Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಅವರು ಕುಟುಂಬ ಸಮೇತರಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದರು. ದೇವರ ದರ್ಶನ ಹಾಗೂ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ವಾಮೀಜಿದ್ವಯರ ಪುತ್ಥಳಿಯ ದರ್ಶನ ಪಡೆದ ಅವರು, ಪುರುಷೋತ್ತಮ ಮಾಸದ ಅಂಗವಾಗಿ ದೇವಸ್ಥಾನದಲ್ಲಿ ನಡೆಯುತ್ತಿರುವ ಮಾಸಾವಧಿ ಅಖಂಡ ಭಜನಾ ಮಹೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. ದೇವಳದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ಮತ್ತು ಜಿ. ಶಂಕರ ಕೆ. ಆಚಾರ್ಯ ಅವರು ನ್ಯಾಯಾಧೀಶರನ್ನು ಪ್ರಸಾದ ನೀಡಿ ಗೌರವಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಏಪ್ರಿಲ್ 23 ಮತ್ತು 24 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಇಂಜಿನಿಯರಿಂಗ್ ವಿಭಾಗದಲ್ಲಿ  ನಾಗದೇವ್‌ ಎಂ. ಜಿ 28 ನೇ ರ‍್ಯಾಂಕ್ ಪಡೆದುಕೊಂಡು ಅದ್ಭುತ ಸಾಧನೆಗೈದಿದ್ದಾರೆ. ಮಾತ್ರವಲ್ಲದೆ ವಿದ್ಯಾರ್ಥಿಗಳಾದ ಸಂವಿತ್‌ ಅಮಿತ್‌ 55, ಧ್ರುವ ವಿ ಬಿ 71, ತೇಜಸ್‌ ಆರ್‌ ಬಿ 82, ನಮಿತ್‌ ಕೆ ಹೆಗಡೆ 199, ತೇಜಸ್‌ ಹೆಗಡೆ ಹೆಚ್‌ ಡಿ 236, ಸುಕ್ಷೀತ್‌ ಗಿರೀಶ್‌ ಗೌಡ 238, ನಿನಾದ್‌ ರಾಜೇಶ್‌ ನಾಯ್ಕ್‌ 395, ಪ್ರಣಮ್ಯಾ ಭಟ್‌ 490, ಲೇಖನ್‌ ಕಾರಿಯಪ್ಪ 493, ಧನುಷ್‌ ಹೆಚ್‌ ಎ 496 ರ‍್ಯಾಂಕ್ ಗಳಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 22 ವಿದ್ಯಾರ್ಥಿಗಳು 1000 ರ‍್ಯಾಂಕ್ನೊಳಗೆ, 43 ವಿದ್ಯಾರ್ಥಿಗಳು 2000 ರ‍್ಯಾಂಕ್ನೊಳಗೆ ಇದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಕೃಷಿ ವಿಭಾಗದಲ್ಲಿ ಧ್ರುವ ವಿ ಬಿ 11,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಭಾರತೀಯ ಸಾಂಸ್ಕೃತಿಕ ಸಂಬAಧಗಳ ಪರಿಷತ್ (ಐಸಿಸಿಆರ್) ಹಾಗೂ ಕರ್ನಾಟಕ ಸರ್ಕಾರದ ನಡುವೆ ಸಂಸ್ಕೃತಿ, ಕಲೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದ್ದು, ಸಂಸ್ಥೆಯ ವತಿಯಿಂದ ಕಲಾತಂಡಗಳು ಹಾಗೂ ಕಲಾವಿದರನ್ನು ಎಂಪಾನೆಲ್ ಮಾಡುವ ಜೊತೆಗೆ ಅವರ ಪ್ರತಿಭೆಯನ್ನು ಹೆಚ್ಚು