ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ನಿರ್ಮಾಣ ಹಂತದ ಮನೆಯ ಸ್ಲಾಬ್‌ನಿಂದ ಕೆಳಗಡೆ ಬಿದ್ದು ಮನೆಯ ಯಜಮಾನ ಮೃತಪಟ್ಟ ಘಟನೆ ಇಲ್ಲಿನ ಬೇಳೂರು ದೇವಸ್ಥಾನಬೆಟ್ಟು, ಕಲ್ಮಂಡೆಯಲ್ಲಿ ಸೋಮವಾರ ಸಂಭವಿಸಿದೆ. ಸ್ಥಳೀಯ ನಿವಾಸಿ ಗೋಪಾಲ ಆಚಾರ್ಯ (62) ಅವರು ಮೃತಪಟ್ಟ ವ್ಯಕ್ತಿ. ಅವರು ಬೇಳೂರಿನಲ್ಲಿ ಹೊಸ ಮನೆಯನ್ನು ನಿರ್ಮಿಣ ಮಾಡುತ್ತಿದ್ದು, ಅದನ್ನು ನೋಡಲು ಮಕ್ಕಳ ಜೊತೆ ಹೋಗಿದ್ದರು. ಈ ವೇಳೆ ಗೋಪಾಲ ಮನೆಯ ಮೊದಲ ಅಂತಸ್ತಿಗೆ ಹೋಗಿ ನೋಡುತ್ತಿರುವಾಗ ಆಯತಪ್ಪಿ ಸ್ಲಾಬ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಗೋಪಾಲ ಆಚಾರ್ಯ ಅವರು ಅದಾಗಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟಣೆಯು ದಿನೇ ದಿನೇ ಹೆಚ್ಚಿ, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದು, ಅನಧಿಕೃತವಾಗಿ ರಚನೆಗೊಂಡಿರುವ ಗೂಡಂಗಡಿಗಳು, ತಳ್ಳುವ ಗಾಡಿಗಳು ರಸ್ತೆಯಲ್ಲಿಯೇ ವ್ಯಾಪಾರ ಕೈಗೊಳ್ಳುವುದು ಸೇರಿದಂತೆ ಮತ್ತಿತರರ ಕಾರಣಗಳಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ಉಡುಪಿ ನಗರದ ವ್ಯಾಪ್ತಿಯಲ್ಲಿ 58 ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳ ಮುಂಭಾಗ ರಸ್ತೆಯ ಮೇಲೆ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಪಾರ್ಕಿಂಗ್ ಮಾಡುವ ಹಿನ್ನೆಲೆ, ಸಾರ್ವಜನಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್) 2025 ಅರ್ಹತಾ ಪರೀಕ್ಷೆಯ ಪ್ರಥಮ ಹಂತದ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್. ಎಸ್. 99.46, ಸಾನಿಕಾ ಕೆ. ಎನ್ 99. 20, ಎಂ. ಮಂಜುನಾಥ್ 99.01, ಮೋಹಿತ್ ಎಂ. 99.16, ಎಚ್. ಎ. ರಾಜೇಶ್ 99.10, ಪರ್ಸಂಟೈಲ್ ಗಳಿಸಿರುತ್ತಾರೆ. ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಜೆ.ಇ.