ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕರಾವಳಿ ದೈವಗಳ ನೆಲೆತಾಣವಾಗಿ ಸದಾ ಪವಾಡಗೈಯುವ ಕ್ಷೇತ್ರವಾಗಿ ರೂಪುಗೊಂಡಿದೆ ಅದರಲ್ಲಿ ಬಬ್ಬು ಸ್ವಾಮಿ ಮಹಿಳೆ ಜಗತ್ ಪ್ರಸಿದ್ಧವಾಗಿದೆ ಎಂದು ಕದ್ರಿ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಇಲ್ಲಿನ ಗುಂಡ್ಮಿ-ಸಾಸ್ತಾನದ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಸ್ಥಾನ ಸಿರಿ ಸಿಂಗಾರ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಗುಂಡ್ಮಿಯ ಬಬ್ಬು ಸ್ವಾಮಿ ಕ್ಷೇತ್ರ ತನ್ನದೆ ಆದ ಇತಿಹಾಸವನ್ನು ಹೊಂದಿದೆ. ಆದರೆ ಅಭಿವೃದ್ಧಿ ಹೊರಗಿರುವುದು ಬೇಸರ ತಂದಿದೆ, ಇದರ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಿ ಎಂದು ಮನವಿ ಮಾಡಿ ಬಬ್ಬು ಸ್ವಾಮಿ ದೈವದ ಮಹಿಮೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಅಂಬೇಡ್ಕರ್ ರವರ ದಾರಿಯಲ್ಲಿ ಮುನ್ನಡೆದ್ದರಿಂದ ಇವತ್ತು ಈ ಹಂತದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಸಮಾಜಸೇವಕರಾದ ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್, ಜೋಸೆಫ್ ಮೆನೆಜಸ್, ಸಾಂಸ್ಕೃತಿಕ ಚಿಂತಕ ಚಂದ್ರ ಆಚಾರ್ ಕೋಟ, ಸಬಿತಾ ಗುಂಡ್ಮಿ, ಕೊರಗ ಪೂಜಾರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಹೆಬ್ರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತನ್ನ ತಾಯಿಯೊಂದಿಗೆ ಇರುವ ಚಿತ್ರವನ್ನು ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಪಿಯುಸಿ ವಿದ್ಯಾರ್ಥಿ ಪರೀಕ್ಷಿತ್ ಮಂದಾರ ಆಚಾರ್ ಬಿಡಿಸಿ ಉಡುಪಿಗೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಿದ ವೇಳೆ ಪ್ರಧಾನಿ ಜೊತೆ ಆಗಮಿಸಿದ ತಂಡಕ್ಕೆ ಹಸ್ತಾಂತರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ತಾಯಿಯೊಂದಿಗೆ ಇರುವ ಚಿತ್ರವನ್ನು ಬಿಡಿಸಿ ಪರೀಕ್ಷಿತ್ ಮಂದಾರ ಆಚಾರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಪ್ರಧಾನಿಯಿಂದ ಚಿತ್ರಕಲಾವಿದ ಪರೀಕ್ಷಿತ್ ಮಂದಾರ ಆಚಾರ್ ಅವರಿಗೆ ಅಭಿನಂದನಾ ಪತ್ರ ಲಭಿಸಿದೆ. ಪತ್ರಿಕಾ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಆ ಚಿತ್ರವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ್ದರು. ಬಹುಮುಖ ಪ್ರತಿಭೆಯ ಪರೀಕ್ಷಿತ್ ಆಚಾರ್ ಬ್ರಹ್ಮಾವರ ತಾಲ್ಲೂಕು ನಾಲ್ಕೂರು ಗ್ರಾಮ ಮಾರಾಳಿಯ ಮಂದಾರ ಆಚಾರ್ ವೀಣಾ ಆಚಾರ್ ದಂಪತಿಯ ಪುತ್ರ. ಪರೀಕ್ಷಿತ್ ಸಹೋದರಿ ಎಸ್. ಆರ್. ವಿದ್ಯಾರ್ಥಿನಿ ಪ್ರಣಮ್ಯ ಆಚಾರ್ ಕೂಡ ಬಹುಮುಖ ಪ್ರತಿಭೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಶುಕ್ರವಾದಂದು ಕಾಲೇಜು ಆವರಣದಲ್ಲಿ ಎರಡನೇ ವರ್ಷದ ಪದವಿ ಪ್ರದಾನ ಸಮಾರಂಭ ಮತ್ತು ವಾರ್ಷಿಕ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಆರ್ಜಿಯುಎಚ್ಎಸ್ ನ ಸೆನೆಟ್ ಸದಸ್ಯೆ ಮತ್ತು ಮಂಗಳೂರಿನ ಡಾ. ಎಂ. ವಿ. ಶೆಟ್ಟಿ ಫಿಸಿಯೋಥೆರಪಿ ಕಾಲೇಜಿನ ಉಪ ಪ್ರಾಂಶುಪಾಲರಾದ ವೈಶಾಲಿ ಶ್ರೀಜಿತ್ ಅವರು ತಮ್ಮ ಅಮೂಲ್ಯವಾದ ಮಾತುಗಳಿಂದ ಪದವೀಧರರನ್ನು ಪ್ರೇರೇಪಿಸಿದರು. ಗೌರವ ಅತಿಥಿಯಾಗಿ ಕುಂದಾಪುರದ ಸರ್ಕಾರಿ ಜನರಲ್ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚಂದ್ರ ಮರಕಳ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಸಂಸ್ಥೆಯ ಪ್ರಯತ್ನಗಳನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್; ಪ್ರಾಂಶುಪಾಲರಾದ ಜೆನ್ನಿಫರ್ ಫ್ರೀಡಾ ಮೆನೆಜಸ್; ಮತ್ತು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ರೂಪಶ್ರೀ ಕೆ. ಎಸ್ ಮತ್ತು ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ ಉಪಸ್ಥಿತರಿದರು. ಈ ಸಮಾರಂಭದಲ್ಲಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತ ಇದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಕರಾವಳಿ ಕಣ್ಮಣಿ ದಿವಂಗತ ಕೆ.ಸಿ. ಕುಂದರ್ ಸ್ಮಾರಕ ಉದ್ಯಮ ಪುರಸ್ಕಾರಕ್ಕೆ ಉದ್ಯಮದಲ್ಲಿ ತಮ್ಮದೆ ವಿಶಿಷ್ಠವಾದ ಸ್ಥಾನ ಗಳಿಸಿರುವ ಮತ್ತು ಸಾಧನೆ ಮಾಡಿರುವ ಅಲೆನ್ ರೋಹನ್ ವಾಜ್ ಕಲ್ಯಾಣಪುರ ಮತ್ತು ಗಣೇಶ ಪೂಜಾರಿ ಬಾರ್ಕೂರು ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಮೇ ತಿಂಗಳ 3ರ ಭಾನುವಾರ ಮಧ್ಯಾಹ್ನ 4.00 ಗಂಟೆಗೆ ಸರಿಯಾಗಿ ಕಾರಂತ ಥೀಮ್ ಪಾರ್ಕ್ನಲ್ಲಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಆನಂದ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಪಂಚಾಯತ್ ಪಿಡಿಓ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2025 ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್) ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ವಿವಿಧ “ಕನ್ನಡ ಪುಸ್ತಕ ಸೊಗಸು ಬಹುಮಾನ” ಗಳಿಗಾಗಿ ವೆಬ್ಸೈಟ್ https://kpp.karnataka.gov.in ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪ್ರಕಾಶಕರು, ಮುದ್ರಕರು ಹಾಗೂ ಕಲಾವಿದರು ಅರ್ಜಿ ಸಲ್ಲಿಸಬಹುದಾಗಿದ್ದು, ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು, ಚಿತ್ರ ಕಲಾವಿದರ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆಗಳ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಅರ್ಜಿ ನಮೂನೆಯೊಂದಿಗೆ ಮೇ.11 