ಪ್ರಚರಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಸಾಂಸ್ಕೃತಿಕ ಕಲಾತಂಡಗಳು, ಅಂತರರಾಷ್ಟಿçÃಯ ಮಟ್ಟದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಉತ್ಸವ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಕಲಾವಿದರು ಹಾಗೂ ಕಲಾತಂಡಗಳು ಜೂನ್ 12 ರ ಒಳಗಾಗಿ ವೆಬ್‌ಸೈಟ್ www.kannadasiri.karnataka.gov.in ಅರ್ಜಿಯನ್ನು ಪಡೆದು, ಅವುಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಆಯಾ ಜಿಲ್ಲಾ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪ್ರಸ್ತುತ ತಾಪಮಾನಕ್ಕೆ ಇಡೀ ಮನುಕುಲ ಕಂಗೆಟ್ಟು ಕೂರುವಂತ್ತಾಗಿದೆ ಇದಕ್ಕೆ ಕಾರಣಿಕರ್ತರು ನಾವುಗಳೆ ಏಕೆಂದರೆ ಕಾಡು ಕಡಿದು ನಾಡು ಮಾಡುವ ತವಕದಲ್ಲಿ ಹಸಿರನ್ನೆ ಮರೆತುಬಿಟ್ಟದ್ದೇವೆ. ಈ ದಿಸೆಯಲ್ಲಿ ಪ್ರತಿ ಭಾಗದಲ್ಲೂ ಹಸಿರು ಅಭಿಯಾನಗಳು ರೂಪುಗೊಳ್ಳಬೇಕು ತನ್ಮೂಲಕ ವಾತಾವರಣ ವೈಪರೀತ್ಯಗಳನ್ನು ತಡೆಯುವ ಕಾರ್ಯ ಮಾಡಬೇಕಿದೆ ಎಂದು ಸಾಮಾಜಿಕ ಚಿಂತಕ ಋಷಿರಾಜ್ ಸಾಸ್ತಾನ ನುಡಿದರು. ಅವರು ಪರಿಸರಪ್ರೇಮಿ ಕೊರವಡಿ ಶ್ವೇತ ಶ್ರೀನಿಧಿ ಉಪಾಧ್ಯಾಯರ ಮನೆಯಂಗಳದಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪೇತ್ರಿ ಅನ್ನಪೂರ್ಣ ನರ್ಸರಿ,ಗೀತಾನಂದ ಫೌಂಡೇಶನ್ ಮಣೂರು,ಸುವರ್ಣ ಎಂಟರ್ಪ್ರೈಸಸ್ ಸಹಯೋಗದೊಂದಿಗೆ ಹಸಿರು ಹೆಜ್ಜೆ ಹಸಿರು ಉಸಿರಿನ ಹೆಜ್ಜೆಯ ಪಥ, ಪಂಚವರ್ಣದ ಪ್ರಕೃತಿ ರಥ ಶೀರ್ಷಿಕೆಯಡಿ ೩೦೪ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿ ಪಂಚವರ್ಣದ ಪ್ರಕೃತಿ ಆರಾಧನೆ ಅತ್ಯಂತ ಮುಕ್ತ ಕಂಠದಿಂದ ಶ್ಲಾಘಿಸಿದರು. ಪರಿಸರ ಪ್ರೇಮಿ ಉಪಾಧ್ಯಾ ಮನೆತನಕ್ಕೆ ಸರ್ಮಪಣೆ:ಪಂಚವರ್ಣದ ಹಸಿರು ಹೆಜ್ಜೆ ಮೂರು ತಿಂಗಳುಗಳ ಕಾಲ  ಕುಂದಾಪುರ ಹಾಗೂ ಬ್ರಹ್ಮಾವರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ನಡೆಸಿದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಯು ಜಿ ಸಿ ಇ ಟಿ) ಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಭವಿಷ್ ಜಯರಾಜ್ ಹೆಗ್ಡೆ – 2133  (ಇಂಜಿನಿಯರಿಂಗ್) , ವಸಂತ್ ಭಟ್- 2313 (ಇಂಜಿನಿಯರಿಂಗ್), ಸೃಜನ್ ಎಸ್. ಪೂಜಾರಿ -2513 (ಇಂಜಿನಿಯರಿಂಗ್), 1015 ( ಬಿ. ಎಸ್ಸಿ ಅಗ್ರಿಕಲ್ಚರ್) ತರುಣ್ ಎನ್. ಶೆಟ್ಟಿ – 2568  (ಇಂಜಿನಿಯರಿಂಗ್), ಸಮರ್ಪಿತ್ ಸುಧಾಕರ್ -2798 (ಇಂಜಿನಿಯರಿಂಗ್),ಅಕ್ಷಯ್ ಅಶ್ವಿನ್ ಪೈ – 3773 (ಇಂಜಿನಿಯರಿಂಗ್), ವೈಷ್ಣವಿ – 4136 (ಇಂಜಿನಿಯರಿಂಗ್)1491(ಬಿ. ಎಸ್ಸಿ ಅಗ್ರಿಕಲ್ಚರ್ ) ಧನ್ವಿ  ಪೈ -4393  (ಇಂಜಿನಿಯರಿಂಗ್), ಕಿಶನ್ – 4603 (ಇಂಜಿನಿಯರಿಂಗ್) ತರುಣ್ ಪ್ರಭು -4856 (ಇಂಜಿನಿಯರಿಂಗ್), ಇಂಚರ ಸಿ. ಪೂಜಾರಿ – 5594 (ಇಂಜಿನಿಯರಿಂಗ್), ಶ್ರೀರಕ್ಷಾ ಶೆಣೈ -5858 (ಇಂಜಿನಿಯರಿಂಗ್), ಪ್ರತಿಕ್ಷಿತಾ -6020 (ಇಂಜಿನಿಯರಿಂಗ್), ವೈಭವ್ ಮೆಲಡಿ 6145(ಇಂಜಿನಿಯರಿಂಗ್), ಪ್ರಥಮ್ ಕಾಮತ್ -…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರುಣ್ ಕುಮಾರ್ ದಂಡಾವತಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಅವರು “Synthesis, Characterization and Nonlinear Optical Properties of Some New Terphenyl Derivatives” ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧವನ್ನು ಸಲ್ಲಿಸಿದ್ದು, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಂಶುದ್ದೀನ್ ಸೆರಂತಿಮಠರವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಅರುಣ್ ಕುಮಾರ್ ದಂಡಾವತಿಯವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಗಳಾದ ಫ್ರಾನ್ಸಿಸ್ ಹಾಗೂ ರತ್ನಮ್ಮ ದಂಪತಿಯ ಹಿರಿಯ ಪುತ್ರ. ಇವರ ಈ ಶೈಕ್ಷಣಿಕ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕತಾರ್: ಜಾಗತಿಕ ಪರಿಸರ ಕಾಳಜಿ ಹಾಗೂ ಸಮುದಾಯದ ಸಹಭಾಗಿತ್ವಕ್ಕೆ ಸಾಕ್ಷಿಯಾಗಿ, ಕತಾರ್‌ನ ಪುರಸಭೆ ಸಚಿವಾಲಯದ ಸಾರ್ವಜನಿಕ ಉದ್ಯಾನವನಗಳ ಇಲಾಖೆ ಹಾಗೂ ದೋಹಾ ಪುರಸಭೆ ಸಹಯೋಗದೊಂದಿಗೆ, ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಘ ಕತಾರ್ (ಕೆಎಸ್‌ಕ್ಯೂ) ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಳೇ ಏರ್‌ಪೋರ್ಟ್ ಉದ್ಯಾನದಲ್ಲಿ ಬೃಹತ್ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.ಪ್ರಕೃತಿಯ ರಕ್ಷಣೆ ನಮ್ಮ ಹೊಣೆ:‘ನಾವು ಪ್ರಕೃತಿಯನ್ನು ರಕ್ಷಿಸೋಣ, ಏಕೆಂದರೆ ಪ್ರಕೃತಿ ನಮ್ಮನ್ನು ರಕ್ಷಿಸಿದೆ’ ಎಂಬ ಉದಾತ್ತ ಧ್ಯೇಯವಾಕ್ಯದೊಂದಿಗೆ ಬೆಳಗ್ಗೆ 7:30 ಕ್ಕೆ ಅಭಿಯಾನ ಆರಂಭವಾಯಿತು. ರಾಜತಾಂತ್ರಿಕ ಗಣ್ಯರು, ಪುರಸಭೆ ಮುಖಂಡರು ಹಾಗೂ ಅನಿವಾಸಿ ಭಾರತೀಯ ಸಮುದಾಯದ ನೂರಾರು ಉತ್ಸಾಹಿ ಸದಸ್ಯರು ಸುಸ್ಥಿರ ನಗರಾಭಿವೃದ್ಧಿ ಮತ್ತು ಪರಿಸರ ಜಾಗೃತಿಯ ಸಂಕಲ್ಪದೊಂದಿಗೆ ಈ ಹಸಿರು ಅಭಿಯಾನದಲ್ಲಿ ಕೈಜೋಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕತಾರ್‌ಗೆ ಭಾರತದ ರಾಯಭಾರಿ ಘನತೆವೆತ್ತ ವಿಪುಲ್ ಮತ್ತು ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ (ಡಿಸಿಎಂ) ಸಂದೀಪ್ ಕುಮಾರ್ ಉಪಸ್ಥಿತರಿದ್ದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗೆ ಪ್ರಕಟಗೊಂಡ ರಾಜ್ಯಮಟ್ಟದ ಕೆ.ಸಿ.ಇ.ಟಿ (KCET) ಪರೀಕ್ಷೆಯಲ್ಲಿ ಕುಂದಾಪುರದ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆಯುವ ಮೂಲಕ ಸಂಸ್ಥೆಗೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಏಪ್ರಿಲ್ 23 ಮತ್ತು 24 ರಂದು ನಡೆದ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಜ್ಯಮಟ್ಟದ ಸಿಇಟಿ ಪರೀಕ್ಷೆಯಲ್ಲಿ ಸುಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸುಜ್ಞಾನ ನೀಟ್‌ ಅಕಾಡೆಮಿಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಧನುಷ್‌ ದೇವಾಡಿಗ(ಎನ್‌ ಎಲ್‌ ಟಿ) ರಾಜ್ಯಮಟ್ಟದಲ್ಲಿ 391ನೇ ರ‍್ಯಾಂಕ್, ಇಂಚರಾ 616ನೇ ರ‍್ಯಾಂಕ್, ಸಮ್ಮೆದ ಪಾರೀಸ್‌  888ನೇ ರ‍್ಯಾಂಕ್, ಪ್ರಿಯಾಂಕ ಶೆಟ್ಟಿ 2680ನೇ ರ‍್ಯಾಂಕ್, ಸೃಷ್ಟಿ ಶಿವಾಜಿ 3345ನೇ ರ‍್ಯಾಂಕ್, ಸಿಂಚನಾ  4731ನೇ,  ರಜತ್‌ ಅಡಿಗ 5389ನೇ, ಕೌಶಿಕ್‌ ಶೆಟ್ಟಿ 6093, ಜಯರಾಜ್‌ ಜೆ.ಎಸ್‌ 6166, ಪೃಥ್ವಿಕ್‌ 5357ನೇ ರ್ಯಾಂಕ್‌ ಎಂಬ ವಿದ್ಯಾರ್ಥಿಗಳು ಹತ್ತು ಸಾವಿರ ಒಳಗಡೆ ರ‍್ಯಾಂಕ್ ಗಳಿಸಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಮಣೂರು ಪಡುಕರೆಯ ಗೀತಾನಂದ ಫೌಂಡೇಶನ್  ವತಿಯಿಂದ ಮಣೂರು-ಪಡುಕರೆಯ ಕೆ.