Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಅಗ್ನಿಪಥ್ ಯೋಜನೆಯಡಿ ಪ್ರಸಕ್ತ ಸಾಲಿನ ಅಗ್ನಿವೀರ್ ಇನ್‌ಟೇಕ್ ನೇಮಕಾತಿ ಪರೀಕ್ಷೆಗೆ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಜಿಲ್ಲೆಯ ಯುವಕರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಆನ್‌ಲೈನ್ ನೋಂದಣಿಗೆ ಏಪ್ರಿಲ್ 10 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.joinindianarmy.nic.in ಸಹಾಯವಾಣಿ ಸಂಖ್ಯೆ: 0824-2951279, ಎ.ಆರ್.ಓ ಮೊ.ನಂ: 9805505538 ಅಥವಾ ಮಂಗಳೂರು ಸೇನಾ ನೇಮಕಾತಿ ಕಚೇರಿ/ ಸೈನಿಕ ಮಂಡಳಿ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮುಹಿಯುದೀನ್ ಜುಮಾ ಮಸ್ಜಿದ್ ಹೆನ್ನಾಬೈಲ್ ಇಲ್ಲಿಯ ಈದ್ಗಾ ಮೈದಾನದಲ್ಲಿ ಈದುಲ್ ಫಿತರ್ ಪ್ರಾರ್ಥನೆ ನೆರವೇರಿಸಿ, ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ಕೋರಿದರು. ಪ್ರಾರ್ಥನೆಯ ನೇತೃತ್ವ ವಹಿಸಿದ ಧರ್ಮಗುರು ಮೌಲಾನಾ ಮುಹಮ್ಮದ್ ಹಫೀಜ್ ರಜ್ವಿ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಂಜಾನ್ ಇಸ್ಲಾಮಿಕ್ ಧಾರ್ಮಿಕತೆಯ ಅತ್ಯಂತ ಕ್ರಿಯಾಶೀಲ ಮಾಸ. ಉಪವಾಸ, ಗ್ರಂಥ ಪಾರಾಯಣ, ದಾನ, ಆರಾಧನೆಯ ಪರಮೋಚ್ಚ ಅಭಿವ್ಯಕ್ತಿ. ಈ ಅಭಿವ್ಯಕ್ತಿಯಿಂದಲೇ ಮನುಷ್ಯನೊಬ್ಬನ ವ್ಯಕ್ತಿತ್ವ ಮತ್ತು ಭಕ್ತಿ ಪರಿಪೂರ್ಣಗೊಳ್ಳುತ್ತದೆ. ಇಂದು ಜಗತ್ತು ದೈಹಿಕ ಮತ್ತು ಮಾನಸಿಕವಾಗಿ ಹಿಂದೆಂದಿಗಿಂತ ಹೆಚ್ಚು ರೋಗಗ್ರಸ್ತವಾಗಿರಲು ಧಾರ್ಮಿಕತೆಯಿಂದ ದೂರ ಸರಿದದ್ದೇ ಮುಖ್ಯ ಕಾರಣ. ಪ್ರಸ್ತುತ ಜಗತ್ತಿನಲ್ಲಿ ಸ್ವಾರ್ಥಕ್ಕಾಗಿ ಧರ್ಮ ರಾಜಕೀಯದಲ್ಲಿದೆ ಬಿಟ್ಟರೆ ನೈಜ ಆಚರಣೆ ಮತ್ತು ಅಳವಡಿಕೆಯಲ್ಲಿ ಇಲ್ಲ. ಧರ್ಮದ ಆಚರಣೆ ಸೂಕ್ತ ಮತ್ತು ಸದೃಢವಾಗಿ ಜೀವಪರವಾಗಿ ಕಾಣಿಸದೆ ಇದ್ದಾಗ ಧರ್ಮದ ವಿಚಾರಗಳ ಮೇಲೆ ಅಪಚಾರ ಮತ್ತು ಅಪಪ್ರಚಾರಗಳು ನಡೆಯುತ್ತವೆ. ಹೀಗಾಗಿ, ಧಾರ್ಮಿಕರಾದವರು ಧರ್ಮವನ್ನು ಸರಿಯಾಗಿ ಪ್ರತಿನಿಧಿಸುವ ಮತ್ತು ಆಚರಿಸುವ ಮಹತ್ವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಮಯ 1997 ರ ಕಲಂ 25 ರನ್ವಯ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಗೆ ಸೇರಿದ ಒಟ್ಟು 35 ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವರ್ಗ ಸಿ ದೇವಸ್ಥಾನಗಳ ವಿವರ:ಉಡುಪಿ ತಾಲೂಕಿನ ಉದ್ಯಾವರದ ದೇವಸ್ಥಾನಗಳಾದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನ, ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪೆರಂಪಳ್ಳಿ ಶಿವಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪೆರಂಪಳ್ಳಿಯ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಕಾಪು ತಾಲೂಕು