ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಕೇಂದ್ರ ಬಜೆಟ್, ಮುಂದಿನ 25 ವರ್ಷಗಳ ಅಭಿವೃದ್ಧಿಯ ದೂರದೃಷ್ಠಿತ್ವದಿಂದ ಕೂಡಿದ ಒಂದು ಅತ್ಯುತ್ತಮ ಬಜೆಟ್ ಆಗಿದೆ. ನೀರಸ ಜಗತ್ತಿಗೆ ಭಾರತ ಒಂದೇ ಭರವಸೆ ಎಂಬ ಮಾತಿನಂತೆ ಈ ಸಾಲಿನ ಬಜೆಟ್, ಜನಸಾಮಾನ್ಯರ, ಮಹಿಳೆಯರ ಹಾಗೂ ರೈತಸ್ನೇಹಿಯಾಗಿದ್ದು, ಮೃತ ಕಾಲದ ಉತ್ತರದಾಯಿಯಾಗಿ ಮೂಡಿಬಂದಿದೆ ಎಂದು ಬಿಜೆಪಿ ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ ಹೇಳಿದರು. ಬೈಂದೂರು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಫೆಡರಲ್ ಸಿಸ್ಟಮ್ನಲ್ಲಿರುವ ಭಾರತದಂತಹ ದೇಶದಲ್ಲಿ ಇಂತಹ ಆಶಾದಾಯಕ ಬಜೆಟನ್ನು ಮಂಡಿಸಲು ನಿಖರವಾದ ದೂರದರ್ಶಿತ್ವ ಇಟ್ಟುಕೊಂಡಿರುವ ಸದೃಢ ಸಶಕ್ತ ಸರ್ಕಾರದಿಂದ ಮಾತ್ರ ಸಾಧ್ಯ. ಕೋವಿಡ್ನಂತಹ ಸಂಕಷ್ಟದ ಕಾಲದಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿಗೆ ಲಸಿಕೆ ನೀಡಿರುವ ಭಾರತ, ಯಾವ ರೀತಿ ದೇಶವನ್ನು ಅಭಿವೃದ್ಧಿ ಪಡಿಸಬೇಕೆಂಬ ಚಿಂತನೆ ಮತ್ತು ಸಪ್ತ ಸೂತ್ರಗಳೊಂದಿಗೆ ಸವಾಲುಗಳನ್ನು ಎದುರಿಸಿ ಆರ್ಥಿಕ ಶಿಸ್ತು ಕಾಪಾಡಿಕೊಂಡು ಮಂಡಿಸಿದ ಅಭಿವೃದ್ಧಿ ಪರ ಬಜೆಟ್ ಇದಾಗಿದೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಂಚಿಕಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ತಿಮ್ಮಪ್ಪ ಗಾಣಿಗ ಅವರು ರಾಜ್ಯ ಮಟ್ಟದ ‘ಗ್ರಾಮೀಣ ಶಿಕ್ಷಣ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುಬ್ಬಳ್ಳಿ ಇದರ ವತಿಯಿಂದ ಶನಿವಾರ ಹುಬ್ಬಳ್ಳಿಯಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬೈಂದೂರು ತಾಲೂಕು ತಗ್ಗರ್ಸೆಯವರಾದ ತಿಮ್ಮಪ್ಪ ಗಾಣಿಗ ಅವರು 1990ರಲ್ಲಿ ಶಿಕ್ಷಕ ವೃತ್ತಿ ಸೇರಿ ಕಾರ್ಯಳ ಜೊಗಳಬೆಟ್ಟುವಿನಲ್ಲಿ ತಮ್ಮ ಸೇವೆ ಆರಂಭಿಸುತ್ತಾರೆ. ಬಳಿಕ ಕ್ರಮವಾಗಿ ಸ.ಹಿ.ಪ್ರಾ ಶಾಲೆ ಕೋಯಾನಗರ, ನಾಯ್ಕನಕಟ್ಟೆ ಹಾಗೂ ಬೈಂದೂರು ಮಾದರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಭಡ್ತಿ ಹೊಂದಿ ಸ.ಹಿ.ಪ್ರಾ ಶಾಲೆ ತಗ್ಗರ್ಸೆಯಲ್ಲಿ ಮುಖ್ಯ ಶಿಕ್ಷಕರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದೆರಡು ವರ್ಷಗಳಿಂದ ಸಹಿಪ್ರಾ ಶಾಲೆ ಕಂಚಿಕಾನುವಿನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ 33 ವರ್ಷಗಳ ಸೇವಾ ಅವಧಿಯಲ್ಲಿ ಮಕ್ಕಳ ನೆಚ್ಚಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕು ಸಾಹಿತ್ಯ ಪರಿಷತ್ತು ವತಿಯಿಂದ ಫೆ.19ರಂದು ಗಂಗೊಳ್ಳಿ ಸರಸ್ವತಿ ಪ.