ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ಇಲ್ಲಿನ ಉಪ್ಪುಂದದಲ್ಲಿ ನಡೆದಿದೆ. ರಾತ್ರಿ 10.15ರ ಸುಮಾರಿಗೆ ಉಪ್ಪುಂದಲ್ಲಿನ ಖಂಬದಕೋಣೆ ರೈತರ ಸಂಘದ ಎದುರು ಕುಂದಾಪುರದಿಂದ ಬೈಂದೂರಿನ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಸವಾರ ನಾಗರಾಜ ಖಾರ್ವಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಯ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದ ಶಿಕ್ಷಕಿಯೊಬ್ಬರ ಮನೆಯ ಕಾಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ. ಕೋಟೇಶ್ವರ ಆಟಕೆರೆ ಬಟ್ಟೆ ಅಂಗಡಿ ಎದುರಿನ ನಿವಾಸಿ, ಬಿದಲ್ ಕಟ್ಟೆಯ ಕೆಪಿಎಸ್ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಪೂಜಾ ಕಿಣಿ (43) ಎಂಬವರು ಮನೆಯ ಗೊದ್ರೇಜ್ ನಲ್ಲಿ ಚಿನ್ನದ ಬ್ರಾಸ್ ಲೈಟ್, ಪಾವನ್ ಸರ, ಕೆಂಪು ಕಲ್ಲು ಮುತ್ತಿನ ಸೂರ್ಯಪೆಂಡೆಂಟ್, ಸಿಂಗಲ್ ಸ್ಕ್ರೂ ಬಳೆ, ಜುಮ್ಕಿ ಬಳೆ, ಕರಿಮಣಿ ನೆಕ್ಲೆಸ್ ಗೋಲ್ಡನ್ ಸಟೋನ್ ಪೆಂಡೆಂಟ್, ವೆಂಕಟರಮಣ ಪೆಂಡೆಂಟ್, ಡಿ ಸಿ ಚೈನ್, ನೆಕ್ಲೆಸ್, ಹಸಿರು ಗುಲಾಬಿ ಕಲ್ಲಿನ ಪೆಂಡೆಂಟ್, ಸಣ್ಣ ಹವಳದ ಸರ, ವಜ್ರದ ಮೂಗುಬೊಟ್ಟು,-2 ಇವುಗಳನ್ನು ಮನೆಯ ಗೊದ್ರೇಜ್ ನಲ್ಲಿ ಇರಿಸಿ ಬೀಗ ಹಾಕಿ ಬೀಗವನ್ನು ಅಲ್ಲಿಯೇ ಇಟ್ಟು ಹೋಗಿದ್ದು ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಗೊದ್ರೇಜ್ ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ನೋಡುವಾಗ ಕೆಲವು ಚಿನ್ನಾಭರಣಗಳು ಇಲ್ಲದಿರುವುದು ಗಮನಕ್ಕೆ ಬಂತು. ಅವುಗಳನ್ನು ಲಾಕರ್ನಲ್ಲಿ ಇಟ್ಟಿರಬಹುದೆಂದು ಭಾವಿಸಿದ ಅವರು, ಜೂ.26ರಂದು ಕಾರ್ಯಕ್ರಮಕ್ಕೆ ಹೋಗಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯವೃದ್ಧಿಗೆ ಒತ್ತು ಕೊಡಬೇಕಾಗುತ್ತದೆ. ಯುವ ಸಮುದಾಯಕ್ಕೆ ಉದ್ಯೋಗದ ಕೊರತೆ ಕಾಡುತ್ತಿರುವ ಕಾಲಘಟ್ಟದಲ್ಲಿ ಕಾಲೇಜುಗಳಲ್ಲಿ ವ್ಯವಹಾರದ ಅರಿವು ನೀಡುವುದರಿಂದ ಕೆಲಸ ಕೊಡುವ ಕೈಗಳು ರೂಪುಗೊಳ್ಳಬಹುದು. ಇಂಥಹ ಕಾರ್ಯಕ್ರಮ ಪ್ರಸ್ತುತದ ಅವಶ್ಯಕತೆ ಹಾಗೂ ಅಗತ್ಯ ಎಂದು ಕೈಗಾರಿಕೋದ್ಯಮಿ ಹಾಗೂ ಸಾಮಾಜಿಕ ಮುಖಂಡರಾದ ಮುನಿಯಾಲ್ ಉದಯ ಕುಮಾರ್ ಶೆಟ್ಟಿ ಕಾರ್ಕಳ ಹೇಳಿದರು. ಅವರು ಇಲ್ಲಿನ ಶ್ರೀ ವೆಂಕಟರಮಣ ಪ.ಪೂ ಕಾಲೇಜಿನಲ್ಲಿ ನಡೆದ ವಿ-ವಿಸ್ತಾರ 2k25 ವ್ಯವಹಾರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸೋಲು ಕಲಿಸುವ ಪಾಠ ದೊಡ್ಡ ಯಶಸ್ಸಿಗೆ ಕಾರಣವಾಗುತ್ತದೆ. ಉದ್ಯಮ ರಂಗದಲ್ಲಿ ಸೋಲನ್ನು ಸ್ವೀಕರಿಸಲು ಸಿದ್ಧರಿರಬೇಕು. ಪ್ರಾರಂಭದಲ್ಲಿ ನಷ್ಟ, ಸೋಲು ಆದಾಗ ಕಂಗೆಡದೆ ತಾಳ್ಮೆಯಿ೦ದ ಮು೦ದುವರಿದಾಗ ಯಶಸ್ಸು ಲಭಿಸುತ್ತದೆ. ಏಕಾಗ್ರತೆ ಎಲ್ಲದ್ದಕ್ಕೂ ಅತೀ ಅಗತ್ಯ ಎ೦ದರು. ಉಡುಪಿ ಮಂಗಳೂರು ಜಿಲ್ಲೆಗಳಲ್ಲಿ ವಿದ್ಯಾವಂತ ಯುವ ಸಮುದಾಯಕ್ಕೆ ಸೂಕ್ತ ಉದ್ಯೋಗ ನೀಡುವ ನೀಡುವ ಐಟಿ ಪಾರ್ಕ್, ಸಾಪ್ಟ್ ವೇರ್ಗಳು ಬರಬೇಕು. ಈಗ ಜಿಲ್ಲೆಯಲ್ಲಿ ಉದ್ಯೋಗವಕಾಶದ ಕೊರತೆಯಿಂದ ಬೆಂಗಳೂರು, ಮುಂಬೈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕೇರಳದ ತ್ರಿಶೂರ್ನಲ್ಲಿ ಜರುಗಿದ ದಕ್ಸಿಣ ಭಾರತದ ಅಂತರ್ ರಾಜ್ಯ ಅಶ್ಮಿತಾ ಖೇಲೋ ಇಂಡಿಯಾ ಮಹಿಳಾ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ತಂಡವು ಸಮಗ್ರ ಚಾಂಪಿಯನ್ಸ್ ಪಟ್ಟವನ್ನು ಪಡೆದುಕೊಂಡಿತು. ಆ ಮೂಲಕ ಕರ್ನಾಟಕ ರಾಜ್ಯ ತಂಡವನ್ನು ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಪ್ರತಿನಿಧಿಸಲಿದೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು 2 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ ಸೇರಿದಂತೆ ಒಟ್ಟು 7 ಪದಕಗಳನ್ನು ಪಡೆಯುದರೊಂದಿಗೆ ದಕ್ಷಿಣ ಭಾರತ ಮಟ್ಟದ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಚಿನ್ನದ ಪದಕಗಳಿಸಿದವರು: ಶ್ರಾವ್ಯ-(48 ಕೆಜಿ), ಪಾವನಿ-(77 ಕೆಜಿ ಪ್ಲಸ್)ಬೆಳ್ಳಿಯ ಪದಕ ಗಳಿಸಿದವರು: ದೀಪಿಕಾ-(53 ಕೆಜಿ), ಕಾಂಚನ-(58 ಕೆಜಿ)ಕಂಚಿನ ಪದಕ ಗಳಿಸಿದವರು: ಪಲ್ಲವಿ-(44 ಕೆಜಿ), ಹಂಸವೇಣಿ-(63 ಕೆಜಿ), ಮಾನಸ-(77 ಕೆಜಿ) ಕ್ರೀಡಾಪಟುಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂಸುದ್ದಿ.ಕುಂದಾಪುರ: ಇಲ್ಲಿನ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಾರ್ಷಿಕೋತ್ಸವ ಆವಿರ್ಭವವು “ಸಿಂದೂರ ಸಂಭ್ರಮ” ಪರಿಕಲ್ಪನೆಯಲ್ಲಿ ಡಿ. 