ಕಟಪಾಡಿ ಚೊಕ್ಕಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಟ್ಟುವಿನ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಕಾರ್ಕಳ ತಾಲೂಕು ಬೈಲೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮರ್ಣೆಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಎರ್ಲಪಾಡಿಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದದ ತಾರಾಪತಿ ಕಡಲ ಕಿನಾರೆಯಲ್ಲಿ ಕಳೆದ 50 ದಿನಗಳಿಂದ ಕಡಲಾಮೆಗಳ ಮೊಟ್ಟೆ ಸಂರಕ್ಷಣೆ ಕಾರ್ಯ ನಡೆಯುತ್ತಿದ್ದು, ಹ್ಯಾಚರಿಯಲ್ಲಿ ಸೋಮವಾರ ಮುಂಜಾನೆಯಿಂದ ಮೊಟ್ಟೆಗಳು ಒಡೆದು 100ಕ್ಕೂ ಅಧಿಕ ಮರಿಗಳು ಹೊರಬಂದು ಕಡಲು ಸೇರಿವೆ. ತಾರಾಪತಿಯಲ್ಲಿ ನಿರ್ಮಿಸಲಾದ ಎರಡು ಹ್ಯಾಚರಿಗಳ ಪೈಕಿ ಒಂದರಲ್ಲಿ ಕಳೆದ ವಾರ 85 ಮರಿಗಳು, ಉಳಿದಂತೆ ಕೊನೆಯ ಹ್ಯಾಚರಿಯಲ್ಲಿ ಸೋಮವಾರ ಮುಂಜಾನೆ 105 ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ ಕಡಲು ಸೇರಿದ್ದವು. ಮರವಂತೆಯಲ್ಲಿ ಒಂದು ಹ್ಯಾಚರಿಯಿಂದ 2 ವಾರಗಳ ಹಿಂದೆ 115 ಮರಿಗಳು ಸಮುದ್ರ ಸೇರಿದ್ದವು. ಒಟ್ಟು 3 ಹ್ಯಾಚರಿಗಳಿಂದ 300ಕ್ಕೂ ಅಧಿಕ ಕಡಲಾಮೆ ಮರಿಗಳು ನೈಸರ್ಗಿಕವಾಗಿ ಕಡಲು ಸೇರಲು ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಮೀನುಗಾರರು ಒಗ್ಗೂಡಿ ಅನುವು ಮಾಡಿಕೊಟ್ಟರು. ಜನವರಿ ತಿಂಗಳ ಅಂತ್ಯದಲ್ಲಿ ಮರವಂತೆ, ತಾರಾಪತಿ ಕಡಲ ತೀರದಲ್ಲಿ ಕಡಲಾಮೆಗಳು ಮೊಟ್ಟೆಗಳನ್ನಿಟ್ಟಿದ್ದವು. ಸ್ಥಳೀಯರ ಮಾಹಿತಿಯಂತೆ ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳು ಮುತುವರ್ಜಿ ವಹಿಸಿ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳನ್ನು ಅಲ್ಲಲ್ಲೇ ನೈಸರ್ಗಿಕವಾಗಿ ಹ್ಯಾಚರಿ ನಿರ್ಮಿಸುವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ರೈಲ್ವೆ ಓವರ್‌ ಬ್ರಿಜ್‌ ಬಳಿ ನಡೆದ ಅಪಘಾತದಲ್ಲಿ ಟ್ರಾಕ್‌ ಮೆನ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಬಿಜೂರು ಗ್ರಾಮದ ಆನಂದ ಪೂಜಾರಿ (43) ಅವರ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರೀಯಗೊಂಡು ಮೃತಪಟ್ಟ ಖೇದಕರ ಘಟನೆ ನಡೆದಿದೆ. ಮೂಡ್ಲಕಟ್ಟೆ ಕೊಂಕಣ್ ರೈಲ್ವೆ ಓವರ್‌ ಬ್ರಿಜ್‌ ಬಳಿಯಲ್ಲಿ ಹೈಟ್‌ ಗೇಜ್‌ ದುರಸ್ತಿ ನಡೆಯುತ್ತಿದ್ದ ಸಂದರ್ಭ, ಸೋಮವಾರ ಕರ್ತವ್ಯದಲ್ಲಿದ್ದ ಆನಂದ ಪೂಜಾರಿ ಅವರ ತಲೆಗೆ ಹೈಟ್‌ ಗೇಜ್‌ನ ಕಂಬಿ ತಾಕಿ ಕೆಳಕ್ಕೆ ಬಿದ್ದದ್ದರಿಂದ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಆನಂದ ಪೂಜಾರಿ ಅವರ ಮೆದುಳು ನಿಷ್ಕ್ರೀಯಗೊಂಡಿರುವ ಬಗ್ಗೆ ತಿಳಿಸಿದ್ದರು. ಎರಡು ದಿನದ ಬಳಿಕ ಅವರು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ಜನಾನುರಾಗಿ ಯುವಕ:ಬೈಂದೂರು ಬಿಲ್ಲವ ಸಂಘಟನೆ, ನಾರಾಯಣಗುರು ಕಲಾ ಮತ್ತು ಕ್ರೀಡಾ ಸಂಘ ಬಿಜೂರು, ಫ್ರೆಂಡ್ಸ್‌ ಕ್ಲಬ್‌ ಉಪ್ಪುಂದ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಆನಂದ ಪೂಜಾರಿ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಬೇಸಿಗೆ ಶಿಬಿರಕ್ಕಾಗಿ ಶಾಲೆಗೆ ತೆರಳಲು ರಸ್ತೆ ದಾಟುತ್ತಿದ್ದ ಬಾಲಕನಿಗೆ ಕುಂದಾಪುರ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆ ಎದುರಿನ ರಾಷ್ಟ್ರೀಯ ಹೆದ್ದಾರಿ 66 ಸಮೀಪ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತ ಬಾಲಕ ಸ್ಥಳೀಯ ಎಸ್ ಎಮ್ ಎಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ, ವಕ್ವಾಡಿ ಹೆಬ್ಬಾಗಿಲು ಮನೆ ಸಂತೋಷ್‌ ಶೆಟ್ಟಿ ಎಂಬುವರ ಪುತ್ರ ವಂಶಿ ಜಿ. ಶೆಟ್ಟಿ (14) ಎಂದು ಗುರುತಿಸಲಾಗಿದೆ. ಬಾಲಕ ವಂಶಿ ಜಿ. ಶೆಟ್ಟಿ ಶಾಲೆಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಕುಂದಾಪುರ ಭಾಗದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಬಾಲಕನಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮನುಷ್ಯನ ಬದುಕಿನಲ್ಲಿ ನೈತಿಕ ಮೌಲ್ಯಗಳು ಪ್ರಧಾನ ಭೂಮಿಕೆಯನ್ನು ವಹಿಸುತ್ತವೆ. ಮಾನವೀಯ ಮೌಲ್ಯಗಳಾದ ಶಾಂತಿ, ಪ್ರೀತಿ, ಪ್ರೇಮ, ಕರುಣೆ, ಅಹಿಂಸೆ, ಸಹಿಷ್ಣುತೆ ಮುಂತಾದ ಉತೃಷ್ಠ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜವನ್ನು ಕಟ್ಟಬಹುದಾಗಿದೆ. ವಿದ್ಯಾರ್ಥಿಗಳು ನೈತಿಕ ಮೌಲ್ಯಗಳ ಮಹಾಮೇರುಗಳಾಗಿ ಭವಿಷ್ಯದಲ್ಲಿ ವಿಜೃಂಭಿಸಲು ಕುವೆಂಪು ಸೃಜಿಸಿದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಓದು ಸಹಕಾರಿಯಾಗುತ್ತದೆಂದು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರವಿರಾಜ ಶೆಟ್ಟಿ ಹೇಳಿದರು. ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಕಾಲೇಜಿನ ಐಕ್ಯೂಎಸಿ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಅನಲೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಕರ್ತವ್ಯದಲ್ಲಿದ್ದಾಗ ಡಿ.24ರಂದು ಸೇನಾ ವಾಹನ ದುರಂತದಲ್ಲಿ ಹುತಾತ್ಮರಾದ ಯೋಧ ಅನೂಪ್ ಪೂಜಾರಿ ಅವರ ಕುಟುಂಬಕ್ಕೆ ಭಟ್ಕಳ ತಾಲೂಕು ಮಾಜಿ ಸೈನಿಕರ ಸಂಘದ ಮೂಲಕ ಭಟ್ಕಳದ ಮಾಜಿ ಸೈನಿಕರು ಹಾಗೂ ಸೇವಾನಿರತ ಸೈನಿಕರ ರೂ. 60,000ನೆರವು ನೀಡಿದರು. ಭಟ್ಕಳದ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಅವರ ನೇತೃತ್ವದಲ್ಲಿ ಮಾಜಿ ಸೈನಿಕ ಸಂಘದ ಸದಸ್ಯರಾದ ಹನುಮಂತ ನಾಯ್ಕ, ಕೇಶವ ನಾಯ್ಕ ಹಾಗೂ ಊರಿನ ಪ್ರಮುಖರಾದ ಭವಾನಿಶಂಕರ ನಾಯ್ಕ ಅವರು ಕುಂದಾಪುರದ ಬೀಜಾಡಿಯಲ್ಲಿನ ಹುತಾತ್ಮ ಸೈನಿಕ ಅನೂಪ್ ಪೂಜಾರಿಯವರ ನಿವಾಸಕ್ಕೆ ತೆರಳಿ ಅವರ ಧರ್ಮಪತ್ನಿ ಹಾಗೂ ಅವರ ತಾಯಿಯವರಿಗೆ ಸಾಂತ್ವನ ಹೇಳಿ, ತಲಾ 30 ಸಾವಿರದಂತೆ (ಒಟ್ಟೂ 60 ಸಾವಿರ) ಅವರ ಧರ್ಮಪತ್ನಿ ಹಾಗೂ ತಾಯಿಯವರಿಗೆ ಡಿ.