ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ(ಎಐಸಿಟಿಇ) ಸಹಕಾರದಲ್ಲಿ ಸ್ಥಾಪಿಸಲಾದ ಐಡಿಯಾ ಲ್ಯಾಬ್‌ನ ಉದ್ಘಾಟನಾ ಸಮಾರಂಭ ಮಿಜಾರಿನ ಕಾಲೇಜಿನ ಕ್ಯಾಂಪಸನಲ್ಲಿ ನಡೆಯಿತು. ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾರಾಟ ವಿಭಾಗದ ನಿರ್ದೇಶಕ ಸ್ಟಾವ್ರೋಸ್ ಕ್ಲೈಡಾರಿಯಾಸ್ ಲ್ಯಾಬ್‌ನ್ನು ಉದ್ಘಾಟಿಸಿ, ಐಡಿಯಾ ಲ್ಯಾಬ್ ಎಐಸಿಟಿಇಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಂಜಿನಿಯರಿಂಗ್ ಶಿಕ್ಷಣವನ್ನು ಅನುಭವಾತ್ಮಕ ಶಿಕ್ಷಣ ಸಂಸ್ಕೃತಿಗೆ ಉತ್ತೇಜಿಸುವ ಕಾರ್ಯಕ್ರಮವಾಗಿದೆ. ಆಳ್ವಾಸ್‌ನಲ್ಲಿ ನಿರ್ಮಾಣಗೊಂಡಿರುವ ಲ್ಯಾಬ್ ಮೂಲಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಾಸ್ತವ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಯೋಗ, ವಿನ್ಯಾಸ ಮತ್ತು ಮಾದರಿ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಕೇಂದ್ರಿತ ಸೌಲಭ್ಯವನ್ನು ಇದು ಒದಗಿಸಲಿದೆ. ಈ ಲ್ಯಾಬ್‌ನ ಮೂಲಕ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಾಚೆ, ಪ್ರೋಟೋಟೈಪ್ ನಿರ್ಮಾಣದ ಮೂಲಕ ನವೀನ ತಂತ್ರಜ್ಞಾನ ಅನುಭವ ಪಡೆಯಲು, ವಿಮರ್ಶಾತ್ಮಕ ಚಿಂತನೆ, ಸಹಕಾರ ಹಾಗೂ ಸಮಸ್ಯ ಪರಿಹಾರದ ಕೌಶಲ್ಯಗಳನ್ನು ಬೆಳೆಸುವುದು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಭವಾತ್ಮಕ ಹಾಗೂ ಬಹುವಿದ್ಯಾ ಕಲಿಕೆಗೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರ ವತಿಯಿಂದ 2024 (ಜನವರಿ 2024ರಿಂದ ಡಿಸೆಂಬರ್ 2024) ಹಾಗೂ 2025 (ಜನವರಿ-2025 ರಿಂದ ಡಿಸೆಂಬರ್-2025)ನೇ ಸಾಲಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಆಯ್ದ ಉತ್ತಮ ಪುಸ್ತಕಗಳಿಗೆ “ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ”ಗಾಗಿ ಪುಸ್ತಕಗಳನ್ನು ಪ್ರದಾನ ಮಾಡಲು ಉದ್ದೇಶಿಸಲಾಗಿದ್ದು, 2024 ಹಾಗೂ 2025ನೇ ಸಾಲಿನ ಅವಧಿಯಲ್ಲಿ ಅಂದರೆ ಜನವರಿಯಿಂದ ಡಿಸೆಂಬರ್ ತಿಂಗಳ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ, (ಪಠ್ಯಾಧಾರಿತ ಬಿಟ್ಟು) ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ) ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿ ಹೀಗೆ ಏಳು ಪ್ರಕಾರದ ಮಕ್ಕಳ ಸಾಹಿತ್ಯದ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಪ್ರಶಸ್ತಿಗಾಗಿ ಪರಿಗಣಿಸಲು ಪ್ರತಿಯೊಂದು ಕೃತಿಯ 4 ಪ್ರತಿಗಳನ್ನು ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ಫೆಬ್ರವರಿ 20 ರ ಒಳಗಾಗಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇ-ಔಟ್ ಹಿಂಭಾಗ, ಕೆ.ಹೆಚ್.ಬಿ ಕಾಲೋನಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಆದರ್ಶವನ್ನು ಬದುಕಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಮತ್ತು ಮಕ್ಕಳಲ್ಲಿ ಕೂಡಾ ಪಾಲನೆ ಮಾಡಿದವರಲ್ಲಿ ನಿವೃತ್ತ ಶಿಕ್ಷಕ ಮಟಪಾಡಿ ಶಿವರಾಮ ಶೆಟ್ಟಿ ಅವರು ಇಂದಿನ ಜನರಿಗೆ ಮಾದರಿಯಾಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಗಣನಾಥ ಎಕ್ಕಾರು ಹೇಳಿದರು. ಅವರು ಮಂಗಳವಾರ ಬ್ರಹ್ಮಾವರ ಮಟಪಾಡಿಯ ನಿವೃತ್ತ ಶಿಕ್ಷಕ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಕೊರಗ ಕಾಲೋನಿಯ ಜನರಿಗೆ ನೆರವು ನೀಡುವುದು, ಅಶಕ್ತರಿಗೆ ಆರ್ಥಿಕ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಕಾಲ ಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಭಾಗವಹಿಸಿದಲ್ಲಿ ಜೀವನ ಮೌಲ್ಯದ ಶಿಕ್ಷಣ ನೀಡಿದಂತಾಗುತ್ತದೆ ಎಂದರು. ಮಟಪಾಡಿಯಲ್ಲಿ ಶಿವರಾಮ ಶೆಟ್ಟಿ ಅವರ ಮತ್ತು ಕುಟುಂಬಿಕರ ಜಾಗದಲ್ಲಿ ಸಾರ್ವಜನಿಕವಾಗಿ ರಸ್ತೆಯನ್ನು ನಿರ್ಮಿಸಿದ್ದು ಅದನ್ನು ಹಂದಾಡಿ ಗ್ರಾಮಪಂಚಾಯತಿ ಅಧ್ಯಕ್ಷೆ ಶಾರದಾ ಪೂಜಾರಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪರಿಸರದ 20 ಕುಟುಂಬಗಳಿಗೆ ನಾನಾ ವಸ್ತು ಮತ್ತು ಸಲಕರಣೆ ಆರ್ಥಿಕ ನೆರವು ವಿದ್ಯಾರ್ಥಿಗಳೀಗೆ ಆರ್ಥಿಕ ಪ್ರೋತ್ಸಾಹ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪ್ರತಿಯೊಬ್ಬರಲ್ಲೂ ಅನಂತ ಶಕ್ತಿ ಅಡಗಿದೆ. ನಮ್ಮಲ್ಲಿ ನಾವು ನಂಬಿಕೆ, ಶ್ರದ್ಧೆ ಇಟ್ಟುಕೊಂಡು ಅದ್ಭುತ ಸಾಧನೆ ಮಾಡಲು ನಮ್ಮಲ್ಲಿರುವ ಶಕ್ತಿಯನ್ನು ಹೊರ ತೆಗೆಯಲು ಕಠಿಣ ಪರಿಶ್ರಮ ಪಡಬೇಕು. ಜೀವನದಲ್ಲಿ ಉಚ್ಛ ಆದರ್ಶಗಳನ್ನು ಮತ್ತು ಉನ್ನತ ಗುರಿಯನ್ನಿಟ್ಟುಕೊಳ್ಳಬೇಕು. ಜಾಗೃತ ಮನಸ್ಸು ನಮ್ಮದಾಗಬೇಕು. ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬೇಕು. ಘನತೆ ಇರುವ ಕೆಲಸಗಳನ್ನು ಮಾಡಬೇಕು. ಧನಾತ್ಮಕ ಚಿಂತೆಗಳನ್ನು ಇಟ್ಟುಕೊಂಡು ನಮ್ಮ ಗುರಿ ಮತ್ತು ಕನಸುಗಳನ್ನು ಸಾಫಲ್ಯಗೊಳಿಸಲು ಪ್ರಯತ್ನಿಸಬೇಕು ಎಂದು ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದ ಹೇಳಿದರು. ಅವರು ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳು ಗಂಗೊಳ್ಳಿ ಮತ್ತು ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀ ಸರಸ್ವತಿ ವಿದ್ಯಾನಿಧಿ ಗಂಗೊಳ್ಳಿ ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಸ್ವಾಮೀ ವಿವೇಕಾನಂದರು ಯುವಕರಲ್ಲಿ ಹುರುಪು-ಹುಮ್ಮಸ್ಸು ತುಂಬಿ, ಅವರ ಸರ್ವೋನ್ನತಿಗೆ ಹೊಸ ಭಾಷ್ಯವನ್ನೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ತಮಿಳುನಾಡಿನ ಈರೋಡಿನಲ್ಲಿ ಮುಕ್ತಾಯಗೊಂಡ 70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಬಾಲಕಿಯರನ್ನೊಳಗೊಂಡ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿದರೆ, ಬಾಲಕರ ತಂಡ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಪೈನಲ್‌ನಲ್ಲಿ ಕರ್ನಾಟಕ ಬಾಲಕಿಯರ ತಂಡ ಕಳೆದ ಬಾರಿಯ ಚಾಂಪಿಯನ್ ತಮಿಳುನಾಡು ವಿರುದ್ಧ 35-25, 35-31 ನೇರ ಸೆಟ್‌ಗಳಿಂದ ಗೆದ್ದು ಚಾಂಪಿಯನ್ಸ್ ಪಟ್ಟ ಅಲಂಕರಿಸಿದರೆ, ಬಾಲಕರ ತಂಡ ತಮಿಳುನಾಡು ವಿರುದ್ಧ 26-35, 27-35 ನೇರ ಸೆಟ್‌ಗಳಿಂದ ಪರಾಭವಗೊಂಡು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಕರ್ನಾಟಕ ತಂಡದಲ್ಲಿ ಬಾಲಕಿಯರ ವಿಭಾಗದಲ್ಲಿ ಆರು ಮಂದಿ ಹಾಗೂ ಬಾಲಕರ ವಿಭಾಗದಲ್ಲಿ ನಾಲ್ಕು ಮಂದಿ ಆಳ್ವಾಸ್ ಕ್ರೀಡಾಪಟುಗಳು ಪಾಲ್ಗೊಂಡು ಶ್ರೇಷ್ಠ ಸಾಧನೆ ಮೆರೆಯಲು ಸಹಕರಿಸಿದರು. ವಿಜೇತ ಕರ್ನಾಟಕ ತಂಡದ ಪರವಾಗಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಚರಣ್ ಹಾಗೂ ಬಾಲಕಿಯರ ತಂಡದಲ್ಲಿ ರಾಜ್ಯ ತಂಡದ ನಾಯಕಿಯಾಗಿದ್ದ ಆಳ್ವಾಸ್‌ನ ಗೀತಾ ಹಾಗೂ ಶುಭಶ್ರೀ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಪಡೆದುಕೊಂಡರು. ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದ ಕರ್ನಾಟಕ ತಂಡಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ ಕಾರ್ಯಕ್ರಮವನ್ನು ನಾಂದಿ ಫೌಂಡೇಶನ್ ಸಹಯೋಗದಲ್ಲಿ ಉದ್ಘಾಟಿಸಲಾಯಿತು. ಆರು ದಿನಗಳ ಈ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಕೌಶಲ್ಯಗಳನ್ನು ಉತ್ತೇಜಿಸುವ ಹಾಗೂ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗೆ ತಯಾರಿಸಲು ಉದ್ದೇಶಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ಉದ್ಯೋಗ ಪಡೆಯಲು ಅಗತ್ಯವಿರುವ ಕೌಶಲ್ಯಗಳ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೋಟ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಸೊಸೈಟಿ ಲಿಮಿಟೆಡ್, ಕೋಟ ಇದರ ಅಧ್ಯಕ್ಷರಾದ ಡಾ| ಕೃಷ್ಣ ಕಾಂಚನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅಗತ್ಯವಾದ ಜಾಗೃತಿಯ ಬಗ್ಗೆ ಉಪನ್ಯಾಸ ನೀಡಿದರು. ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿ ಸುಹಾಸ್ ವಿ. ಮಲ್ಯ ಪ್ರಾರ್ಥಿಸಿ, ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಯಾದ ತಿಮ್ಮಪ್ಪ ಡಿ.ಎಸ್. ಸ್ವಾಗತಿಸಿ, ಕಾಲೇಜಿನ ಗ್ರಂಥಪಾಲಕರಾದ ಮಹೇಶ್ ನಾಯ್ಕ್ ನಿರೂಪಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ವೃತ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತ್ರಾಸಿ ಗ್ರಾಮದ ಸಣ್ಣಕುಂಬ್ರಿ ಪ್ರದೇಶದಲ್ಲಿ ವಾಕಿಂಗ್‌ಗೆ ತೆರಳಿದ್ದ ವೃದ್ಧೆಯೊಬ್ಬರ ಕುತ್ತಿಗೆಯಿಂದ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ಸರವನ್ನು ಬಲಾತ್ಕಾರವಾಗಿ ಎಳೆದುಕೊಂಡು ಪರಾರಿಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ತ್ರಾಸಿಯ ಸಣ್ಣಕುಂಬ್ರಿ ಡೋನ್ ಬೋಸ್ಕೋ ಶಾಲೆ ರಸ್ತೆಯಲ್ಲಿ ವಾಕಿಂಗ್‌ಗೆ ತೆರಳಿದ್ದ ಸೀತಾ (83) ಎಂಬ ವೃದ್ಧೆಯ ಬಳಿ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಜೀವ ಬೆದರಿಕೆ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 22.470 ಗ್ರಾಂ ತೂಕದ, ಅಂದಾಜು 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ತನಿಖೆ ಮುಂದುವರಿದಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಾಲಿಗ್ರಾಮ ಮಂಡಲದ ವತಿಯಿಂದ ಹಿಂದೂ ಸಂಗಮದ ಶೋಭಯಾತ್ರೆ ಸಮಾವೇಶವು ವಿಜೃಂಬಣೆಯಿಂದ ಇತ್ತೀಚಿಗೆ ಜರಗಿತು. ಹಿಂದೂ ಮುಖಂಡರಾದ ಶಿವರಾಮ ಉಡುಪ ಸಾಲಿಗ್ರಾಮ ಶೋಭಯಾತ್ರೆಗೆ ಚಾಲನೆ ನೀಡಿದರು. ವಿವಿಧ ಭಾಗಗಳಿಂದ ಆಗಮಿಸಿದ ಮಹಿಳಾ ಭಜನಾ ತಂಡ, ಮಕ್ಕಳ ಭಜನಾ ತಂಡ, ಪುರುಷ ಹಾಗೂ ಮಹಿಳಾ ಚಂಡೆ ಬಳಗದಿಂದ ಚಂಡೆ ವಾದನ, ಹಲವಾರು ಪುಟಾಣಿಗಳು ವೇಷಭೂಶಣಗಳಿಂದ ಕೂಡಿದ ಟ್ಯಾಬ್ಲೋ, ಶಿವಾಜಿ ಮೂರ್ತಿಯನ್ನು ಹೊತ್ತು ಭಾರತಾಂಭೆಯ ಭಾವಚಿತ್ರವನ್ನು ಹೊತ್ತ ವಾಹನ ರಥಗಳು ಶೋಭಯಾತ್ರೆಯಲ್ಲಿ ಕಂಡು ಬಂದವು. ಸಾಲಿಗ್ರಾಮ ಬಸ್ಸು ನಿಲ್ದಾಣದಿಂದ ಆರಂಭಗೊಂಡ ಶೋಭಾಯಾತ್ರೆ ಶ್ರೀ ಗುರುನರಸಿಂಹ ದೇವಸ್ಥಾನದ ಬಯಲು ರಂಗಮಂದಿರವನ್ನು ತಲುಪಿತು. ಸಭಾಕಾರ್ಯಕ್ರಮಕ್ಕೆ ಸಾಲಿಗ್ರಾಮ ದೇವಸ್ಥಾನದ ಪ್ರದಾನ ಅರ್ಚಕ ಜನಾರ್ದನ ಅಡಿಗ ಅವರು ಗೋ ಪೂಜೆಯ ಮೂಲಕ ಚಾಲನೆ ನೀಡಿದರು. ಸಮಾವೇಶದ ಸಭಾಧ್ಯಕ್ಷತೆಯನ್ನು ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಅಧ್ಯಕ್ಷ ಡಾ. ಕೆ.