Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನವೆಂಬರ್ ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ U14 ವಯೋಮಿತಿಯ ಹುಡುಗರ ವಿಭಾಗದಲ್ಲಿ ಕಶ್ವಿ ಚೆಸ್ ಸ್ಕೂಲ್ ವಿದ್ಯಾರ್ಥಿಯಾದ ಅವನೀಷ್ ಪ್ರಸಾದ್ ಕೆ. ನಾಲ್ಕನೇ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಾರ್ಖಂಡ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಶೋಧನಾ ಘಟಕದ ವತಿಯಿಂದ, ಸೈಬರ್ ಇಮ್ಯುನಿಟಿ ಮತ್ತು ಡಿಜಿಟಲ್ ಫರೆನ್ಸಿಕ್ಸ್ ಶ್ರೇಷ್ಠತಾ ಕೇಂದ್ರದ ಉದ್ಘಾಟನಾ ಸಮಾರಂಭವು ಬುಧವಾರ ಕಾಲೇಜು ಆವರಣದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ದೆಹಲಿ ಸೈಬರ್ ಸೆಕ್ಯುರಿಟಿ ಅಸೋಸಿಯೇಷನ್ ಆಫ್ ಇಂಡಿಯಾ ಡೈರೆಕ್ಟರ್ ಜನರಲ್ ವಿಜಯಂತ್ ಗೌರ್ ಅವರು  ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಿ, ಸೈಬರ್ ಜಾಗೃತಿ, ಡಿಜಿಟಲ್ ರಕ್ಷಣಾ ವ್ಯವಸ್ಥೆ ಹಾಗೂ ಡಿಜಿಟಲ್ ಫರೆನ್ಸಿಕ್ಸ್‌ನ ನೈಜ ಜಗತ್ತಿನ ಲ್ಲಿ ಆಗುಹೋಗುಗಳ ಕುರಿತಂತೆ  ಮಾರ್ಮಿಕವಾಗಿ  ಮಾತನಾಡಿದರು. ಡಾ. ಇಂದ್ರ ವಿಜಯ್ ಸಿಂಗ್ (ಸಂಶೋಧನೆ  ವಿಭಾಗದ ಡೀನ್) ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಹೊಸ ಸೆಂಟರ್ ನ ಮಹತ್ವವನ್ನು ತಿಳಿಸಿದರು. ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಫರೆನ್ಸಿಕ್ಸ್‌ನ ಮಹತ್ವವನ್ನು ಒತ್ತಿ ಹೇಳಿದರು. ಐಎಂಜೆ ಇನ್ಸ್ಟಿಟ್ಯೂಶನ್ ಅಕಾಡೆಮಿಕ್ ಡೈರೆಕ್ಟರ್ ಡಾ. ಎಸ್.ಎನ್.ಭಟ್, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ,  ತಮ್ಮ ಅಭಿನಂದನೆ  ತಿಳಿಸಿದರಲ್ಲದೆ ಈ ಸೈಬರ್ ಸೆಂಟರ್, ಸೈಬರ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಮೂರ್ತೆದಾರದ ಹೋರಾಟದ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಕೋಡಿ ಕೊರಗ ಪೂಜಾರಿ ಅವರಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಇದರ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಹಕಾರ ಚಳುವಳಿ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ನಿರಂತರ ಸೇವೆಯ ಮೂಲಕ ಜನಜನಿತರಾದ ಕೊರಗ ಪೂಜಾರಿಯವರನ್ನು ವಿಶೇಷವಾಗಿ ಗುರುತಿಸಿ ಬೆಂಗಳೂರಿನಲ್ಲಿ ನ.14ರಂದು ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಿದೆ‌ ಎಂದು ಸಹಕಾರ ಮಹಾಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಹಾಗೂ ಪ್ರತಿಭಾ ಪುರಸ್ಕಾರ, ಸನ್ಮಾನ, ಗೌರವ ಧನ ವಿತರಣಾ ಸಮಾರಂಭವು ನ.15ರ ಶನಿವಾರ ಪೂರ್ವಾಹ್ನ 10.30ಕ್ಕೆ ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ಜರುಗಲಿದೆ. ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಂಸದರಾದ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ನೆರವೇರಿಸಲಿದ್ದಾರೆ. ಖಂಬದಕೋಣೆ ರೈ.ಸೇ.ಸ.ಸಂಘದ ಅಧ್ಯಕ್ಷರಾದ ಎಸ್‌. ಪ್ರಕಾಶ್ವಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ವಿವಿಧ ಅತಿಥಿ ಗಣ್ಯರು ಉಪಸ್ಥಿರರಿರಲಿದ್ದಾರೆ. ಪ್ರತಿಭಾ ಪುರಸ್ಕಾರ, ಸನ್ಮಾನ, ಗೌರವ ಧನ ವಿತರಣೆ, ಸಹಕಾರ ಶಿಕ್ಷಣ ನಿಧಿ ವಿತರಣೆ, ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ. “ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು” ವಿಷಯವಾಗಿ ತರಬೇತುದಾರ ರಾಜೇಂದ್ರ ಭಟ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಿಇಓ ವಿಷ್ಣು ಪೈ ಎನ್‌.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಗದಗ, ಕೆ.ಹೆಚ್ ಪಾಟೇಲ್ ಜಿಲ್ಲಾ ಕ್ರೀಡಾಂಗಣ ಕೆಸಿ ರಾಣಿ ರಸ್ತೆ ಗದಗ, ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ 14 ವರ್ಷ ಮತ್ತು 17 ವರ್ಷ ವಯೋಮಿತಿಯ ಪ್ರಾಥಮಿಕ, ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಮಲ್ಲಕಂಬ ತಂಡವು 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮತ್ತು 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಮತ್ತು 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮತ್ತು 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಮುಂದಿನ ತಿಂಗಳು ನಡೆಯುವ ರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಗೆ ಆಳ್ವಾಸ್ ಶಾಲೆಯಿಂದ ಒಟ್ಟು 09 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಫಲಿತಾಂಶ:14 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ: ಗೌರೀಶ್ ಎಂ.ಕೆ. – ದ್ವಿತೀಯ ಸ್ಥಾನ, ಭೀಮಪ್ಪ ಎಂ ಜಿ ತೃತೀಯ ಸ್ಥಾನ, ಪ್ರೀತಮ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಬಿಸಿಸಿಐ ಆಯೋಜಿಸಿದ ಅಂಡರ್ -19 ವನಿತಾ ದೇಶೀಯ ಟಿ20 ಟೂರ್ನಿಯಲ್ಲಿ ವಿಕೆಟ್ ಕೀಪರ್‌ ಹಾಗೂ ಆರಂಭಿಕ ಆಟಗಾರ್ತಿಯಾಗಿರುವ ಕುಂದಾಪುರದ 16ರ ಹರೆಯದ ರಚಿತಾ ಹತ್ವಾ‌ರ್ ಪಂದ್ಯಾವಳಿ ಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಚಿತಾ ಆಡಿದ 7 ಪಂದ್ಯಗಳಲ್ಲಿ 2 ಅರ್ಧ ಶತಕದೊಂದಿಗೆ ಕೂಟದಲ್ಲೇ ಗರಿಷ್ಠ 234 ರನ್ (38 ಫೋರ್, 1 ಸಿಕ್ಸರ್) ಬಾರಿಸಿದರು. ಈ ಸಾಧನೆಗಾಗಿ ಸರಣಿಶ್ರೇಷ್ಠ ಪ್ರಶಸ್ತಿಯೊಂದಿಗೆ 75 ಸಾವಿರ ರೂ. ನಗದನ್ನು ಪಡೆದರು. ಟೂರ್ನಿಯಲ್ಲಿ ಅಜೇಯ ಗೆಲುವಿನ ಆಟವನ್ನು ಮುಂದುವರಿಸಿದ ಕರ್ನಾಟಕದ ವನಿತೆಯರ ತಂಡ ಚಾಂಪಿಯನ್ ಆಗಿ ಮೂಡಿಬಂದಿದೆ. ಬುಧವಾರ ಕೋಲ್ಕತಾದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಆಂಧ್ರಪ್ರದೇಶವನ್ನು ಸೋಲಿಸಿ ಪ್ರಶಸ್ತಿ ಜಯಿಸಿತು. ಲೀಗ್ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದ ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಅಲ್ಲಿ ದಿಲ್ಲಿಯನ್ನು ಹಾಗೂ ಸೆಮಿಫೈನಲ್‌ನಲ್ಲಿ ಬರೋಡಾ ತಂಡವನ್ನು ಸೋಲಿಸಿ ಫೈನಲ್‌ ಗೆ ಲಗ್ಗೆಯಿಟ್ಟಿತು. ಫೈನಲ್ ಪಂದ್ಯದಲ್ಲಿ ಮೊದಲು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಪ್ರೇರಣೆ ಕಾರ್ಯಕ್ರಮವು ಇತ್ತೀಚಿಗೆ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ ಅಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರೊಫೆಸರ್ ರಮೇಶ್ ಆಚಾರ್ ವಹಿಸಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಮಹತ್ವವನ್ನ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪರೀಕ್ಷೆಗೆ ಸ್ಪರ್ಧೆಗೆ ಸಿದ್ಧಪಡಿಸುವುದಲ್ಲ ಮಾಹಿತಿ ಹೊತ್ತ ಹೃದಯವಂತರನ್ನು ಸೃಷ್ಟಿಸುವ ಕಾರ್ಯಕ್ರಮ ಇದು ಎಂದು ಸಾಹಿತಿಗಳ ಬರವಣಿಗೆಯ ಬಗ್ಗೆ ವಿವರಿಸಿದರು. ಕಸಾಪ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಇವರು ಕಥೆಗಳ ಮೂಲಕ ಸಾಹಿತ್ಯ ಆಸಕ್ತಿಯನ್ನು ಬೆಳೆಸಿದರು. ಸುಪ್ರೀತಾ ಪುರಾಣಿಕ್ ಇವರು ಯಕ್ಷಗಾನ ಮತ್ತು ಜಾನಪದ ಗೀತೆಯ ಮಹತ್ವವನ್ನು ತಿಳಿಸಿದರು. ಕಸಾಪ ತಾಲೂಕು ಅಧ್ತಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಇವರು ಭಾವಾಭಿನಯ ಪ್ರದರ್ಶಿಸಿ ಅಭಿನಯದ ಬಗ್ಗೆ ಆಸಕ್ತಿ ಮೂಡಿಸಿದರು. ಅಚ್ಚುತ ಪೂಜಾರಿ ಯವರು ಕನ್ನಡ ಗೀತೆಯನ್ನು ಹಾಡಿ ರಂಜಿಸಿದರು. ಕಾಲೇಜಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಕಲಚೇತನರಿಗಾಗಿ ಇಲಾಖೆಯ ಸೌಲಭ್ಯಗಳನ್ನು ತಲುಪಿಸಲು ಜಿಲ್ಲೆಯ ನಗರಸಭೆ ವ್ಯಾಪ್ತಿಯಲ್ಲಿ 02, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಲ್ಲಿ ತಲಾ 1 ರಂತೆ “ನಗರ ಪುನರ್ವಸತಿ ಕಾರ್ಯಕರ್ತರ” (ಯು.ಆರ್. ಡಬ್ಲ್ಯೂ) ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 1 ರಂತೆ “ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ” (ವಿ.ಆರ್. ಡಬ್ಲ್ಯೂ) ನೇಮಕಾತಿಗಾಗಿ, ಮಾಸಿಕ 10,000 ರೂ. ಗಳಂತೆ ಗೌರವಧನ ಆಧಾರದಲ್ಲಿ ಸೇವೆ ಸಲ್ಲಿಸಬಯಸುವ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿ.ಆರ್. ಡಬ್ಲ್ಯೂ ನೇಮಕಾತಿಗಾಗಿ ಬಾಕಿ ಇರುವ ಗ್ರಾ.