ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಹೋಲಿಕ್ರಾಸ್ ಇಗರ್ಜಿಯಲ್ಲಿ ಮೊಂತಿ ಫೆಸ್ತ್ (ತೆನೆ ಹಬ್ಬ) ಸಂಭ್ರಮದಿಂದ ಆಚರಿಸಲಾಯಿತು. ಧರ್ಮಗುರು ವಿನ್ಸೆಂಟ್ ಕುವೆಲ್ಲೋ ಹಾಗೂ ಕಟ್ಕೇರಿಯ ಜೋಸ್ವೀ ಡಿಸೋಜಾ ರವರ ನೇತೃತ್ವದಲ್ಲಿ ಬಾಲೆ ಮರಿಯಮ್ಮಳಿಗೆ ಹೂವುಗಳನ್ನು ಅರ್ಪಿಸಿ, ತೆನೆಗಳ ಆಶೀರ್ವಚನ ನಡೆಸಲಾಯಿತು. ಬಳಿಕ ಮಾತೆಯ ನಾಮಕ್ಕೆ ಸ್ತುತಿಗೀತೆಗಳನ್ನು ಹಾಡುತ್ತಾ ಆಶೀರ್ವಾದಿತ ತೆನೆಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ವಿಶೇಷ ಬಲಿಪೂಜೆಯನ್ನು ನೆರೆವೆರಿಸಿ, ಎಲ್ಲರಿಗೂ ತೆನೆ ಮತ್ತು ಕಬ್ಬುಗಳನ್ನು ವಿತರಿಸಲಾಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಅ.07: ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಿ ಎಂದು ಆರ್ಥಿಕ ಇಲಾಖೆ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ. ರೇಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರವು ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ ಅರ್ಹ ಫಲಾನುಭವಿಗಳಿಗೆ ತಲಪುವ ಹಾಗೆ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈವರೆಗೆ 2,56,850 ಗುರಿ ಹೊಂದಿ 2,11,478 ರಷ್ಟು ನೋಂದಣಿಯಾಗಿ ಶೇಕಡಾ 82.34 ರಷ್ಟು ಆಗಿದ್ದು, ಈಗಲೂ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ರೇಷನ್ ಕಾರ್ಡ್ ನ ಸಮಸ್ಯೆಗಳು ಅಥವಾ ಆನ್ ಲೈನ್ ಪೋರ್ಟಲ್ಲಿನ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು. ಇಂದು ಹಿರಿಯಡ್ಕದ…
ನಮ್ಮೂರಂಗ್ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂದ್ ಕೂಡ್ಲೆ ಮನಿಯಂಗ್ ಮಾಡು ಹಬ್ಬದ್ ಜೊತಿಗೇ ಉಡುಪಿ ಮಠದ್ ಹಬ್ಬ ನೆನ್ಪ್ ಆಪುದ್ ಜಾಸ್ತಿ. ಎಲ್ಲಾ ಬದ್ಯಂಗ್ ಆಪಂಗೇ ಮನ್ಯಗಂತು ಹಬ್ಬ ಮಾಡತ್ತ್; ಮಠಕ್ಕ್ ಯಾಕ್ ಹೋಯಿಕ್ ಅಂದೇಳಿ ನೀವ್ ಕೇಂಡ್ರೆ, ನಾನ್ ಹೇಳುದ್ ಒಂದೇ ಮಾತ್; ಯಾಸ ಕಾಂಬುಕೆ. ಅದೇ ಹುಲಿಯಾಸ. ಯಾಬ್ಯಾ, 2-3 ಜಿಲ್ಲೆ ಇಂದ ಮಠಕ್ಕ್ ಬಪ್ಪು ಹುಲಿಯಾಸ ಕಂಡ್ಕಂಡ್ ಹೆದ್ರದೆ ಇಪ್ಪು ಮಕ್ಕಳೇ ಇಲ್ಲ. ಅವ್ರ್ ಓಟಿಗ್ ಒಂಚೂರ್ ಕುಣಿದೆ ಇಪ್ಪು ಜನವೇ ಇಲ್ಲ. ಹುಲಿಯಸದ್ ಚಂಡಿ ಮುಂದೆ ಯಾವ್ ಡಿಜೆಯೂ ಇಲ್ಲಾ ಕಾಣಿ. ಒಂದ್ ಸರ್ತಿ ಹುಲಿಯಾಸಾ ಹಾಕ್ದವ ಉಳ್ದರನ್ ಕುಣಿಸ್ದೆ ಬಿಡುದಿಲ್ಲ. ಇದ್ರದ್ ಒಂದ್ ನಮ್ನಿ ಗುಂಗ್ ಆರೆ ವಿಟ್ಲಪಿಂಡಿ ಗಮ್ಮತ್ತೆ ಬೇರೆ. ತೇರ್ ಎದ್ರ್ ನಡು ವಿಟ್ಲಪಿಂಡಿಯಂಗೆ ಕೈಗೆ ಸಿಕ್ದೆ ಇಪ್ಪು ಮಾಡ್ಕಿಗ್ ಕೊಕ್ಕಿ ಹಾಕುರೊಳ್ಗೆ ಆರ್ಜೀವ ಆಯಿ ಹೊತ್ತ್. ಇದ್ರ್ ಮೇಲೆ ಕಂಬುಕ್ ಸಿಕ್ಕುದ್ ರಾಕ್ಷಸರ್ ಗುಂಪ್ ಮತ್ತ್ ಗುಮ್ಮದ್ ಗಂಪ್. ಇವ್ರೆಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಟಿಕೇಟ್ ಕೈತಪ್ಪಿದಾಗಿನಿಂದ ಬಿಜೆಪಿ ಪಕ್ಷದ ಮೇಲೆ ಮುನಿಸಿಕೊಂಡಿದ್ದ ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಇದೀಗ ಬಹಿರಂಗವಾಗಿಯೇ ತಮ್ಮ ಅಸಮಾಧಾನ ತೋಡಿಕೊಂಡಿರುವುದಲ್ಲದೇ ಪಕ್ಷ ತೊರೆಯುವುದಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಇಂಗಿತ ವ್ಯಕ್ತಪಡಿಸಿದರು ಅವರು, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 2013ರಿಂದ ಬೈಂದೂರು ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿಸಿದ್ದೆ. ಬಿಜೆಪಿ ಪಕ್ಷದಿಂದ ಶಾಸಕನಾಗಿದ್ದ ಅವಧಿಯಲ್ಲಿ ಸಾಕಷ್ಟು ಜನಪರ ಕಾರ್ಯವನ್ನು ಮಾಡಿದ್ದೇನೆ. ಆದಾಗ್ಯೂ ಬಿಜೆಪಿಯಲ್ಲಿ ಬೆಳೆಯಲು ಕೊಡಲಿಲ್ಲ. ಇದು ನನ್ನ ಮನಸಿಗೆ ನೋವಾಗಿದೆ. ಕರಾವಳಿಯಲ್ಲಿ ಸ್ವಲ್ಪ ಬಿಜೆಪಿ ಪರ ಅಲೆ ಇರಬಹುದು. ಕರ್ನಾಟಕದಲ್ಲಿ ಬಿಜೆಪಿ ನೆಲೆ ಕಳೆದುಕೊಂಡಿದೆ. ನಾಲ್ಕು ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆಮಾಡಲಾಗದ ಬಿಜೆಪಿ ಇನ್ನೇನು ಮಾಡಲು ಸಾಧ್ಯ ಎಂದು ಟೀಕಿಸಿರುವ ಅವರು, ಸದ್ಯದಲ್ಲಿಯೇ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವುದಾಗಿಯೂ ತಿಳಿಸಿದ್ದಾರೆ. ಬೈಂದೂರು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ. ಗೋಪಾಲ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉದಯ ನಾಯ್ಕ್ ಅವರು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕನಕ ಅಧ್ಯಯನ ಪೀಠ, ಚೇತನಾ ಫೌಂಡೇಶನ್ ಹುಬ್ಬಳ್ಳಿ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ ಡಾ| ಎಸ್. ರಾಧಾಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೈಂದೂರು ಏಳಜಿತ ಗ್ರಾಮದವರಾದ ಉದಯ ನಾಯ್ಕ್ ಅವರು, ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಒಟ್ಟು 21 ಪದಕಗಳನ್ನು ಪಡೆದುಕೊಂಡಿದ್ದಾರೆ. ಹರ್ಷಿಣಿ ಪ್ರಥಮ ಪಿ.ಯು.ಸಿ. 59 ಕೆ.ಜಿ ವಿಭಾಗದಲ್ಲಿ ಚಿನ್ನ, 62 ಕೆ.ಜಿ.ವಿಭಾಗದಲ್ಲಿ ಭೂಮಿಕಾ ದ್ವಿತೀಯ ಪಿ.ಯು.ಸಿ.ಚಿನ್ನ, 68 ಕೆ.ಜಿ.ವಿಭಾಗದಲ್ಲಿ ಅಮಿಶಾ ಚೌದ್ರಿ ದ್ವಿತೀಯ ಪಿ.ಯು.ಸಿ.ಚಿನ್ನ, 70 ಕೆ.ಜಿ.ವಿಭಾಗದಲ್ಲಿ ಪ್ರಜ್ವಲ್ ಎಸ್ ಪೂಜಾರಿ ದ್ವಿತೀಯ ಪಿ.ಯು.ಸಿ.ಚಿನ್ನ, 74 ಕೆ.ಜಿ.ವಿಭಾಗದಲ್ಲಿ ಅದ್ವಿತ್ ದ್ವಿತೀಯ ಪಿ.ಯು.ಸಿ.ಚಿನ್ನ, 86 ಕೆ.ಜಿ.ವಿಭಾಗದಲ್ಲಿ ಶ್ರೀನಿಧಿ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ, 92 ಕೆ.