ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿ ಹಾಗೂ ಕಂಬದಕೋಣೆ ಶಾಖೆಗೆ ಒಡಿಸ್ಸಾ ಅಂಗುಲ್ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ 22 ಮಂದಿ ಸಿಇಓ ಹಾಗೂ ಅಧ್ಯಕ್ಷ – ನಿರ್ದೇಶಕರುಗಳ ಅಧ್ಯಯನ ತಂಡ ಬುಧವಾರ ಭೇಟಿ ನೀಡಿತು. ಸಂಘದ ವ್ಯವಹಾರ ಚಟುವಟಿಕೆಗಳ ವೈವಿದ್ಯೀಕರಣ, ಕ್ರೆಡಿಟ್ ಮಾನಿಟರಿಂಗ್, ಕೃಷಿ ಸಾಲ, ಬಡ್ಡಿದರ, ವಹಿವಾಟು, ಸದಸ್ಯರ ಒಳಗೊಳ್ಳುವಿಕೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸೊಸೈಟಿಯ ಕಾರ್ಯವೈಖರಿಯನ್ನು ಶ್ಲಾಘಿಸಿ ಮುಂದಿನ ಯೋಜನೆಗಳ ಮಾಹಿತಿ ಪಡೆದುಕೊಂಡರು. ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಒಂದು ಸಾವಿರ ಕೋಟಿ ವಹಿವಾಟು ಇರುವ ನಮ್ಮ ಸಂಘವು ನಾಲ್ಕು ಗ್ರಾಮಗಳ ಸದಸ್ಯರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದಿದೆ. ಆರ್ಥಿಕ ವಹಿವಾಟಿನ ಜೊತೆಗೆ ರೈತರಿಗೆ ಬಲ ತುಂಬುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಗಾರ, ಪ್ರಾತ್ಯಕ್ಷಿಕೆ, ಕೃಷಿ ಪೂರಕ ಉತ್ಪನ್ನಗಳು ಹಾಗೂ ಸಲಕರಣೆಗಳ ಒದಗಿಸುವಿಕೆಗೆ ಆದ್ಯತೆ ನೀಡಲಾಗುತ್ತಿದೆ. ಸಂಘದ ಮಹಾತ್ವಕಾಂಕ್ಷಿಯ ಯೋಜನೆಯಾದ ರೈತ ಸಿರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು : ಉಪ್ಪುಂದ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಾಲ್ಕನೇ ಶಾಖೆ, ಸೋಲಾರ್ ಸಿಸ್ಟಮ್ ಸಂಪೂರ್ಣ ಹವಾ ನಿಯಂತ್ರಣ ಹಾಗೂ ಗಣಕೀಕೃತ ಸೌಲೌಭ್ಯದೊಂದಿಗೆ ಸಿದ್ಧಾಪುರ ಶಾಖೆ ಉದ್ಘಾಟನಾ ಸಮಾರಂಭವು ಇತ್ತೀಚಿಗೆ ತ್ರಿಶಕ್ತಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಎಸ್. ಸಚ್ಚಿದಾನಂದ ಅವರು ಚಾತ್ರ ಸಿದ್ದಾಪುರ ಶಾಖೆ ಉದ್ಘಾಟಿಸಿ ಮಾತನಾಡಿ, ಶ್ರಮಹಿಸಿ ದುಡಿದಾಗ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಗೋವಿಂದ ಬಾಬು ಪೂಜಾರಿ ಸಾಕ್ಷಿಯಾಗಿದ್ದಾರೆ. ಅವರು ಅನೇಕ ಉದ್ಯಮದಲ್ಲಿ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕೂಡ ಒಂದಾಗಿದೆ. ಗೋವಿಂದ ಬಾಬು ಪೂಜಾರಿ ಅವರು ಅನೇಕ ದಾನ ಧರ್ಮಗಳನ್ನು ಮಾಡಿದ್ದಾರೆ. ಅವರ ಇನ್ನಷ್ಟು ದಾನ ಧರ್ಮಗಳು ಸಮಾಜದ ಒಳ್ಳೆಯವರಿಗೆ ಸಿಗುವಂತಾಗಲಿ ಎಂದು ಹೇಳಿದರು. ಈ ವೇಳೆ ತ್ರಿಶಕ್ತಿ ಕಟ್ಟಡದ ಮಾಲೀಕ ನಾರಾಯಣ ಶೆಟ್ಟಿ ಅವರನ್ನು ಸನ್ಮಾಸಿ, ಗೌರವಿಸಲಾಯಿತು. ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋವಿಂದ ಬಾಬು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರ ಸೂಚನೆ ಮೇರೆಗೆ ಕಡಲ್ಕೊರೆತದಿಂದ ಹಾನಿಗೊಳದ ಕುಂದಾಪುರ ತಾಲೂಕಿನ ತ್ರಾಸಿ, ಕಂಚು ಗೋಡು ಮತ್ತು ಹೊಸಪೇಟೆ ಭಾಗಗಕ್ಕೆ ಬಂದರು ಮತ್ತು ಮೀನುಗಾರಿಕೆ ಇಲಾಖೆ ಎಂಜಿನಿಯರ್ ಭಾನುಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಿಥುನ್ ಎಂ.ಡಿ. ಬಿಜೂರು ಮಾತನಾಡಿ, ತ್ರಾಸಿ, ಕಂಚುಗೋಡು ಮತ್ತು ಹೊಸಪೇಟೆ ಭಾಗದಲ್ಲಿ ಅಲ್ಲಲಿ ಕಡಲ್ಕೊರೆತ ಉಂಟಾಗಿ ತೀರ ಪ್ರದೇಶ ಬಹಳಷ್ಟು ಹಾನಿಯಾಗಿದೆ. ಮೀನುಗಾರರ ಮನೆ ಮತ್ತು ಬದುಕನ್ನು ರಕ್ಷಿಸುವ ನಿಟ್ಟಿನಲ್ಲಿ ಕಡಲ್ಕೊರೆತದಿಂದ ನಷ್ಟ ಉಂಟಾಗಿರುವ ತೀರ ಪ್ರದೇಶವನ್ನು ರಕ್ಷಿಸಲು ಕಲ್ಲಿನ ತಡೆಗೋಡೆ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂಜಿನಿ ಯರ್ಗೆ ಮನವಿ ಮಾಡಿದರು. ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೇಸಿಐ ಕುಂದಾಪುರ ಇವರ ಪ್ರಾಯೋಜಕತ್ವದಲ್ಲಿ ನೂತನವಾಗಿ ರಚನೆಗೊಂಡ ಜೇಸಿಐ ಗಂಗೊಳ್ಳಿಯ ಸ್ಥಾಪಕ ಅಧ್ಯಕ್ಷರಾಗಿ ರೋಶನ್ ಖಾರ್ವಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಹೀರ್ ಅಹಮ್ಮದ್, ಕಾರ್ಯದರ್ಶಿಯಾಗಿ ನಾಗರಾಜ್ ಖಾರ್ವಿ ಜಿಎಫ್ಸಿಎಸ್, ಜತೆ ಕಾರ್ಯದರ್ಶಿಯಾಗಿ ಮಡಿ ಚೇತನ ಖಾರ್ವಿ, ಕೋಶಾಧಿಕಾರಿಯಾಗಿ ಮಡಿ ಗೋಪಾಲ ಖಾರ್ವಿ, ಜತೆ ಕೋಶಾಧಿಕಾರಿಯಾಗಿ ಸುರೇಶ ಆಚಾರ್ಯ ನಾಯಕವಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂದೀಪ ಖಾರ್ವಿ ತ್ರಾಸಿ, ಮಹಮ್ಮದ್ ಹುಸೇನ್ ಗಂಗೊಳ್ಳಿ, ಸಂದೀಪ ನಾರಾಯಣ ಖಾರ್ವಿ, ಗಿರೀಶ್ ಎಸ್.ಖಾರ್ವಿ, ಅಭಿಜಿತ್ ಗಂಗೊಳ್ಳಿ, ಜಯಂತ್ ಶೇರುಗಾರ್ ಗಂಗೊಳ್ಳಿ, ನೇತ್ರಾ ಖಾರ್ವಿ, ಆಕಾಶ್ ಗಂಗೊಳ್ಳಿ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಂಗಳೂರು ಗ್ರಾಮದ ಶ್ರೀನಿವಾಸ ಅವರ ಪುತ್ರ ಶರತ್ (35) ಅವರು ಮಲಗಿದಲ್ಲೇ ಮೃತಪಟ್ಟಿದ್ದಾರೆ. ಜೂ. 23ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದವರು ಜೂ. 24ರಂದು ಬೆಳಗಿನ ಜಾವ ಶರತ್ ತನಗೆ ಎದೆ ನೋವು ಬರುತ್ತಿದೆ ಎಂದು ಹೇಳಿ ವಾಂತಿ ಮಾಡಿಕೊಂಡರು. ಕೂಡಲೇಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಶರತ್ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಕುಂದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮಾದಕ ವ್ಯಸನ ಜಾಗೃತಿ ಸಮಿತಿಯಿಂದ ’ವಿಶ್ವ ತಂಬಾಕು ರಹಿತ ದಿನದ’ಅಂಗವಾಗಿ ಕಾನೂನಿನ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ವಿಎಸ್ ಆಚಾರ್ಯ ಸಭಾ ಭವನದಲ್ಲಿ ಬುಧವಾರ ನಡೆಯಿತು. ಮೂಡುಬಿದಿರೆ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲೇಜಿನಲ್ಲಿ ಓದುವ ವಯಸ್ಸಿನಲ್ಲಿ ಕುತೂಹಲಕ್ಕಾಗಿ ಸಿಗರೇಟ್ನಿಂದ ಆರಂಭವಾಗುವ ಚಟಗಳು ನಿಧಾನವಾಗಿ ಮಾದಕವ್ಯಸನಗಳ ಜಾಲದಲ್ಲಿ ಬೀಳುವಂತೆ ಮಾಡುತ್ತದೆ. ಮೊದಲು ಗ್ರಾಹಕನಾಗಿರುವ ವ್ಯಕ್ತಿ ನಂತರ ಹಣದ ಆಸೆಯಿಂದ ಮಾದಕದ್ರವ್ಯಗಳ ವ್ಯಾಪಾರಕ್ಕೆ ಇಳಿಯುತ್ತಾನೆ. ಸಮಾಜದಲ್ಲಿ ಇಂತಹ ಕೃತ್ಯಕ್ಕೆ ವಿದ್ಯಾರ್ಥಿಗಳನ್ನೇ ಬಲೆ ಬೀಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರವಿರಬೇಕು. ಮಕ್ಕಳ ಇಂತಹ ಕೃತ್ಯದಿಂದ ತಂದೆ ತಾಯಂದಿರು ಅವಮಾನ ಎದುರಿಸುವಂತಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಯಲ್ಲಿ ನಿರತರಾಗಿರುವುದು ಹಾಗೂ ಒಳ್ಳೆಯ ಗೆಳೆಯರ ಸ್ನೇಹ ಬೆಳೆಸುವುದು ಅಗತ್ಯ ಎಂದರು. ಮೊದಲ ಬಾರಿ ಡ್ರಗ್ಸ್ ಸೇವನೆ ಮಾಡಿದವರಿಗೆ ರೂ 10,000 ದಂಡ ಅಥವಾ 6 ತಿಂಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಇದರ 2025-26ನೇ ಸಾಲಿಗೆ ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರಾಮನಾಥ ಚಿತ್ತಾಲ್, ಉಪಾಧ್ಯಕ್ಷರಾಗಿ ಉದಯಶಂಕರ ರಾವ್, ಜತೆ ಕಾರ್ಯದರ್ಶಿಯಾಗಿ ಗೋಪಾಲ ಬಿಲ್ಲವ, ಖಜಾಂಚಿ ಜನಾರ್ದನ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಚಂದ್ರಕಲಾ ತಾಂಡೇಲ, ಕ್ಲಬ್ ಲರ್ನಿಂಗ್ ಫೆಸಿಲಿಟಿಸ್ ಎಚ್. ಗಣೇಶ ಕಾಮತ್, ಸಾರ್ಜಂಟ್ ಅಟ್ ಆರ್ಮ್ಸ್ ಬಿ. ಲಕ್ಷ್ಮೀಕಾಂತ ಮಡಿವಾಳ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಮಾಲಾಶ್ರೀ ಖಾರ್ವಿ, ವೊಕೆಶನಲ್ ಸರ್ವಿಸ್ ಗಿರೀಶ್ ಖಾರ್ವಿ, ಕಮ್ಯುನಿಟಿ ಸರ್ವಿಸ್ ರಾಮನಾಥ ನಾಯಕ್, ಇಂಟರ್ ನ್ಯಾಶನಲ್ ಸರ್ವಿಸ್ ರಾಘವೇಂದ್ರ ಮೇಸ್ತ, ಯೂತ್ ಸರ್ವಿಸ್ ಸುಗುಣ ಆರ್.ಕೆ., ಚೇರ್ಮೆನ್ಗಳಾಗಿ ಉಮೇಶ ಮೇಸ್ತ, ರಾಜೇಶ ಎಂ.ಜಿ., ದಿನಕರ ಶೆಣೈ ಟಿ., ಪ್ರದೀಪ್ ಡಿ.ಕೆ., ನಾಗೇಂದ್ರ ಪೈ, ವಾಸುದೇವ ಶೇರುಗಾರ್, ನಾರಾಯಣ ಇ.ನಾಯ್ಕ್ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರವೇಶ ಪರೀಕ್ಷೆಯಾದ IISER Aptitude Test (ಐಎಟಿ –2025) ಫಲಿತಾಂಶವನ್ನು ಜೂ. 