ಇ (ಮೈನ್) ಪರೀಕ್ಷೆಯ ಸಂಯೋಜಕರಾದ ನಂದೀಶ್ ಎಚ್. ಬಿ, ಆದಿತ್ಯ ವಟಿ ಕೆ, ಮತ್ತು ವಿನಯ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಂತರ್ಜಾಲ ಬಳಕೆಯ ಸಮಯದಲ್ಲಿ ಜನ ಸಾಮಾನ್ಯರು ಜವಾಬ್ದಾರಿಯಿಂದ ಎಚ್ಚರಿಸಿ ವ್ಯವಹರಿಸಬೇಕು. ಒಂದೊಮ್ಮೆ ನಿರ್ಲಕ್ಷ್ಯ ವಹಿಸಿದಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ತಿಳಿಸಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕಿರಣ ದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರು ಆಧುನಿಕ ತಂತ್ರಜ್ಞಾನಗಳ ಮೊರೆ ಹೊಗಿ ಕ್ಷಣಾರ್ಧದಲ್ಲಿ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಆರ್ಥಿಕ ವ್ಯವಹಾರಗಳನ್ನು ಡಿಜಿಟಲ್ ಎಲೆಕ್ಟ್ರಾನಿಕ್ ಬಳಕೆಯನ್ನು ಹೆಚ್ಚು ಹೆಚ್ಚು ಮಾಡುತ್ತಿದ್ದಾರೆ. ಇಂತಹ ವ್ಯವಹಾರಗಳನ್ನು ಮಾಡುವಾಗ ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಿ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಪ್ರತಿದಿನ ಹೊಸ ಹೊಸ ರೂಪದಲ್ಲಿ ಸೈಬರ್ ಅಪರಾಧ ಪ್ರಕರಣಗಳೂ ಸಹ ನಡೆಯುತ್ತಿರುವುದು ಕೇಳಿ ಬರುತ್ತಿದೆ ಎಂದರು. ಜನಸಾಮಾನ್ಯರು ಅಲ್ಪ ಅವಧಿಯಲ್ಲಿಯೇ ಹೆಚ್ಚಿನ ಹಣವನ್ನು ದ್ವಿಗುಣಗೊಳಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳು ಚಲನಚಿತ್ರ ನಟ ವಿಶಾಲ್ ಅವರು ಭೇಟಿ ನೀಡಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಾಬು ಹೆಗ್ಡೆ ಹಾಗೂ ಸದಸ್ಯರಾದ ರಘುರಾಮ್ ದೇವಾಡಿಗ ಶ್ರೀ ದೇವಿಯ ಪ್ರಸಾದ ನೀಡಿ ಗೌರವಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಪ್ರಸಿದ್ಧ ಹೋಟೆಲ್ ‘ಶ್ರೇಯಸ್ ಇನ್’ ವತಿಯಿಂದ ಫೆ.13ರಿಂದ ಫೆ.25ರ ತನಕ ‘ಸೀಪುಡ್ ಫೆಸ್ಟಿವಲ್’ ಆಯೋಜಿಸಲಾಗಿದೆ. ಆಹಾರೋದ್ಯಮ ಕ್ಷೇತ್ರದಲ್ಲಿ ಉತ್ಕೃಷ್ಟತೆ ಕಾಯ್ದುಕೊಂಡಿರುವ ಕುಂದಾಪುರದ ‘ಶ್ರೇಯಸ್ ಇನ್’ ಮೊದಲ ಭಾರಿಗೆ ‘ಸೀಪುಡ್ ಫೆಸ್ಟಿವಲ್’ ಆಯೋಜಿಸುತ್ತಿದೆ. ಮೀನು, ಸಿಗಡಿ, ಏಡಿ, ಸೇರಿದಂತೆ ಕರಾವಳಿಯ ವಿವಿಧ ಆಹಾರ ಖಾದ್ಯಗಳನ್ನು ಗ್ರಾಹಕರಿಗೆ ವಿಶೇಷವಾಗಿ ನೀಡಲಾಗುತ್ತದೆ. ಮಧ್ಯಾಹ್ನ 12ರಿಂದ 3:30ರ ತನಕ ಹಾಗೂ ಸಂಜೆ 6:30ರಿಂದ ರಾತ್ರಿ 11ರ ತನಕ ಸೀಪುಡ್ ಫೆಸ್ಟಿವಲ್ ಜರುಗಲಿದ್ದು, ಖಾದ್ಯ ಪ್ರಿಯರು ಹೋಟೆಲಿಗೆ ಭೇಟಿ ನೀಡಿ ತಮ್ಮಿಷ್ಟದ ಆಹಾರವನ್ನು ಸವಿಯಬಹುದಾಗಿದೆ. ಸೀಪುಡ್ ಫೆಸ್ಟಿವಲ್’ನಲ್ಲಿ ನೀವು ಭಾಗಿಯಾಗಿವಿಳಾಸ:ಶ್ರೇಯಸ್ ಇನ್ ಎನ್.ಹೆಚ್ – 66, ಚೌಟ ಟವರ್ಸ್, ಸಂಗಮ್ ಜಂಕ್ಷನ್, ಕುಂದಾಪುರ7666619994, 7666019995