ಜಿ.ವಿಭಾಗದಲ್ಲಿ ರೋಹಿತ್ ದ್ವಿತೀಯ ಪಿ.ಯು.ಸಿ.ಚಿನ್ನ, 97 ಕೆ.ಜಿ.ವಿಭಾಗದಲ್ಲಿ ಚೇತನ್ ಖಾರ್ವಿ ದ್ವಿತೀಯ ಪಿ.ಯು.ಸಿ. ಚಿನ್ನ, 125 ಕೆ.ಜಿ.ವಿಭಾಗದಲ್ಲಿ ಶ್ರೀಷ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ, 60 ಕೆ.ಜಿ.ವಿಭಾಗದಲ್ಲಿ ಸ್ವಸ್ತಿಕ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ, 72 ಕೆ.ಜಿ.ವಿಭಾಗದಲ್ಲಿ ಗಗನ್ ಎಮ್ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೊಸ ಶಿಕ್ಷಣ ನೀತಿಯನ್ನು ನೆಪವಾಗಿರಿಸಿಕೊಂಡು ಬ್ರಹ್ಮಾವರದ ಕೃಷಿ ಕಾಲೇಜು ರದ್ಧುಗೊಳಿಸಿ ಕೃಷಿ ಡಿಪ್ಲೊಮಾ ಕೋರ್ಸ್‌ಗಳನ್ನು ಸ್ಥಗಿತಗೊಳಿಸಿರುವುದು ರೈತರ ಮಕ್ಕಳಿಗೆ ಮಾಡಿದ ದ್ರೋಹವಾಗಿದೆ. ಕಾಲೇಜು ಪುನರಾರಂಭಕ್ಕಾಗಿ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ ಹೇಳಿದರು. ಇಲ್ಲಿನ ಆರ್.ಎನ್. ಶೆಟ್ಟಿ, ಮಿನಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ ತಲಾ 35 ಕೋಟಿ ವೆಚ್ಚದಲ್ಲಿ ಕೃಷಿ ಕಾಲೇಜು ಹಾಗೂ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. 2014ರಿಂದ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಸ್ಥಳೀಯ ಶಾಸಕರು ಈ ಬಗ್ಗೆ ಮಾತನಾಡುತ್ತಿಲ್ಲ. ಕಾಲೇಜು ಪುನಾರಾರಂಭ ಮಾಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ರಾಜ್ಯ ಕೃಷಿ ಸಚಿವರನ್ನು ಭೇಟಿಯಾಗಿ ಕಾಲೇಜನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಹಳೆಯ ಯಂತ್ರೋಪಕರಣಗಳನ್ನು ಗುಜರಿಗೆ ಮಾರಾಟ ಮಾಡಿದ ಹಗರಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.06: ಭಾರತೀಯ ಭೂ ಸೇನೆಯಲ್ಲಿ ಹವಾಲ್ದಾರರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳಿದ ದಿನೇಶ್ ಆಚಾರ್ಯ ಅವರಿಗೆ ನಾಗರಿಕರು ಗೌರವ ಸಂಭ್ರಮದೊಂದಿಗೆ ಸ್ವಾಗತಿಸಿಕೊಂಡಿದ್ದಾರೆ. ದಿನೇಶ್ ಆಚಾರ್ಯ ಅವರು ಹರಿಯಾಣದಲ್ಲಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ಗಾಗಿ ತರಬೇತಿ ಪಡೆದು ಜಮ್ಮು ಕಾಶ್ಮೀರ, ಉತ್ತರಾಖಂಡ ಸಹಿತ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. 2011ರಲ್ಲಿ ಕಮಾಂಡೋ ಕೋರ್ಸ್ ತರಬೇತಿಯನ್ನು ಹಿಮಾಚಲ ಪ್ರದೇಶದ ಮಸೂರಿಯಲ್ಲಿ ಪಡೆದರು. 