ರ ಒಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಕೊನೆಯ ದಿನಾಂಕ ಮುಗಿದ ನಂತರ ಬಂದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರಮ ಸಂಸ್ಕೃತಿಯ ಪ್ರತೀಕವಾದ ಪ್ರಾಚ್ಯ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳ ಅರಿವು ಮಹತ್ವವಾದದ್ದು. ಅವುಗಳ ಬಳಕೆಯ ಹಿಂದಿನ ವೈಜ್ಞಾನಿಕ ಕಾರಣಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಉದಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರರಾದ ಪ್ರಶಾಂತ್ ಪಾದೆ ಹೇಳಿದರು. ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಗುರುವಾರ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಿದ ಪ್ರಾಚ್ಯ ವಸ್ತುಗಳ ಪ್ರದರ್ಶನದಲ್ಲಿ ತೀರ್ಪುಗಾರರಾಗಿ ಹಾಗೂ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಕುಂದಾಪುರ ಡಾಟ್ ಕಾಮ್ನ ಸಂಪಾದಕ ಸುನಿಲ್ ಹೆಚ್. ಜಿ. ಮಾತನಾಡಿ, ಪ್ರತಿ ಪ್ರಾಚ್ಯ ವಸ್ತುಗಳ ಹಿಂದೆ ಬೆವರಿನ ಮೂಲದ, ಶ್ರಮ ಸಂಸ್ಕೃತಿಯ ಕಥೆ ಇದೆ. ದೀರ್ಘಕಾಲ ಬಾಳಿಕೆ ಬರುವ ಮತ್ತು ಮರುಬಳಕೆಯ ವಸ್ತುಗಳನ್ನು ಹಿರಿಯರು ಯಥೇಚ್ಛವಾಗಿ ಬಳಸುತ್ತಿದ್ದರು. ಇದು ಅವರ ಪರಿಸರ ಕಾಳಜಿಯನ್ನು ಧ್ವನಿಸುತ್ತದೆ. ಇಂದು ಮರುಬಳಕೆಯಾಗದ ಪ್ಲಾಸ್ಟಿಕ್ ನಂತಹ ವಸ್ತುಗಳಿಂದ ಪ್ರಕೃತಿ ನಾಶವಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳು ಚಿಂತಿಸಬೇಕು ಎಂದರು. ಕಾಲೇಜಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ನಗರಸಭೆಯ 2025-26 ನೇ ಸಾಲಿನ ಎಸ್.ಎಫ್.ಸಿ ಅನುದಾನದ ಶೇ.7.25ರ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ಹಾಗೂ ವ್ಯಕ್ತಿ ಸಂಬಂಧಿತ ಕಾರ್ಯಕ್ರಮದಡಿ ಸಣ್ಣ ಉದ್ದಿಮೆಗೆ ಸಹಾಯಧನ ನೀಡುವ ಸಲುವಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ಅರ್ಜಿಯೊಂದಿಗೆ ಪೂರಕ ದಾಖಲಾತಿಗಳನ್ನು ಸಲ್ಲಿಸಲು ಏಪ್ರಿಲ್ 21 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭೆಯ ಪೌರಾಯುಕ್ತರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿ, ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಯಾದ Vedantu ಜೊತೆಗಿನ ಸಹಯೋಗ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಜೆಇಇ, ಸಿಇಟಿ ತರಬೇತುದಾರರಾದ ನಾಗರಾಜು ಕೆ.ಜಿ. ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪಪ್ರಾಂಶುಪಾಲರು ಉಪಸ್ಥಿತರಿದ್ದರು. ಈ ಹೊಸ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜಿನ ದೈನಂದಿನ ಪಠ್ಯಕ್ರಮ, ಸ್ಪರ್ಧಾತ್ಮಕ ತರಗತಿಗಳ ಜೊತೆಗೆ ಅದಕ್ಕೆ ಪೂರಕವಾಗಿ ಪ್ರವೇಶ ಪರೀಕ್ಷೆಗಳಿಗಾಗಿ ಹೆಚ್ಚುವರಿ ಮಾರ್ಗದರ್ಶನ, ಅಭ್ಯಾಸ ಮತ್ತು ದಿನದ 24 ಗಂಟೆಯೂ ಸಂದೇಹ ನಿವಾರಣೆಯ ಸೌಲಭ್ಯ ದೊರೆಯುತ್ತದೆ. ಜೊತೆಗೆ ರಾಷ್ಟ್ರಮಟ್ಟದ ಮಾದರಿ ಪರೀಕ್ಷೆಗಳ ಮೂಲಕ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳೊಂದಿಗೆ ಸ್ಫರ್ಧಿಸುವ ಅವಕಾಶ ಸಿಗುವುದರಿಂದ ವಿದ್ಯಾರ್ಥಿಗಳು ತಮ್ಮ ಮಟ್ಟವನ್ನು ತಿಳಿದುಕೊಂಡು , ಅಂತಿಮ ಪರೀಕ್ಷೆಗೆ ಮುನ್ನವೇ ರಾಷ್ಟ್ರಮಟ್ಟದ ರ್ಯಾಂಕ್ ಪಡೆಯುವ ಅನುಭವವನ್ನು ಕೂಡ ಪಡೆಯುತ್ತಾರೆ. ಈ ಯೋಜನೆಯ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ, ಇದರ ರೋವರ್ಸ್ & ರೇಂಜರ್ಸ್ ಘಟಕ, ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ, ಉಡುಪಿ ಹಾಗೂ ಗ್ರಾಮ ಪಂಚಾಯತ್, ತ್ರಾಸಿ ಇವರ ಸಂಯುಕ್ತ ಆಶ್ರಯದಲ್ಲಿ ತ್ರಾಸಿ ಕಡಲತೀರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾಗಿರುವ ರವೀಶ್ ಕೊರವಡಿ ಮಾತನಾಡಿ, ಈ ಸ್ವಚ್ಛತಾ ಕಾರ್ಯದಲ್ಲಿ ಯುವ ಸಮುದಾಯ ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ರೇಂಜರ್ಸ್ ಘಟಕ ಸಂಯೋಜಕಿ ರೇವತಿ ಡಿ., ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷ ಲೋಹಿತಾಶ್ವ ಆರ್. ಕುಂದರ್, ನಿಕಟ ಪೂರ್ವ ಅಧ್ಯಕ್ಷ ದಿನೇಶ್ ಕಾಂಚನ್ ಬಾಳಿಕೆರೆ, ಕಾರ್ಯದರ್ಶಿ ಜಯಂತ್ ಕುಂದರ್ ಬಾಳಿಕೆರೆ, ಕೋಶಾಧಿಕಾರಿ ಸಂತೋಷ ಮೊಗವೀರ, ಜಿಲ್ಲಾ ಸಮಿತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಳೆದ ಹದಿಮೂರು ವರ್ಷಗಳಿಂದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಅವರು ಆಯೋಜಿಸುತ್ತಿರುವ ಯಕ್ಷಗಾನ ನೃತ್ಯ ಮತ್ತು ಅಭಿನಯ ಶಿಬಿರ ನಲಿಕುಣಿ ಪರಿಸರದ ಮಕ್ಕಳಲ್ಲಿ ಸಂಸ್ಕಾರದ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಈ ಸಂಸ್ಥೆಯಲ್ಲಿ ನೀಡಲಾಗುವ ಶಿಸ್ತುಬದ್ದ ಶಿಕ್ಷಣ ಮಕ್ಕಳ ಜೀವನದಲ್ಲಿ ನಶಿಸದಂತ ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ನುಡಿದರು. ಅವರು ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದವರು ಆಯೋಜಿಸಿರುವ ಇಪ್ಪತ್ತು ದಿನಗಳ ನಲಿ ಕುಣಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಉಪಸ್ಥಿತರಿದ್ದ ಪ್ರಾಚಾರ್ಯ ಸದಾನಂದ ಐತಾಳರು ಮಾತನಾಡಿ, ಉತ್ತಮ ಯಕ್ಷ ಶಿಕ್ಷಣವನ್ನು ನೀಡುತ್ತಿರುವ ಕಲಾಕೇಂದ್ರದ ಶ್ರಮ ಶ್ಲಾಘನೀಯ ಎಂದರು. ವೇದಿಕೆಯಲ್ಲಿ ಯಕ್ಷ ಗುರುಗಳಾದ ಕೇಶವ ಆಚಾರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಯೇಂದ್ರ ಅಡಿಗ, ರಾಘವೇಂದ್ರ ಮಟಪಾಡಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ವಂದನಾರ್ಪಣೆ ನೀಡಿದರು.
