ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬಾರ್ ಅಸೋಸಿಯೇಷನ್ ರಿ. (ವಕೀಲರ ಸಂಘ) ಇದರ ನೂತನ ಪಧಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾಯಕ್ರಮ ಇತ್ತೀಚಿಗೆ ನಡೆಯಿತು. 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲ ಪ್ರಶಾಂತ್ ಪೂಜಾರಿ ಅವಿರೋಧವಾಗಿ ಹಾಗೂ ಕಾರ್ಯದರ್ಶಿಯಾಗಿ ಲಿಂಗಪ್ಪ ಆರ್ ಮೇಸ್ತ ಆಯ್ಕೆಯಾದರು.
ಅಸೋಸಿಯೇಷನ್‌ನ ಖಜಾಂಚಿಯಾಗಿ ಪಿಂಕಿ ಕಾರ್ವಲ್ಲೋ, ಉಪಾಧ್ಯಕ್ಷರಾಗಿ ಚಿಕ್ಕಯ್ಯ ನಾರಾಯಣ ಶೆಟ್ಟಿ, ಜೊತೆ ಕಾರ್ಯದರ್ಶಿ ಗಣೇಶ್ ಮೇಸ್ತ, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಶ್ರೀಧರ್ ಜಿ, ಕುಮಾರಿ ಅಖಿಲ ರಾಣಿ, ಕೀರ್ತನ, ಹೇಮಲತಾ ಇವರುಗಳು ಆಯ್ಕೆಯಾಗಿರುತ್ತಾರೆ.
ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಅವರು 2011ರಿಂದ ವಕೀಲರಾಗಿ ಕಾನೂನು ಸೇವೆ ಸಲ್ಲಿಸುತ್ತಾ ಬಂದಿದ್ದು, 2023ರಿಂದ ಬೈಂದೂರು ಬಾರ್ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಬೈಂದೂರಿನಲ್ಲಿ ನ್ಯಾಯಾಲಯ ಸ್ಥಾಪನೆಗಾಗಿ ಹೋರಾಟ ಮಾಡಿದವರ ಪೈಕಿ ಮುಂಚೂಣಿಯಲ್ಲಿದ್ದರು.