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಟೀಮ್ ಕುಂದಾಪುರದ ಪ್ರಸ್ತುತಿಯಲ್ಲಿ ಫೆಬ್ರವರಿ 12ರಿಂದ ಫೆಬ್ರವರಿ 16ರ ತನಕ ಕೋಡಿಯಲ್ಲಿ ಕುಂದ ಉತ್ಸವ-2025 ಐದು ದಿನಗಳ ಅದ್ದೂರಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಉದ್ಯಮಿ, ಕುಂದ ಉತ್ಸವದ ಸಾರಥ್ಯ ವಹಿಸಿರುವ ದಿನೇಶ ಹೆಗ್ಡೆ ಮೊಳಹಳ್ಳಿ ಹೇಳಿದರು. ಅವರು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ.12 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಯೋಗ, ಬೀಚ್ ಸ್ವಚ್ಛತಾ ಕಾರ್ಯಕ್ರಮ, ಸಂಜೆ 7 ಗಂಟೆಯಿಂದ ಸಾಂಸ್ಕಂತಿಕ ಕಾರ್ಯಕ್ರಮ, 8 ಗಂಟೆಗೆ ಕುಂದ ಉತ್ಸವ ಉದ್ಘಾಟನೆ ನಡೆಯಲಿದೆ. ಬಳಿಕ ಶಿವಾನಿ ಮ್ಯೂಸಿಕಲ್ಸ್ ಇವರ ಸಂಯೋಜನೆಯಲ್ಲಿ ಝಿ ಕನ್ನಡ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ ಸಂಜೆ ನಡೆಯಲಿದೆ. ಫೆ.13ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ, ರಾಜ್ಯ ಮಟ್ಟದ ಡಾನ್ಸ್ ಸ್ಪರ್ಧೆ ನಡೆಯಲಿದೆ. ಫೆ.14ರಂದು ಸಂಜೆ 7 ಗಂಟೆಗೆ ಝಿ ಕನ್ನಡ ಡಿ.ಕೆ.ಡಿ ಖ್ಯಾತಿಯ ಶಿಪಾಲಿ ಪೂಜಾರಿ ಹಾಗೂ ಶಿವಾನಿ ಪೂಜಾರಿ ಇವರ ಭಾಗವಹಿಸುವಿಕೆಯಲ್ಲಿ ಸುಧೀರ್ ಉಳ್ಳಾಲ ನೇತೃತ್ವದ ರಾಜ್ಯದ ಹೆಸರಾಂತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಚಿವರ್ಸ್ ಕುಂದಾಪುರ ನೇತೃತ್ವದಲ್ಲಿ ಕರ್ಣಾಟಕ ಬ್ಕಾಂಕ್ ಉದ್ಯೋಗಿಗಳು ಹಾಗೂ ಕುಟುಂಬಿಕರಿಗೆ ಆಯೋಜಿಸಲಾದ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾಕೂಟ – ಅಚಿವರ್ಸ್ ಟ್ರೋಫಿ 2025 ಎರಡು ದಿನಗಳ ಕಾಲ ಕೋಟೇಶ್ವರದಲ್ಲಿ ಯಶಸ್ವಿಯಾಗಿ ಜರುಗಿತು. ಬೆಂಗಳೂರು ಲಯನ್ ತಂಡ ಪ್ರಥಮ ಸ್ಥಾನ ಹಾಗೂ ಅಚೀವರ್ಸ್ ಕುಂದಾಪುರ ತಂಡ ದ್ವಿತೀಯ ಸ್ಥಾನ ಪಡೆಯಿತು. ಬ್ಯಾಂಕಿನ ಬೆಂಗಳೂರು, ಮಂಗಳೂರು, ಮೈಸೂರು, ತುಮಕೂರು, ದಾವಣಗೆರೆ ಉಡುಪಿ ಕುಂದಾಪುರದ 12 ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಮಹಿಳಾ ಸಿಬ್ಬಂದಿಗಳು & ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಆಫೀಸರ್ ಆರ್ಗನೈಸಷನ್’ನ ಜನರಲ್ ಸೆಕ್ರೆಟರಿ ಸುರೇಶ ಹೆಗ್ಡೆ, ಪಿ.