Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮಾ 10: ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಅರೆಬೈಲು ಸತೀಶ ದೇವಾಡಿಗ ಅವರ ಮನೆಯ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಲು ಯತ್ನಿಸಿದ ಘಟನೆ ಮಾ.8 ರಂದು ರಾತ್ರಿ ಸಂಭವಿಸಿದ ಹಿನ್ನೆಲೆಯಲ್ಲಿ ನಡೆಸಲಾದ ಆಪರೇಷನ್ ಚೀತಾ ಇಂದು ಮಾರ್ಚ್ 10ರಂದು ಯಶಸ್ವಿಯಾಗಿದೆ. ಆ ಮೂಲಕ ಏಳನೇ ಚಿರತೆಯ ಬಂಧನವಾಗಿದೆ. ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಾಗೂ ಜನವಸತಿಯಿರುವ ಪ್ರದೇಶದ ಸನಿಹದಲ್ಲೇ ಇರುವ ತೋಪಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಿರತೆ ಕಾಟ ನಿರಂತರವಾಗಿದ್ದು, ಭಾನುವಾರ ಆರನೇ ಚಿರತೆಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಚಿರತೆ ಕಾಟವಿದ್ದು ಸಾರ್ವಜನಿಕರು ಆತಂಕಿತ ರಾಗಿದ್ದಾರೆ. ಅರಣ್ಯ ಇಲಾಖೆ ಸೆಪ್ಟಂಬರ್ 8ರಂದು ಈ ಜಾಗದಲ್ಲಿ ಬೋನ್ ಇರಿಸಿದ್ದು, ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್…

Read More

ವಿಪರೀತ ತಲೆನೋವು ಅನುಭವಿಸಿ ಸುಸ್ತಾಗಿ ನಗರದ ದೊಡ್ಡ ಆಸ್ಪತ್ರೆಗೆ ಹೋಗಿದ್ದೆ. ವೈದ್ಯರ ಸಲಹೆಯಂತೆ ನೇಸಲ್ ಎಂಡೋಸ್ಕೋಪಿ ಮಾಡಿಸಿಕೊಂಡು ರಿಪೋರ್ಟ್ ಗೆ ಕಾಯುತ್ತಾ ಕುಳಿತೆ.ನನ್ನ ಪಕ್ಕದಲ್ಲಿದ್ದ ಖಾಲಿ ಕುರ್ಚಿಯಲ್ಲಿ ಒಬ್ಬ ಗಂಡಸು ಬಂದು ಮುದುರಿಕೊಂಡು ಕುಳಿತರು. ಮಾಸ್ಕ್ ಹಾಕಿದ್ದರು. ಒಮ್ಮೆ ಅವರತ್ತ ನೋಡಿದೆ. ಗಂಟಲಲ್ಲಿ ದೊಡ್ಡ ಗಾತ್ರದ ಗಾಯ. ಅಯ್ಯೋ ಪಾಪ ಏನಾಗಿದೆಯೋ ಎನಿಸಿತು. ಮತ್ತೆ ಅವರು ನೋಡಲೇ ಇಲ್ಲ. ನಾನು ಪದೇ ಪದೇ ಅವರನ್ನೇ ನೋಡಡಿದರೆ ಅವರ ಮನಸ್ಸಿಗೆ ನೋವಾಗಬಹುದೆಂದು ಭಾವಿಸಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತೆ. ಸ್ವಲ್ಪ ಹೊತ್ತಿನಲ್ಲೆ ಆ ಗಂಡಸನ್ನು ವೈದ್ಯರ ಕೋಣೆಗೆ ಕರೆದರು. ಅವರಿಗೆ ಏನಾಗಿರಬಹುದೆಂಬ ಕುತೂಹಲ. ಅದಕ್ಕೆ ಸರಿಯಾಗಿ ವೈದ್ಯರ ಕೋಣೆ ಸಹ ನಾನು ಕುಳಿತ ಜಾಗದ ಎದುರಿಗಿತ್ತು.