4, 5, 6ರಂದು ಅದ್ದೂರಿಯಾಗಿ ಜರುಗಿತು. ಡಿ.4ರಂದು ಕ್ರಿಯೇಟಿವ್ ಯಕ್ಷಾರಾಧನಮ್ ಹವ್ಯಾಸಿ ಕಲಾವಿದರಿಂದ ‘ಶ್ರೀರಾಮಾನುಗ್ರಹ ಸಿಂದೂರ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು. ಡಿ.5ರಂದು ದಿ. ಎಚ್.ಎಸ್ ವೆಂಕಟೇಶಮೂರ್ತಿಯವರ ಸವಿ ನೆನಪಿನ ಕುರಿತ ‘ಭಾವ ನಮನ’ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕ ಅವಿನಾಶ್ ಕಾಮತ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿವಿಧ ಸ್ಪರ್ಧಾವಳಿಗಳ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು. ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಉದ್ಘಾಟಕರಾಗಿ ಆಗಮಿಸಿದ ಡಾ. ಜಿ. ರಾಮಕೃಷ್ಣ ಆಚಾರ್, ಎಸ್. ಕೆ.ಎಫ್ ಎಲಿಕ್ಸರ್ ಇಂಡಿಯಾ ಸ್ಥಾಪಕರು ಮತ್ತು ಸಂಜೀವಿನಿ ಗೋಧಾಮ ಮುನಿಯಾಲು ಅವರು ಮಾತನಾಡಿ, ‘ಕಾಲೇಜುಗಳು ಬರಿಯ ಪಠ್ಯದ ಅಭ್ಯಾಸ ನೀಡುವ ಸ್ಥಳವಲ್ಲ. ವಿದ್ಯಾರ್ಥಿಗಳ ಸಾಮರ್ಥ್ಯವನ್ನೆತ್ತಿ ಹಿಡಿಯುವ ವೇದಿಕೆಗಳಾಗಬೇಕು. ಅಂತಹ ವೇದಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಡುತ್ತಿರುವ ಕ್ರಿಯೇಟಿವ್ ಕಾಲೇಜಿನ ಬಗ್ಗೆ ಶ್ಲಾಘನೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳಿಂದ ಸಮಾಜ ಮತ್ತು ಮಹಿಳೆಯರಲ್ಲಿ ಹೆಚ್ಚಿನ ಶಕ್ತಿ ಬಂದಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಸಾಲಿಗ್ರಾಮ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಂಡೇಶ್ವರ ವಲಯದ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯೋಜನೆಯ ಹಲವಾರು ಜನಪರ ಯೋಜನೆಗಳು ಜನರ ಆರ್ಥಿಕ ಸ್ಥಿತಿ ಬಲ ಪಡಿಸಿರುವುದಲ್ಲದೇ, ಅವರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದೆ ಎಂದರು. ಬ್ರಹ್ಮಾವರ ತಾಲ್ಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ಅಧ್ಯಕ್ಷ ಪ್ರಕಾಶ ಶೆಟ್ಟಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಒಳಿತಿಗಾಗಿರುವ ಕಲ್ಪವೃಕ್ಷವಾಗಿದೆ. ಮಧ್ಯವರ್ಜನ, ಸ್ವಾಸ್ತ್ಯ ಸಂಕಲ್ಪ ಶಿಬಿರಗಳು ಉತ್ತಮ ಸಮಾಜವನ್ನು ನಿರ್ಮಿಸುತ್ತಿದೆ. ಯೋಜನೆ ನಾಯಕತ್ವ ಗುಣಗಳನ್ನು ಬೆಳೆಸಿದೆ ಎಂದರು. ಪಾಂಡೇಶ್ವರ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರಾಧಾ ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘ ಇದರ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಿ ನಿಬ್ಬಣ ದಿನವನ್ನು ಇಲ್ಲಿನ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಶೀಲಾ ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿ.ವಿ. ಮಂಡಳಿ ಹೆಮ್ಮಾಡಿ ಇದರ ನಿರ್ದೇಶಕರಾದ ರಘುರಾಮ್ ಪೂಜಾರಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮೊಹಮ್ಮದ್ ತಶೀರ್ ನಾಗೂರು, ಸೂರ್ಯಕಾಂತಿ, ಲಕ್ಷ್ಮಣ್ ಕೊರಗ, ಮಂಜುನಾಥ್ ನಾಗೂರು, ಭಾಸ್ಕರ್ ಕೆರ್ಗಾಲು, ಸುರೇಶ್ ಬಾರ್ಕೂರು, ಶಿವರಾಜ್ ಬೈಂದೂರು, ವಿನಯ, ಗೀತಾ ಸುರೇಶ್, ಇಂದಿರಾ ಉಪಸ್ಥಿತರಿದ್ದರು. ಶಾಲೆಯಲ್ಲಿ ಮತ್ತು ಹಾಸ್ಟೆಲಿರುವ 300 ವಿದ್ಯಾರ್ಥಿಗಳಿಗೆ ಹಣ್ಣು- ಹಂಪಲನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ರಾಜೇಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರೇಣುಕ ಕಾರ್ಯಕ್ರಮ ನಿರ್ವಹಿಸಿದರು. ಶಕೀಲಾ ವಂದಿಸಿದರು .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಶಿಶುವಿಹಾರ (ಕಿಂಡರ್ಗಾರ್ಟನ್) ವಿಭಾಗದಲ್ಲಿ ಪತ್ರ ಬರವಣಿಗೆ ದಿನವನ್ನು ಬಹಳ ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಪುಟ್ಟ ಮಕ್ಕಳು ಈ ಚಟುವಟಿಕೆಯಲ್ಲಿ ಅಪಾರ ಉತ್ಸಾಹ ಮತ್ತು ಪ್ರೀತಿಯಿಂದ ಪಾಲ್ಗೊಂಡರು. ಈ ವಿಶೇಷ ದಿನದಂದು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ಉಪಸ್ಥಿತರಿದ್ದು, ಈ ತಂತ್ರಜ್ಞಾನ ಯುಗದಲ್ಲಿ ಪತ್ರ ಬರವಣಿಗೆ ಮಹತ್ವ ತಿಳಿಸುವ ಕಾರ್ಯವನ್ನು ಪ್ರಶಂಸಿಸಿದರು. ಆಡಳಿತಾಧಿಕಾರಿ ಚೈತ್ರ ಯಡಿಯಾಳ ಅವರ ಉಪಸ್ಥಿತಿಯಲ್ಲಿ ಕಿಂಡರ್ಗಾರ್ಟನ್ ವಿಭಾಗದ ಶಿಕ್ಷಕಿಯರಾದ ಶೋಭಾ ಮತ್ತು ಶ್ವೇತಾ ಶೇಟ್ ಅವರು ಪುಟಾಣಿಗಳಿಗೆ ಪತ್ರದ ಮಹತ್ವ ಮತ್ತು ಬರೆಯುವ ವಿಧಾನದ ಬಗ್ಗೆ ಸರಳವಾಗಿ ತಿಳಿಸಿಕೊಟ್ಟರು. ನಂತರ, ಮಕ್ಕಳು ತಮ್ಮ ಪಾಲಕರಿಗೆ (ಅಪ್ಪ-ಅಮ್ಮನಿಗೆ) ತಮ್ಮ ಮನಸ್ಸಿನ ಭಾವನೆಗಳನ್ನು, ಪ್ರೀತಿಯ ಮಾತುಗಳನ್ನು ಅಂಚೆ ಕಾರ್ಡ್ ಮೇಲೆ ಬರೆಯಲು ಪ್ರಯತ್ನಿಸಿದರು ಮತ್ತು ಚಿತ್ರ ಬಿಡಿಸಿದರು. ಪ್ರತಿ ಮಗುವಿನ ಮುಖದಲ್ಲೂ ತಮ್ಮ ಪಾಲಕರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಡಿ ಕನ್ಯಾನ ಶ್ರೀ ಶನೀಶ್ವರ ದೇವಸ್ಥಾನ ವಠಾರದಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಉಂಜಲೋತ್ಸವ ಸಹಿತ ಪುಷ್ಪಯಾಗ ಮಹೋತ್ಸವ ಡಿ.21ರಂದು ನಡೆಯಲಿದ್ದು ಈ ಪ್ರಯುಕ್ತ ಚಪ್ಪರ ಮುಹೂರ್ತ ಡಿ.6 ರಂದು ಕೋಡಿಯಲ್ಲಿ ನೆರವೇರಿತು. ಸ್ಥಳೀಯ ಗಣ್ಯರಾದ ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಉದ್ಯಮಿ ಶಿವ ಎಸ್. ಕರ್ಕೇರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಆನಂದ ಸಿ. ಕುಂದರ್ ಮಾತನಾಡಿ, ತಿರುಮಲ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್ನ ಕಾಠ್ಯಕ್ರಮದಲ್ಲಿ ಟಿಟಿಡಿ ದೇವಸ್ಥಾನದ ವಿಶೇಷ ಅಧಿಕಾರಿ ವಿದ್ವಾನ್ ಆನಂದ ತೀರ್ಥಚಾರ್ ಪಗಾಡಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು ಹೆಮ್ಮೆಯ ವಿಚಾರವಾಗಿದೆ. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವಿರಲಿ ಎಂದರು. ಸ್ಥಳೀಯ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೀವನವೆಂದರೆ ಕಡು ಕಷ್ಟ ಎಂದು ಗೋಚರಿಸಬಹುದು. ಆದರೆ ಇಲ್ಲಿ ಯಾವಾಗಲೂ ನೀವು ಗೆಲ್ಲುವ ಅವಕಾಶ ಇದ್ದೇ ಇರುತ್ತದೆ. ನಿಮ್ಮ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ಅದುವೇ ನಿಮ್ಮ ನಗು ಮುಖದ ಯಶಸ್ಸಿನ ಮಾನದಂಡವಾಗುತ್ತದೆ. ಸ್ಪರ್ಧಾ ಮನೋಭಾವದಿಂದ ಪೂರ್ಣ ಸಾಮರ್ಥ್ಯದೊಂದಿಗೆ ಮುನ್ನುಗಿದರೆ ಗೆಲುವು ಸಾಧ್ಯವೆಂದು ಅರಣ್ಯ ಗುತ್ತಿಗೆದಾರರಾದ ಜೆ.ಪಿ. ಶೆಟ್ಟಿ ಕಟ್ಕೆರೆ ಅವರು ನುಡಿದರು. ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ, ನಿವೃತ್ತ ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ ಮಾತನಾಡಿ, ಸರಿಯಾದ ಯೋಚನೆ ಮತ್ತು ಯೋಜನೆಯಿಂದ ಮುನ್ನಡೆಯಿರಿ ಎಂದು ಶುಭ ಕೋರಿದರು. ವಿದ್ಯಾರ್ಥಿಗಳ ಕ್ರೀಡಾ ಸ್ಪೂರ್ತಿ ನೋಡಿ ಮೆಚ್ಚಿ ಚಾಂಪಿಯನ್ ಆದವರಿಗೆ ಟ್ರೋಫಿ ಮತ್ತು ನಗದು ಬಹುಮಾನ ಘೋಷಿಸಿ ಪ್ರೋತ್ಸಾಹಿಸಿದರು. ಹಾನ್ಗಲ್ ಪದವಿ…
