Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಬ್ಲಾಕ್ ಕಾಂಗ್ರೆಸ್‌ ಸಮಿತಿಯ‌ ನೂತನ ಅಧ್ಯಕ್ಷರಾನ್ಮಾಗಿ ಯುವ ನಾಯಕ, ನ್ಯಾಯವಾದಿ ಕೆ. ವಿಕಾಸ್ ಹೆಗ್ಡೆ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶಿಸಿದ್ದಾರೆ. ಈ ಮೊದಲು ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜಿಲ್ಲೆಯಲ್ಲಿ ಹೋಳಿ ಹಬ್ಬದ ಆಚರಣೆಯ ಹಿನ್ನೆಲೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ, ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮತ್ತು ಗುಜ್ಜಾಡಿ ಗ್ರಾಮ ವ್ಯಾಪ್ತಿಯಲ್ಲಿ ಹಾಗೂ ಕುಂದಾಪುರ ನಗರ ಠಾಣೆಯ ಕಸಬಾ, ವಡೇರಹೋಬಳಿ ಹಾಗೂ ಹಂಗಳೂರು ಗ್ರಾಮ ವ್ಯಾಪ್ತಿಯಲ್ಲಿ ಮಾರ್ಚ್ 5 ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್‌ಗಳ ಮದ್ಯ ಮಾರಾಟವನ್ನು ನಿಷೇಧಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿದೆ. ಈ ಹಿನ್ನಲೆಯಲ್ಲಿ ಮೇಲೆ ತಿಳಿಸಲಾದ ದಿನಾಂಕದಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ ಹಾಗೂ ಕುಂದಾಪುರ ನಗರ ಠಾಣೆಯ ಕಸಬಾ, ವಡೇರಹೋಬಳಿ ಮತ್ತು ಹಂಗಳೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ (Dry Day) ಎಂದು ಘೋಷಿಸಿ, ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅದೇಶಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮೇಳಕ್ಕೆ ಗಣಪತಿ ಬೆತ್ತದ ಪೆಟ್ಟಿಗೆಯನ್ನು ಅರುಂಧತಿ ಎಚ್. ಮಯ್ಯ ಮತ್ತು ಕುಟುಂಬದವರು ಹುಬ್ಬಳ್ಳಿ ಹಾಗೂ ಕೆ. ಶ್ರೀನಿವಾಸರಾವ್ ಮತ್ತು ಸಹೋದರು ಕೋಟತಟ್ಟು ಪಡುಕರೆ ಇವರ ಪರವಾಗಿ ಹಿರಿಯ ಕೃಷಿಕ ಕೆ. ಶಿವಮೂರ್ತಿ ಕೋಟತಟ್ಟು ಪಡುಕೆರೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಅವರಿಗೆ ಹಸ್ತಾಂತರಿಸಿದರು. ಗಣಪತಿ ದೇವರು ಇಡುವ ಬೆತ್ತದ ಪೆಟ್ಟಿಗೆ ಸುಮಾರು 15,000 ರೂ ಮೌಲ್ಯ ಹೊಂದಿದ್ದು ಇತ್ತೀಚಿಗೆ ಶ್ರೀದೇಗುಲದಲ್ಲಿ ಇದನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇಗುಲದ ಸಮಿತಿಯ ಸದಸ್ಯರಾದ ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್, ಮೇಳದ ವ್ಯವಸ್ಥಾಪಕ ಸುರೇಶ್ ಬಂಗೇರ, ಯಕ್ಷಗಾನ ಸೇವಾಕರ್ತರಾದ ಸುಧೀರ್ ಕೊಯ್ಕೂರು ದಂಪತಿಗಳು ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು 2025ರಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿಗೆ ಮೂರು  ರ‍್ಯಾಂಕ್‌ಗಳು ದೊರಕಿವೆ. ಬಿ.ಬಿ.ಎ ಪದವಿ ವಿಭಾಗದಲ್ಲಿ ಕೋಟೇಶ್ವರದ ಸೂರ್ಯನಾರಾಯಣ ಅಡಿಗ ಅವರ ಪುತ್ರಿ ಶ್ರಾವ್ಯ ಎಸ್.ಅಡಿಗ ಅವರಿಗೆ ಆರನೇ ರ‍್ಯಾಂಕ್‌, ಬಿ.ಸಿ.ಎ. ವಿಭಾಗದಲ್ಲಿ ಮರವಂತೆಯ ಮೋಹನದಾಸ ಶೆಣೈ ಅವರ ಪುತ್ರಿ ಶ್ರಾವ್ಯ ಶೆಣೈ ಅವರಿಗೆ ಎಂಟನೇ ರ‍್ಯಾಂಕ್‌ ಮತ್ತು ತೆಕ್ಕಟ್ಟೆಯ ರಾಘು ಅವರು ಪುತ್ರಿ ರಕ್ಷಿತಾ ಅವರಿಗೆ ಒಂಬತ್ತನೇ ರ್ಯಾಂಕ್ ದೊರೆತಿದೆ. ಅವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಯಲ್ಲಿ ಒಟ್ಟು 4 ರ‍್ಯಾಂಕ್‌ಗಳನ್ನು ಗಳಿಸುವ ಮೂಲಕ ಉತ್ಕೃಷ್ಟ ಸಾಧನೆಗೈದಿದ್ದಾರೆ. ಕೊಲ್ಲೂರು ಸಮೀಪದ ಮುದೂರಿನ ಶೀನ ಪೂಜಾರಿ ಹಾಗೂ ವಿಶಾಲು ದಂಪತಿಗಳ ಪುತ್ರಿ ಶ್ರೇಯಾ ಬಿ.