ಪೂ.ಕಾಲೇಜುವಠಾರದಲ್ಲಿ ನಡೆಯುವ ಗಂಗಾವಳಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷ ಕೋ.ಶಿವಾನಂದ ಕಾರಂತರನ್ನು ಅವರ ಗುಜ್ಜಾಡಿ ನಿವಾಸ ಶಿವಲಾಲಿತ್ಯಕ್ಕೆ ತೆರಳಿ ಅಧಿಕ್ರೃತವಾಗಿ ಸ್ವಾಗತಿಸಲಾಯಿತು. ಕುಂದಾಪುರ ತಾಲೂಕು ಕ.ಸಾ.ಪ.ಅಧ್ಯಕ್ಷ ಡಾ.ಉಮೇಶ್ ಪುತ್ರನ್, ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ, ಕೋಶಾಧಿಕಾರಿ ಕೆ.ಎಸ್.ಮಂಜುನಾಥ, ಜಿಲ್ಲಾ ಕ.ಸಾ.ಪ.ಕೋಶಾಧ್ಯಕ್ಷ ಮನೋಹರ್ ಅಧಿಕ್ರೃತ ಪತ್ರ ನೀಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್. ಗಣೇಶ್ ಕಾಮತ್, ಕಾರ್ಯದರ್ಶಿ ಯು.ಎಸ್ .ಶೆಣೈ, ಕ.ಸಾಪ.ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಅವರು ಸಮ್ಮೇಳನದ ವಿವರ ನೀಡಿ, ಕೋ.ಶಿ. ಕಾರಂತ, ಕುಸುಮಾ ಕಾರಂತ ದಂಪತಿಯನ್ನು ಗೌರವಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರಕಾರವು ರಾಜ್ಯ ಸರಕಾರದ ಸಹಯೋಗದೊಂದಿಗೆ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ವಯ ಗ್ರಾಮದ ಪ್ರತಿಯೊಂದು ಮನೆ ಮನೆಗೂ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಿ, ಪ್ರತಿಯೊಬ್ಬರಿಗೆ ದಿನಕ್ಕೆ 55 ಲೀ. ಶುದ್ಧ ಕುಡಿಯುವ ನೀರು ನೀಡಲು ಉದ್ದೇಶಿಸಲಾಗಿದೆ. ಇದೊಂದು ಉತ್ತಮ ಯೋಜನೆಯಾಗಿದ್ದು ಗ್ರಾಮದಲ್ಲಿನ ಪ್ರತಿಯೊಂದು ಕುಟುಂಬ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಜಲಜೀವನ್ ಮಿಷನ್ ಸಹಾಯಕ ಅಭಿಯಂತರ ಟಿ.ಗಿರೀಶ್ ಹೇಳಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿದ ಜಲಜೀವನ್ ಮಿಷನ್ ವಿಶೇಷ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಗಂಗೊಳ್ಳಿ ಗ್ರಾಮ ಪಂಚಾಯತ್ಗೆ ಸುಮಾರು ೪.೮೫ ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಎರಡು ಓವರ್ ಹೆಡ್ ಟ್ಯಾಂಕ್ ಸಹಿತ ೧೫ ಕಿ.