ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2014ನೇ ಬ್ಯಾಚ್‌ನ ಬಿಬಿಎ ಹಳೆ ವಿದ್ಯಾರ್ಥಿಗಳ ವತಿಯಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು ತಮ್ಮ ಜೀವನದ ಪಯಣದಲ್ಲಿ ಜ್ಞಾನದ ಬೆಳಕಾಗಿ ತಮ್ಮನ್ನು ರೂಪಿಸಿದ ಗುರುಗಳನ್ನು ಗೌರವಿಸಿ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ತಮ್ಮ ಜೀವನದಲ್ಲಿ ದೊರೆತ ಸ್ಪೂರ್ತಿಯನ್ನು ಸ್ಮರಿಸುವುದರೊಂದಿಗೆ ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡು ಕಾಲೇಜಿನೊಂದಿಗೆ ತಮ್ಮ ಬಾಂಧವ್ಯ ಮುಂದುವರಿಸುವುದಾಗಿ ತಿಳಿಸಿದರು.
ಸಂಸ್ಥೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಉಪನ್ಯಾಸಕರಾದ ಪಂಜು, ಮಣಿಕಂಠ, ಸುಚಿತ್ರಾ, ಜ್ಯೋತಿ, ಮಂಜುಳ, ಭಾಸ್ಕರ ಬಿಲ್ಲವ, ಹರೀಶ್, ಉದಯ್, ದೀಪಕ, ಡಾ.ರವಿಚಂದ್ರ, ಶ್ರೀಕಾಂತರಾಜ, ಕ್ರಿಸ್ಟಿ ಶರಣ್ಯ, ನಾಗವೇಣಿ ಗೌರವವಂದನೆ ಸ್ವೀಕರಿಸಿದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ. ಉಮೇಶ ಮಯ್ಯ, ಡಾ. ರಘುನಾಯ್ಕ, ಪಾಂಡುರಂಗ, ಪ್ರಾಧ್ಯಾಪಕಿ ಚಿತ್ರ ಪಡೆಯಾರ್, ಹಳೆ ವಿದ್ಯಾರ್ಥಿ ಸಂಘದ ಸಂಚಾಲಕಿ ಮಮತಾ, ಕಚೇರಿ ಸಿಬ್ಬಂದಿ ವಿಜಯ ಶೆಟ್ಟಿ, ರಾಜೇಶ್ವರಿ, ಮಂಜುನಾಥ ಉಪಸ್ಥಿತರಿದ್ದರು.
ಮಿತ್ರ ಸೇವಾಶ್ರಮ ಸಮಿತಿಯ ಸಾಧನೆ ಸ್ಮರಿಸಲಾಯಿತು. ಚೇತನ ಶೆಟ್ಟಿ ಸ್ವಾಗತಿಸಿ, ಸುಚಿತ್ರಾ ನಿರೂಪಿಸಿ, ಶ್ರದ್ಧಾಶೆಟ್ಟಿ ವಂದಿಸಿದರು. ಸಂಘಟಿಸುವಲ್ಲಿ ಅನಿಲ್, ಸುಧಾಕರ, ಭಾಸ್ಕರ್ ಸಹಕರಿಸಿದರು. ಕಾರ್ಯಕ್ರಮದ ನಂತರ ನಾನಾ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
















