ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ವಕ್ವಾಡಿ ಗುರುಕುಲ ಪದವಿಪೂರ್ವ ಕಾಲೇಜಿನ 68 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 68 ವಿದ್ಯಾರ್ಥಿಗಳು ಉತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ. 43 ಮಂದಿ ವಿಶಿಷ್ಠ ಶ್ರೇಣಿ ಮತ್ತು 25 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲಅವಿನಾಶ್ ಅವರು ತಿಳಿಸಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ಗಗನ್ ಗಣೇಶ್ ನಾಯ್ಕ್ (581), ಲಿಖಿತ್ ಗಣೇಶ್ ಸಿ.ವಿ (578) ವಾಣಿಜ್ಯ ವಿಭಾಗದ ಪ್ರಥಮ್.ಎನ್.ಕಾಮತ್ (575), ಫ್ರೆನಿಟಾ ಡಿ ಕಾಸ್ಟಾ (572), ವರುಣ್ ಚಂದ್ ಸಿ (571), ಅಂಕ ಗಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಶೇ.100 ಫಲಿತಾಂಶದೊಂದಿಗೆ ಸಾಧನೆ ಮೆರೆದಿದ್ದು, ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸಂಜನಾ ಎನ್ ಹಾಗೂ ಮಾನ್ಯ 592 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 7ನೇ ರ್ಯಾಂಕ್, ಸುಜಯಾ ಎಚ್ ಮತ್ತು ಅನಿರುದ್ದ್ ಶೇಟ್ 591 ಅಂಕಗಳೊಂದಿಗೆ 8ನೇ ರ್ಯಾಂಕ್, ಪೂಜಾ ಕಾರಂತ 590 ಅಂಕಗಳೊಂದಿಗೆ 9ನೇ ರ್ಯಾಂಕ್, ನಮ್ರತಾ 589 ಅಂಕಗಳೊಂದಿಗೆ 10ನೇ ರ್ಯಾಂಕ್ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಸಿಂಚನಾ 590 ಅಂಕಗಳೊಂದಿಗೆ 8ನೇ ರ್ಯಾಂಕ್, ವಿನಯ ಶ್ಯಾನುಭಾಗ್ 589 ಅಂಕಗಳೊಂದಿಗೆ 9 ನೇ ರ್ಯಾಂಕ್, ಶ್ರದ್ಧಾ 588 ಅಂಕಗಳೊಂದಿಗೆ 10 ನೇ ರ್ಯಾಂಕ್ ಪಡೆದು ರಾಜ್ಯದ ಅಗ್ರ ಸ್ಥಾನಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಡಿಸ್ಟಿಂಕ್ಷನ್ ನಲ್ಲಿ 182 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಂಪ್ಯೂಟರ್ ಸೈನ್ಸ ನಲ್ಲಿ 20, ಸಂಸ್ಕ್ರತದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಸಂದೀಪ್ ಗಾಣಿಗ ನೇಮಕಗೊಂಡಿದ್ದಾರೆ. ಸಿಇಟಿ, ನೀಟ್, ಜೆಇಇ ತರಬೇತುದಾರರಾಗಿರುವ ಸಂದೀಪ್ ಗಾಣಿಗ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 10 ವರ್ಷಗಳಿಂದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ವಿಶಿಷ್ಟ ಬೋಧನಾ ಶೈಲಿಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಛಾಪು ಮೂಡಿಸಿದ ಇವರು ಪ್ರಸ್ತುತ ವರ್ಷದಿಂದ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಗೊಂಡಿದ್ದಾರೆ. ಸಿಇಟಿ, ಜೆಇಇ ತರಬೇತುದಾರ ಹಾಗೂ ಗಣಿತಶಾಸ್ತ್ರವನ್ನು ಸರಳ ತಂತ್ರ ಗಳ ಮೂಲಕ ಬೋಧಿಸಿ ವಿದ್ಯಾರ್ಥಿಗಳ ಮನಗೆದ್ದಿರುವ ಉಪನ್ಯಾಸಕ ಸುಜಯ್ ಕೋಟೆಗಾರ್ ಉಪಪ್ರಾಂಶುಪಾಲರಾಗಿ ನೇಮಕ ಗೊಂಡಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಕೆ ರಾಧಾಕೃಷ್ಣ ಶೆಣೈ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಮಂಗಳೂರು ಕೆನರಾ ವಿಕಾಸ ಕಾಲೇಜಿನ ವಿದ್ಯಾರ್ಥಿನಿ, ಬೈಂದೂರು ಬಾಡ ಮೂಲದ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಎಂ. ಶೇ. 