ಪಂ. ವಿವರ: ಉಡುಪಿ ತಾಲೂಕಿನ ಕೆಮ್ಮಣ್ಣು, ಕಡೆಕಾರು ಹಾಗೂ ಮಣಿಪುರ, ಬ್ರಹ್ಮಾವರ ತಾಲೂಕಿನ ಹಾರಾಡಿ, ಕೋಡಿ, ಹೆಗ್ಗುಂಜೆ ಹಾಗೂ ಪಾಂಡೇಶ್ವರ, ಹೆಬ್ರಿ ತಾಲೂಕಿನ ಶಿವಪುರ, ಕಾಪು ತಾಲೂಕಿನ ಬೆಳಪು, ಮಜೂರು ಹಾಗೂ ಹೆಜಮಾಡಿ, ಕುಂದಾಪುರ ತಾಲೂಕಿನ ವಂಡ್ಸೆ ಮತ್ತು ಕೆರಾಡಿ, ಕಾರ್ಕಳ ತಾಲೂಕಿನ ನಿಟ್ಟೆ ಹಾಗೂ ಪಳ್ಳಿ. ಯು.ಆರ್. ಡಬ್ಲ್ಯೂ ನೇಮಕಾತಿಗಾಗಿ ಕುಂದಾಪುರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಅವರುಗಳೊಂದಿಗೆ ಸರಣಿ ಸಭೆ ಗಳನ್ನು ನಡೆಸಿ ಬೈಂದೂರು ಪಟ್ಟಣ ಪಂಚಾಯತ್ ಗೆ ಸಂಬಂಧಿಸಿದಂತೆ ಗ್ರಾಮೀಣ ರೈತರಿಗೆ ಪಟ್ಟಣ ಪಂಚಾಯತ್ ನ ನಿಯಮಗಳಿಂದ ಆಗುತ್ತಿರುವ ಸಂಕಷ್ಟಗಳ ಕುರಿತು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಹಾಗೂ ಮಾನ್ಯ ಪೌರಾಡಳಿತ ಸಚಿವರಾದ ರಹೀಮ್ ಖಾನ್ ಅವರನ್ನು ಮತ್ತು ಪೌರಾಡಳಿತ ಇಲಾಖೆಯ ಕಾರ್ಯದರ್ಶಿಗಳಾದ ದೀಪ ಎಂ. ಚೋಳನ್ ಅವರನ್ನು ಭೇಟಿ ಮಾಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಮುಖರೊಂದಿಗೆ ಬೆಂಗಳೂರಿಗೆ ತೆರಳಿದ ಶಾಸಕರು ಸಚಿವರಿಗೆ ಮನವರಿಕೆ ಮಾಡಿದರು. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಪ್ರಸ್ತುತ ಇರುವ ಬೈಂದೂರು ಪಟ್ಟಣ ಪಂಚಾಯತ್‌ನ ಗ್ರಾಮೀಣ ಭಾಗವನ್ನು ಕೈ ಬಿಟ್ಟು ಹೊಸದಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಮರುವಿಂಗಡಣೆ ಮಾಡಿ, ಬಫರ್ ಜೋನ್ ಮಿತಿಯನ್ನು ಕೈಬಿಟ್ಟು, ಆ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಗಳಿಗೆ ಅನ್ವಯಿಸುವ ನಿಯಮಗಳನ್ನು ಅಳವಡಿಸುವ ಮೂಲಕ ಅಕ್ರಮ ಸಕ್ರಮ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸೂರ್ಯಪ್ರಕಾಶ್ ಬುಧವಾರ ನಡೆದ ಉಡುಪಿ ಜಿಲ್ಲಾ  ಮಟ್ಟದ ಕ್ರೀಡಾಕೂಟ – 2025ರ ಗುಂಡು ಎಸೆತ ಸ್ಪರ್ಧೆಯ 17ರ ವಯೋಮಾನದ ಬಾಲಕರ ವಿಭಾಗದಲ್ಲಿ  ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಗಳಿಸಿದ್ದಾನೆ. ಈ ಗೆಲುವಿನೊಂದಿಗೆ, ಹಾಸನದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ. ವಿಜೇತ ವಿದ್ಯಾರ್ಥಿಯು ಕಾಳವಾರ ಭಾಸ್ಕರ ರಾಮ ಗಾಣಿಗ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜನತಾ ಪ್ರೌಢ ಶಾಲೆ ಹೆಮ್ಮಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಿತು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಮುಖ್ಯೋಪಾಧ್ಯಾಯ ಪ್ರದೀಪ್. ಕೆ ಅವರು ವಿಜೇತ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದ್ದರು. ಸುಜ್ಞಾನ ಪದವಿ ಪೂರ್ವ ಕಾಲೇಜು ಮತ್ತು…

Read More