್ಮಾಸ್ಯದ ದಿಗ್ವಿಜಯ ಮಹೋತ್ಸವದ ಅಂಗವಾಗಿ ವೈಭವೋಪೇತ ಕಾರ್ಯಕ್ರಮ ನಡೆಸಲು ಸಮಾಜ ಬಂಧುಗಳಿಂದ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ನವೆಂಬರ್ 8ರ ಸಂಜೆ 5:30ಕ್ಕೆ ದೇವಳದಿಂದ ಹೊರಡುವ ದಿಗ್ವಿಜಯ ಮೆರವಣಿಗೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧೆಡೆಗಳಲ್ಲಿ ವಾಸವಾಗಿರುವ ಸಮಾಜ ಭಾಂಧವರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹೋತ್ಸವದ ಯಶಸ್ಸಿಗೆ ಕಾರಣೀಭೂತರಾಗುವಂತೆ ದೇವಳದ ಚಾತುರ್ಮಾಸ್ಯ ಸಮಿತಿ ಕೋರಿಕೊಂಡಿದೆ. (ಕುಂದಾಪ್ರ ಡಾಟ್ ಕಾಂ ವರದಿ) ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ ಹಾಗೂ ಚಾತುರ್ಮಾಸ್ಯದ ಹಿನ್ನಲೆ ಕೋಟೇಶ್ವರ ಪೇಟೆಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಭಾಂದವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನವು ಕಾಶೀ ಮಠದ ಪರಮಪೂಜ್ಯ ಶ್ರೀಮತ್ ಸುಕ್ರತೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ 1937 ಜನವರಿ 3ರಂದು ಶಂಕುಸ್ಥಾಪನೆಗೊಂಡು, 1940…
ಕುಂದಾಪ್ರ ಡಾಟ್ ಕಾಂ ಸುದ್ದಿ ಅಮಾಸೆಬೈಲು: ಹಂದಿಗಳನ್ನು ಹಿಡಿಯಲೆಂದು ಅಕ್ರಮವಾಗಿ ಗುಂಡುಗಳನ್ನಿಟ್ಟ (ನಾಡಾ ಬಾಂಬ್) ಓರ್ವನನ್ನು ಬಂಧಿಸಿ ನಾಲ್ಕು ಗುಂಡುಗಳನ್ನು ವಶಪಡಿಸಿಕೊಂಡ ಘಟನೆ ಇಂದು ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಕೆಳಾಸುಂಕ ಎಂಬಲ್ಲಿಯ ಆಗುಂಬೆ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಕೆಳಾಸುಂಕ ನಿವಾಸಿ ರಾಘವ ಶೆಟ್ಟಿ (50) ಬಂಧಿತ ಆರೋಪಿ ಅಮಾಸೆಬೈಲು ಅಭಯಾರಣ್ಯದಲ್ಲಿನ ಹಂದಿಗಳನ್ನು ಹಿಡಿಯಲೆಂದು ಕೆಳಾಸುಂಕದ ರಾಘವ ಶೆಟ್ಟಿ ಸ್ವತಃ ತಯಾರಿಸಿದ ಗುಂಡುಗಳನ್ನು ಗುರುವಾರ ರಾತ್ರಿ ಅಭಯಾರಣ್ಯದಲ್ಲಿ ಇಟ್ಟಿದ್ದರೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ, ಕೊಳೆತ ಪ್ರಾಣಿ ಚರ್ಮ ಹಾಗೂ ರಂಜಕದ ತುಂಡುಗಳನ್ನು ಬಳಸಿ ತಯಾರಿಸಲಾದ ಗುಂಡನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಡಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಅಮಾಸೆಬೈಲು ವಲಯಾರಣ್ಯಾಧಿಕಾರಿ ಐ.ಆರ್ ದಫೇದಾರ್, ಡೆಪ್ಯುಟಿ ಆರ್.ಎಫ್.ಒ ವೀರಣ್ಣ, ಜಡ್ಡಿನಗದ್ದೆ ಫಾರೆಸ್ಟ್ ಗಾರ್ಡ್ ರಮೇಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸೈಕಲ್ ಸವಾರನಿಗೆ ಕುಂಭಾಶಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಸರಕಾರಿ ಬಸ್ಸೊಂದು ಢಿಕ್ಕಿಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಜೆಯ ವೇಳೆಗೆ ವರದಿಯಾಗಿದೆ. ವಕ್ವಾಡಿ ನಿವಾಸಿ ಕೃಷ್ಣ ಶೆಟ್ಟಿಗಾರ್ (55) ಮೃತ ದುರ್ದೈವಿ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಎಂದಿನಂತೆ ಕೃಷ್ಣ ಶೆಟ್ಟಿಗಾರಿ ದಿನಗೂಲಿ ಕೆಲಸ ಮುಗಿಸಿಕೊಂಡು ಕುಂಭಾಶಿಯಿಂದ ಕನ್ನುಕೆರೆಯತ್ತ ತೆರಳುತ್ತಿದ್ದ ವೇಳೆಗೆ ಮಂಗಳೂರಿನಿಂದ ಸಿಂಧಗಿ ಕಡೆಗೆ ತೆರಳುತ್ತಿದ್ದ ಬಸ್ಸು ಎದುರಿನಿಂದ ಡಿಕ್ಕಿ ಹೊಡೆದಿದ್ದಲ್ಲದೇ, ಸ್ವಲ್ಪ ದೂರದ ವರೆಗೆ ಎಳೆದೊಯ್ದಿತ್ತು. ಅಪಘಾತದ ತೀವ್ರತೆಗೆ ಗಾಯಾಳು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬದ ಆಧಾರಸ್ಥಂಭವಾಗಿದ್ದ ಕೃಷ್ಣ ಶೆಟ್ಟಿಗಾರ್ ಅವರ ಸಾವು ಪತ್ನಿ ಲೀಲಾವತಿ ಹಾಗೂ ಪುತ್ರಿ ಪವಿತ್ರಾಳನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಕುಂದಾಪುರ: ನಗರದ ಪಾರಿಜಾತ ಹಳೆ ಬಸ್ ನಿಲ್ದಾಣದ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೋರ್ವರಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಸಂಜೆಯ ವೇಳೆಗೆ ನಡೆದಿದೆ. ಕುಂದಾಪುರದ ಬರೆಕಟ್ಟು ನಿವಾಸಿ ವೆಂಕಪ್ಪ ಕಿಣಿ (70) ದುರ್ದೈವಿ ಸಂಜೆ ವೆಂಕಪ್ಪ ಕಿಣಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಪಾರಿಜಾತ ವೃತ್ತದ ಕಡೆಯಿಂದ ಹೊಸ ಬಸ್ ನಿಲ್ದಾಣದ ಕಡೆಗೆ ನಾಗರತ್ನ ಎಂಬುವರು ಬೈಕಿನಲ್ಲಿ ಬಂದು ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ತೀವ್ರತೆಗೆ ವೆಂಕಪ್ಪ ಕಿಣಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕುಂದಾಪುರದ ಖಾಸಗೀ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆಗೆ ಮಾರ್ಗ ಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವೈಯಕ್ತಿಕ ಕಾರಣಗಳಿಂದ ಹತಾಶನಾದ ಯುವಕನೊರ್ವ ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಕುಂದಾಪುರದ ಹಂಗಳೂರಿನಲ್ಲಿ ನಡೆದಿದೆ. ಹಂಗಳೂರು ಹುಚ್ಕೇರಿ ನಿವಾಸಿ ಸರೋಜಿನ ಸರ್ಸಿಂಗ್ ಹೋಂ ರಸ್ತೆಯ ಪ್ರದೀಪ (22) ಮೃತ ಯುವಕ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಡಿಪ್ಲೊಮಾ ಇಂಜಿನಿಯರ್ ಪದವಿಧರನಾದ ಪ್ರದೀಪ್ ಮಣಿಪಾಲದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ. ರಾತ್ರಿಪಾಳಿ ಕೆಲಸವಾದುದರಿಂದ ಹಗಲಿಗೆ ಮನೆಯಲ್ಲಿ ಮಲಗುತ್ತಿದ್ದ. ಮಧ್ಯಾಹ್ನ 2ಗಂಟೆಯ ವೇಳೆಗೆ ಆತನ ತಂದೆ ಉಟ ಮಾಡುವಂತೆ ಆತನನ್ನು ಎಬ್ಬಿಸಿದ್ದರೂ, ಊಟ ಮಾಡದೇ ಹಾಗೆಯೇ ಮಲಗಿದ್ದವ 3ಗಂಟೆಯ ಸುಮಾರಿಗೆ ಬಾಗಿಲು ಚಿಲಕ ಹಾಕಿಕೊಂಡಿದ್ದ ಎನ್ನಲಾಗಿದೆ. ಸಂಜೆ ಕೆಲಸಕ್ಕೆ ತೆರಳುವ ಸಮಯವಾದರೂ ಹೊರಕ್ಕೆ ಬಾರದಿದ್ದುದನ್ನು ಗಮನಿಸಿದ ತಂದೆ ಬಾಗಿ ತಟ್ಟಿದಾಗ ತೆರೆದ್ದಿದ್ದುದರಿಂದ ಅನುಮಾನಗೊಂ ಅವರು ಕಿಟಕಿಯಲ್ಲಿ ಇಣಕಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಪ್ರೇಮ ವೈಪಲ್ಯವೇ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದ್ದು