ಸಿ. ಕುಂದರ್ ಸ್ಮರಣಾರ್ಥ  ಆನಂದೋತ್ಸವ ಕಾರ್ಯಕ್ರಮವು ಶನಿವಾರ ಮಣೂರು ಪಡುಕರೆ ಗೀತಾನಂದ ವೇದಿಕೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ನಾಡೋಜ ಫ್ಯಾಮಿಲಿ ಟ್ರಸ್ಟ್ ಮುಖ್ಯಸ್ಥ ಡಾ. ಜಿ. ಶಂಕರ್ ಉದ್ಘಾಟಿಸಿ ಶುಭ ಹಾರೈಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೋಟ್ ಬುಕ್ ಹಸ್ತಾಂತರಿಸಿ ಮಾತನಾಡಿ, ಆನಂದ್ ಸಿ. ಕುಂದರ್ ಈ ಸಮಾಜದ ಆಸ್ತಿಯಾಗಿ ಕರಾವಳಿ ಕಡಲ ತಟವನ್ನು ಶಿಕ್ಷಣ ಕಾಶಿಯಾಗಿಸಿದ್ದಾರೆ, ತನ್ನ ದುಡಿಮೆಯ ಹಣದಲ್ಲಿ ಸಮಾಜಕ್ಕಾಗಿ ಧಾರೆ ಎರೆಯುವ ಕುಂದರ್ ಅವರ ಸಾಮಾಜಿಕ ಬದ್ಧತೆಯನ್ನು ಸಭೆಯಲ್ಲಿ ಕೊಂಡಾಡಿದರಲ್ಲದೆ ಪ್ರಸ್ತುತ ಅಳಿವಿನಂಚಿನಲ್ಲಿರುವ ಸರಕಾರಿ ಶಾಲೆಗಳಿಗೆ ಜೀವ ತುಂಬಿ ಪಡುಕರೆ ಎಂಬ ಗ್ರಾಮೀಣ ಭಾಗದ ಶಾಲೆಯನ್ನು ರಾಜ್ಯದಲ್ಲೆ ಮಾದರಿಯಾಗಿಸಿದ  ಆನಂದ್ ಸಿ ಕುಂದರ್ ಬಡವರ ಕಣ್ಣಿರೊರೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದರು. ಮಾಜಿ ಸಚಿವ ಕೆ. ಜಯ್ರಕಾಶ್ ಹೆಗ್ಡೆ ಪರಿಸರ ಪಾಠ ಸಭೆಯಲ್ಲಿ ಗೀತಾನಂದದ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿ, ಮಕ್ಕಳಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ನ್ಯಾಷನಲ್ ಹೈಸ್ಕೂಲು ಬಾರ್ಕೂರು ಹಾಗೂ ರೋಟರಿ ಕ್ಲಬ್ ಬಾರ್ಕೂರು (RI ಜಿಲ್ಲೆ 3182) ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಶೈಲಿಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದ ಮುಖ್ಯ ಆಯೋಜಕರಾದ ರೋಟೇರಿಯನ್ P.H.F. ಎ. ರತ್ನಾಕರ ಶೆಟ್ಟಿ ಅವರು ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಪದ್ಧತಿಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ” ಎಂದು ಒತ್ತಿ ಹೇಳಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇತಾಲ್ಕರ್ ಅವರು ಮಾತನಾಡಿ, ಪ್ರಕೃತಿಯನ್ನು ಉಳಿಸುವಲ್ಲಿ ಮತ್ತು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಿಡುವಲ್ಲಿ ವಿದ್ಯಾರ್ಥಿಗಳು ವಹಿಸಬಹುದಾದ ಮಹತ್ತರ ಪಾತ್ರದ ಕುರಿತು ಅಮೂಲ್ಯವಾದ ಮಾಹಿತಿ ಹಾಗೂ ಮಾರ್ಗದರ್ಶನ…

Read More