ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಬ್ರಿಯ ನಮ ತುಳುವೆರ್ ಕಲಾ ಸಂಘಟನೆ(ರಿ.) ಕೊಡಮಾಡಲ್ಪಡುವ 2026-27 ನೇ ಸಾಲಿನ ಕರ್ಣಾಟನಾಡ ಪೋಷಕ ಪ್ರಶಸ್ತಿ ಕಂಟೆಂಟ್ ಕ್ರಿಯೇಟರ್, ಹೆಗ್ಗದ್ದೆ ಸಮೂಹ ಸಂಸ್ಥೆಗಳ ಮಾಲೀಕ ಸಂದೀಪ್ ಶೆಟ್ಟಿ ಹೆಗ್ಗದ್ದೆಗೆ ಲಭಿಸಿದೆ. 26ನೇ ವರ್ಷದ ನವರಂಗೋತ್ಸವದಲ್ಲಿ ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ಮಾಧ್ಯಮ ವಿಭಾಗದಲ್ಲಿ, ಡಿಜಿಟಲ್ ಲೋಕದಲ್ಲಿ ಸರಿಸುಮಾರು ವರ್ಷದಿಂದ ವೃತ್ತಿಯಲ್ಲಿರುವ, 8000 ಕ್ಕೂ ಅಧಿಕ ಕಾರ್ಯಕ್ರಮಗಳ ಮೂಲಕ ಜನ ಮನದಲ್ಲಿ ಮಿಲಿಯನ್ ಗಟ್ಟಲೇ ಜನರ ಪ್ರೀತಿ ಸಂಪಾದಿಸಿರುವ ಸಂದೀಪ್ ಶೆಟ್ಟಿ ಹೆಗ್ಗದ್ದೆಯವರ ಕಾರ್ಯವೈಖರಿಯನ್ನ ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. ಇವರ ಕೆಲಸ ಕಾರ್ಯ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಭೆ ಬೀರಲಿ ಎಂದು ಮುದ್ರಾಡಿಯ ಅಭಯಹಸ್ತೆ ಆದಿಶಕ್ತಿ ಸನ್ನಿಧಾನದ ಮೊಕ್ತೇಸರರು, ನಾಟ್ಕ ಮುದ್ರಾಡಿಯ ಅಧ್ಯಕ್ಷರು ಸನ್ಮಾನಿಸಿ ಹಾರೈಸಿದರು.
ಪ್ರಶಸ್ತಿಯನ್ನ ಸ್ವೀಕರಿಸಿದ ಸಂದೀಪ್ ಶೆಟ್ಟಿ ಹೆಗ್ಗದ್ದೆ ಮಾತನಾಡಿ ಪ್ರಶಸ್ತಿ ಪಡೆಯುವಾಗ ನಮ್ಮ ಜವಾಬ್ಧಾರಿಗಳು ಜಾಸ್ತಿಯಾಗುತ್ತವೆ. ನಮ್ಮ ಹಿರಿಮೆ ಗರಿಮೆಯ ಜೊತೆಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ನೀಡುತ್ತವೆ ಎಂದರು. ಆದಿಶಕ್ತಿಯ ಸನ್ನಿಧಾನದಲ್ಲಿ ಅವಳ ಆಶೀರ್ವಾದದಿಂದ ಈ ಪ್ರಶಸ್ತಿ ಸ್ವೀಕರಿಸುತ್ತೇನೆ. ಮುದ್ರಾಡಿಗೆ ನನ್ನ ಧನ್ಯವಾದಗಳೆಂದು ತಿಳಿಸಿದರು.
ನವರಂಗೋತ್ಸವದ ಈ ಕಾರ್ಯ ಕ್ರಮದಲ್ಲಿ ಅನೇಕಾನೇಕ ಹಿರಿಯ ಕಿರಿಯರ ಕಲಾಸಕ್ತರು ಭಾಗಿಯಾಗಿದ್ದಲ್ಲದೇ ತದನಂತರ ಬಿ.ವಿ ಕಾರಂತ ಬಯಲು ರಂಗಮಂದಿರಲದಲ್ಲಿ ನಡೆದ ೧ ಗಂಟೆಯ ನಾಟಕ ಪ್ರದರ್ಶನವನ್ನೂ ನೋಡಿ ಕಣ್ತುಂಬಿಕೊಂಡರು