ಬನ್ನಿ ಹೇಗಿದ್ದೀರಾ ಎಂದು ಪ್ರೀತಿಯಿಂದ ವೈದ್ಯರು ವಿಚಾರಿಸಿದರು. ಆ ಪ್ರೀತಿಗೆ ತಾನು ಅರ್ಹನಲ್ಲವೆಂಬಂತೆ ಆ ವ್ಯಕ್ತಿ ಮಾಸ್ಕ್ ತೆಗೆದು ಚಿಕ್ಕ ನಗು ಬೀರಿದರು. ಕೈಯಲ್ಲಿದ್ದ ಚೀಲದಿಂದ ರಿಪೋರ್ಟ್ ತೆಗೆದು ವೈದ್ಯರ ಕೈಗಿತ್ತರು. ಡಿಪಾರ್ಟೆಂಟ್ ಆಫ್ ಓಂಕಾಲಜಿ ಎಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹೆಣ್ಣುಮಕ್ಕಳನ್ನು ಸಬಲರನ್ನಾಗಿಸುವ ಜತೆಗೆ ಪೋಷಕರನ್ನು ಜಾಗೃತಗೊಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಕುಟುಂಬದ ಕೇಂದ್ರ ಬಿಂದುವಾಗಿರುವ ಮಹಿಳೆಗೆ ಸ್ಥಾನ-ಮಾನ, ಗೌರವದ ಜತೆಗೆ ಪೂಜ್ಯ ಭಾವನೆಯಿಂದ ಕಾಣುವ ಸಂಸ್ಕೃತಿ ನಮ್ಮ ನಮ್ಮದು. ಇಂತಹ ಪರಂಪರೆ ವಿಶ್ವದ ಯಾವುದೇ ರಾಷ್ಟ್ರಗಳಲ್ಲಿಲ್ಲ ಎಂದು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಗೀತಾಂಜಲಿ ಸುವರ್ಣ ಹೇಳಿದರು. ರಾಜ್ಯ ಟೈಲರ‍್ಸ್ ಅಸೋಸಿಯೇಶನ್, ಕೆಎಸ್‌ಟಿಎ ಬೈಂದೂರು ಕ್ಷೇತ್ರ ಸಮಿತಿ ಮತ್ತು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಉಪ್ಪುಂದ ದೇವಕಿ ಸಭಾಭವನದಲ್ಲಿ ಗುರುವಾರ ಮಹಿಳಾ ದಿನಾಚರಣೆ ಹಾಗೂ ಟೈಲರ‍್ಸ್ ಡೇ ಪ್ರಯುಕ್ತ ಹನ್ನೆರಡು ಅಶಕ್ತ ಟೈಲರ್‌ಗಳಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಕೊಡಮಾಡಿದ ಹೊಲಿಗೆಯಂತ್ರಗಳನ್ನು ವಿತರಿಸಿ ಮಾತನಾಡಿದರು. ಒಬ್ಬರಿಂದಾಗದ ಕೆಲಸ ಸಂಘಟನೆ ಮೂಲಕ ಮಾಡಬಹುದು. ಹೀಗಾಗಿ ವಲಯದ ಎಲ್ಲಾ ಸದಸ್ಯರ ಸಹಭಾಗಿತ್ವ ಹಾಗೂ ಜಾತಿ ಭೇಧ ಮರೆತು ಎಲ್ಲರೂ ಒಂದಾಗಿ ಬೆರೆತು ನಮ್ಮೊಳಗಿನ ಬಾಂಧವ್ಯ ಗಟ್ಟಿಗೊಳಿಸುವ ಸದುದ್ದೇಶದಿಂದ ಮುನ್ನೆಡಬೇಕು. ಸರ್ಕಾರಗಳು ಮಹಿಳೆಯರಿಗೆ ಉನ್ನತವಾದ ಸೌಕರ್ಯಗಳನ್ನು ನೀಡುವುದರ ಮೂಲಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾ.೦೮ರಿಂದ ೧೭ರವರೆಗೆ ನಡೆಯಲಿರುವ ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಗುರುವಾರ ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ನಾಂದಿ ಪುಣ್ಯಾಹ, ಅಂಕುರಾವಾಸ ಸಿಂಹಯಾಗದ ನಂತರ ೧೧-೩೦ಕ್ಕೆ (ವೃಷಭಲಗ್ನ) ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು. ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್., ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರಾದ ಜಯಾನಂದ ಹೋಬಳಿದಾರ್, ಡಾ. ಅತುಲ್‌ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ್, ದೇವಳದ ಅರ್ಚಕರಾದ ನಾರ್ಸಿ ಗೋವಿಂದ ಅಡಿಗ, ಕೆ. ಎನ್. ಸುಬ್ರಹ್ಮಣ್ಯ ಅಡಿಗ ಮತ್ತಿತರರು ಇದ್ದರು. ಮಧ್ಯಾಹ್ನ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿತು. ಸಂಜೆ ಯಾಗಶಾಲಾ ಪ್ರವೇಶ, ರಜ್ಜು ಬಂಧನ, ಮುಹೂರ್ತಬಲಿ, ಭೇರಿತಾಡನ, ಕೌತುಕ ಬಂಧನದ ಬಳಿಕ ರಾತ್ರಿ ನಗರೋತ್ಸವ ನಡೆಯಿತು. ಮಾ.೦೯ರ ರಾತ್ರಿ ಮಯೂರಾರೋಹಣೋತ್ಸವ, ಮಾ.೧೦ರ ರಾತ್ರಿ ಡೋಲಾರೋಹಣೋತ್ಸವ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶಿವನ ಡಮರುಗದಿಂದ ಪ್ರದೋಷಕಾಲದಲ್ಲಿ ಆಗಮ, ತಂತ್ರ ಶಾಸ್ತ್ರಗಳು ಉಗಮವಾಯಿತು ಎಂದು ಪುರಾಣಗಳು ಹೇಳುತ್ತಿವೆ. ಪಾಣೀಮಹರ್ಷಿಯವರಿಂದ ತತ್ವ ಶಾಸ್ತ್ರಗಳು ಹುಟ್ಟಿಕೊಂದ್ದು, ಪ್ರಸ್ತುತ ಇವುಗಳು ಪ್ರಚಲಿತದಲ್ಲಿವೆ ಎಂದು ದೇವಳದ ತಂತ್ರಿ ಕೊಲ್ಲೂರು ಮಂಜುನಾಥ ಅಡಿಗ ಹೇಳಿದರು. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬುಧವಾರ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಸಮಾರೋಪ ಧಾರ್ಮಿಕ ಸಭಾ ಕಾರ್ಯಕ್ರಮ ಶುಭಾಶಂಸನೆಗೈದರು. ಹಿಂದಿನ ಕಾಲದಲ್ಲಿನ ರಾಜ, ಮಹಾರಾಜರು, ಜಮೀನುದಾರರು ಮತ್ತು ಸ್ಥಳೀಯ ಭಕ್ತರು ಸೇರಿ ದೇವರನ್ನು ಆರಾಧಿಸುವ ನೆಲೆಯಲ್ಲಿ ಶಾಸ್ತ್ರಬದ್ಧವಾಗಿ ನಿರ್ಮಾಣ ಮಾಡಿದ್ದಾಗಿದೆ. ದೇವಸ್ಥಾನಗಳನ್ನು ಯಾವುದೇ ಸರ್ಕಾರಗಳು ರಚನೆ ಮಾಡಿದ್ದಲ್ಲ. ಮನುಷ್ಯನ ಶರೀರದಲ್ಲಡಗಿದ ಸೂಕ್ಷ್ಮರೂಪದ ದೇವರ ಶಕ್ತಿಯ ತರಂಗಗಳು ದೇವಳದಲ್ಲಿ ವ್ಯಕ್ತವಾಗುವ ಮೂಲಕ ಒಂದು ವಿಶೇಷವಾದ ಶಕ್ತಿ ಉತ್ಪತ್ತಿಯಾಗುತ್ತದೆ ಎಂಬ ಕಲ್ಪನೆಯೊಂದಿಗೆ ಹಿಂದೆ ನಿಗದಿತ ಸ್ಥಳಗಳಲ್ಲಿ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದರು. ದೇವಾಲಯ ಹಾಗೂ ದೇವಸ್ಥಾನಗಳಗೆ ವ್ಯತ್ಯಾಸವಿದೆ ಎಂದ ಅಡಿಗರು, ಪ್ರಾಕಾರಗಳಿಲ್ಲದಿರುವ, ದೈವ, ದೇವರುಗಳಿಲ್ಲದ್ದು ದೇವಾಲಯಗಳಾದರೆ, ಶಿಖರ, ಪ್ರಾಕಾರ, ಮಹಾಪೀಠ, ಪರಿವಾರ ದೇವರುಗಳು, ನಿತ್ಯಪೂಜೆ, ಅಭಿಷೇಕ ಇವೆಲ್ಲವೂ…

Read More

ಚೈತ್ರ ರಾಜೇಶ್ ಕೋಟ | ಕುಂದಾಪ್ರ ಡಾಟ್ ಕಾಂಗತಕಾಲದ ಪರಂಪರೆಯ ಹಿರಿಮೆ, ದೈವೀ ಕಲೆಯೆಂಬ ಗರಿಮೆ, ಬಣ್ಣ-ಭಿನ್ನಾಣಗಳ ಕಲಾತ್ಮಕ ಕುಲುಮೆ, ಪುರಾಣ-ಇತಿಹಾಸಗಳ ಗೊಂಚಲಿನ ಮಹಿಮೆಯಿರುವ ಕರಾವಳಿ ಭಾಗದ ದೈವಿಕ ಕಲೆ ಹಾಗೂ ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನ. ಭಾಗವತಿಕೆ-ಚಂಡೆ-ಮದ್ದಲೆಗಳ ಝೆಂಕಾರದ ನಡುವೆ ಹೆಜ್ಜೆ-ಗೆಜ್ಜೆಗಳ ವೈಭವದ ಜೊತೆಗೆ ವೇಷಭೂಷಣ ಎಲ್ಲರನ್ನು ಬಹುಬೇಗ ಆಕರ್ಷೀಸುವುದು ಈ ಕಲೆಯ ಸಾಮರ್ಥ್ಯ. ಬಹಳ ಹಿಂದಿನಿಂದಲೂ ಗಂಡುಕಲೆ ಎಂದೇ ಪ್ರಚಲಿತದಲ್ಲಿದ್ದರೂ ಹೆಣ್ಣು ಕೂಡ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಬಲ್ಲಳು ಎಂದು ಇತ್ತೀಚೆಗೆ ಅನೇಕ ಮಹಿಳೆಯರು ಸಾಬೀತು ಪಡಿಸಿದ್ದಾರೆ. ಆದರೆ 1998ರ ಸುಮಾರಿನ ಆ ಕಾಲದಲ್ಲಿ ಹೆಣ್ಣು ಗೆಜ್ಜೆ ಕಟ್ಟಿ ಕುಣಿಯುವುದು ಸ್ವಲ್ಪ ಕಷ್ಟದ ಪರಿಸ್ಥಿಯೇ ಇತ್ತು. ಈ ಸವಾಲುಗಳ ಮಧ್ಯದಲ್ಲೇ ಬೆಂಗಳೂರಿನಂತಹ ಮಹಾನಗರದಲ್ಲಿ ಮಹಿಳೆಯರನ್ನು ಒಗ್ಗೂಡಿಸಿ, ತರಬೇತಿ ನೀಡಿ ಮಹಿಳೆಯರು ಯಕ್ಷಗಾನವನ್ನು ಮಾಡಬಲ್ಲರು ಎಂದು ತೋರಿಸಿ ಸಾಧಿಸಿದವರು ಗೌರಿ ಕೆ. ಇವರ ಪತಿ ಶ್ರೀನಿವಾಸ ಸಾಸ್ತಾನ ಯಕ್ಷಗಾನ ಗುರು ಮತ್ತು ಕಲಾವಿದರಾಗಿದ್ದರು. ಇವರ ಯಕ್ಷಗಾನ ತಂಡವನ್ನು ನೋಡಿ, ಪ್ರೇರಿತರಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಭಗವಂತನ ಮೇಲೆ ನಂಬಿಕೆ, ವಿಶ್ವಾಸ ಇಟ್ಟು ಯಾವುದೇ ಕಾರ್ಯ ಮಾಡಿದರೆ ಅದರಲ್ಲಿ ಸಫಲತೆ ಕಾಣಲು ಸಾಧ್ಯವಿದೆ. ಜೀವನದಲ್ಲಿ ನಾವು ಮಾಡುವ ಸಂಪಾದನೆ, ಈ ದೇಹ ಯಾವುದೂ ಶಾಶ್ವತವಲ್ಲ. ಭಕ್ತಿ ಮಾರ್ಗದ ಮೂಲಕ ಜೀವನ ಪಾವನಗೊಳಿಸಿಕೊಳ್ಳಲು ನಿರಂತರವಾಗಿ ಭಗವಂತನ ಆರಾಧನೆ, ಉಪಾಸನೆ ಮಾಡಬೇಕು. ಧರ್ಮ ಸಂಗ್ರಹ ಮಾಡುತ್ತಾ ಜೀವನೋತ್ಸಾಹದಿಂದ ಮುನ್ನಡೆಯಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧರ್ಮಜಾಗೃತಿಯೊಂದಿಗೆ ಸಮಾಜದ ಅಭಿವೃದ್ಧಿ ಕಾರ್ಯ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಗಣೇಶ ಕಿಣಿ ಬೆಳ್ವೆ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ತಾಲೂಕು, ತ್ರಾಸಿ ವಲಯ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತ್ರಾಸಿ ವಲಯ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ತ್ರಾಸಿ ವಲಯ, ಜನಜಾಗೃತಿ ವೇದಿಕೆ ತ್ರಾಸಿ ವಲಯ ಮತ್ತು ಭಜನಾ ಪರಿಷತ್ ತ್ರಾಸಿ ವಲಯ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ರಿ., ಇದರ ನೂತನ ಅಧ್ಯಕ್ಷರಾಗಿ ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಕುಂದಾಪುರ ತಾಲೂಕು ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕುಂಭಾಶಿ ಗ್ರಾ.ಪಂ. ಅಧ್ಯಕ್ಷೆ ಶ್ವೇತಾ ಎಸ್.ಆರ್., ಉಪಾಧ್ಯಕ್ಷರಾಗಿ ಕಾಲ್ತೋಡು ಗ್ರಾ.ಪಂ.ಸದಸ್ಯ ಅಣ್ಣಪ್ಪ ಶೆಟ್ಟಿ, ಕೋಟೇಶ್ವರ ಗ್ರಾ.ಪಂ ಸದಸ್ಯೆ ರಾಗಿಣಿ ದೇವಾಡಿಗ, ತಲ್ಲೂರು ಗ್ರಾ.ಪಂ. ಸದಸ್ಯ ಉದಯ ಕುಮಾರ್ ತಲ್ಲೂರು, ಕಾರ್ಯದರ್ಶಿಗಳಾಗಿ ಹಂಗಳೂರು ಗ್ರಾ.ಪಂ.ಸದಸ್ಯ ರೋಶನ್, ಹಟ್ಟಿಯಂಗಡಿ ಗ್ರಾ.ಪಂ.ಅಧ್ಯಕ್ಷೆ ಅಮೃತ ಭಂಡಾರಿ, ಕಿರಿಮಂಜೇಶ್ವರ ಗ್ರಾ.ಪಂ.ಸದಸ್ಯ ಆನಂದ ಪೂಜಾರಿ, ಖಜಾಂಚಿಯಾಗಿ ಹೇರೂರು ಗ್ರಾ.ಪಂ. ಸದಸ್ಯ ಸೂಲಿಯಣ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಂಚಾಲಕರು: ವಂಡ್ಸೆ ವಲಯ-ಅಂಪಾರು ಗ್ರಾ.ಪಂ. ಸದಸ್ಯ ಕಿರಣ್ ಹೆಗ್ಡೆ, ಕುಂದಾಪುರ ವಲಯ- ಕಾಳಾವರ ಗ್ರಾ.ಪಂ. ಸದಸ್ಯ ರಮೇಶ ಶೆಟಿ ವಕ್ವಾಡಿ, ಬೈಂದೂರು ವಲಯ-ಹಳ್ಳಿಹೊಳೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಾರದಲ್ಲಿ ಎರಡು ದಿನ ಸಂಚರಿಸುವ ಕೊಚುವೆಲಿ-ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್-ಕೊಚುವಲಿ ಗರೀಬ್‌ರಥ್ ರೈಲಿಗೆ ಮಂಗಳವಾರ ಬೆಳಿಗ್ಗೆ ೬ಕ್ಕೆ ಮೂಕಾಂಬಿಕಾ ರೈಲು ನಿಲ್ದಾಣ ಬೈಂದೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ರೈಲು ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಬಗ್ಗೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ವಿಶೇಷ ಮುತುವರ್ಜಿವಹಿಸಿದ್ದರು. ಸಂಸದರ ಮನವಿ ಮೆರೆಗೆ ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ನೀಡಿತ್ತು. ಇದು ಈ ಭಾಗದ ಪ್ರಯಾಣಿಕರ ಹಲವು ವರ್ಷಗಳ ಕನಸು ನನಸಾಗಿದೆ. ಮುಂಬೈ, ಶಬರಿಮಲೈಗೆ ಹೋಗುವ ಯಾತ್ರಾರ್ಥಿಗಳಿಗೆ ಈ ರೈಲು ಸೇವೆಯಿಂದ ಬಹಳಷ್ಟು ಅನುಕೂಲವಾಗಿದೆ ಎಂದು ಪ್ರತಿಕ್ರೀಯಿಸಿದ ಮೂಕಾಂಬಿಕಾ ಯಾತ್ರಿ ಸಂಘದ ಗೌರವಾಧ್ಯಕ್ಷ ಕುಂಜಾಲು ವೆಂಕಟೇಶ ಕಿಣಿ, ಸಂಸದರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್, ಉಪಾಧ್ಯಕ್ಷ ಯು. ಉದಯಶಂಕರ್ ಪಡಿಯಾರ್, ಕಾರ್ಯದರ್ಶಿ ಪ್ರಕಾಶ ಪೂಜಾರಿ ಹಾಗೂ ನಿಲ್ದಾಣದ ಟ್ಯಾಕ್ಸಿ, ಆಟೋರಿಕ್ಷಾ ಚಾಲಕ- ಮಾಲಕ ಸಂಘದ ಪದಾಧಿಕಾರಿಗಳು, ಸದಸ್ಯರು, ನಿಲ್ದಾಣದ ಸಿಬ್ಬಂದಿಗಳು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮಾ.7: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಅನುಕೂಲವಾಗುವಂತೆ ಈಗಾಗಲೇ ರಚಿಸಲಾಗಿರುವ ವಿವಿಧ ತಂಡಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಜವಾಬ್ದಾರಿಯನ್ನು ಅರಿತು, ಸಮನ್ವಯದಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದರು. ಅವರು ಇಂದು ಕುಂದಾಪುರದ ಭಂಡಾಕರ್ಸ್ ಕಾಲೇಜಿನಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಸಂಬAಧಿಸಿದAತೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ಈಗಾಗಲೇ, ಮಾದರಿ ನೀತಿ ಸಂಹಿತೆ, ಸೆಕ್ಟರ್ ಅಧಿಕಾರಿಗಳ ತಂಡ, ಪೊಲೀಸ್ ತಂಡ, ಫ್ಲೆöÊಯಿಂಗ್ ಸ್ಕಾ÷್ವಡ್ ತಂಡ, ವೀಡಿಯೋ ವೀಕ್ಷಣಾ ತಂಡ ಸೇರಿದಂತೆ ಹಲವು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು, ಅದರಂತೆ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಕರ್ತವ್ಯ ನಿರ್ವಹಣೆ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಅಸ್ಪದ ನೀಡದೇ, ಅಗತ್ಯವಿದ್ದಲ್ಲಿ…

Read More