24 ರಂದು ಪ್ರಕಟಿಸಲಾಗಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ವಿಜ್ಞಾನ ಕ್ಷೇತ್ರದ ಈ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿ ಮೋಹಿತ್ ಎಂ. ಅವರು ರಾಷ್ಟ್ರಮಟ್ಟದಲ್ಲಿ 4ನೇ ರ್ಯಾಂಕ್ (ಕೆಟಗರಿ ವಿಭಾಗದಲ್ಲಿ) ಜನರಲ್ ಮೆರಿಟ್ ನಲ್ಲಿ 1845ನೇ ರ್ಯಾಂಕ್ ಗಳಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ (ಐಐಎಸ್ಇಆರ್) ಪ್ರವೇಶ ಪರೀಕ್ಷೆಯಲ್ಲಿ ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಮೋಹಿತ್ ಅವರ ಸಾಧನೆ ಸಂತೋಷದ ಸಂಗತಿಯಾಗಿದೆ. ಉಳಿದಂತೆ ಎಂ. ಮಂಜುನಾಥ್ 1457, ಚೇತನ್ ಗೌಡ ಎನ್.ಎಸ್. 1718 ( ಕೆಟಗರಿ ರ್ಯಾಂಕ್ 314 ), ತೇಜಸ್ ವಿ. ನಾಯಕ್ 2423 ( ಕೆಟಗರಿ ರ್ಯಾಂಕ್ 460), ಶ್ರೀರಕ್ಷಾ 3127, ವೀರೇಂದ್ರ ಮುಟ್ಟೂರು 3960, ಹರ್ಷಿತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪಾಲಕ/ಪೋಷಕರಿಗಾಗಿ ಓರಿಯೆಂಟೇಶನ್ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಈ ಸಂದರ್ಭದಲ್ಲಿ ಐ.ಸಿ.ಎಸ್.ಇ ಪಠ್ಯಕ್ರಮ, ಪರೀಕ್ಷೆಗಳು, ವಿದ್ಯಾರ್ಥಿಗಳ ಮನೆಗೆಲಸ, ವಿದ್ಯಾರ್ಥಿಗಳ ವರ್ತನೆ ಮತ್ತು ದಿನಚರಿಯ ಕುರಿತು ಶಿಕ್ಷಕಿಯರಾದ ಶ್ರುತಿ, ಫರ್ನಾಜ್, ದೀಪಿಕಾ ಮತ್ತು ಜ್ಯೋತಿ ಜಿ. ಅವರು ಸಂಪೂರ್ಣವಾದ ಮಾಹಿತಿಯನ್ನು ಪಾಲಕರಿಗೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಅವರು ತಮ್ಮ ನುಡಿಯಲ್ಲಿ ‘ಪೋಷಕರು ಮತ್ತು ಶಾಲೆ ಒಟ್ಟಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಮಕ್ಕಳ ನಿಜವಾದ ಬೆಳವಣಿಗೆ ಸಾಧ್ಯ’ ಎನ್ನುತ್ತಾ ಪಾಲಕ/ಪೋಷಕರ ಶ್ರದ್ಧೆ ಮತ್ತು ಉತ್ಸುಕತೆಯನ್ನು ಶ್ಲಾಘಿಸಿದರು. ಮಕ್ಕಳಿಗೆ ನಾವೇ ಮಾದರಿಯಾಗಿ ಹೇಗೆ ಮಾರ್ಗದರ್ಶನ ಮಾಡಬಹುದೆಂಬುದರ ಬಗ್ಗೆ ಹೇಳುತ್ತಾ ಅವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದರು. ವೇದಿಕೆಯಲ್ಲಿ ಆಡಳಿತಾಧಿಕಾರಿಯವರಾದ ವೀಣಾರಶ್ಮಿ ಎಂ., ಉಪಪ್ರಾಂಶುಪಾಲರಾದ ರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಹಾಗೂ ಸಿಖ್ ಸಮುದಾಯದ ವಿದ್ಯಾರ್ಥಿಗಳಿಂದ ವಿದೇಶಿ ವಿದ್ಯಾರ್ಥಿವೇತನ ಸೌಲಭ್ಯ ಪಡೆಯಲು ಸೇವಾಸಿಂಧು ತಂತ್ರಾಂಶ https://sevasindhu.karnataka.gov.in/sevasindhu/DepartmentService ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: 8277799990 ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಅಲೆವೂರು ರಸ್ತೆ, ಮಣಿಪಾಲ ದೂ.ಸಂಖ್ಯೆ: 0820-2573596 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
