ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಕಲೆ, ಸಂಸ್ಕೃತಿ ಪ್ರಾಕಾರಗಳಲ್ಲಿ ಕೆಲಸ ಮಾಡುವ ಬಹಳಷ್ಟು ಪ್ರತಿಷ್ಠಿತ ಸಂಘ ಸಂಸ್ಥೆಗಳಿವೆ. ಅದರಲ್ಲಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕೂಡಾ ಒಂದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು. ಅವರು ಕರಾವಳಿ ಜಿಲ್ಲೆಗಳ ಪ್ರಸಿದ್ಧ ಸಂಗೀತ ಕಾರ್ಯಕ್ರಮವಾದ ಇನಿದನಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಲ್ಲಿನ ಕಲಾಕ್ಷೇತ್ರ ಕಛೇರಿಯಲ್ಲಿ, ಗೀತ ಗಾಯನ ಸದಸ್ಯರು ಮತ್ತು ಕಲಾಕ್ಷೇತ್ರ ಹಿತೈಷಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಿ ಮಾತನಾಡಿದರು. ಅಚ್ಚುಕಟ್ಟಾದ ಶಿಸ್ತುಬದ್ದ ಕಾರ್ಯಕ್ರಮವನ್ನು ಸಂಘಟಿಸುವುದರಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ. ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಮಾಡುವುದು ಮತ್ತು ಕಾರ್ಯಕ್ರಮಗಳನ್ನು ಮಾಡಿ ಪ್ರಚಾರ ಪಡೆಯುವುದು ಈ ಎರಡೂ ವರ್ಗಗಳಲ್ಲಿ ಎರಡನೆಯದು ಅತ್ಯಂತ ಪರಿಣಾಮಕಾರಿ. ಆ ಸಾಲಿನಲ್ಲಿ ಕಲಾಕ್ಷೇತ್ರ ಸೇರಿಕೊಂಡಿದೆ ಎಂದು ಹೇಳಲು ಸಂತೋಷ ಪಡುತ್ತೇನೆ. ಹಲವಾರು ವರ್ಷಗಳಿಂದ ಇವರು ಮಾಡುತ್ತಿರುವ ಕಾರ್ಯಕ್ರಮಗಳನ್ನು ಗಮನಿಸಿದ್ದೇನೆ. ಆದರೆ ಇಂದು ಸ್ವತಃ ಭಾಗವಹಿಸಿ ಅವರ ಕಾರ್ಯವೈಖರಿ ಬಗ್ಗೆ ತಿಳಿದು ಮೆಚ್ಚುಗೆಯಾಯಿತು ಎಂದರು. ವೇದಿಕೆಯಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯ ಫಲಾನುಭವಿ ಆಧಾರಿತ ಯೋಜನೆಯಾದ ಸಾಂಪ್ರದಾಯಿಕ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕಾ ಯಾಂತ್ರೀಕೃತ ದೋಣಿ ನಿರ್ಮಿಸಲು ಸಹಾಯಧನ ನೀಡಲಾಗುತ್ತಿದ್ದು, ಯೋಜನೆಯ ಸೌಲಭ್ಯ ಪಡೆಯಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 23 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕಛೇರಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಆನೆಗುಡ್ಡೆಯಲ್ಲಿ ಗಣೇಶ ಕೃಪ ಭೋಜನ ಶಾಲೆಯ ಪ್ರವೇಶ ದ್ವಾರದ ಬಳಿ ಅಂದಾಜು ರೂ. 3 ಲಕ್ಷದಲ್ಲಿ 10 ಅಡಿ ಎತ್ತರದ ನೂತನವಾಗಿ ನಿರ್ಮಾಣವಾದ ಶ್ರೀ ವಿನಾಯಕನ ಬಿತ್ತಿ ಶಿಲ್ಪವನ್ನು ದೇವರಿಗೆ ಸಮರ್ಪಿಸಲಾಯಿತು. ಶ್ರೀದೇವಳದ ದಾನಿಗಳಲ್ಲಿ ದಿವಂಗತ ಕೋಟೇಶ್ವರ ಸೂರ್ಯನಾರಾಯಣ ರಾವ್ ಸ್ಮರಣಾರ್ಥ ಇವರ ಸುಪುತ್ರರಾದ ಸುರೇಶ್ ಭಟ್ ಹಾಗೂ ರೇವತಿ ಸುರೇಶ್ ಭಟ್ ಇವರಿಂದ ಅಧಿಕೃತವಾಗಿ ಸಮರ್ಪಿಸಲಾಯಿತು. ವೇದಮೂರ್ತಿ ಹೂವಿನಕೆರೆ ವಾದೀಶ ಭಟ್, ನೇರಂಬಳ್ಳಿ ಪ್ರಾಣೇಶ ತಂತ್ರಿ ಹಾಗೂ ಕೆ ಕೆ.