ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಲಿಯುಗದ ಕಾರಣಿಕ ದೈವಾದ ಕೊರಗಜ್ಜ ದೈವವು ಒಂದಲ್ಲ ಒಂದು ರೀತಿಯ ಪವಾಡಗೈಯುವ ದೈವವಾಗಿ ಭಕ್ತರನ್ನು ಸಲಹುತ್ತಿದ್ದಾನೆ, ಅಂತಯೇ ಇಲ್ಲಿನ ಪಾಂಡೇಶ್ವರದ ಕಳಿಬೈಲು ಕೊರಗಜ್ಜನ ಸನ್ನಿಧಾನ ಮತ್ತೊಮ್ಮೆ ತನ್ನ ಮಹಿಮೆಯನ್ನು ಸಾಕ್ಷೀಕರಿಸಿದ್ದಾನೆ. ಕಳೆದು ಹೋದ ಚಿನ್ನದ ಬಳೆ, ದೈವ ನುಡಿಯಂತೆ ನಿರ್ದಿಷ್ಟ ಅವಧಿಯೊಳಗೆ ಮಾಲೀಕೆಯ ಕೈ ಸೇರಿರುವ ಘಟನೆ ಭಕ್ತರ ಮನಗಳಲ್ಲಿ ಅಪಾರ ಭಕ್ತಿ ಭಾವವನ್ನು ಮೂಡಿಸಿದೆ. ಬ್ರಹ್ಮಾವರ ನಿವಾಸಿ ಹಾಗೂ ಕೋಟದ ಸರ್ಕಾರಿ ಶಾಲೆಯ ಶಿಕ್ಷಕಿ ಸುಮಾ ಅವರು ಜನವರಿ 13ರಂದು ಎಂದಿನಂತೆ ತಮ್ಮ ಬೈಸಿಕಲ್ನಲ್ಲಿ ಬ್ರಹ್ಮಾವರದಿಂದ ಕೋಟಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾಬುಕಳ ಸೇತುವೆ ಸಮೀಪ ಅವರ ಕೈಯಲ್ಲಿದ್ದ ಸುಮಾರು 12.5 ಗ್ರಾಂ ತೂಕದ (ಅಂದಾಜು 1,80,000 ಮೌಲ್ಯದ) ಚಿನ್ನದ ಬಳೆ ತಿಳಿಯದೆ ಕೈಯಿಂದ ಬಿದ್ದು ಹೋಗಿತ್ತು. ಕೋಟ ತಲುಪಿದ ನಂತರ ಬಳೆ ಕಳೆದುಹೋದ ಸಂಗತಿ ತಿಳಿದು ಅವರು ಆತಂಕಗೊಂಡರು. ತಕ್ಷಣವೇ ಹಿಂದಿರುಗಿ ಬ್ರಹ್ಮಾವರದವರೆಗೆ ಹುಡುಕಾಟ ನಡೆಸಿದರೂ ಬಳೆ ಪತ್ತೆಯಾಗಲಿಲ್ಲ. ಬಳಿಕ ಕೋಟ ಪೊಲೀಸ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (MCA) ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ನವೀನ ಚಿಂತನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ನೂತನ ವೇದಿಕೆಯಾದ “ಇನ್ಫೋ ಸ್ಪಾರ್ಕ್” ಅನ್ನು ಉದ್ಘಾಟಿಸಿತು. ವಿಭಾಗದ ಮುಖ್ಯಸ್ಥರಾದ ಡಾ. ಟಿ. ನಂದಿನಿ ಅವರು ಸ್ವಾಗತಿಸಿ, “ಇನ್ಫೋ ಸ್ಪಾರ್ಕ್” ವೇದಿಕೆಯು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ, ನಾಯಕತ್ವ ಗುಣಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ವೃದ್ಧಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಇದರ ಧ್ಯೇಯೋದ್ದೇಶವನ್ನು ಅರಿತು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಿದರು. ಈ ಉಪಕ್ರಮದಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಸಲುವಾಗಿ “ಬೈನರಿ ಕ್ರಾಫ್ಟರ್ಸ್” (ಕೋಡಿಂಗ್, ಡಿಬಗ್ಗಿಂಗ್ ಹಾಗೂ ಹ್ಯಾಕಥಾನ್ ಮುಂತಾದ ಐಟಿ ಚಟುವಟಿಕೆಗಳು), “ಕಮ್ಯುನಿಟಿ ಕ್ಯಾಟಲಿಸ್ಟ್ಸ್” (ಆರೋಗ್ಯ ಹಾಗೂ ಸಾಮಾಜಿಕ ಜಾಗೃತಿ ಅಭಿಯಾನಗಳಂತಹ ಸಮುದಾಯಮುಖಿ ಕಾರ್ಯಕ್ರಮಗಳು) ಮತ್ತು “ಬಿಜ್ ಬೈಟ್ಸ್” (ಉದ್ಯಮಶೀಲತೆ ಹಾಗೂ ನಿರ್ವಹಣಾ ಕೌಶಲ್ಯ ಆಧಾರಿತ ಚಟುವಟಿಕೆಗಳು) ಎಂಬ ಸಂಘಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ದುರ್ಬಲರ ಸಮಾಜದ ಏಳಿಗೆಗಾಗಿ ಶ್ರಮಿಸುವ ಕಾರ್ಯ ಭಗವಂತನಿಗೆ ಸಲಿಸುವ ಭಕ್ತಿಯಷ್ಟೆ ಶ್ರೇಷ್ಠವಾದದ್ದು ಎಂದು ಉಡುಪಿ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ಶ್ರೀಪಾದಂಗಳ ನುಡಿದರು. ಅವರು ಶನಿವಾರ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ದಾನಿಗಳಿಂದ ನಿರ್ಮಾಣಗೊಂಡ ಕೋಟತಟ್ಟು ಚಿಟ್ಟಿಬೆಟ್ಟಿನ ಎಂಟು ಗೃಹಗಳ ಲೋಕಾರ್ಪಣಾ ಸಮಾರಂಭ ಆಸರೆ -2026 ಕಾರ್ಯಕ್ರಮದಲ್ಲಿ ಆಶ್ರೀವಚನ ನೀಡಿ ಮಾತನಾಡಿದರು. ಕೊರಗ ಸಮುದಾಯ ಎಂಬ ಕುಲ ಕಸುಬು ಮಾಡಿ ಜೀವನ ಸಾಗಿಸುವ ಪರಂಪರೆಯ ಮುಗ್ಧ ಜೀವಗಳಿಗೆ ಆಸರೆ ನೀಡಿರುವುದು ಕೋಟತಟ್ಟು ಪಂಚಾಯತ್ ಅತೀ ಶ್ರೇಷ್ಠವಾದ ಕಾಯಕ ಮಾಡಿದೆ, ಅಲ್ಲದೆ ಈ ಕಾರ್ಯದಲ್ಲಿ ಕೈ ಜೋಡಿಸಿಕೊಂಡ ದಾನಿಗಳ ಸಹಕಾರಕ್ಕೆ ಗೌರವ ಸಲ್ಲಿಸಿದ ಸ್ವಾಮೀಜಿ ನಮ್ಮ ಮಠದ ವತಿಯಿಂದ ಐದು ಲಕ್ಷ ರೂಗಳ ದೇಣಿಗೆಯನ್ನು ಘೋಷಿಸಿ ಭಾರತ ವಿಶ್ವಗುರುವಾಗಿ ವಿಶ್ವಮಟ್ಟದಲ್ಲಿ ಆದರ್ಶ ನೀಡುವ ದೇಶವಾಗಲಿ ಎಂದರು. ಸಮಾಜಸೇವಕ ಎಚ್. ಎಸ್. ಶೆಟ್ಟಿ ಮಾತನಾಡಿ, ಬದುಕಿನಲ್ಲಿ ಮಾನವೀಯ ಕಾರ್ಯ ಎಂದರೆ ಅದು ಈ ಸಮಾಜಕ್ಕೆ ನೀಡುವ ಕೊಡುಗೆಗಳು ಅದರಲ್ಲಿ ಕೊರಗ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ನಲ್ಲಿ ಜಲ್ ಅರ್ಪಣ್ ದಿವಸ ಆಚರಣೆ, ಜೆಜೆಎಮ್ ಯೋಜನೆಯಡಿ ಸೃಜಿಸಿದ ಸ್ವತ್ತುಗಳ ನಿರ್ವಹಣೆಯ ಬಗ್ಗೆ, ಕುಡಿಯುವ ನೀರಿನ ಯೋಜನೆಯ ಕಾರ್ಯಾಚರಣೆ ಹಾಗೂ ನಿರ್ವಹಣೆ ಬಗ್ಗೆ ಗ್ರಾಮಸ್ಥರಿಗೆ, ವಿಡಬ್ಲೂಎಸ್ಸಿ ಸದಸ್ಯರಿಗೆ ಶನಿವಾರ ಮಾಹಿತಿ ನೀಡಲಾಯಿತು. ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಾತ್ಯಕ್ಷಿಕೆ ನಡೆಸಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಚಿಕ್ಕ ಮಗಳೂರು ಕ್ಷೇತ್ರದ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು 8 ಕೊರಗ ಸಮುದಾಯದ ಫಲಾನುಭವಿಗಳಿಗೆ ಮನೆ ಹಾಗೂ ಕುಡಿಯುವ ನೀರಿನ ಸೇವೆಯನ್ನು ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಬ್ರಹ್ಮಾವರ ತಾ. ಪಂ ಇಒ, ಇಇ ಮತ್ತು ಎಇಇ, ಆರ್ಡಬ್ಲೂಎಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಇಲಾಖೆಯ ಸೆಕ್ಷನ್ ಆಫೀಸರ್ ಗಳು, ಫಲಾನುಭವಿಗಳು, ಪಂಚಾಯತ್ ಪಂಪ್ ಆಪರೇಟರ್, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇವರ ಒಲುಮೆಗೆ ಪಾತ್ರರಾಗಲು ಮತ್ತು ದೇವರನ್ನು ಒಲಿಸಿಕೊಳ್ಳಲು ಭಜನೆ ಸುಲಭ ಮಾರ್ಗವಾಗಿದೆ. ಭಕ್ತಿಯಿಂದ ಮಾಡಿದ ಪ್ರತಿಯೊಂದು ಕಾರ್ಯ ದೇವರಿಗೆ ಸಲ್ಲುತ್ತದೆ. ಗುರುಗಳು ಹಾಗೂ ಹಿರಿಯರು ನಡೆದುಕೊಂಡು ಬಂದ ಸನ್ಮಾರ್ಗದಲ್ಲಿ ಮುನ್ನಡೆದು, ಪ್ರತಿನಿತ್ಯ ಮನೆಯಲ್ಲಿ ಭಜನೆ ಮಾಡುವ ಸಂಪ್ರದಾಯವನ್ನು ಬೆಳೆಸಿ ಮುನ್ನಡೆಸಿಕೊಂಡು ಬರಬೇಕು. ಭಜನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವುದಲ್ಲದೆ ಸಮಾಜದ ಒಗ್ಗಟ್ಟು ಹಾಗೂ ಬೆಳವಣಿಗೆ ಕೂಡ ಸಾಧ್ಯವಾಗುತ್ತದೆ ಎಂದು ನಿವೃತ್ತ ಲೆಕ್ಕಪರಿಶೋಧಕ ಮಂಜುನಾಥ ಖಾರ್ವಿ ಹೇಳಿದರು. ಅವರು ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಇದರ ವತಿಯಿಂದ 81ನೇ ಮಹಾ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಆಯೋಜಿಸಲಾಗಿದ್ದ ಕಾರವಾರ-ಮಂಗಳೂರುವರೆಗಿನ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ. ಮಾಜಿ ಸದಸ್ಯ, ಪತ್ರಕರ್ತ ಬಿ. ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗಮಿಸಿ ಶುಭ ಕೋರಿದರು. ಮಾಜಿ ಮಂಡಲ ಪ್ರಧಾನ ಬಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಕಷ್ಟು ಕುಟುಂಬಗಳು ತಮ್ಮ ಜೀವನ ಕಟ್ಟಿಕೊಂಡು ಸ್ವಾವಲಂಬಿ ಬದುಕನ್ನು ಕಂಡುಕೊಂಡಿದ್ದಾರೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶುಕ್ರವಾರ ಕೋಟತಟ್ಟು ಪಂಚಾಯತ್ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬ್ರಹ್ಮಾವರ ತಾಲೂಕು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮತ್ತು ಮಾತೃಶ್ರೀ ಸೇಮಾವತಿ ವಿ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ನಂಬಿಕೆ ತಳಹದಿದಲ್ಲಿ ಕಾರ್ಯಾಚರಿಸುವ ಏಕಮಾತ್ರ ಸಂಸ್ಥೆಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುತಿಸಿಕೊಂಡಿದೆ. ಕಾವಂದರ ಚಿಂತನೆ ಅವರು ಈ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು, ಈ ದಿಸೆಯಲ್ಲಿ ಸ್ವಂತ ಉದ್ಯಮಕ್ಕೆ ಈ ಹೊಲಿಗೆ ತರಬೇತಿ ಶಕ್ತಿಯುತವಾಗಿ ಈ ಸಮಾಜದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಶ್ರೀ ಕ್ಷೇತ್ರ ಪ್ರತಿಯೋಜನೆ ಯೋಚನೆ ದುರ್ಬಲರ ಕಣ್ಣಿರೊರೆಸುವ ಕಾರ್ಯ ಮಾಡಲಿದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 19 ರಿಂದ 21ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದಲ್ಲಿ ಫೆಬ್ರವರಿ 20ರಂದು ಸಂಜೆ ಶ್ರೀನಿವಾಸ ಸಭಾಮಂಟಪದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ನಡೆಯಲಿದೆ. 240ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ ಅಪರೂಪದ ಕೃಷಿಕ ಋಷಿ ಬಿ.ಕೆ. ದೇವರಾಯ ಮಿತ್ತಬಾಗಿಲು. ಅವರು ಮೂಡಬಿದರೆ ಎಸ್ ಕೆಎಫ್ ಸಂಸ್ಥೆ ನೀಡುವ ನೂತನ ಪ್ರಥಮ ರೈತಪೀಠ ಪ್ರಶಸ್ತಿಯನ್ನು ಸ್ವೀಕರಿಸುವರು. ತಮ್ಮ ಬದುಕನ್ನೇ ಕೃಷಿ ಕಾಯಕಕ್ಕೆ ಅರ್ಪಿಸಿರುವ ರೈತರ ತ್ಯಾಗ, ಪರಿಶ್ರಮ ಮತ್ತು ರೈತರ ಮಹತ್ವವನ್ನು ಗುರುತಿಸುವ ಮಹತ್ವದ ಉದ್ದೇಶದಿಂದ “ರೈತಪೀಠ” ಎಂಬ ಗೌರವ ಪ್ರಶಸ್ತಿಯನ್ನು ಸ್ಥಾಪಿಸಿ ರೈತರನ್ನು ಗೌರವಿಸುವುದು ನಮ್ಮ ಮುಖ್ಯ ಉದ್ದೇಶ. ನಮ್ಮ ಯುವ ಸಮುದಾಯ ಕೃಷಿಯತ್ತ ಆಕರ್ಷಿತರಾಗಬೇಕು, ಕೃಷಿಯನ್ನೂ ಕೂಡ ಕಾರ್ಪೋರೇಟ್ ವ್ಯವಸ್ಥೆಯ ಹಂತಕ್ಕೆ ಬೆಳೆಸಬೇಕು, ಮುನಿಯಾಲಿನ ಗೋಧಾಮ ಎಂಬ ಕೃಷಿಲೋಕವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಡೇರಹೋಬಳಿ ನಿವಾಸಿ ಮಂಜುನಾಥ ಮೊಗವೀರ (72) ಅವರಿಗೆ ಸ್ಕೂಟರ್ ಢಿಕ್ಕಿಯಾಗಿ, ಗಾಯಗೊಂಡ ಘಟನೆ ಹೆಮ್ಮಾಡಿಯ ಸಂತೋಷನಗರ ಕ್ರಾಸ್ ಹತ್ತಿರ ಇತ್ತೀಚಿಗೆ ಸಂಭವಿಸಿದೆ. ಗಾಯಗೊಂಡ ಮಂಜುನಾಥ ಅವರನ್ನು ಸ್ಕೂಟರ್ ಸವಾರ ಪ್ರವೀಣ್ ಹಾಗೂ ಸ್ಥಳೀಯರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪಾಂಡೇಶ್ವರ ಗ್ರಾಮಪಂಚಾಯತ್ನ ವಿಕಲಚೇತನ ಕೊಠಡಿ ಮತ್ತು ರೆಕಾರ್ಡ್ ರೂಮ್ ಅನ್ನು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಉಪಾಧ್ಯಕ್ಷ ವೈಬಿ ರಾಘವೇಂದ್ರ, ಗ್ರಾಮ ಆಡಳಿತಾಧಿಕಾರಿ ಐರಿನ್ ಶಾಂತಿ ಫೆರೆರಾ, ಪಂಚಾಯತ್ ಸದಸ್ಯರು, ಪಿಡಿಓ ವಂದನಾ, ಕಾರ್ಯದರ್ಶಿ ವಿಜಯ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ವೆಂಕಟೇಶ ಮರಕಾಲ ಅವರ ಪುತ್ರ ನಾಗರಾಜ್ ಕುಂದರ್ (38) ಅವರು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಭವಿಸಿದೆ. ಅವರು ಅವಿವಾಹಿತರಾಗಿದ್ದು, ರೆಡಿಮೇಡ್ ಪಾಗರ ಮಾಡುವ ಕೆಲಸ ಮಾಡಿಕೊಂಡಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