2014ರಿಂದ ಅರುಣಾಚಲ, ಜಮ್ಮು ಕಾಶ್ಮೀರ, ಪಂಜಾಬ್ನಲ್ಲಿ ಸೇವೆ ಸಲ್ಲಿಸಿದ್ದರು. ಛತ್ತೀಸ್ ಗಢ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ನಕ್ಸಲೈಟ್ ಕಾರ್ಯಾಚರಣೆಯಲ್ಲಿ 10ಕ್ಕೂ ಅಧಿಕ ಬಾರಿ ಪಾಲ್ಗೊಂಡಿದ್ದರು. ಜಮ್ಮು ಕಾಶ್ಮೀರದ ಲಡಾಖ್ನಲ್ಲಿ ಮೈನಸ್ 35ರಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಆಫ್ರಿಕಾದ ಡಿ. ಆರ್. ಕಾಂಗೋದಲ್ಲಿ ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಭಾರತದ 135 ಮಂದಿಯ ತಂಡದೊಂದಿಗೆ ತೆರಳಿ 13ತಿಂಗಳ ಕಾಲ ಸೇವೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಹಾಗೂ ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕುರಿತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಅಧ್ಯಕ್ಷರಾದ ವಸಂತರಾಜ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ವೃತ್ತಿ ಮಾರ್ಗದರ್ಶನದ ಅಗತ್ಯತೆಯ ಕುರಿತು ಮಾತನಾಡಿದರು.ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಉಡುಪಿ ಲಕ್ಯ್ಯ ಇದರ ಅಧ್ಯಕ್ಷರಾದ ಧನುಷ್ ಕೆ ಇವರು ವಿದ್ಯಾರ್ಥಿ ಬದುಕಿಗೆ ಇಂತಹ ನೂರಾರು ಕಾರ್ಯಕ್ರಮಗಳ ಅಗತ್ಯತೆ ಬಹಳಷ್ಟಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಜಿಲ್ಲೆ 317 ರವಿರಾಜ್ ನಾಯಕ್ ರವರು ವೃತ್ತಿ ಮಾರ್ಗದರ್ಶನದ ಕುರಿತಾಗಿ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಡುಪಿ ಲಯನ್ಸ್ ಕ್ಲಬ್ ಲಕ್ಷ್ಯ ಇದರ ಉಪಾಧ್ಯಕ್ಷರಾದ ರಘುನಾಥ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಶಿಕ್ಷಕ ಮತ್ತು ಶಿಕ್ಷಕ ವೃತ್ತಿಗಳು ಅತ್ಯಂತ ಶ್ರೇಷ್ಠವಾದದ್ದು ವಿದ್ಯಾರ್ಥಿಗಳಲ್ಲಿ ಸದ್ಭಾವನೆಯನ್ನು ಬೆಳೆಸುತ್ತಾ, ಶಿಕ್ಷಕನೂ ಅಧ್ಯಯನಶೀಲನಾಗಬೇಕು. ನಿರಂತರವಾಗಿ ಗುರುತರವಾದ ಜವಾಬ್ದಾರಿಯಿಂದ ಬೋಧನೆ ಮಾಡುವವರಾಗಬೇಕು ಎಂದು ಪ್ರೊ.ಬಿ.ಪದ್ಮನಾಭ ಗೌಡ ಕರೆನೀಡಿದರು. ಅವರು ಕಾರ್ಕಳದ ಕ್ರಿಯೇಟಿವ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನದ ಪ್ರಯುಕ್ತ ಆಚರಿಸಲಾದ ‘ಗುರುದೇವೋ ಭವ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿ ಚೇತನಾ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಶೆಟ್ಟಿ ಮಾತನಾಡಿ ಗುರುಗಳೆಂದರೆ ಅಪಾರ ಗೌರವದಿಂದ ಕಾಣಬೇಕಾದ ವ್ಯಕ್ತಿ, ಅಂತಹ ವ್ಯಕ್ತಿತ್ವಕ್ಕೆ ಜಗತ್ತಿನಲ್ಲಿ ಅಪೂರ್ವ ಮನ್ನಣೆಯಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದಿ ಉಪನ್ಯಾಸಕ ವಿನಾಯಕ ಜೋಗ್ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಆದಂ ಶೇಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಸಂಸ್ಥೆಯ ಉಪನ್ಯಾಸಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
