ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಕಲೆ, ಸಂಸ್ಕೃತಿ ಪ್ರಾಕಾರಗಳಲ್ಲಿ ಕೆಲಸ ಮಾಡುವ ಬಹಳಷ್ಟು ಪ್ರತಿಷ್ಠಿತ ಸಂಘ ಸಂಸ್ಥೆಗಳಿವೆ. ಅದರಲ್ಲಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕೂಡಾ ಒಂದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು.
ಅವರು ಕರಾವಳಿ ಜಿಲ್ಲೆಗಳ ಪ್ರಸಿದ್ಧ ಸಂಗೀತ ಕಾರ್ಯಕ್ರಮವಾದ ಇನಿದನಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಲ್ಲಿನ ಕಲಾಕ್ಷೇತ್ರ ಕಛೇರಿಯಲ್ಲಿ, ಗೀತ ಗಾಯನ ಸದಸ್ಯರು ಮತ್ತು ಕಲಾಕ್ಷೇತ್ರ ಹಿತೈಷಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಿ ಮಾತನಾಡಿದರು.
ಅಚ್ಚುಕಟ್ಟಾದ ಶಿಸ್ತುಬದ್ದ ಕಾರ್ಯಕ್ರಮವನ್ನು ಸಂಘಟಿಸುವುದರಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ. ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಮಾಡುವುದು ಮತ್ತು ಕಾರ್ಯಕ್ರಮಗಳನ್ನು ಮಾಡಿ ಪ್ರಚಾರ ಪಡೆಯುವುದು ಈ ಎರಡೂ ವರ್ಗಗಳಲ್ಲಿ ಎರಡನೆಯದು ಅತ್ಯಂತ ಪರಿಣಾಮಕಾರಿ. ಆ ಸಾಲಿನಲ್ಲಿ ಕಲಾಕ್ಷೇತ್ರ ಸೇರಿಕೊಂಡಿದೆ ಎಂದು ಹೇಳಲು ಸಂತೋಷ ಪಡುತ್ತೇನೆ. ಹಲವಾರು ವರ್ಷಗಳಿಂದ ಇವರು ಮಾಡುತ್ತಿರುವ ಕಾರ್ಯಕ್ರಮಗಳನ್ನು ಗಮನಿಸಿದ್ದೇನೆ. ಆದರೆ ಇಂದು ಸ್ವತಃ ಭಾಗವಹಿಸಿ ಅವರ ಕಾರ್ಯವೈಖರಿ ಬಗ್ಗೆ ತಿಳಿದು ಮೆಚ್ಚುಗೆಯಾಯಿತು ಎಂದರು.
ವೇದಿಕೆಯಲ್ಲಿ ಉದ್ಯಮಿ ಸಬ್ಲಾಡಿ ಮಂಜಯ್ಯ ಶೆಟ್ಟಿ, ಕಲಾವಿದ ರಾಧಾಕೃಷ್ಣ ಸಾರಂಗ್, ಅಧ್ಯಕ್ಷರಾದ ಕಿಶೋರ್ ಕುಮಾರ್ ಕುಂದಾಪುರ, ಕಾರ್ಯದರ್ಶಿ ರಾಮಚಂದ್ರ ಬಿ.ಎನ್. ಮತ್ತು ಟ್ರಸ್ಟಿಗಳಾದ ರಾಜೇಶ್ ಕಾವೇರಿ, ಪ್ರವೀಣ ಕುಮಾರ್ ಟಿ., ದಾಮೋದರ್ ಪೈ, ಗೋಪಾಲ ವಿ., ಜೋಯ್ ಕರ್ವೆಲ್ಲೊ, ಶ್ರೀಧರ್ ಸುವರ್ಣ, ಸನತ್ ಕುಮಾರ್ ರೈ, ಡಾ. ರಾಜಾರಾಮ್ ಶೆಟ್ಟಿ, ಉದಯ ಶೆಟ್ಟಿ ಪಡುಕೆರೆ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಪಾರ್ವತಿ ನಿರ್ವಹಿಸಿ, ಮುರಳೀಧರ್ ವಂದಿಸಿದರು.