ಮೀ ಹೊಸ ಪೈಪ್ ಪೈನ್ ಅಳವಡಿಕೆಗೆ ಕ್ರಿಯಾಯೋಜನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.07: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ವಿವಿಧ ವರ್ಗದ ಕುಶಲಕರ್ಮಿಗಳಿಗೆ ತಲಾ 50,000 ರೂ. ವರೆಗೆ ಸಾಲ-ಸಹಾಯಧನ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಪತ್ತಿನ ಸಹಕಾರ ಸಂಘಗಳನ್ನು ಹೊರತುಪಡಿಸಿ) ಗಳಿಂದ ಮಂಜೂರಾದ ಸಾಲದ ಮೇಲೆ ಇಲಾಖೆ ವತಿಯಿಂದ ಶೇ. 30 ರಷ್ಟು ಗರಿಷ್ಠ 15,000 ರೂ. ವರೆಗೆ ಸಹಾಯಧನ ನೀಡಲಾಗುವುದು. ಜಿಲ್ಲೆಯ 18 ವರ್ಷ ಮೇಲ್ಪಟ್ಟ ಕಮ್ಮಾರಿಕೆ, ಬುಟ್ಟಿ ಹೆಣೆಯುವವರು, ಗೋಲ್ಡ್ ಸ್ಮಿತ್ (ಆಭರಣ ತಯಾರಿಕೆ), ಕಲ್ಲಿನ ಕೆತ್ತನೆ, ಮರದ ಕೆತ್ತನೆಗಳು, ಕುಂಬಾರಿಕೆ, ಟೆರಾಕೋಟ್, ಮಣ್ಣಿನ ವಿಗ್ರಹ ತಯಾರಿಕೆ, ಲೋಹದ ಕರಕುಶಲ, ಬೆತ್ತ ಬಿದಿರು, ಕಸೂತಿ ಕಲೆ (ಎಂಬ್ರಾಯಿಡರಿ), ಕೋಕೋನಟ್ ಶೆಲ್ ಕ್ರಾಪ್ಟ್, ದೋಬಿ, ಚಮ್ಮಾರಿಕೆ ಹಾಗೂ ಕ್ಷೌರಿಕ ಕುಶಲಕರ್ಮಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನ. ಪಂಚಾಯತ್ ವ್ಯಾಪ್ತಿಯ ಕುಶಲರ್ಮಿಗಳು ಸಂಬAಧಿಸಿದ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಹಾಗೂ ನಗರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಎಂಟನೇ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- ೨೦೨೩ ಪ್ರದಾನ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ವಿಜೃಂಭಣೆಯಿಂದ ಜರುಗಿತು. ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಕಲಾವಿದರ ಪ್ರಾರ್ಥನೆಯೊಂದಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ಹರಿಕೃಷ್ಣ ಪುನರೂರುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ರು ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರದೀಪ್ ಕುಮಾರ್ ಕಲ್ಕೂರ್, ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನ, ಮಂಗಳೂರು ಇವರು ದೀಪ ಬೆಳಗಿಸಿ, ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -೨೦೨೩ ನ್ನು ಹಿರಿಯ ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಇವರಿಗೆ ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಭುವನಾಭಿರಾಮ ಉಡುಪ, ಪ್ರಧಾನ ಸಂಪಾದಕ, ಯುಗ ಪುರುಷ ಮಾಸ ಪತ್ರಿಕೆ, ಕಿನ್ನಿಗೋಳಿ, ಆನಂದರಾಮ ಐತಾಳ್ ಉಪ್ಪಿನಕುದ್ರು, ಅಧೀಕ್ಷಕ ಅಭಿಯಂತರರು, ಜನಾರ್ಧನ ಹಂದೆ, ಬ್ಯಾಂಕ್ ಅಧಿಕಾರಿ (ನಿವೃತ್ತ), ಮಂಗಳೂರು, ನಾಗೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಾಟಕ, ಸಂಗೀತ, ಕಲೆ ಮೊದಲಾದವುಗಳು ಮನುಷ್ಯನ ಮನೋನೆಲೆಯ ಸೆಲೆಗಳು. ಬದುಕಿನ ಅವಕಾಶಗಳನ್ನು ಅರಸಿ ಎಲ್ಲೆಯೋ ನೆಲೆ ಕಾಣಲು ಹೊರಟರೂ ಅಂತಿಮವಾಗಿ ಕಲೆ ಮನುಷ್ಯನ ಕೈಹಿಡಿದು ನಡೆಸುತ್ತದೆ ಎಂದು ರಂಗನಟ, ನಿರ್ದೇಶಕ ಯತೀಶ್ ಎನ್. ಕೊಳ್ಳೆಗಾಲ ಹೇಳಿದರು. ಸುರಭಿ ಬೈಂದೂರು ಆಶ್ರಯದಲ್ಲಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗಸುರಭಿ- 2023 ರ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ಸsಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮನುಷ್ಯನ ಬಗೆ ಬಗೆಯ ಮುಖಗಳನ್ನು ರಂಗಭೂಮಿಯಿಂದ ಮಾತ್ರ ಬಯಲು ಮಾಡಲು ಸಾಧ್ಯವಿದೆ. ಪ್ರಾದೇಶಿಕ ಭಾಷಾ ಸೊಗಡನ್ನು ರಂಗಭೂಮಿಯಲ್ಲಿ ಅಳವಡಿಸಿಕೊಂಡರೆ ಸುಲಭವಾಗಿ ಜನರ ಮನಸ್ಸನ್ನು ತಟ್ಟಬಹುದು. ರಂಗಭೂಮಿ ಚಟುವಟಿಕೆಗಳು ನಿರಂತರವಾಗಿರುವ ಪ್ರದೇಶದಲ್ಲಿ ಸ್ವಭಾವ ಮತ್ತು ಪ್ರವೃತ್ತಿಯ ಆತ್ಮಾವಲೋಕನ ನಡೆಯುವುದರಿಂದ ಅಲ್ಲಿ ಅಧಿಕ ಸಾಮರಸ್ಯ ಮನೆಮಾಡಿರುತ್ತದೆ. ಕ್ರೀಯಾಶೀಲ ಚಟುವಟಿಕೆಗಳು ಇಲ್ಲದೇ ಹೋದರೆ ಸಮಾಜ ಬೇಗನೆ ಬಿದ್ದು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಸಮುದಾಯ ಹಾಗೂ ವ್ಯಕ್ತಿಗಳ ನಡುವೆ ಸಮನ್ವಯತೆ ಸಾಧಿಸುವ ನಗರಗಳು ಸಾಂಸ್ಕೃತಿಕವಾಗಿ ಬಲಿಷ್ಠವಾಗಿವೆ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೊಡಮಾಡುವ ಜನಸ್ನೇಹಿ ಐಎಎಸ್ ಅಧಿಕಾರಿ ದಿ. ಶ್ರೀಮತಿ ಅನಿತಾಕೌಲ್ ನೆನಪಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕೋಟ ವಿವೇಕ ಬಾಲಕಿಯರ ಫ್ರೌಡಶಾಲೆಯ ಶಿಕ್ಷಕ, ಸಾಹಿತಿ ಶ್ರೀ ನರೇಂದ್ರ ಕುಮಾರ್ ಕೋಟ ಅವರನ್ನು ಆಯ್ಕೆ ಮಾಡಲಾಗಿದೆ. ಸದಾ ಹೊಸತನದ ತುಡಿತ, ಮುಖದಲ್ಲಿ ನಗು, ಸೌಮ್ಯ ಸ್ವಭಾವ, ಸಾಹಿತಿಯಾಗಿ, ಮಕ್ಕಳಿಗೆ ಗುರುವಾಗಿ, ಹಲವಾರು ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಆಪ್ತರಲ್ಲಿ ಒಬ್ಬರಾಗಿ, ಪಾದರಸದಂತೆ ದಿನ ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಒಂದಿಷ್ಟು ಪ್ರೇರಣೆಯ ಮಾತುಗಳನ್ನಾಡಿ, ಸ್ಥಳೀಯ ಸಂಘ ಸಂಸ್ಥೆಗಳಿಗೆ ದಾರಿ ದೀಪವಾಗಿ ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತಿರುವ ಸಾಹಿತಿ-ಶಿಕ್ಷಕ ಶ್ರೀನರೇಂದ್ರ ಕುಮಾರ್ ಕೋಟ ಅವರು ೨೦೨೦-೨೧ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಅಲ್ಲದೇ ಭಾರತ ಸರಕಾರದ ದ.