Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಒಂದು ಕಡೆಯಲ್ಲಿ ಬೆಳೆದ ಕೃಷಿಗೆ ಬೆಲೆಯಿಲ್ಲಾ, ಸೂಕ್ತ ಮಾರುಕಟ್ಟೆಯಿಲ್ಲಾ, ಮಧ್ಯವರ್ತಿಗಳ ಹಾವಳಿ, ಕಾಡುಪ್ರಾಣಿಗಳ ಹಾವಳಿ, ಆಗಾಗ ಕೈಕೊಡುವ ಮಳೆಗಾಲ, ವಿಪರೀತ ಬೇಸಗೆ, ಕೃಷಿ ಕೂಲಿ ಕಾರ್ಮಿಕರ ಕೊರತೆ, ಕೃಷಿ ಯಂತ್ರೋಪಕರಣಗಳ ಗಗನಕ್ಕೆರಿದ ಬಾಡಿಗೆ ಇತ್ಯಾದಿಗಳಿಂದ ಕಂಗೆಟ್ಟು ಹೋಗಿರುವ ರೈತರಿಗೆ ಇದೆಲ್ಲವುದರ ಜೊತೆ ಅತೀವ ತೊಂದರೆ ಕೊಡುತ್ತಿರುವ ಇನ್ನೊಂದು ಅಂದರೆ ಮಂಗಗಳ ಹಾವಳಿ. ಇವತ್ತು ಮಂಗಗಳು ಕಾಡಿನಲ್ಲಿ ವಾಸಿಸುವುದನ್ನೇ ಮರೆತು ಮನುಷ್ಯನ ಜೊತೆ ಅವುಗಳ ಚೇಷ್ಟೆಯೊಂದಿಗೆ ವಾಸ ಮಾಡುತ್ತಿರುವುದು ರೈತರ ನಿದ್ದೆಯನ್ನು ಕೆಡಿಸಿಬಿಟ್ಟಿದೆ ಎಂದು ಕುಂದಾಪುರದ ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಹೇಳಿದರು. ಆಳುವ ಸರ್ಕಾರಗಳು ಮಂಕಿ ಪಾರ್ಕ್ ಮಾಡುತ್ತೇವೆ, ಮಂಗಗಳ ತೊಂದರೆ ಹತೋಟಿಗೆ ತರಲು ಈಶಾನ್ಯ ರಾಜ್ಯಗಳ ಕೈಗೊಂಡಿರುವ ಕ್ರಮಕೈಗೊಳ್ಳುತ್ತೇವೆ ಅನ್ನುತ್ತಿವೆ ಬಿಟ್ಟರೆ ತೆಗೆದುಕೊಂಡ ಕ್ರಮಗಳು ಮಾತ್ರ ಶೂನ್ಯ. ಅದರ ಜೊತೆ ಮಾನವರು ತಮ್ಮ ಸ್ವಾರ್ಥಕ್ಕೆ ಕಾಡನ್ನು ನಾಶ ಮಾಡಿ ಕಾಡುಪ್ರಾಣಿಗಳ ಆಹಾರ ನೀಡುತ್ತಿದ್ದ ಮರಗಳನ್ನು ನಾಶ ಮಾಡಿರುವುದು ಈ ಸಮಸ್ಯೆಗಳಿಗೆ ದೊಡ್ಡ ಕಾರಣ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಲೈಟಿಂಗ್ ಕೆಲಸ ಮಾಡಿಕೊಂಡಿದ್ದ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ನಿವಾಸಿ ಧನರಾಜ (20) ಎಂಬ ಯುವಕನು ಮಾರ್ಚ್ 27 ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ಸಂಬಂಧಿಕರ ಮನೆಗೂ ಹೋಗದೇ ಈವರೆಗೂ ಮನೆಗೆ ಬಾರದೇ ನಾಪತ್ತೆಯಾಗಿರುತ್ತಾರೆ. 6 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಮೊ.ನಂ: 9480805468, ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರು ಮೊ.ನಂ: 9480805433 ಅಥವಾ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆಗೆ ಅನುಮತಿ ದೊರೆತಿದೆ. ಇದು ಕರ್ನಾಟಕದ ಮೂರು ಪ್ರಮುಖ ಕಾಲೇಜುಗಳಲ್ಲಿ ಪ್ರಾರಂಭಗೊಂಡಿದೆ. ಭಂಡಾರಕಾರ್ಸ್ ಕಾಲೇಜು ಇದರಲ್ಲಿ ಒಂದಾಗಿದೆ. ಮಾನ್ಯತಾ ಪರೀಕ್ಷಕರಿಂದ 5ರಲ್ಲಿ 4.2 ಅಂಕಗಳೊಂದಿಗೆ ಮಾನ್ಯತೆಯನ್ನು ಪಡೆದಿರುತ್ತದೆ.. ಕಾಲೇಜಿನಲ್ಲಿ ಸ್ಥಾಪಿತವಾದ ಈ ಕೇಂದ್ರವು  ಭಾರತ ಸರಕಾರದ  “ಸ್ಕಿಲ್ ಇಂಡಿಯಾ” ಯೋಜನೆಯಡಿ, ದೇಶಾದ್ಯಾಂತ ಯುವ ಜನತೆಗಾಗಿ ಉಚಿತವಾಗಿ ಕೌಶಲ್ಯ ತರಬೇತಿಯನ್ನು ನೀಡಲಿದೆ. ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ 3.0 ಅನುಷ್ಠಾನದಡಿ ಈ ಕೌಶಲ ಕೇಂದ್ರವು, ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿದೆ. ಈ ಯೋಜನೆಯು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಗಿದ್ದು 300 ಕ್ಕೂ ಹೆಚ್ಚು ಕೌಶಲ್ಯ ಕೋರ್ಸ್ ಗಳನ್ನು  ಯುವಕರಿಗೆ ಲಭ್ಯವಾಗುವಂತೆ ಮಾಡುವ ಮೂಲಕ, ಅವರಿಗೆ ಉದ್ಯೋಗಕ್ಕೆ ಯೋಗ್ಯ ಕೌಶಲ್ಯಗಳನ್ನು ತರಬೇತುಗೊಳಿಸಲಿದೆ. ಕೌಶಲ್ಯ ಅಭಿವೃದ್ಧಿಗೆ ಪ್ರಮುಖ ಹೆಜ್ಜೆ:ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಸ್ಥಾಪಿತವಾದ ಈ ಕೌಶಲ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರತಿಷ್ಟಿತ ಶಾಲೆ ಯೋಜನೆಯಡಿ ಜಿಲ್ಲಾ ವ್ಯಾಪ್ತಿಯಲ್ಲಿನ ಪ್ರತಿಷ್ಠಿತ ಶಾಲೆಗಳಿಗೆ ಅರ್ಹ ಪರೀಕ್ಷೆಯ ಮೂಲಕ ಪ್ರವೇಶಾವಕಾಶ ಕಲ್ಪಿಸಲು ಪ.ಜಾತಿಯ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಇಲಾಖೆಯ ವೆಬ್‌ಸೈಟ್ www.sw.kar.nic.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಒಂದು ವಾರದೊಳಗೆ ಅರ್ಜಿಯನ್ನು ಹಾಗೂ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಉಪ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ. ರಜತಾದ್ರಿ, ಮಣಿಪಾಲ ಇಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 0820-2574892 ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ತಂತ್ರಜ್ಞಾನಾಧಾರಿತ  ಬೋಧನೆಯನ್ನು ಆರಂಭಿಸಿದ್ದು, ಲೀಡ್ ಸಂಸ್ಥೆಯಿಂದ ಓರಿಯೆಂಟೇಶನ್ ಕಾರ್ಯಕ್ರಮವನ್ನು ಇತ್ತೀಚಿಗೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದ ಪಾಲಕ-ಪೋಷಕರಿಗಾಗಿ ನಡೆಸಲಾಯಿತು. ಲೀಡ್ ಸಂಸ್ಥೆಯ ಶಾಲಾ ಸಲಹೆಗಾರರಾದ ಸತೀಶ್ ಅವರು ತಮ್ಮ ಮಾತುಗಳಲ್ಲಿ, ನಗರ ಪ್ರದೇಶಗಳಲ್ಲಿ ತಂತ್ರಜ್ಞಾನವನ್ನು ಈಗಾಗಲೇ ಶಿಕ್ಷಣದಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಶಾಲೆಯು ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಾಡಿದ ನಿರ್ಧಾರ ಹಾಗೂ ಅದರಿಂದಾಗಿ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳ ಮೇಲೆ ಬೆಳಕು ಚೆಲ್ಲಿದರು. ಲೀಡ್ ಸಂಸ್ಥೆಯ ದಕ್ಷಿಣ ವಲಯದ ಸಿಇಒಆಗಿರುವ ಶಶಿಕಾಂತ ಅವರು ಪೋಷಕರೊಡನೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲ್ಯ ಎಷ್ಟು ಮುಖ್ಯವಾದದ್ದು ಹಾಗೂ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿವಿಧ ಪರೀಕ್ಷೆಗಳನ್ನು ಬರೆಯಲು ಮತ್ತು ಸಂದರ್ಶನಗಳಲ್ಲಿ ಆತ್ಮವಿಶ್ವಾಸದಿಂದ ಉತ್ತರಿಸಲು ತಂತ್ರಜ್ಞಾನಾಧಾರಿತ ಶಿಕ್ಷಣವು ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಹೇಳಿದರು. ಈ ಸಂದರ್ಭ ಶಾಲೆಯ ಪ್ರಾಂಶುಪಾಲರಾದ ಶರಣ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಿಂದ ಸಿಎ/ಸಿಎಸ್/ಸಿಎಮ್‌ಎ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿರ್ವಹಣೆ ಕುರಿತಾಗಿ ವಿಭಿನ್ನ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಉಡುಪಿಯ ಆರ್ಟ್ ಆಫ್ ಲಿವಿಂಗ್‌ನ ಯೋಗ ಮತ್ತು ಪ್ರಾಣಾಯಾಮ ತರಬೇತುದಾರರಾದ ಶೈಲಜಾ ಕೃಷ್ಣಾನಂದ ಅವರು ಒತ್ತಡ ನಿರ್ವಹಣೆ ಹಾಗೂ ಏಕಾಗೃತೆಯ ಸಾಧನೆಯನ್ನು ಆಸನ ಹಾಗೂ ಪ್ರಾಣಾಯಾಮದ ಮೂಲಕ ಹೇಗೆ ಸಿದ್ಧಿಸಿಕೊಳ್ಳುವುದು ಎನ್ನುವುದರ ಕುರಿತು ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಕೊತ್ತಾಡಿ ಉಮೇಶ್ ಶೆಟ್ಟಿ ಅವರು ಪ್ರೊಫೆಷನಲ್ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಜೀವನ ಪದ್ಧತಿ ಇರಬೇಕು ಅದರಲ್ಲಿ ಅಗ್ರಸ್ಥಾನದಲ್ಲಿ ಈ ಪ್ರಾಣಾಯಾಮ, ಆಸನ, ಮುದ್ರೆಗಳ ಬಳಕೆ ಬಹಳ ಪರಿಣಾಮಕಾರಿ ಎಂದು ಶುಭಾಶಂಸನೆ ಮಾತುಗಳನ್ನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ವಿ. ಭಟ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಸುಹಾಸ್ ಜಟ್ಟಿಮನೆ ಮತ್ತು ಶ್ವೇತ ಭಂಡಾರಿ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಕಾಲೇಜಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ ಎರಡು ದಿನಗಳ ಹಿಂದೆ ಹಿಂದೂ ವಿದ್ಯಾರ್ಥಿನಿಯೊಬ್ಬಳ ಜೊತೆ ಮುಸ್ಲಿಂ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಪ್ರಶ್ನಿಸಿದಾತನ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಹಿಂದೂ ಕಾರ್ಯಕರ್ತರು ಕುಂದಾಪುರ ಪೊಲೀಸ್ ಠಾಣೆಯ ಎದುರು ಆಹೋರಾತ್ರಿ ಧರಣಿ ಕುಳಿತ ಘಟನೆ ಗುರುವಾರ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿ ಸೇನಾಪುರದ ಮಹೇಶ್ ಮುಸ್ಲಿಂ ಯುವಕರ ನಡುವೆ ಗಲಾಟೆ ನಡೆದಿದೆ. ಕುಂದಾಪುರ ಪೊಲೀಸರು ಸಾರ್ವಜನಿಕ ಜಾಗದಲ್ಲಿ ಶಾಂತಿ ಭಂಗ ಎನ್ನುವ ಕಾರಣಕ್ಕೆ ಸೊಮೋಟೋ ಪ್ರಕರಣ ದಾಖಲಿಸಿದ್ದರು. ಬಳಿಕ ಮಂಗಳವಾರ ಹಿಂದೂ ಯುವತಿಯ ತಾಯಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ನೀಡಿದ್ದು, ದೂರಿನಲ್ಲಿ ತನ್ನ ಮಗಳಿಗೆ ಆರೋಪಿ ಮಹೇಶ್ ಮಾನ ಹಾನಿ ಮಾಡಿದ್ದಾನೆ ಎಂದು ತಿಳಿಸಿದ್ದು, ಮಹೇಶ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಎಲ್ಲಾ ಘಟನೆಗೆ ಸಂಬಂಧಿಸಿದಂತೆ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಕರಾವಳಿಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿದೆ ಎನ್ನಲಾದ 14ರಿಂದ 20 ಕೋಟಿ ರೂ. ಅವ್ಯವಹಾರ ಪ್ರಕರಣದ ಸಮಗ್ರ ತನಿಖೆಯೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಕಳೆದ 48 ದಿನಗಳಿಂದ ಕಾರ್ಖಾನೆ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ನಾಳೆ ಹಿಂದೆಗೆದುಕೊಳ್ಳಲು ಉಡುಪಿ ಜಿಲ್ಲಾ ರೈತ ಸಂಘ ನಿರ್ಧರಿಸಿದೆ. ಧರಣಿ ಸ್ಥಳಕ್ಕೆ ಬುಧವಾರ ಸಂಜೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ಧರಣಿ ನಿರತರ ಎಲ್ಲಾ ಬೇಡಿಕೆಗಳನ್ನು ಸರಕಾರ ಒಪ್ಪಿಕೊಂಡಿರುವುದಾಗಿ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ತಿಳಿಸಿದ್ದು, ಧರಣಿಯನ್ನು ಹಿಂದೆಗೆದುಕೊಳ್ಳುವಂತೆ ಮನವಿ ಮಾಡಿದ್ದರು ಎಂದು ಅವರು ವಿವರಿಸಿದರು. ಪ್ರಕರಣದಲ್ಲಿ ಶಾಮೀಲಾಗಿರುವ ಮೂವರು ಹಿರಿಯ ಸಹಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲಾ…

Read More

ಕುಂದಾಪ್ರ ಡಾಟ್‌ ಕಾಂ ಲೇಖನ.ಫೇಶಿಯಲ್‌ ಯೋಗ ಎನ್ನುವುದು ಇತ್ತೀಚಿನ ಟ್ರೆಂಡ್‌. ಮುಖಕ್ಕೆ ಸಂಬಂಧ ಪಟ್ಟ ಈ ನಿರ್ದಿಷ್ಟ ಕ್ರಿಯೆಯಿಂದ  ಮುಖದ ಚರ್ಮದಲ್ಲಿ ಹೊಳಪು,  ಮುಖದ ಮಾಂಸಖಂಡಗಳು  ರಿಲ್ಯಾಕ್ಸ್‌ ಆಗುವ ಜತೆಗೆ ಸುಕ್ಕುಗಳು ಕಡಿಮೆ ಆಗುತ್ತವೆ. ಸಲೂನ್‌ ಹಾಗೂ ಚರ್ಮರೋಗ ತಜ್ಞರ ಹೊರತಾಗಿ ಮುಖದ ಯೋಗಾಸನವು ಸೌಂದರ್ಯವನ್ನು ಎತ್ತಿ ಹಿಡಿಯುತ್ತದೆ. ಫೇಶಿಯಲ್‌ ಯೋಗದಲ್ಲಿ ಹಲವು ವಿಧಗಳಿವೆ. ಮೀನಿನಂತೆ ಮುಖವನ್ನು ಉದ್ದ ಮಾಡುವುದು, ನಸುನಗುತ್ತ ಓಂ ಪಠಣ ಮಾಡುವುದು, ಹುಬ್ಬುಗಳನ್ನು ಮೇಲಕ್ಕೆ ಎತ್ತರಿಸುವುದು, ಕಣ್ಣಿನ ರೆಪ್ಪೆಗಳನ್ನು ಪಕ್ಕಕ್ಕೆ ಎಳೆದು ವಿಸ್ತರಿಸುವುದು . ಇದರ ಜೊತೆಗೆ ಉಸಿರಾಟದ ವ್ಯಾಯಾಮಗಳು ಮುಖಕ್ಕೆ ವಿಶೇಷ ಕಳೆ ನೀಡಬಲ್ಲವು. ಇವುಗಳಿಂದ ಮುಖದ ಚರ್ಮ ಕುಸಿಯುವುದಿಲ್ಲ, ನೆರಿಗೆ ಉಂಟಾಗುವುದಿಲ್ಲ. ಮುಖದ ಚರ್ಮ ಬಿಗಿಯನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ, ಮುಖದ ಮಾಂಸಖಂಡಗಳು ರಿಲ್ಯಾಕ್ಸ್‌ ಹೊಂದುತ್ತವೆ. ಫೇಶಿಯಲ್‌ ಯೋಗದಿಂದ ಹಲವಾರು ಪ್ರಯೋಜನಗಳಿವೆ. ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ. ಮುಖದ ಚರ್ಮದಲ್ಲಿ ಕಳೆ ತುಂಬುವ ಕೊಲಾಜನ್‌ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ನಾವು ದಿನವೂ ಮಾತನಾಡುವಾಗ, ನಗುವಾಗ, ವಿವಿಧ ಭಂಗಿಗಳನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಶರಾಬು ಕುಡಿಯಲು ಹಣವಿಲ್ಲದೆ ಯುವಕನೋರ್ವ ಅದೇ ಚಿಂತೆಯಲ್ಲಿ ಮನೆಯ ಜಂತಿಗೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಪಾರು ಗ್ರಾಮದಲ್ಲಿ ನಡೆದಿದೆ. ಸುಬ್ರಹ್ಮಣ್ಯ (33) ಆತ್ಮಹತ್ಯೆಗೆ ಶರಣಾದ ಯುವಕ. ಸುಬ್ರಹ್ಮಣ್ಯ ಮನೆಯಲ್ಲಿಯೇ ಇರುತ್ತಿದ್ದು, ಅಪರೂಪಕ್ಕೊಮ್ಮೆ ಬದಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಶರಾಬು ಸೇವನೆಯ ವ್ಯಸನ ಹೊಂದಿದ್ದರು. ಆತನ ಕುಡಿತ ಬಿಡಿಸಲು ಹಲವಾರು ಬಾರಿ ಮದ್ಯವರ್ಜನ ಶಿಬಿರಕ್ಕೆ ಸೇರಿಸಿದ್ದು, ಆದರೂ ಆತನು ವಿಪರೀತ ಶರಾಬು ಕುಡಿಯುತ್ತಿದ್ದು, ಕುಡಿಯಬಾರದಾಗಿ ಎಷ್ಟು ಸಲ ಬುದ್ದಿ ಹೇಳಿದರೂ ಆತನು ಮನೆಯಲ್ಲಿ ಯಾರ ಮಾತನ್ನು ಕೇಳುತ್ತಿರಲಿಲ್ಲ, ಹೀಗಿರುವಾಗ ಸುಬ್ರಹ್ಮಣ್ಯನು ಶರಾಬು ಕುಡಿಯಲು ಹಣ ಇಲ್ಲದೇ ಇದ್ದುದರಿಂದ ಅದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಮಾಡಿನ ಜಂತಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More