Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ, ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಇವರ ಸಹಭಾಗಿತ್ವದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್ ಇದರ ಕಾರ್ಯದರ್ಶಿಯವರಾದ ಕೆ. ರಾಧಾಕೃಷ್ಣ ಶೆಣೈ ಅವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉ.ಜಿ.ಪ.ಪೂ.ಕಾ. ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷರಾದ ಮಂಜುನಾಥ್ ಭಟ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ Academics and Training, USAMEC, ಬೆಂಗಳೂರು ಇದರ ನಿರ್ದೇಶಕರಾದ ಡಾ. ಸಿ. ಕೆ. ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿ ಇಲ್ಲದ ಕ್ಷೇತ್ರದಲ್ಲಿ ಮುಂದುವರೆಯುವಂತೆ ಒತ್ತಾಯ ಮಾಡುವುದರಿಂದ ಸಮಾಜದಲ್ಲಿ ಅನೇಕ ದುರಂತಗಳು ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಅದಕ್ಕೆ ಅವಕಾಶ ಕೊಡದೇ ಅವರ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕುಎಂದರು. ಉ.ಜಿ.ಪ.ಪೂ.ಕಾ. ರಸಾಯನಶಾಸ್ತ್ರ ಗೌರವಾಧ್ಯಕ್ಷರಾದ ರಮಾಕಾಂತ್ ರೇವಣ್ ಕರ್, ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಮತ್ತು ಸರಸ್ವತಿ  ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಿಕ್ಷಕರಿಗಾಗಿ ಸಿಪಿಆರ್ ತರಬೇತಿ ಕಾರ್ಯಕ್ರಮವು ಸರಸ್ವತಿ ವಿದ್ಯಾಲಯದಲ್ಲಿ ನಡೆಯಿತು. ಮಣಿಪಾಲದ ನರ್ಸಿಂಗ್ ಕಾಲೇಜಿನ ಮೆಡಿಕಲ್ ಮತ್ತು ಸರ್ಜಿಕಲ್ ನರ್ಸಿಂಗ್ ವಿಭಾಗದ ವೈದ್ಯೆ ಡಾ. ಮೆಲಿಟ್ ಶೈಲಿನಿ ಸಿಪಿಆರ್ ಬಗ್ಗೆ ತರಬೇತಿಯನ್ನು ನೀಡಿದರು. ಸಿಪಿಆರ್ ನೀಡುವ ಮೊದಲು ವ್ಯಕ್ತಿಗೆ ಅದರ ಅಗತ್ಯತೆಯನ್ನು ಖಚಿತಪಡಿಸಿಕೊಂಡು ಸಿಪಿಆರ್ ಪ್ರಕ್ರಿಯೆಯನ್ನು ನಡೆಸಬೇಕು. ಇದರ ಬಗ್ಗೆ  ಅರಿವನ್ನು ಹೊಂದುವುದರಿಂದ ತುರ್ತು  ಸಂದರ್ಭಗಳಲ್ಲಿ ಹಲವಾರು ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕರು ಈ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ದ್ವಿತೀಯ  ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ‌ ಸಂಖ್ಯೆಯಲ್ಲಿ ಉತ್ಕ್ರಷ್ಟ ದರ್ಜೆ ಪಡೆದ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಇಂದು ನಡೆಯುತ್ತಿರುವ ಹಲವು ರೀತಿಯ ಪ್ರಚಾರ ಮತ್ತು ಸ್ಪರ್ಧಾತ್ಮಕ ವಿಧಾನಗಳನ್ನೆಲ್ಲ ಅರಿತುಕೊಂಡು, ಮುಂದಿನ ವ್ಯಾಸಂಗಕ್ಕೆ ತೊಡಗಿಸಿಕೊಂಡು ಯಶಸ್ಸು ಪಡೆಯಬೇಕು ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯಾದ ಸೀತಾರಾಮ ನಕ್ಕತ್ತಾಯ ಹೇಳಿದರು. ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 2024-25 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾಪೂರ್ವಕವಾಗಿ ಆಯೋಜಿಸಿದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಭಾಂಡ್ಯ ಮತ್ತು ಉಪಪ್ರಾಂಶುಪಾಲರಾದ ಪ್ರೀತೇಶ್ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ವನಿತಾ ಜೆ‌.ಶೆಟ್ಟಿ, ಕಂಪ್ಯೂಟರ್ ವಿಭಾಗದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೈಂದೂರಿನ ಮಾಜಿ ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿ ಅವರ ಮಾಲಕತ್ವದ ಮುಳ್ಳುಗುಡ್ಡೆ ಸೌಪರ್ಣಿಕ ಹೆಂಚಿನ ಕಾರ್ಖಾನೆ, ಸೌಪರ್ಣಿಕ ಡೆಕೋರೇಟಿವ್ ಟೈಲ್ಸ್, ಸೌಪರ್ಣಿಕ ಗೇರುಬೀಜ ಕಾರ್ಖಾನೆಗಳಿಗೆ ಕೈಗಾರಿಕಾ ಭೇಟಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಪದವಿಪೂರ್ವ ಹಂತದಲ್ಲಿ ವಾಣಿಜ್ಯೇತರ ವಿಭಾಗಗಳಲ್ಲಿ ತೇರ್ಗಡೆಗೊಂಡು ಪ್ರಸ್ತುತ ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸೇತುಬಂಧ/ Bridge Course ತರಗತಿಗಳನ್ನು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಹಮ್ಮಿಕೊಂಡಿದ್ದು. ವಿದ್ಯಾರ್ಥಿಗಳಿಗೆ ಕೈಗಾರಿಕೆ, ಉದ್ಯಮ, ವ್ಯಾಪಾರ ಮುಂತಾದವುಗಳ ಬಗ್ಗೆ ಪ್ರಾತ್ಯಕ್ಷಿತೆಯನ್ನು ನೀಡುವುದು ಮತ್ತು ಪ್ರಾಯೋಗಿಕವಾಗಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗಗಳ ವಿಷಯಗಳನ್ನು ಅರ್ಥೈಸುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗಗಳ ಜಂಟಿ ಆಶ್ರಯದಲ್ಲಿ ಕೈಗಾರಿಕಾ ವಲಯಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಖಾನೆಯ ಮ್ಯಾನೇಜರಾದ ದಯಾನಂದ ಗಾಣಿಗ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹಿರಿಯ ಕೃಷಿಕ, ಉದ್ಯಮಿ, ಬೈಂದೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು (64) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳವಾಡಿಯ ಸಸಿಹಿತ್ಲು ಕುಟುಂಬದವರಾದ ವೆಂಕಟ ಪೂಜಾರಿ ಅವರು ಬೈಂದೂರಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕಂಬಳ ಹಾಗೂ ಕ್ರೀಡಾ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಉಡುಪಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರತಿನಿಧಿಯಾಗಿ, ಬೈಂದೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷರಾಗಿ ಸಕ್ರಿಯವಾಗಿದ್ದರು. ಕಳೆದ 25ವರ್ಷಗಳಿಂದ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ಎರಡು ಭಾರಿ ಬೈಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದರು. ಕಂಬಳ ಕ್ರೀಡೆಯಲ್ಲಿ ವೆಂಕಟ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮೂಡಲಕಟ್ಟೆಯ ಐಎಂಜೆ ಇನ್ಸ್ಟಿಟ್ಯೂಷನ್ಸ್‌ನಲ್ಲಿ ನೂತನ ವ್ಯಾಯಾಮ ಶಾಲೆಯನ್ನು ಚೇರ್ಮನ್‌ರಾದ ಸಿದ್ಧಾರ್ಥ್ ಜೆ. ಶೆಟ್ಟಿ ಅವರು ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು. ಕೇಬಲ್ ಕ್ರಾಸ್ಓವರ್, ಪೆಕ್ ಡೆಕ್ ಫ್ಲೈ ಮೆಷಿನ್,ಲೆಗ್ ಪ್ರೆಸ್ ಮೆಷಿನ್, ಲ್ಯಾಟ್ ಪುಲ್‌ಡೌನ್ ಮೆಷಿನ್ ಮುಂತಾದ ಹಲವಾರು ಉಪಕಾರಣಗಳನ್ನು ಈ ವ್ಯಾಯಮ ಶಾಲೆಯು ಒಳಗೊಂಡಿದೆ ಮತ್ತು ವಿದ್ಯಾರ್ಥಿಗಳ ಇತ್ತೀಚೆಗಿನ ಅವಶ್ಯಕತೆಗೆ ತಕ್ಕಂತೆ ಈ ಜಿಮ್ ವಿನ್ಯಾಸ ಗೊಳಿಸಲಾಗಿದ್ದು ಅನುಭವೀ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದೆಂದು ಫಿಸಿಕಲ್ ಡೈರೆಕ್ಟರ್ ಗಳಾದ ಡಾ. ಆರ್ ನವೀನ್ ಮತ್ತು ಪ್ರವೀಣ್ ಖಾರ್ವಿ ಅವರು ತಿಳಿಸಿದರು. ಹುಡುಗರಿಗೆ ಹುಡುಗಿಯರಿಗೆ ಪ್ರತ್ಯೇಕ ಸಮಯವಾಕಾಶವನ್ನು ನೀಡಲಾಗಿದ್ದು, ವಿದ್ಯಾರ್ಥಿಗಳು ಈ ಸೌಕರ್ಯವನ್ನು ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು. ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ, ಎಂಐಟಿಯ ಉಪ ಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿಸೋಜ, ಐಎಂಜೆಐಎಸ್ ಸಿಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ರೂಪಶ್ರೀ, ಎಲ್ಲೈಡ್ ಹೆಲ್ತ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಗಣಕಯಂತ್ರ ವಿಭಾಗ ಮತ್ತು ಪ್ಲೇಸ್ಮೆಂಟ್ ಸೆಲ್ ಇವುಗಳ ಸಹಯೋಗದೊಂದಿಗೆ  ಮ್ಯಾಜಿಕ್ ಬಸ್ ಫೌಂಡೇಶನ್ ಐದು ದಿನಗಳ ಸಾಫ್ಟ್ ಸ್ಕಿಲ್ ತರಬೇತಿ   ಉದ್ಘಾಟನಾ ಕಾರ್ಯಕ್ರಮ ನಡೆಯಿತು.    ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕಿಗಳಾಗಿ ಮ್ಯಾಜಿಕ್ ಬಸ್ ಫೌಂಡೇಶನ್ ನ ನವೀನ್ ಮತ್ತು ರಾಹುಲ್ ಉಪಸ್ಥಿತರಿದ್ದರು. ಗಣಕಯಂತ್ರ ವಿಭಾಗ ಮುಖ್ಯಸ್ಥರು ಗಣೇಶ್ ಕೆ., ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕ ರಾಮಚಂದ್ರ ಆಚಾರಿ , ಸಿಬ್ಬಂದಿ ಸುರೇಶ್ ಕೆ ಅವರು ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರು ಹಾಗೂ ಪ್ಲೇಸ್ಮೆಂಟ್ ಸೆಲ್ ನ ಸಂಚಾಲಕರಾದ ರಾಜೇಂದ್ರ ಹೋಬಳಿದಾರ್ ಸ್ವಾಗತಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಸಮಾಜವನ್ನು ತಿದ್ದಬೇಕಾದರೆ ಅಥವಾ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಬೇಕಾದರೆ ಸಂಘಗಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಜೇಸಿಐ, ರೋಟರಿ ಹಾಗೂ ಲಯನ್ಸ್ ಕ್ಲಬ್ ಮನುಕುಲದ ಏಳಿಗೆಗಾಗಿ ಹುಟ್ಟಿಕೊಂಡಿರುವ ಸಂಸ್ಥೆಗಳು. ಯುವ ಜನರನ್ನು ಒಳ್ಳೆ ದಾರಿಗೆ ಕೊಂಡೊಯ್ಯಲು ಮತ್ತು ಅವರ ವ್ಯಕ್ತಿತ್ವ ವಿಕಸನ ಮಾಡಲು ಜೇಸಿಐನಂತಹ ಸಂಸ್ಥೆಗಳು ಸಹಕಾರಿಯಾಗುತ್ತದೆ. ಯುವ ಜನಾಂಗವನ್ನು ವ್ಯವಸ್ಥಿತ ಸನ್ಮಾರ್ಗದಲ್ಲಿ ನಡೆಯುವಂತೆ ಮತ್ತು ಒಳ್ಳೆಯ ನಾಗರಿಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಕೆ.ಆರ್. ನಾಯ್ಕ್ ಹೇಳಿದರು. ಅವರು ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣದಲ್ಲಿ ಭಾನುವಾರ ಜೇಸಿಐ ಕುಂದಾಪುರ ಸಿಟಿ ಪ್ರಾಯೋಜಿತ ನೂತನವಾದ ಜೇಸಿಐ ಗಂಗೊಳ್ಳಿ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸೂಫ್ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ರೀಜಿನ್ ಎ. ವಲಯ 15ರ ವಲಯ ಉಪಾಧ್ಯಕ್ಷೆ ಅಶ್ವಿನಿ ಐತಾಳ್ ಅವರು ಜೇಸಿಐ ಗಂಗೊಳ್ಳಿ ಸಂಸ್ಥೆಯ ನೂತನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಿದ್ಕಲ್ಕಟ್ಟೆ ಪೇಟೆಯ ಬಳಿ ರಸ್ತೆ ಬದಿಯಲ್ಲಿ ಮಲಗಿದ್ದ ಒಂದು ಹಸುವನ್ನು ಹಿಡಿದು ಅದಕ್ಕೆ ಬಳ್ಳಿಯಿಂದ ಕುತ್ತಿಗೆಗೆ ಬಿಗಿದು ಅದನ್ನು ಹಿಂಸಾತ್ಮಕವಾಗಿ ಎಳೆದು ವಾಹನಕ್ಕೆ ತುಂಬಿಸಿ ಕಳವು ಮಾಡಿಕೊಂಡು ಹೋದ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಅಮೆಮ್ಮಾರ್ ಮಸೀದಿ ಬಳಿಯ ನಿವಾಸಿ ಇಮ್ರಾನ್ ಯಾನೆ ಕುಟ್ಟು (31)ಮತ್ತು ಮಂಗಳೂರು ತಾಲೂಕಿನ ಗಂಜಿಮಠ, ಮುಂದುಪುರ ಗ್ರಾಮದ ಮುಂಡೇವು ನಿವಾಸಿ ಇರ್ಷಾದ್(30) ಬಂಧಿತ ಆರೋಪಿಗಳು. ಬಂಧಿತರಿಬ್ಬರೂ ಕುಖ್ಯಾತ ಜಾನುವಾರು ಕಳ್ಳರು. ಆರೋಪಿ ಇಮ್ರಾನ್ ಯಾನೆ ಕುಟ್ಟು ವಿರುದ್ಧ ಉಡುಪಿ ಜಿಲ್ಲೆಯ ಈ ಪ್ರಕರಣ ಸೇರಿದಂತೆ, ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 35 ಪ್ರಕರಣಗಳು ದಾಖಲಾಗಿವೆ. ಇನ್ನು ಆರೋಪಿ ಇರ್ಷಾದ್ ಮೇಲೆ ಉಡುಪಿ ಜಿಲ್ಲೆಯ ಈ ಪ್ರಕರಣವೂ ಸೇರಿದಂತೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 14 ಪ್ರಕರಣಗಳು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಮೀನುಗಾರರು ಹೊಸದಾಗಿ ಯಾಂತ್ರೀಕೃತ ಮೀನುಗಾರಿಕಾ ದೋಣಿ ನಿರ್ಮಾಣ ಮಾಡಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಸಾಧ್ಯತಾ / ಅನುಮತಿ ಪತ್ರ ನೀಡಲು ಸರ್ಕಾರಿ ಆದೇಶದನ್ವಯ ಅನುಮೋದನೆ ನೀಡಲಾಗಿದ್ದು, ಆಸಕ್ತರು ವೆಬ್‌ಸೈಟ್  URL:frims.karnataka.gov.in/BCC ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಪ್ರೂಟ್ಸ್ ಐಡಿ ಕಡ್ಡಾಯವಾಗಿ ಹೊಂದಿರುವ, ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ಹಾಗೂ ಮೀನುಗಾರಿಕೆ ಸಹಕಾರಿ ಸಂಘದ ಸದಸ್ಯರಾಗಿರುವ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಒಂದು ಪ್ರತಿಯನ್ನು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸದಸ್ಯ ಕಾರ್ಯದರ್ಶಿ/ ಮೀನುಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್ ಹಳೇ ಕಟ್ಟಡ, ಬನ್ನಂಜೆ ಉಡುಪಿ ಕಛೇರಿಯ ವಿಳಾಸಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮೀನುಗಾರಿಕೆ ಇಲಾಖೆ ಕಛೇರಿಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More