ಕ ಜಿಲ್ಲಾ ಯುವ ಪುಸ್ಕಾರ-೧೯೯೩, ರಾಜ್ಯ ಮಟ್ಟದ ಕಾವ್ಯ ಶ್ರೀ ಪುರಸ್ಕಾರ(ಸಾಹಿತ್ಯ ಸಾಧನೆಗಳು)-೨೦೦೨, ದಿವಂಗತ ರಾಜೇಂದ್ರ ಶೆಟ್ಟಿ ಸ್ಮಾರಕ(ಹೊಸ ತರಬೇತಿಯ ಆವಿಷ್ಕಾರಕ್ಕೆ)-೨೦೦೩,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಪ್ರಾರಂಭದ ಪ್ರಥಮ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದಿದ್ದಾರೆ. ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡುತ್ತಿದೆ, ಜೆಇಇ ಮೈನ್ಸ್ 2023 ಪರೀಕ್ಷೆಯಲ್ಲಿ ಕ್ರಮವಾಗಿ ಸುಮಂತ್ 96 ಪರ್ಸಂಟೈಲ್ (99.12 ಪರ್ಸಂಟೈಲ್ ರಸಾಯನಶಾಸ್ತ್ರ), ಆಯುಷ್ ಜೆ.ಸಿ 95 ಪರ್ಸಂಟೈಲ್ ( 97.01 ಪರ್ಸಂಟೈಲ್ ಭೌತಶಾಸ್ತ್ರ), ಹರ್ಷಿತ್ ಖಾರ್ವಿ 88.17 ಪರ್ಸಂಟೈಲ್, ಓಂಕಾರ್ ಪ್ರಭು 85.5 ಪರ್ಸಂಟೈಲ್, ತನಿಷಾ 83.5 ಪರ್ಸಂಟೈಲ್ ಪಡೆದು ಜೆಇಇ ಅಡ್ವನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬದುಕಿನಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಾ ಎದ್ದು ಬಿದ್ದು ಗೆದ್ದವರು ಮಾತ್ರವೇ ನಡೆದುಬಂದ ದಾರಿಯ ಬಗ್ಗೆ ಸರಿಯಾದ ಮಾರ್ಗದರ್ಶನ ಮಾಡಬಲ್ಲರು. ಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂಬುದನ್ನು ಅರಿತರೆ ಗೆಲುವಿನ ದಾರಿ ಸುಲಭ ಎಂದು ರಂಗಭೂಮಿ ಹಾಗೂ ಸಿನಿಮಾ ನಟ ರಘು ಪಾಂಡೇಶ್ವರ ಹೇಳಿದರು. ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗಸುರಭಿ – 2023ರ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ರಂಗಭೂಮಿ ಪ್ರತಿ ಕಲಾವಿದನಿಗೂ ಧೈರ್ಯ ತುಂಬಿಕೊಡುತ್ತದೆ. ರಂಗ ಚಟುವಟಿಕೆಗಳು ಜಿಲ್ಲಾ ಕೇಂದ್ರದಷ್ಟೇ ವಿಜೃಂಭಣೆಯಿಂದ ಬೈಂದೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಜರುಗುತ್ತಿರುವುದು ಮತ್ತು ಅದಕ್ಕೆ ತಕ್ಕಂತೆ ಪ್ರಜ್ಞಾವಂತ ಪ್ರೇಕ್ಷಕರೂ ಹುಟ್ಟಿಕೊಂಡಿರುವುದು. ಈ ಎಲ್ಲದಕ್ಕೂ ಪುರಕ ವಾತಾವರಣ ನಿರ್ಮಿಸಿದ ಸಂಸ್ಥೆಗಳ ಶ್ರಮ ದೊಡ್ಡದು ಎಂದರು. ಜಿಪಂ ಮಾಜಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ…
