ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ ಹಾಲಾಡಿ ಶಂಕರನಾರಾಯಣ ಘಟಕ ಮತ್ತುಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ, ಉಡುಪಿ ಇವರ ನೇತ್ರತ್ವದಲ್ಲಿ ಸದಾ ಮೊಗವೀರ ಸಮಾಜದ ಒಳಿತನ್ನೇ ಬಯಸುವ, ಬಡವರ ಪಾಲಿನ ಆಶಾಕಿರಣ, ಅನಾರೋಗ್ಯ ಪೀಡಿತರ ಜೀವ ರಕ್ಷಕ, ವಿದ್ಯಾ ಪೋಷಕ, ಕೊಡುಗೈ ದಾನಿ, ನಮ್ಮೆಲ್ಲರ ಮಾರ್ಗದರ್ಶಕರಾದ ನಾಡೋಜ ಡಾ. ಜಿ. ಶಂಕರ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ನಮ್ಮ ಘಟಕ ವ್ಯಾಪ್ತಿಯ ಯುವಕರು ಮತ್ತು ಯುವತಿಯರಿಗಾಗಿ ʼಯುವ ಪ್ರೇರಣಾ ನಾಯಕತ್ವ ತರಬೇತಿʼ ಉದ್ಯೋಗದ ಕುರಿತು ಮಾಹಿತಿ ಕಾರ್ಯಗಾರವನ್ನು ಆಯೋಜಿಸಿ ಹಲವಾರು ವಿಷಯಗಳ ಕುರಿತು ಮಾಹಿತಿ ವಿನಿಮಯವಾಯಿತು.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರಾಜು ಮೊಗವೀರ ಬಿದ್ಕಲ್‌ಕಟ್ಟೆ , ಶಿಕ್ಷಕರಾಗಿರುವ ಗಣೇಶ್ ಕಾಂಚನ್ ಮತ್ತು ಶಿಕ್ಷಕರಾಗಿರುವ ನಾಗರಾಜ್ ಎನ್. ಪುತ್ರನ್ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಯೋಗದ ಮಾಹಿತಿ, ನಾಯಕತ್ವ, ಸಂಘಟನೆಯಲ್ಲಿ ನಮ್ಮ ಜವಾಬ್ದಾರಿಯ ಕುರಿತು ಮಾಹಿತಿ ವಿನಿಮಯವಾಯಿತು.
ಘಟಕದ ಅಧ್ಯಕ್ಷ ಶರತ್ ಸೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಗದೀಶ್ ಬಿದ್ಕಲಕಟ್ಟೆ ನಿರೂಪಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಭೋಜನ ದ ವ್ಯವಸ್ಥೆ ಮಾಡಲಾಗಿತ್ತು, 70 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಗುರಿಕಾರರು, ಮಹಿಳಾ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.
