ಸುಬ್ರಮಣ್ಯ ಉಪಾಧ್ಯಾಯ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಡಯಿತು. ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀರಮಣ ಉಪಾಧ್ಯಾಯ ದಾನಿಗಳಿಗೆ ದೇವಳದ ವತಿಯಿಂದ ವಿಶೇಷವಾಗಿ ಗೌರವಿಸಿ ಪ್ರಸಾದವನ್ನು ನೀಡಿದರು. ವಿಶ್ರಾಂತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದಶಿಗಳಾದ ನಿರಂಜನ ಉಪಾಧ್ಯಾಯ, ಪದ್ಮನಾಭ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಹಾಗೂ ಸಹೋದರರು, ದೇವಸ್ಥಾನದ ಪ್ರಬಂಧಕರಾದ ನಟೇಶ್ ಕಾರಂತ್ ಹಾಗೂ ಸಿಬ್ಬಂದಿಗಳು ಹಾಗೂ ದಿವಂಗತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾಧ್ಯಮಗಳಲ್ಲಿ ಸದ್ವಿಚಾರಗಳು ಮೂಡಿಬಂದು ಸಮಾಜವನ್ನು ಬೆಸೆಯುವ ಕಾರ್ಯವಾಗಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ‘ಸುಗುಣಮಾಲಾ’ ಮಾಸಪತ್ರಿಕೆ ಹಾಗೂ ಬೆಂಗಳೂರಿನ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ‘ವಿಕಾಸʼ ನೇತೃತ್ವದಲ್ಲಿ ಗೀತಾ ಮಂದಿರದ ಪುತ್ತಿಗೆ ಶ್ರೀನರಸಿಂಹ ಸಭಾಭವನದಲ್ಲಿ ನಡೆದ ‘ಕರಾವಳಿ ವಿಕಾಸ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ‘ಉಡುಪಿ ಶ್ರೀಕೃಷ್ಣ ಪೂಜಾ ಪರ್ಯಾಯ ವೈಭವʼ ಮತ್ತು ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರು (ಸಂಪಾದಕ-ಓಂಪ್ರಕಾಶ್ ಭಟ್ ಉಡುಪಿ) ಕೃತಿ ಹಾಗೂ ಇಂದಿರಾ ನಾಡಿಗ್ ಅವರ ‘ಹಸಿಗನಸು’ಕಾದಂಬರಿಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಶಿವಮೊಗ್ಗದ ಆದಿತ್ಯಪ್ರಸಾದ್ ಅವರ ‘ಗೋಪಾಳದಿಂದ ನೇಪಾಳದೆಡೆಗೆʼ ಪ್ರವಾಸ ಕಥನವನ್ನು ಕಿನ್ನಿಗೋಳಿ ‘ಯುಗಪುರುಷ’ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹಾಗೂ ಆಸ್ಟ್ರೇಲಿಯಾದ ಉಮೇಶ್ ದತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂತಾರಾಷ್ಟ್ರೀಯ ರೋಟರಿ ಯುವಕರನ್ನು ಸೃಷ್ಟಿ ಮಾಡುವ ವೇದಿಕೆಗೆ ಕಂಕಣಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ರೋಟರಿ ಇಂರ್ಟಕ್ಟ್ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ, ಪರಿಸರದ ಹಿರಿಯರನ್ನು ಗೌರವಿಸುವ ಕಾರ್ಯದ ಜತೆಗೆ ಶಿಕ್ಷಣ ಶಿಕ್ಷಣ ಮುಗಿದ ಬಳಿಕ ಪಠ್ಯಕ್ರಮದಲ್ಲಿ ಜೀವನಕ್ಕೆ ಬಹುಮುಖ್ಯವಾಗಿರುವ ನಾಯಕತ್ವದ ಗುಣದ ಜತೆಗೆ ಮಾನವೀಯ ಸಮಾಜ ಸೇವೆಯ ಮೂಲಕ ಸುಸ್ಥಿರವಾದ ಸಮಾಜ ನಿರ್ಮಾಣ ಮಾಡಲು ಸರ್ವ ಸನ್ನದ್ದರಾಗಬೇಕಾಗಿದೆ ಎಂದು ರೋಟರಿ ಆರ್ಐ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಹೇಳಿದರು. ಅವರು ಇಲ್ಲಿನ ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ರೋಟರಿ ಇಂಟರ್ ನ್ಯಾಷನಲ್ ಜಿಲ್ಲೆ 3182 ಇದರ ರೋಟರಿ ಕ್ಲಬ್ ಬೈಂದೂರು ವಲಯ |ಆತಿಥ್ಯದಲ್ಲಿ ನಡೆದ ಪ್ರೇರಣಾ-2025 ಜಿಲ್ಲಾ ಇಂಟರ್ಯಾಕ್ಟ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ.ಹೆಗ್ಡೆ ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ಇದರ ಅಧ್ಯಕ್ಷ ಮಹೇಶ್ ಹೆಗ್ಡೆ ಅವರು ಶುಭಹಾರೈಸಿದರು. ಸಹಾಯಕ ಗವರ್ನರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಚೆನ್ನೈನಲ್ಲಿ ನಡೆದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ರೆಕಾರ್ಡ್ ಕ್ರಿಯೇಟ್ಗೈದ ಉಡುಪಿ ಜಿಲ್ಲೆಯ ಕೋಟದ ಗಿಳಿಯಾರಿನ ಕರಾಟೆ ತರಬೇತುದಾರ ಮಂಜುನಾಥ ಮೊಗವೀರ ಅವರನ್ನು ಬೆಂಗಳೂರಿನಲ್ಲಿ ಆದಿತ್ಯವಾರ ಜೆ.ಪಿ.ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಪ್ರಶಸ್ತಿ ಪ್ರದಾನಗೈದು ಪುರಸ್ಕರಿಸಲಾಯಿತು ಬೆಂಗಳೊರಿನ ನೈಋತ್ಯ ವಿಭಾಗದ ಡೆಪ್ಯೂಟಿ ಕಮಿಷನರ್ ಅನಿತಾ ಬಿ. ಹದ್ದನ್ನವರ್ (ಐ.ಪಿ.ಎಸ್) ಹಾಗೂ ಬಿಬಿಎಂಪಿ ಬೆಂಗಳೂರು ಇದರ ಮಾಜಿ ಮಹಾಪೌರರಾದ ಎನ್. ಶಾಂತಕುಮಾರಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಹೈದರಾಬಾದ್ನಲ್ಲಿ ಡಿ.13ರಿಂದ 21ರವರೆಗೆ ನಡೆಯುವ ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಭಾಗವಹಿಸುವ ಕ್ರಿಕೆಟ್ನಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಕುಂದಾಪುರದ ರಚಿತಾ ಹತ್ವಾರ್ ನಾಯಕಿಯಾಗಿ, ವಿಕೆಟ್ ಕೀಪಿಂಗ್ ಕಂ ಬ್ಯಾಟರ್ ಆಗಿರುವ 16 ವರ್ಷದ ರಾಜ್ಯ ತಂಡವನ್ನು ಇದೇ ಮೊದಲ ಭಾರಿಗೆ ಮುನ್ನಡೆಸುತ್ತಿದ್ದಾರೆ. ಪ್ರಸಕ್ತ ಅಹಮದಾಬಾದ್ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳಾ ಟಿ-20 ಕ್ರಿಕೆಟ್ನಲ್ಲಿ ಕರ್ನಾಟಕ ರಾಜ್ಯದ ಪರ ಆಡುತ್ತಿದ್ದು, ಆರಂಭಿಕ ಆಟಗಾರ್ತಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಂಡ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ರಚಿತಾ ಕರ್ನಾಟಕ ರಾಜ್ಯ ಹಿರಿಯರ ತಂಡದ ಸಂಭಾವ್ಯ ಆಟಗಾರ್ತಿಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದು, ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ. ರಚಿತಾ ಅವರಿಗೆ ಪ್ರಸ್ತುತ ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿ(ಕೆಐಒಸಿ)ಯ ಮುಖ್ಯ ಕೋಚ್ ಇರ್ಫಾನ್ ಸೇಶ್ ತರಬೇತಿ ನೀಡುತ್ತಿದ್ದಾರೆ. ರಚಿತಾ ವಾರದಲ್ಲಿ ಐದು ದಿನ ನಿರಂತರ ತರಬೇತಿ ಪಡೆಯುತ್ತಾರೆ. ಕುಂದಾಪುರದ ವಕೀಲ ದಂಪತಿಯಾಗಿರುವ ರಮೇಶ್ ಹತ್ವಾರ್ ಹಾಗೂ ಸರಿತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಆತ್ಮ ಯೋಜನೆಯಡಿ ಯುವ ರೈತ ಮತ್ತು ಯುವ ರೈತ ಮಹಿಳೆಯರಿಗೆ ಡಿಸೆಂಬರ್ 15 ರಿಂದ 19ರ ವರೆಗೆ ಐದು ದಿನಗಳ ಕಾಲ ಅಣಬೆ ಹಾಗೂ ಜೇನು ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಡಿ. 