ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಭಾರತ ದೇಶವು ಜಗತ್ತಿನಲ್ಲಿ ಅತಿ ಹೆಚ್ಚು ಯುವ ಸಂಪತ್ತನ್ನು ಹೊಂದಿರುವ ರಾಷ್ಟ್ರವಾಗಿದ್ದು, ಸೃಜನಾತ್ಮಕ ಕೌಶಲ್ಯಗಳನ್ನು ನಮ್ಮ ಯುವಪೀಳಿಗೆ ಹೊಂದಿದ್ದಾರೆ. ಅವರುಗಳ ಕೌಶಲ್ಯವನ್ನು ಹೊರತರುವಲ್ಲಿ ಉದ್ಯೋಗ ಮೇಳಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಅಂದು ನಗರದ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೌಶಲ್ಯ ರೋಜ್ಗಾರ್ ಮೇಳ – ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿರುವ ಯಾವುದೇ ಸರ್ಕಾರಿ ಹುದ್ದೆಯನ್ನು ಯಾರೂ ಕೂಡ ಶಿಫಾರಸ್ಸು ಮಾಡಿ, ನೀಡಲು ಸಾಧ್ಯವಿಲ್ಲ. ಸ್ವಂತ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯಲ್ಲಿ ನಾವುಗಳು ಇದ್ದೇವೆ. ಉದ್ಯೋಗ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ಮಧ್ಯಾಹ್ನ ಪಡಿತರ ವಿತರಣೆ ಮಾಡದೆ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು ಸರ್ಕಾರ ನಿಗದಿಪಡಿಸಿದಂತೆ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೂ ಪಡಿತರ ವಿತರಿಸುವಂತೆ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗದಂತೆ ತಡೆಯುವಂತೆ ಕೋರಿ ಶಿರೂರು ಗ್ರಾಮದ ಆಹಾರ ಖಾತ್ರಿ ಸಮಿತಿಯ ಅಧ್ಯಕ್ಷರು ಹಾಗು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಯುವ ಸಾಮಾಜಿಕ ಹೋರಾಟಗಾರರಾದ ರಾಘು ಶಿರೂರು, ಯೋಗೇಶ್ ಶಿರೂರು, ರಾಮಚಂದ್ರ ಆಚಾರಿ, ಸಾಯಿನಾಥ ಜೋಗುರು, ರವಿ ಹಕ್ಲರ್ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡ ಅನಂತರ ಅಂಗಾಂಗದಾನದ ಮೂಲಕ ಇತರರಿಗೆ ಜೀವ ನೀಡಿ ಸಾರ್ಥಕತೆ ಮೆರೆದ ಘಟನೆ ನಡೆದಿದೆ. ಕುಂದಾಪುರದ ನಿವಾಸಿ ರಾಘವೇಂದ್ರ (35) ಅವರು ಫೆ.17ರಂದು ಮಧ್ಯರಾತ್ರಿ 12.20 ವೇಳೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ತೀವ್ರ ಗಾಯಗಳ ಅನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ ರಾಘವೇಂದ್ರ ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣ ಕಂಡುಬರಲಿಲ್ಲ. ಮಾನವ ಅಂಗಾಂಗ ಕಸಿ ಕಾಯಿದೆ 1994 ರ ಪ್ರಕಾರ ಪರಿಣಿತ ವೈದ್ಯರ ಸಮಿತಿಯು ಎರಡು ಬಾರಿ ಅಧಿಕೃತವಾಗಿ ಬ್ರೈನ್ ಡೆಡ್ ಎಂದು ಘೋಷಿಸಿತು. ರಾಘವೇಂದ್ರ ಅವರ ಕುಟುಂಬವು ಅವರ ಕಾರ್ಯಸಾಧ್ಯವಾದ ಅಂಗಾಂಗಳನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆ ಮೂಲಕ ಅಗತ್ಯವಿರುವ ಇತರರಿಗೆ ಅಂಗ ದಾನ ಮಾಡಲು ನಿರ್ಧರಿಸಲಾಯಿತು. ಅದರಂತೆ ರಾಘವೇಂದ್ರ ಅವರ ಒಂದು ಕಿಡ್ನಿ ಮತ್ತು ಯಕೃತ್ತನ್ನು ಮಂಗಳೂರಿನ ಎಜೆ ಆಸ್ಪತ್ರೆ, ಶ್ವಾಸಕೋಶವನ್ನು ಸಿಕಂದರಾಬಾದ್ನ ಕಿಮ್ಸ್ ಆಸ್ಪತ್ರೆಗೆ ಹಾಗೂ ಒಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜಗದೀಶ್ ಪೂಜಾರಿ ಹಕ್ಕಾಡಿ ಹಾಗೂ ಉಪಾಧ್ಯಕ್ಷರಾಗಿ ಸತೀಶ್ ಶೆಟ್ಟಿ ಉಪ್ಪಳ್ಳಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಗದೀಶ್ ಪೂಜಾರಿ ಹಕ್ಕಾಡಿ ಅವರು ಮಾತನಾಡಿ, 13 ಜನರ ನಮ್ಮ ತಂಡದ ಮೇಲೆ ನಂಬಿಕೆ ಇರಿಸಿ ಸಂಘದ ಸದಸ್ಯರು ಆಯ್ಕೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ ಭರವಸೆಯಂತೆ ಕೃಷಿ ಸಾಲವನ್ನು ತಕ್ಷಣ ನೀಡುವ ವ್ಯವಸ್ಥೆ, ನಾವುಂದ ಅರೆಹೊಳೆ ಗಣೇಶನಗರದ ಮಧ್ಯೆಭಾಗದಲ್ಲಿ ರೇಷನ್ ವಿತರಿಸುವ ಕೇಂದ್ರೆ ಸ್ಥಾಪಿಸುವ ವ್ಯವಸ್ಥೆ ಸೇರಿದಂತೆ ಇನ್ನಿತರ ಭರವಸೆಯನ್ನು ಮುಂದಿನ 5 ವರ್ಷದಲ್ಲಿ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ನರಸಿಂಹ ದೇವಾಡಿಗ, ಶ್ರೀನಿವಾಸ ಪೂಜಾರಿ, ಗಣೇಶ್ ಪೂಜಾರಿ, ಪ್ರಭಾಕರ ಎಂ.ಖಾರ್ವಿ, ಹರಿಶ್ಚಂದ್ರ ಆಚಾರ್ಯ, ಲಕ್ಷ್ಮೀ, ಶಕುಂತಲಾ, ಗಣೇಶ್ ಪೂಜಾರಿ, ವೀರೇಂದ್ರ ಹೆಗ್ಡೆ, ರಾಮ ಕಂತಿಹೊಂಡ, ಸುರೇಶ್ ನಾಯ್ಕ ಉಪಸ್ಥಿತರಿದ್ದರು. ಚುನಾವಣಾ ಅಧಿಕಾರಿ ಸುನೀಲ್ ಕುಮಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇವರ ಆಶ್ರಯದಲ್ಲಿ ಎಸ್.ವಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಇವರ ಸಹಯೋಗದೊಂದಿಗೆ 2024-25ನೇ ಸಾಲಿನ ಗಂಗೊಳ್ಳಿ ಕ್ಲಸ್ಟರ್ ಮಟ್ಟದ ’ಕಲಿಕಾ ಹಬ್ಬ’ಗಂಗೊಳ್ಳಿಯ ಎಸ್.ವಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಜರಗಿತು. ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶಾಲೆಯ ಮುಖ್ಯೋಪಾಧ್ಯಾಯ ಜಿ. ವಿಶ್ವನಾಥ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಬಿಆರ್ಪಿ ಸಂತೋಷ ಕುಮಾರ್ ಶೆಟ್ಟಿ, ಸಿಆರ್ಪಿ ಪ್ರದೀಪ್ ಕುಮಾರ್ ಶೆಟ್ಟಿ, ಕುಂದಾಪುರ ಸಿಆರ್ಪಿ ಉಮೈ ಸಲ್ಮಾ ಮತ್ತು ಬಿಐಇಆರ್ಟಿ ಶಂಕರ ಕುಲಾಲ್ ಶುಭಾಶಂಸನೆಗೈದರು. ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಯಶೋಧಾ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಮುಖ್ಯಶಿಕ್ಷಕಿ ಚಂದ್ರಕಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನವು ಫೆಬ್ರವರಿ 21, 22 ಮತ್ತು 23ರಂದು ಭಂರ್ಡಾಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಹೇಳಿದರು. ಅವರು ಬುಧವಾರ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಭಂಡಾರ್ಕಾರ್ಸ್ ಆರ್ಟ್ಸ್ & ಸಾಯನ್ಸ್ ಕಾಲೇಜು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬೆಂಗಳೂರು ಹಾಗೂ ಧಾರವಾಡ ವಲಯ, ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘ ಇವರ ಸಹಯೋಗದೊಂದಿಗೆ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನ 3 ದಿನಗಳ ಕಾಲ ನಡೆಯಲಿದೆ ಎಂದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಕರ್ನಾಟಕ ಇತಿಹಾಸ ಪರಿಷತ್ ಸ್ಥಳೀಯ ಕಾರ್ಯದರ್ಶಿ ಕೆ. ಗೋಪಾಲ ಮಾತನಾಡಿ, ಫೆ.21ರ ಪೂರ್ವಾಹ್ನ 10 ಗಂಟೆಗೆ ಮಹಾಅಧೀವೇಶನದ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯನ್ನು ಮಾಹೆ ಪ್ರೊ- ಛಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಅವರು ನೆರವೆರಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಂಗಳೂರು ಹಾಗೂ ದೆಹಲಿ ವಿಶ್ವವಿದ್ಯಾನಿಲಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿ ಮರೆತ ಜವಾಬ್ದಾರಿಯುತ ಕುಂದಾಪುರ ಶಾಸಕರು ಬೇಜವಾಬ್ದಾರಿಯುತವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಟೀಕಿಸಿದ್ದಾರೆ. ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ವಿಕಾಸ್ ಹೆಗ್ಡೆ, ಜವಾಬ್ದಾರಿಯುತ ಶಾಸಕರಿಂದ ಬೇಜವಾಬ್ದಾರಿಯುತ ಮಾತು.. ಶಾಸಕರ ಅಧ್ಯಕ್ಷತೆಯ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುವುದು ಕೆಡಿಪಿ ಅಧ್ಯಕ್ಷರ ಜವಾಬ್ದಾರಿ. ಆದರೆ ಕಳೆದ ಆರೇಳು ತಿಂಗಳಿಂದ ಕೆಡಿಪಿ ಸಭೆ ಕರೆಯದೆ ಇದ್ದ ಬಗ್ಗೆ ಸಮಿತಿಯ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದಾಗ ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಅದನ್ನು ಮೇಲಿನವರು ಕಲಿಸಿದ್ದು, ಜಿಲ್ಲಾ ಕೆಡಿಪಿ ಸಭೆ ನಡೆಯದೇ ಹಲವು ತಿಂಗಳುಗಳೇ ಕಳೆದಿದೆ ಎನ್ನುವುದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಶಾಸಕರ ಬೇಜವಾಬ್ದಾರಿಯುತ ಉತ್ತರವಾಗಿದೆ. ಬೇರೆಯವರು ಏನೆ ಮಾಡಲಿ ಜನ ಶಾಸಕರನ್ನು ಆಯ್ಕೆ ಮಾಡಿದ್ದು ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿಗೆ, ಇದಕ್ಕೆ ಸೂಕ್ತ ವೇದಿಕೆ ಎಂದರೆ ಅದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಸಾಲಿಗ್ರಾಮದ ಚೇಂಪಿಯಲ್ಲಿ ಸ್ಕೂಟಿಗೆ ಗೂಡ್ಸ್ ರಿಕ್ಷಾ ಢಿಕ್ಕಿಯಾಗಿ ಸ್ಕೂಟಿ ಸವಾರ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಸ್ಕೂಟಿ ಸವಾರ ಸ್ಥಳೀಯ ಗುಂಡ್ಮಿ ನಿವಾಸಿ ಅನಂತ ಹೆಗ್ಡೆ (45) ಮೃತರು. ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡಗೆ ಚಲಿಸುತ್ತಿದ್ದ ಗೂಡ್ಸ್ ರಿಕ್ಷಾಕ್ಕೆ ಸಾಲಿಗ್ರಾಮ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದ ಬಳಿ ವಿರುದ್ಧ ದಿಕ್ಕಿನಿಂದ ಬಂದ ಸ್ಕೂಟಿ ಢಿಕ್ಕಿ ಹೊಡೆದಿದ್ದು, ಸವಾರ ಅನಂತ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಫಲಕಾರಿಯಾಗಿಲ್ಲ. ಮೃತರು ಅವಿವಾಹಿತರಾಗಿದ್ದು, ಅಡುಗೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಸ್ಕೂಟಿಯ ಸಹ ಸವಾರರಾಗಿದ್ದ ವಿಶ್ವನಾಥ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತ ತಪ್ಪಿಸಲು ರಿಕ್ಷಾವನ್ನು ಬಲಕ್ಕೆ ತಿರುಗಿಸಿದ್ದು ರಿಕ್ಷಾವು ಡಿವೈಡರ್ ಏರಿ ಪಲ್ಟಿಯಾಗಿದ್ದು, ರಿಕ್ಷಾ ಚಾಲಕನಿಗೆ ಸಣ್ಣ ಗಾಯಗಳಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿಪ್ರರು ಸಾದಾ ಲೋಕದ ಹಿತವನ್ನು ಬಯಸುವವರು, ಹುಟ್ಟಿನಿಂದಲ್ಲ ನಮ್ಮ ಒಳ್ಳೆಯ ತನದಿಂದ ನಾವು ಸಮಾಜಕ್ಕೆ ಅನುಕರಣಿಯವಾಗಬೇಕು ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗಬೇಕು, ಶಿಸ್ತು ಶಿಷ್ಟಾಚಾರ ನಮ್ಮ ಬದುಕಿನ ಪ್ರಧಾನ ಅಂಗವಾದಾಗ ಜೀವನ ಆದರ್ಶವಾಗಿರುತ್ತದೆ. ಧರ್ಮರಾಯನ ಧರ್ಮಪರಾಯಣತೇ, ಕರ್ಣನ ತ್ಯಾಗ, ಶ್ರೀರಾಮಚಂದ್ರನ ಆದರ್ಶ ಅಳವಡಿಸಿಕೊಂಡಾಗ ನಾವು ಸಮಾಜಕ್ಕೆ ಆದರ್ಶರಾಗುತ್ತೇವೆ ಎಂದು ನಿವೃತ್ತ ಸೈನಿಕ ಹಾಗೂ ಅಂಕಣಕಾರ ಬೈಂದೂರು ಚಂದ್ರಶೇಖರ ನಾವುಡ ಹೇಳಿದರು. ಅವರು ಕಿರಿಮಂಜೇಶ್ವರ ಶ್ರೀ ಗುರುನರಸಿಂಹ ಸಭಾ ಭವನದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ಇದರ 30ನೇ ವಾರ್ಷಿಕ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು. ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಇದರ ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಯುವಸಮುದಾಯ ಸಂಘಟನಾತ್ಮಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡು ನಮ್ಮ ಆಚಾರ ವಿಚಾರಗಳನ್ನು ಮುಂದಿನ ತಲೆಮಾರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಷ್ಟ- ಬಂಧ ಬ್ರಹ್ಮಕಲಕೋತ್ಸವ ಹಾಲುಹಬ್ಬ, ವಾರ್ಷಿಕ ಪೂಜೆ, ಗೆಂಡ ಸೇವೆ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಪದ್ಮವಿಭೂಷಣ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಗವಂತನ ಸಾನಿಧ್ಯವನ್ನು ಉಳಿಸಿಕೊಂಡು ಧರ್ಮದ ಸೇವಾ ಕಾರ್ಯ ಮಾಡಿದರೆ ಪುಣ್ಯ ಸಂಪಾದನೆಯಾಗುತ್ತದೆ. ಸತ್ಕಾರ್ಯ ಮಾಡಿದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಅಧರ್ಮ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಸಾವಿರಾರು ವರ್ಷಗಳಿಂದ ಈ ಸೀಮೆಯನ್ನು ರಾಜ ಮಹಾರಾಜರು ಆಳಿ ಎಲ್ಲಾ ದೇವಸ್ಥಾನಗಳು ಉಳಿಯಲು ಸಾಧ್ಯವಾಯಿತು ಎಂದು ಆಶೀರ್ವಚನದಲ್ಲಿ ಹೇಳಿದರು. ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ಮಾತನಾಡಿ ,ಉಡುಪಿಯಲ್ಲಿ ಬಾರ್ಕೂರು ದೇವರ ನಾಡು. ದೇವರು ಧರ್ಮದ ಬಗ್ಗೆ ಅರಿತುಕೊಂಡು ಒಡನಾಡಿಯಾಗಿ ಬಾಳಿ ಸದ್ಬುದ್ದಿ ಸಂಸ್ಕಾರ ಬೆಳಸಿದಾಗ ಸಮಾಜ ಉನ್ನತ ಮಟ್ಟದಲ್ಲಿ ಬೆಳೆಯಲು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು ಎಂದರು. ಅಭಿವೃದ್ಧಿ…
