ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹಿರಿಯ ಕೃಷಿಕ, ಉದ್ಯಮಿ, ಬೈಂದೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು (64) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳವಾಡಿಯ ಸಸಿಹಿತ್ಲು ಕುಟುಂಬದವರಾದ ವೆಂಕಟ ಪೂಜಾರಿ ಅವರು ಬೈಂದೂರಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕಂಬಳ ಹಾಗೂ ಕ್ರೀಡಾ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಉಡುಪಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರತಿನಿಧಿಯಾಗಿ, ಬೈಂದೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷರಾಗಿ ಸಕ್ರಿಯವಾಗಿದ್ದರು. ಕಳೆದ 25ವರ್ಷಗಳಿಂದ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ಎರಡು ಭಾರಿ ಬೈಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದರು. ಕಂಬಳ ಕ್ರೀಡೆಯಲ್ಲಿ ವೆಂಕಟ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂಡಲಕಟ್ಟೆಯ ಐಎಂಜೆ ಇನ್ಸ್ಟಿಟ್ಯೂಷನ್ಸ್ನಲ್ಲಿ ನೂತನ ವ್ಯಾಯಾಮ ಶಾಲೆಯನ್ನು ಚೇರ್ಮನ್ರಾದ ಸಿದ್ಧಾರ್ಥ್ ಜೆ. ಶೆಟ್ಟಿ ಅವರು ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು. ಕೇಬಲ್ ಕ್ರಾಸ್ಓವರ್, ಪೆಕ್ ಡೆಕ್ ಫ್ಲೈ ಮೆಷಿನ್,ಲೆಗ್ ಪ್ರೆಸ್ ಮೆಷಿನ್, ಲ್ಯಾಟ್ ಪುಲ್ಡೌನ್ ಮೆಷಿನ್ ಮುಂತಾದ ಹಲವಾರು ಉಪಕಾರಣಗಳನ್ನು ಈ ವ್ಯಾಯಮ ಶಾಲೆಯು ಒಳಗೊಂಡಿದೆ ಮತ್ತು ವಿದ್ಯಾರ್ಥಿಗಳ ಇತ್ತೀಚೆಗಿನ ಅವಶ್ಯಕತೆಗೆ ತಕ್ಕಂತೆ ಈ ಜಿಮ್ ವಿನ್ಯಾಸ ಗೊಳಿಸಲಾಗಿದ್ದು ಅನುಭವೀ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದೆಂದು ಫಿಸಿಕಲ್ ಡೈರೆಕ್ಟರ್ ಗಳಾದ ಡಾ. ಆರ್ ನವೀನ್ ಮತ್ತು ಪ್ರವೀಣ್ ಖಾರ್ವಿ ಅವರು ತಿಳಿಸಿದರು. ಹುಡುಗರಿಗೆ ಹುಡುಗಿಯರಿಗೆ ಪ್ರತ್ಯೇಕ ಸಮಯವಾಕಾಶವನ್ನು ನೀಡಲಾಗಿದ್ದು, ವಿದ್ಯಾರ್ಥಿಗಳು ಈ ಸೌಕರ್ಯವನ್ನು ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು. ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ, ಎಂಐಟಿಯ ಉಪ ಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿಸೋಜ, ಐಎಂಜೆಐಎಸ್ ಸಿಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ರೂಪಶ್ರೀ, ಎಲ್ಲೈಡ್ ಹೆಲ್ತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಗಣಕಯಂತ್ರ ವಿಭಾಗ ಮತ್ತು ಪ್ಲೇಸ್ಮೆಂಟ್ ಸೆಲ್ ಇವುಗಳ ಸಹಯೋಗದೊಂದಿಗೆ ಮ್ಯಾಜಿಕ್ ಬಸ್ ಫೌಂಡೇಶನ್ ಐದು ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕಿಗಳಾಗಿ ಮ್ಯಾಜಿಕ್ ಬಸ್ ಫೌಂಡೇಶನ್ ನ ನವೀನ್ ಮತ್ತು ರಾಹುಲ್ ಉಪಸ್ಥಿತರಿದ್ದರು. ಗಣಕಯಂತ್ರ ವಿಭಾಗ ಮುಖ್ಯಸ್ಥರು ಗಣೇಶ್ ಕೆ., ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕ ರಾಮಚಂದ್ರ ಆಚಾರಿ , ಸಿಬ್ಬಂದಿ ಸುರೇಶ್ ಕೆ ಅವರು ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರು ಹಾಗೂ ಪ್ಲೇಸ್ಮೆಂಟ್ ಸೆಲ್ ನ ಸಂಚಾಲಕರಾದ ರಾಜೇಂದ್ರ ಹೋಬಳಿದಾರ್ ಸ್ವಾಗತಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸಮಾಜವನ್ನು ತಿದ್ದಬೇಕಾದರೆ ಅಥವಾ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಬೇಕಾದರೆ ಸಂಘಗಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಜೇಸಿಐ, ರೋಟರಿ ಹಾಗೂ ಲಯನ್ಸ್ ಕ್ಲಬ್ ಮನುಕುಲದ ಏಳಿಗೆಗಾಗಿ ಹುಟ್ಟಿಕೊಂಡಿರುವ ಸಂಸ್ಥೆಗಳು. ಯುವ ಜನರನ್ನು ಒಳ್ಳೆ ದಾರಿಗೆ ಕೊಂಡೊಯ್ಯಲು ಮತ್ತು ಅವರ ವ್ಯಕ್ತಿತ್ವ ವಿಕಸನ ಮಾಡಲು ಜೇಸಿಐನಂತಹ ಸಂಸ್ಥೆಗಳು ಸಹಕಾರಿಯಾಗುತ್ತದೆ. ಯುವ ಜನಾಂಗವನ್ನು ವ್ಯವಸ್ಥಿತ ಸನ್ಮಾರ್ಗದಲ್ಲಿ ನಡೆಯುವಂತೆ ಮತ್ತು ಒಳ್ಳೆಯ ನಾಗರಿಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಕೆ.ಆರ್. ನಾಯ್ಕ್ ಹೇಳಿದರು. ಅವರು ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣದಲ್ಲಿ ಭಾನುವಾರ ಜೇಸಿಐ ಕುಂದಾಪುರ ಸಿಟಿ ಪ್ರಾಯೋಜಿತ ನೂತನವಾದ ಜೇಸಿಐ ಗಂಗೊಳ್ಳಿ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸೂಫ್ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ರೀಜಿನ್ ಎ. ವಲಯ 15ರ ವಲಯ ಉಪಾಧ್ಯಕ್ಷೆ ಅಶ್ವಿನಿ ಐತಾಳ್ ಅವರು ಜೇಸಿಐ ಗಂಗೊಳ್ಳಿ ಸಂಸ್ಥೆಯ ನೂತನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಿದ್ಕಲ್ಕಟ್ಟೆ ಪೇಟೆಯ ಬಳಿ ರಸ್ತೆ ಬದಿಯಲ್ಲಿ ಮಲಗಿದ್ದ ಒಂದು ಹಸುವನ್ನು ಹಿಡಿದು ಅದಕ್ಕೆ ಬಳ್ಳಿಯಿಂದ ಕುತ್ತಿಗೆಗೆ ಬಿಗಿದು ಅದನ್ನು ಹಿಂಸಾತ್ಮಕವಾಗಿ ಎಳೆದು ವಾಹನಕ್ಕೆ ತುಂಬಿಸಿ ಕಳವು ಮಾಡಿಕೊಂಡು ಹೋದ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಅಮೆಮ್ಮಾರ್ ಮಸೀದಿ ಬಳಿಯ ನಿವಾಸಿ ಇಮ್ರಾನ್ ಯಾನೆ ಕುಟ್ಟು (31)ಮತ್ತು ಮಂಗಳೂರು ತಾಲೂಕಿನ ಗಂಜಿಮಠ, ಮುಂದುಪುರ ಗ್ರಾಮದ ಮುಂಡೇವು ನಿವಾಸಿ ಇರ್ಷಾದ್(30) ಬಂಧಿತ ಆರೋಪಿಗಳು. ಬಂಧಿತರಿಬ್ಬರೂ ಕುಖ್ಯಾತ ಜಾನುವಾರು ಕಳ್ಳರು. ಆರೋಪಿ ಇಮ್ರಾನ್ ಯಾನೆ ಕುಟ್ಟು ವಿರುದ್ಧ ಉಡುಪಿ ಜಿಲ್ಲೆಯ ಈ ಪ್ರಕರಣ ಸೇರಿದಂತೆ, ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 35 ಪ್ರಕರಣಗಳು ದಾಖಲಾಗಿವೆ. ಇನ್ನು ಆರೋಪಿ ಇರ್ಷಾದ್ ಮೇಲೆ ಉಡುಪಿ ಜಿಲ್ಲೆಯ ಈ ಪ್ರಕರಣವೂ ಸೇರಿದಂತೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 14 ಪ್ರಕರಣಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಮೀನುಗಾರರು ಹೊಸದಾಗಿ ಯಾಂತ್ರೀಕೃತ ಮೀನುಗಾರಿಕಾ ದೋಣಿ ನಿರ್ಮಾಣ ಮಾಡಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಸಾಧ್ಯತಾ / ಅನುಮತಿ ಪತ್ರ ನೀಡಲು ಸರ್ಕಾರಿ ಆದೇಶದನ್ವಯ ಅನುಮೋದನೆ ನೀಡಲಾಗಿದ್ದು, ಆಸಕ್ತರು ವೆಬ್ಸೈಟ್ URL:frims.karnataka.gov.in/BCC ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಪ್ರೂಟ್ಸ್ ಐಡಿ ಕಡ್ಡಾಯವಾಗಿ ಹೊಂದಿರುವ, ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ಹಾಗೂ ಮೀನುಗಾರಿಕೆ ಸಹಕಾರಿ ಸಂಘದ ಸದಸ್ಯರಾಗಿರುವ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಒಂದು ಪ್ರತಿಯನ್ನು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸದಸ್ಯ ಕಾರ್ಯದರ್ಶಿ/ ಮೀನುಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್ ಹಳೇ ಕಟ್ಟಡ, ಬನ್ನಂಜೆ ಉಡುಪಿ ಕಛೇರಿಯ ವಿಳಾಸಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮೀನುಗಾರಿಕೆ ಇಲಾಖೆ ಕಛೇರಿಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಆಡಳಿತದಲ್ಲಿ ಕನ್ನಡ ಭಾಷೆಯು ಪ್ರತಿಶತಃ ನೂರರಷ್ಟು ಅನುಷ್ಠಾನವಾಗಬೇಕು. ಕನ್ನಡ ಭಾಷೆಯ ಬಳಕೆ ನಿರಂತರವಾಗಿರಲು ಕನ್ನಡ ಭಾಷೆ ಪರಿಣಾಮಕಾರಿ ಪ್ರಚಲಿತದಲ್ಲಿರಲು ಒತ್ತು ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಕರೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಭಾಷೆ ಉಳಿವಿಗಾಗಿ ಹೆಚ್ಚು ಸಂವೇದನಾಶೀಲತೆಯಿಂದ ಅಧಿಕಾರಿಗಳು ಕೆಲಸಮಾಡಬೇಕು. ಸರ್ಕಾರ ಕನ್ನಡ ಭಾಷೆ ಅನುಷ್ಠಾನಕ್ಕೆ ಅನೇಕ ಅದೇಶ ಹೊರಡಿಸಿದೆ. ಇದು ಸಮರ್ಪಕವಾಗಿ ಆಗಬೇಕು. ಕನ್ನಡ ಭಾಷೆಯನ್ನು ಆಡಳಿತದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು. ಜಿಲ್ಲಾಡಳಿತ ಕನ್ನಡ ಪರ ಸಂಘಟನೆಗಳೊಂದಿಗೆ ಕನಿಷ್ಠ ಮೂರು ತಿಂಗಳಿಗೊಮ್ಮೆ ಸಭೆಯನ್ನು ನಡೆಸುವುದರೊಂದಿಗೆ ಕನ್ನಡ ಭಾಷಾ ಅನುಷ್ಠಾನದ ಸಮಸ್ಯೆಗಳ ಕುರಿತು ಚರ್ಚಿಸಿ, ಕಾನೂನಾತ್ಮಕವಾಗಿ ಕನ್ನಡ ಅನುಷ್ಠಾನಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ತಗ್ಗರ್ಸೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ಇದರ 36ನೇ ವರ್ಷದ ಉತ್ಸವ ಸಮಿತಿ ಅಧ್ಯಕ್ಷರಾಗಿ ದಯಾನಂದ ಚಂದನ್ ಹಾಗೂ ಕಾರ್ಯದರ್ಶಿಯಾಗಿ ಸಂತೋಷ್ ಆಚಾರ್ಯ ಆಯ್ಕೆಯಾಗಿದ್ದಾರೆ. 36ನೇ ವರ್ಷದ ಶಾರದೋತ್ಸವವು ದಿನಾಂಕ ಸೆ.29, 30, ಅ.01 ರಂದು ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಭೂಗೋಳ ಮತ್ತು ಗಣಿತಶಾಸ್ತ್ರದ ಪ್ರಯೋಗಾಲಯವನ್ನು ಅಕಾಡೆಮಿಕ್ಸ್ ಮತ್ತು ಟ್ರೈನಿಂಗ್ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಪರಿಷತ್, ಬೆಂಗಳೂರಿನ ನಿರ್ದೇಶಕರಾದ ಡಾ. ಸಿ. ಕೆ. ಮಂಜುನಾಥ್ ಅವರು ಉದ್ಘಾಟನೆ ನಡೆಸಿದರು. ವಿದ್ಯಾರ್ಥಿಗಳಿಗೆ ಬೋಧಿಸುವಾಗ ಅವರ ಸ್ಪಷ್ಟಪ್ರತಿಪತ್ತಿಗೆ ಪ್ರಯೋಗಾಲಯಗಳು ಅತ್ಯಂತ ಸಹಕಾರಿಗಳಾಗುತ್ತವೆ. ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ಗಣಿತ ಮತ್ತು ಭೂಗೋಳ ಅಧ್ಯಾಪಕರ ಬೇಡಿಕೆಯಂತೆ ಶ್ರೀ ಸಿದ್ಧಿ ಪ್ರತಿಷ್ಠಾನ ಹಟ್ಟಿಅಂಗಡಿಯ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರ ಮುತುವರ್ಜಿಯಿಂದ ಈ ’ಮಿಹಿರ’ ಎಂಬ ನಾಮಾಂಕಿತವಾದ ಪ್ರಯೋಗಾಲಯ ಸಿದ್ಧವಾಗಿತ್ತು. ಬೋಧನೆಗೆ ಅಗತ್ಯ ಪರಿಕರಗಳು, ವೃತ್ತವೇ ಮೊದಲಾದ ಆಕೃತಿಗಳ ಪರಿಚಯಾತ್ಮಕವಾದ ಪ್ರತಿಕೃತಿಗಳು, ಭಾರತೀಯ ಗಣಿತ ಸಾಧಕರ ಛಾಯಾಚಿತ್ರಗಳು, ಭೌಗೋಳಿಕವಾದ ಪರಿಸರಜ್ಞಾನ, ಭೂಮಿಯ ಒಳಪದರಗಳ ಪ್ರತಿಕೃತಿಗಳು, ಸೌರಮಂಡಲಾದಿ ಆಕಾಶಕಾಯಗಳ ಗತಿ ಬೋಧಕ ಸಾಮಗ್ರಿಗಳು, ದೇಶ ವಿದೇಶಗಳ ಪ್ರದೇಶ ಪರಿಚಯಾತ್ಮಕ ಛಾಯಾಚಿತ್ರಗಳನ್ನು ಇದು ಒಳಗೊಂಡಿದೆ. ಈ ಸಂದರ್ಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಶಂಕರನಾರಾಯಣ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 2024 -25ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಸನ್ಮಾನ ಮತ್ತು 100%ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಜರುಗಿತು. ಶಂಕರನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಂಕರನಾರಾಯಣ ಭಟ್ ಕೊಂಡಳ್ಳಿ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ವಿದ್ಯಾವಂತರೂ,ಸಂಸ್ಕಾರವಂತರೂ ಆಗಿ ಹೆತ್ತವರು ಮತ್ತು ಗುರುಗಳ ಕೃಪೆಗೆ ಪಾತ್ರರಾಗಿ ಸತ್ಪ್ರಜೆಗಳಾಗಿ ಬಾಳಬೇಕು” ಎಂದರು. ಶಾಲಾ ಉಪ ಪ್ರಾಂಶುಪಾಲರಾದ ಮೋಹನ್ ರಾವ್ ಎಂ.ಜೆ.ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಶೈಕ್ಷಣಿಕ ಸಾಧನೆಗೆ ಶಿಕ್ಷಕರ, ವಿದ್ಯಾರ್ಥಿಗಳ ಮತ್ತು ಪಾಲಕರ ಪರಿಶ್ರಮವೇ ಕಾರಣ, ಶಿಕ್ಷಕರು ಮತ್ತು ಪೋಷಕರು ಜೊತೆಗೂಡಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸುವುದರೊಂದಿಗೆ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು. ಮುಖ್ಯ ಅತಿಥಿಗಳೂ, ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಡಾ. ಸಚ್ಚಿದಾನಂದ ವೈದ್ಯ…