ಎನ್.ಬಿ ಮೆಟ್ ಲೈಫ್ ಇನ್ಶೂರೆನ್ಸ್ ರಿಜಿನಲ್ ಹೆಡ್ ಹಾರುಷ ಶೆಣೈ ಭಾರತಿ ಎ.ಎಕ್ಸ್.ಎ ಇನ್ಶೂರೆನ್ಸ್ ರಿಜಿನಲ್ ಮ್ಯಾನೇಜರ್ ಪ್ರದೀಪ್ ಶೆಟ್ಟಿ, ಬ್ಯಾಂಕ್ ನ ಅಧಿಕಾರಿಗಳಾದ ಅನಂತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಸುರ್ಗೆಡಿ ದೈವಸ್ಥಾನ ಗೆಂಡದ ಪ್ರಯುಕ್ತ ಶ್ರೀ ಕ್ಷೇತ್ರ ಹಾಲಾಡಿಯ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮೇಳದ ಸ್ತ್ರೀ ವೇಷದಾರಿ ಬೀಜಮಕ್ಕಿ ವಿಜಯ ಗಾಣಿಗ ಅವರನ್ನು ಯಕ್ಷಗಾನದ ಕಲಾಭಿಮಾನಿಗಳ ಪರವಾಗಿ ಆಡಳಿತ ಮೋಕ್ತೆಸರರಾದ ಸತ್ಯನಾರಾಯಣ ಶೆಟ್ಟಿ ವಂಡ್ಸೆ ದೊಡ್ಡಮನೆ & ಮೇಳದ ಯಜಮಾನರಾದ ವೈ ಕರುಣಾಕರ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಧೀರ್ ಶೆಟ್ಟಿ ಹಂತಡಿ (ಮುಂಬೈ),ಕುಶಾಲ್ ಶೆಟ್ಟಿ ಕೊರ್ಗಿಮನೆ, ಪಾತ್ರಿ ಮಂಜಯ್ಯ ಶೆಟ್ಟಿ, ವಿ.ಕೆ. ಶಿವರಾಮ ಶೆಟ್ಟಿ, ಶಶಿಧರ್ ಶೆಟ್ಟಿ ಕೊರಾಡಿಮನೆ, ಸುಧಾಕರ ಶೆಟ್ಟಿ, ಗಿರೀಶ ಎನ್. ನಾಯ್ಕ್, ಗಣೇಶ್ ಭಂಡಾರಿ, ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಸಂತ ರಾಜ್ ಶೆಟ್ಟಿ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಗ್ರಾಮ ಜಟ್ಟಿಗೇಶ್ವರ ಸೇವಾ ಸಮಿತಿ ಮಲ್ಯರಬೆಟ್ಟು ಗಂಗೊಳ್ಳಿ ಹಾಗೂ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಮಲ್ಯರಬೆಟ್ಟು ಗಂಗೊಳ್ಳಿ ಇದರ ಸುವರ್ಣ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಆಹ್ವಾನಿತ ಅಂತರ್ ಶಾಲಾ ಮಕ್ಕಳ ರಸಪ್ರಶ್ನೆ ಸ್ಪರ್ಧೆ ಮತ್ತು ಭಕ್ತಿಗೀತೆ ಸ್ಪರ್ಧೆ ಗಂಗೊಳ್ಳಿ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು. ಸೇವಾ ಸಮಿತಿ ಅಧ್ಯಕ್ಷ ರಾಮಪ್ಪ ಖಾರ್ವಿ, ಭಜನಾ ಮಂಡಳಿ ಅಧ್ಯಕ್ಷ ಜನಾರ್ದನ ಖಾರ್ವಿ, ಸೇವಾ ಸಮಿತಿ, ಭಜನಾ ಮಂಡಳಿ ಹಾಗೂ ಸುವರ್ಣ ಮಹೋತ್ಸವ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ (ಪ್ರಥಮ), ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆ ಗಂಗೊಳ್ಳಿ (ದ್ವಿತೀಯ) ಮತ್ತು ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ (ತೃತೀಯ) ಬಹುಮಾನ ಪಡೆದುಕೊಂಡಿತು.