ಕಾಂ. ಪದವಿಯಲ್ಲಿ 2ನೇ ರ‍್ಯಾಂಕ್, ಕೋಣಿಯ ಶಂಕರ್ ಮೊಗವೀರ ಹಾಗೂ ಶಾಂತಾ ದಂಪತಿಗಳ ಪುತ್ರಿ ಸುಹಾನಿ ಬಿ.ಬಿ.ಎ. ಪದವಿಯಲ್ಲಿ 3ನೇ ರ‍್ಯಾಂಕ್, ಅಂಪಾರು ನೆಲ್ಲಿಕಟ್ಟೆಯ ಪ್ರಭಾಕರ್ ಪಂಗಡಗಾರ ಹಾಗೂ ಶೋಭಾ ದಂಪತಿಗಳ ಪುತ್ರಿ ನಿಖಿತಾ ಬಿ.ಸಿ.ಎ. ಪದವಿಯಲ್ಲಿ 6ನೇ ರ‍್ಯಾಂಕ್, ಕೋಣಿಯ ರಮೇಶ್ ಮೊಗವೀರ ಹಾಗೂ ವನಜಾ ದಂಪತಿಗಳ ಪುತ್ರಿ ಶೃದ್ಧಾ ಆರ್. ಬಿ.ಬಿ.ಎ. ಪದವಿಯಲ್ಲಿ 8ನೇ ರ‍್ಯಾಂಕ್ ಗಳಿಸಿದ್ದಾರೆ. ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿ, ಕಾಲೇಜು ಆಡಳಿತ ಮಂಡಳಿ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ, ಕಾಲೇಜಿನ ಬೋಧಕ-ಬೋಧಕೇತರ ವೃಂದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ತಾಲೂಕು ಕಚೇರಿಯಲ್ಲಿ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ಸಭೆ ನಡೆಯಿತು. ಈ ವೇಳೆ ಅವರು ಮಾತನಾಡಿ, ತಾಲೂಕು ಕಚೇರಿ ಹಾಗೂ ಸರ್ವೇ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಕ್ರಮ ಸಕ್ರಮ ದಡಿ ಅರ್ಜಿ ಸಲ್ಲಿಸಿರುವ ಅರ್ಹ ಕಡತಗಳನ್ನು ಮಂಜೂರು ಮಾಡಲು ಅಸಡ್ಡೆ ತೋರಿಸುತ್ತಿರುವ ಹಾಗೂ ವಿನಾಕಾರಣ ವಿಳಂಬ ಮಾಡುತ್ತಿರುವ ಸಿಬ್ಬಂದಿಗಳ ಮೇಲೆ ಕೆಂಡಾ ಮಂಡಲರಾಗಿ ಅವರನ್ನು ತರಾಟೆಗೆ ತೆಗೆದುಕೊಂಡರು ಹಾಗೂ ಇದಕ್ಕೆ ಕಾರಣರಾದವರ ವಿರುದ್ದ ನೇರ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು. ಇರುವ ಸೀಮಿತ ಅರ್ಹ ಅರ್ಜಿಗಳನ್ನು ಕಾಲ ಮಿತಿಯಲ್ಲಿ ವಿಲೇವಾರಿ ಮಾಡದೇ ತಾಂತ್ರಿಕ ಸಮಸ್ಯೆಗಳ ನೆಪವನ್ನು ಮುಂದಿಟ್ಟು ವರ್ಷಗಟ್ಟಲೆ ಅರ್ಜಿಗಳನ್ನು ಮಂಜೂರಾತಿಗೆ ಪ್ರಯತ್ನಿಸದೇ ಇರುವುದನ್ನು ಸಹಿಸಲು ಸಾಧ್ಯವಿಲ್ಲ. ಸರ್ವೇ ಇಲಾಖೆ ಹಾಗೂ ತಾಲೂಕು ಕಚೇರಿ ವಿಭಾಗಗಳು ಸಮನ್ವಯ ಕಾರ್ಯ ನಿರ್ವಹಿಸಿ ಬಾಕಿ ಉಳಿದಿರುವ ಹಕ್ಕು ಪತ್ರ ವಿತರಣೆಗೆ ಕ್ರಮವಾಗಬೇಕು ಎಂದರು. 06 ಜನ ಅರ್ಹ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 10 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. ಸಿದ್ದಾಪುರ ಗ್ರಾಮದ ಅಕ್ಕುಂಜೆಯ ಶಶಿಕಾಂತ್ ಶೆಟ್ಟಿ (44) ಬಂಧಿತ ಆರೋಪಿ. ಆರೋಪಿಗೆ 2015ರಲ್ಲಿ ಇಲ್ಲಿನ ಯುವತಿಯೊಂದಿಗೆ ವಿವಾಹವಾಗಿತ್ತು. 6 ತಿಂಗಳ ಬಳಿಕ ವರದಕ್ಷಿಣೆ ವಿಚಾರದಲ್ಲಿ ಈ ಮದುವೆ ಮುರಿದು ಬಿದ್ದಿತ್ತು ಎನ್ನಲಾಗಿದೆ. ಈ ಸಂಬಂಧ ಪತ್ನಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಂದಾಪುರ ಗ್ರಾಮಾಂತರ ಠಾಣಾ ಎಎಸ್‌ ಐ ಶಂಕರ್‌ಎಸ್‌. ಹಾಗೂ ಹೆಡ್ ಕಾನ್ ಸ್ಟೆಬಲ್‌ ಅಶೋಕ್ ಶೆಟ್ಟಿ ಅವರ ತಂಡವು ಈತ ಮುರ್ಷಿ ದಾಬಾದ್ ಜಿಲ್ಲೆಯ ಬನಿನಾ ಥಪುರ ಎಂಬಲ್ಲಿರುವುದನ್ನು ಪತ್ತೆ ಹಚ್ಚಿ, ಆತನನ್ನು ಬಂಧಿಸಿದ್ದಾರೆ. ಈತ ಅಲ್ಲಿನ ಯುವತಿಯನ್ನು ಮದುವೆಯಾಗಿರುವ ವಿಚಾರ ಈ ವೇಳೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಕುಂದಾಪುರದ ಪ್ರಥಮ ಸಿವಿಲ್ ಹಾಗೂ ಜೆಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: 2026 ಜನವರಿಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ರೋಹಿತ್ ಪಾರಡ್ಕರ್, ಅಮೋಘ್, ಗಣೇಶ್ ಪೈ, ಶುಭಂ ಕೋಟ್ಯಾನ್, ಸುಬ್ರಮಣ್ಯ ಎಸ್. ಬಿ. ಮತ್ತು ಭರತ್ ಹೆಗ್ಡೆ ಅವರು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಅವರು ಸಿ.ಎ. ಅಂತಿಮ ಪರೀಕ್ಷೆಯ ಗ್ರೂಪ್-01 ಮತ್ತು ಗ್ರೂಪ್-02 ಎರಡೂ ವಿಭಾಗಗಳಲ್ಲಿ ಉತ್ತೀರ್ಣರಾಗಿ ಈ ಸಾಧನೆಯನ್ನು ಮಾಡಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಸಿ.ಎಸ್. ಸಂಯೋಜಕರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಕುರಿ ಮತ್ತು ಎಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಚಿಕ್ಕಮಗಳೂರು ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ (10+1) ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ಸಹಾಯಧನ ಸೌಲಭ್ಯ ಪಡೆಯಲು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವ 18 ರಿಂದ 60 ವರ್ಷ ವಯೋಮಿತಿಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಉಡುಪಿ ತಾಲೂಕು ಮೊ.ನಂ: 9448134852, ಕಾಪು ತಾಲೂಕು ಮೊ.ನಂ: 8217389838, ಬ್ರಹ್ಮಾವರ ತಾಲೂಕು ಮೊ.ನಂ: 9448623690, ಕುಂದಾಪುರ ತಾಲೂಕು ಮೊ.ನಂ: 9448163237, ಬೈಂದೂರು ತಾಲೂಕು ಮೊ.ನಂ: 9741993045, ಕಾರ್ಕಳ ತಾಲೂಕು ಮೊ.ನಂ: 9845753062 ಹಾಗೂ ಹೆಬ್ರಿ ತಾಲೂಕು ಮೊ.ನಂ: 9986764615 ಅನ್ನು ಅಥವಾ ಜಿಲ್ಲಾ ಅನುಷ್ಠಾನಾಧಿಕಾರಿಗಳು, ಕರ್ನಾಟಕ ಕುರಿ ಮತ್ತು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.  ಉಡುಪಿ: ಶ್ರೀ ರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ ಸೇರಿದಂತೆ ಹಲವಾರು ದಾರ್ಶನಿಕರುಗಳು ಸರಳ ಜೀವನ ನಡೆಸವುದರೊಂದಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾಜ ಸುಧಾರಣೆಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಇಂತಹ ಮಹನೀಯರುಗಳು ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದ್ದಲ್ಲಿ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಮತ್ತು ಯೋಗಿ ನಾರೇಯಣ ಯತೀಂದ್ರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹನೀಯರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಶ್ರೀ ರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ ಸೇರಿದಂತೆ ಮತ್ತಿತರ ಮಹನೀಯರುಗಳು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ನೆನೆಯುವ ಸಲುವಾಗಿ ಹಾಗೂ ಮುಂದಿನ ಪೀಳಿಗೆಗೆ ಇವರುಗಳ ಜೀವನಾದರ್ಶಗಳನ್ನು ತಿಳಿಸುವ…

Read More