ಡಿ. ಮೂಲಕ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಎಮ್ ಡಿ ಪಕ್ಕಿ ಅವರು ಪೋನ್ ಕರೆ ಮೂಲಕ ಅನೂಪ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ’ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳಿಗೆ ಕೊರತೆ ಇರದು. ಆದರೆ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ  ಉಪಯೋಗಿಸಿಕೊಳ್ಳುವ ಜಾಣ್ಮೆ ಪ್ರತಿಯೊಬ್ಬರಲ್ಲಿರಬೇಕು  ಎಂದು ದ.ಕ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ  ನುಡಿದರು. ಅವರು ಇಲ್ಲಿನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ವಿವಿಧ ವಿದ್ಯಾರ್ಥಿ ಘಟಕಗಳ ವಾರ್ಷಿಕ ದಿನಾಚರಣೆ ’ಇನಾಮು – 2025’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯುವಜನತೆ ತಮ್ಮ ಇಚ್ಛಾಶಕ್ತಿಯ ಸಾಮರ್ಥ್ಯವನ್ನು ಅರಿತು, ತಮ್ಮ ಗುರಿಯನ್ನು ತಲುಪುವಲ್ಲಿ ಕಾರ್ಯಪ್ರವೃತ್ತರಾಗಬೇಕು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಹಳ ಎತ್ತರಕ್ಕೆ ಬೆಳೆದು, ಎಲ್ಲರಿಗೂ ಮಾದರಿಯಾಗಿ ದೇಶಕ್ಕೆ ಹೆಮ್ಮೆ ತರುವ ಕಾರ್ಯ ನೆರವೇರಲಿ ಎಂದು ಆಶಿಸಿದರು. ವ್ಯಕ್ತಿತ್ವ ವಿಕಸನದಲ್ಲಿ ತರಗತಿ ಶಿಕ್ಷಣ ಒಂದು ಭಾಗವಷ್ಟು. ಅದನ್ನು ಹೊರತುಪಡಿಸಿ ಪಠ್ಯೇತರ ಚಟುವಟಿಕೆಗಳು ಸಾಕಷ್ಟಿವೆ. ಇಂತಹ ವಿಫುಲ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಆಳ್ವಾಸ್ ಕಲ್ಪಿಸುತ್ತಿರುವುದು ಶ್ಲಾಘಿನೀಯ. ಹಳೆ ವಿದ್ಯಾರ್ಥಿಗಳ ಪುನರ್ಮಿಲನದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಸ್ಥೆ ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಭಾಂದವ್ಯವನ್ನು ಬೆಸೆಯುವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ತಾಲೂಕಿನ ಆಜ್ರಿ ಗ್ರಾಮದ ನಿವಾಸಿ ಸುಶೀಲಾ (48) ಅವರು ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗ್ಗೆ8 ಗಂಟೆಗೆ ಮನೆಯಲ್ಲಿ ತಿಂಡಿ ತಿಂದು ಮನೆಯವರೊಂದಿಗೆ ಇದ್ದ ಅವರು ಮಧ್ಯಾಹ್ನ ಊಟ ಮುಗಿಸಿ ತಾನು ಸಂಘದಲ್ಲಿ ಸಾಲ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ನಂತರ ನಾಪತ್ತೆಯಾಗಿದ್ದರು. ಬಳಿಕ ಹುಡುಕಾಡಿದಾಗ ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂಘದಲ್ಲಿ ಮಾಡಿರುವ ಸಾಲ ತೀರಿಸಲಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಕೃತ್ಯ ಎಸಗಿದ್ದಾರೆ ಎಂದು ಪುತ್ರ ಪ್ರಶಾಂತ್ ದೂರು ನೀಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More