12 ರ ಒಳಗಾಗಿ ಮೇಲ್ಕಂಡ ಕಚೇರಿಗೆ ಆಧಾರ್, ಪಹಣೀ ಪತ್ರ, ಬ್ಯಾಂಕ್ ಖಾತೆ ಪ್ರತಿ ಮತ್ತು ಭಾವಚಿತ್ರ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಆಟ್ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್ಗಂಗೊಳ್ಳಿ ಇವರ ಆಶ್ರಯದಲ್ಲಿ ಮೇಲ್ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ಸಹಕಾರದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ವರ್ಷದ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಯುವಕ ಮಂಡಲದ ಅಧ್ಯಕ್ಷ ನಾಗೇಶ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಮನಿಷಾ ಸಂವಿಧಾನ ವಿಧಿಯನ್ನು ಬೋಧಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಗುರುರಾಜ್ ಆಚಾರ್ಯ ಅವರು ಡಾ. ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಮಾತನಾಡಿದರು. ಯುವಕ ಮಂಡಲದ ಸದಸ್ಯರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್.ಜಿ. ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸ್ವಚ್ಛತಾ ಅಭಿಯಾನಗಳು ಸಂಘಟನೆಗಳಿಗೆ ಸೀಮಿತವಾಗದೆ ಪ್ರತಿ ಮನೆ ಮನಗಳನ್ನು ತಲುಪಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಭಾನುವಾರ ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣ ಇವರ ಆಶ್ರಯದಲ್ಲಿ ನಮ್ಮ ಕಡಲು ನಮ್ಮ ಜವಾಬ್ದಾರಿ ಎಂ. ಶೀರ್ಷಿಕೆಯಡಿ ಕೋಡಿ ಕನ್ಯಾಣ ಬೀಚ್ ಕ್ಲಿನಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದರು. ಯುವ ಸಮುದಾಯ ಪ್ರತಿ ಹೆಜ್ಜೆಗೂ ಜಾಗೃತಿ ಮೊಳಗಿಸಿ ತ್ಯಾಜ್ಯ ಮುಕ್ತ, ವ್ಯಾಜ್ಯ,ವ್ಯಸನ ಮುಕ್ತ ಸ್ವಸ್ಥ ಸಮಾಜಕ್ಕೆ ಮುನ್ನುಡಿ ಬರೆಯಲಿ ಎಂದು ಹಾರೈಸಿದರು. ಈ ಸಂದರ್ಭಗಳಲ್ಲಿ ಕೋಡಿ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪುನೀತ್ ಪೂಜಾರಿ, ಉಪಾಧ್ಯಕ್ಷ ಯಾದವ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಂದರ್, ಜೊತೆಗೆ ಕಾರ್ಯದರ್ಶಿ ದರ್ಶನ್ ಕಾಂಚನ್, ನಿಖಿಲ್ ಖಾರ್ವಿ ಹಾಗೂ ಸಂಘದ ಎಲ್ಲಾ ಸದಸ್ಯರು, ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯರಾದ ಕೃಷ್ಣ ಪೂಜಾರಿ, ಕೋಡಿ ಪರಿಸರದ ಅಂಗನವಾಡಿ ಹಾಗೂ ಶಿಶುಮಂದಿರದ ಮಾತೆಯರು, ವಾಮನ್ ಡಿ ಸಾಲಿಯಾನ್, ಭೋಜ…