ಈ ಬಗ್ಗೆ ತನಿಕೆ ನಡೆಯುತ್ತಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಉಡುಪಿಯಿಂದ ಹೊನ್ನಾವರ ಕಡೆ ತೆರಳುತ್ತಿದ್ದ ಮೀನು ತುಂಬಿದ ಪಿಕ್ ಅಪ್ ವಾಹನ ಮತ್ತು ಮಂಗಳೂರಿನಿಂದ ಗೋವಾ ಕಡೆಗೆ ತೆರಳುತ್ತಿದ್ದ ಸರಕು ತುಂಬಿದ ಲಾರಿ ನಡುವೆ ಗುರುವಾರ ಮುಂಜಾನೆ ನಾಗೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಪಿಕ್ ಅಪ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಎರಡೂ ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದೆ. ಗಾಯಾಳು ಚಾಲಕನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕೆಲವು ಸಮಯದ ಹಿಂದೆ ಬಸ್ಸೊಂದು ಡಿಕ್ಕಿಹೊಡೆದು ಜಖಂ ಗೊಂಡಿದ್ದ ಆವರಣ ಗೋಡೆಯು ನಿನ್ನೆ ರಾತ್ರಿ ಹಠಾತ್ ಕುಸಿದು ಬಿದ್ದಿದೆ. ರಾತ್ರಿವೇಳೆ ಕುಸಿದ್ದಿದರಿಂದ ಪ್ರಮಾದಶವಾತ್ ಯಾವುದೇ ಅವಘಡ ಸಂಭವಿಸದಿರುವುದಕ್ಕೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಹಗಲಿನಲ್ಲಿ ಇಲ್ಲಿ ಕಿಕ್ಕಿರಿದು ಪ್ರಯಾಣಿಕರು ಬಸ್ಸಿಗಾಗಿ ಕಾಯುತಲಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದ್ದರೂ ಸ್ಥಳೀಯಾಡಳಿತ ಮಾತ್ರ ಬಸ್ಸು ಡಿಕ್ಕಿ ಹೊಡೆದು ಜಖಂ ಗೊಂಡಿದ್ದ ಆವರಣ ಗೋಡೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ದಢಾ ದಿಢೀರನೆ ಗೋಡೆಯು ಕುಸಿದು ಬಿದ್ದಿದ್ದೆ.
ಕುಂದಾಪುರ: ಜಮ್ಯಿಯತುಲ್ ಫಲಾಹ ಕುಂದಾಪುರ ತಾಲೂಕು ಘಟ್ಟದ ವತಿಯಿಂದ ಪಾರಿಜಾತ ಹೋಟೇಲ್ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಝಕಾತ್ ಫಂಡಿನಿಂದ ವಿದ್ಯಾರ್ಥಿ ವೇತನ ನೀಡಲಾಯಿತು. ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಜಮ್ಯಿಯ ತುಲ್ಫಲಾಹ್ ದ.ಕ.ಉಡುಪಿ ಜಿಲ್ಲಾಧ್ಯಕ್ಷ ಜನಾಬ್ ಅಬ್ದುಲ್ ಲತೀಫ್, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾ ಸಭಾದ ಅಧ್ಯಕ್ಷ ಬಸವ ಖಾರ್ವಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್ ದೋಮ, ದ.ಕ.-ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಖಲೀಲ್ ಆಹ್ಮದ ಉಡುಪಿಶುಭಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಜಮೀಯ್ಯ ತುಲ್ ಫಲಾಹ್ ಕುಂದಾಪುರದ ತಾಲೂಕು ಘಟಕದ ಜನಾಬ್ ಖತೀಜ್ ಅಬು ಮೊಹ್ಮದ್ ವಹಿಸಿದರು. ಕಾರ್ಯದರ್ಶಿ ಅಸ್ಗರ್ ಅಲಿ ಸ್ವಾಗತಿಸಿ ವಂದಿಸಿದರು. ಖಜಾಂಚಿ ಬಿ.ಅಪ್ಪಣ್ಣ ಪ್ರತಿಭಾವಂತ ವಿದ್ಯಾರ್ಥಿಗಳ ಹೆಸರು ಓದಿದರು. ಅಸ್ಗರ ಹೈಕಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಖಜಾಂಜಿ ಬಿ.ಅಬ್ದುಲ್ಲಾ ಜೊತೆ ಕಾರ್ಯದರ್ಶಿ ಕೆ.ಎಸ್.ರಿಯಾಜ್ ಹಾಗೂ ಅಲ್ತಾಫ ಕುರೈಷಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