ಎಸ್. ಕಾರಂತ್ ವಹಿಸಿದ್ದರು. ದಿಕ್ಸೂಚಿ ಭಾಷಣವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿ ಪ್ರಮುಖ್ ಅಜಿತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಸರ್ಕಾರ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಲಾಡಿ, ಗ್ರಾಮ ಪಂಚಾಯತ್ ಹಾಲಾಡಿ, ಜೆಸಿಐ ಹಾಲಾಡಿ- ವಾರಾಹಿ, ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ, ಶಿರೂರು-ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಮಂಗಳವಾರದಂದು ಹಾಲಾಡಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಚೋರಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹೇಮಂತ್, ಶಿರೂರು ಮುದ್ದುಮನೆಯ ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಮನೋಜ್ ಭಟ್, ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯ ಸಂಚಾಲಕ ಯು. ಶಂಕರ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಜನಾರ್ಧನ ಹಾಲಾಡಿ, ಗುರುಪ್ರಸಾದ ಶೆಟ್ಟಿ, ಜೆಸಿಐ ಹಾಲಾಡಿ ಘಟಕದ ಅಧ್ಯಕ್ಷರಾದ ಪ್ರದೀಪ ಹಾಲಾಡಿ, ಲೇಡಿ ಜೆಸಿಐ ಅಧ್ಯಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಸಂದೇಶಗಳ ಪರಿಚಯಕ್ಕಾಗಿ ’ಗೀತಾ ಸಂದೇಶ ಸಾರ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗೀತಾಜ್ಞಾನ ಯಜ್ಞ ವೇದಿಕೆಯ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ, ಕಾಸರಗೋಡು ಅವರು ಆಗಮಿಸಿದ್ದರು. ಪಂಚಾಂಗಪಠನವನ್ನು ವೀಕ್ಷಾ ನಡೆಸಿದರೆ, ಕೃಪಾಲಿ ಗೀತಾಮಹಾತ್ಮ್ಯೆಯನ್ನು ಪಠಿಸಿದರೆ, ಮಯೂರ ಜ್ಞಾನಕಿರಣವನ್ನು ಪಠಿಸಿದನು. ನಂತರ ಗೀತಾ ಜ್ಞಾನ ಯಜ್ಞದ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ ಅವರು ಮಾತನಾಡಿ, ಜೀವನವನ್ನು ಬೆಳಗಿಸುವ ಗ್ರಂಥ ಭಗವದ್ಗೀತೆ. ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಶಕ್ತಿಯಾಗಬೇಕು. ಸ್ವಾತಂತ್ರ್ಯ ಪಡೆದ ಶತಮಾನೋತ್ಸವದಲ್ಲಿ ಭಾರತ ದೇಶದ ಪ್ರತಿಯೊಬ್ಬ ನಾಗರಿಕನೂ ಭಗವದ್ಗೀತೆಯ ಜ್ಞಾನವನ್ನು ಹೊಂದಿದವನಾಗಬೇಕು. ಮನೆ ಮನೆಗಳಲ್ಲೂ ನಿತ್ಯ ಭಗವದ್ಗೀತೆಯ ಅಧ್ಯಯನ ಆಗಬೇಕು ಎಂದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡಿ, ವಿದ್ಯೆಯನ್ನು ಜೀವನದ ಬಾಲ್ಯದಲ್ಲಿ ಹೊಂದಿದರೆ ಸಾಧಿಸುವಾತಗೆ ಸಾವಿರಾರು ಅವಕಾಶಗಳು ಬಂದೊದಗುತ್ತವೆ. ತಾನು, ತನ್ನ ಮನೆ, ತನ್ನ ಊರು, ತನ್ನ…