91 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ವೃತ್ತನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬೈಂದೂರು ಬಾಡದ ರಾಘವೇಂದ್ರ ಎಂ ಹಾಗೂ ನೇತ್ರಾವತಿ ದಂಪತಿಗಳ ಪುತ್ರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಶಂಕರನಾರಾಯಣ ಮದರ್ ತೆರೆಸಾ ಪದವಿ ಪೂರ್ವ ವಿದ್ಯಾರ್ಥಿಗಳು 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ವಾಣಿಜ್ಯ ವಿಭಾಗದ ಒಟ್ಟು 50 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿಜ್ಞಾನ ವಿಭಾಗದ 86 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ 588 ಅಂಕಗಳನ್ನು ಗಳಿಸುವ ಮೂಲಕ ಸಾತ್ವಿಕ್ ವಿ ಶೆಟ್ಟಿ ರಾಜ್ಯಕ್ಕೆ ಹತ್ತನೇ ಸ್ಥಾನವನ್ನು ಮತ್ತು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. 581 ಅಂಕಗಳನ್ನು ಗಳಿಸುವ ಮೂಲಕ ಅನನ್ಯ ಶೆಟ್ಟಿ ಹಾಗೂ ಆಯೇಷ ಸಮನ್ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2023-24 ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರದ ಎಕ್ಸಲೆಂಟ್ ಪ.ಪೂ. ಕಾಲೇಜಿಗೆ ರಾಜ್ಯಮಟ್ಟದಲ್ಲಿ 13 ಸ್ಥಾನಗಳು ಬಂದಿದ್ದು, ಶೇ.100 ಫಲಿತಾಂಶ ಲಭಿಸಿದೆ. ಅತೀ ಹೆಚ್ಚು ರ್ಯಾಂಕ್ಗಳನ್ನು ಪಡೆದ ಕುಂದಾಪುರದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು ಒಟ್ಟು 404 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.100 ಫಲಿತಾಂಶ ಬರುವುದರೊಂದಿಗೆ ವಿಜ್ಞಾನ ವಿಭಾಗದಲ್ಲಿ 08 ಸ್ಥಾನಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 05 ಸ್ಥಾನಗಳನ್ನು ರಾಜ್ಯಮಟ್ಟದಲ್ಲಿ ಗಳಿಸುವುದರ ಮೂಲಕ ಸಂಸ್ಥೆಯ ಕೀರ್ತಿ ಕಳಶಕ್ಕೆ ಇನ್ನು ಹೊಳಪು ನೀಡಿದ್ದಾರೆ. ಸಂಸ್ಥೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಿರಾಗ್ 592 ಅಂಕಗಳೊAದಿಗೆ ರಾಜ್ಯಮಟ್ಟದಲ್ಲಿ 7 ನೇ ಸ್ಥಾನ, ಅನನ್ಯ ಉಡುಪ 590 ಅಂಕಗಳೊAದಿಗೆ 9 ನೇ ಸ್ಥಾನ, ನಾಗರಾಜ ಉಪ್ಪಾರ್ 590 ಅಂಕಗಳೊAದಿಗೆ 9 ನೇ ಸ್ಥಾನ, ರಕ್ಷಾ ಆರ್ ಪೂಜಾರಿ 590 ಅಂಕಗಳೊAದಿಗೆ 9 ನೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಸಂಸ್ಥೆಯ 386 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,226 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ(distinction) ಉತ್ತೀರ್ಣರಾಗಿದ್ದಾರೆ. ಪ್ರತೀಕ್ಷಾ 589 (ವಾಣಿಜ್ಯ ವಿಭಾಗ), ಪ್ರಜ್ವಲ್ ಪೂಜಾರಿ 588 (ವಿಜ್ಞಾನ ವಿಭಾಗ), ಪವಿತ್ರಾ 588(ವಿಜ್ಞಾನ ವಿಭಾಗ),ಲಾವಣ್ಯ 588 (ವಾಣಿಜ್ಯ ವಿಭಾಗ) ಐಶ್ವರ್ಯ ವೈದ್ಯ 587(ವಿಜ್ಞಾನ ವಿಭಾಗ) ಅತಿ ಹೆಚ್ಚು ಅಂಕ ಗಳಿಸಿದ್ದಾರೆ. 155 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: 2023-24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿಗೆ ಸತತ ಮೂರನೇ ವರ್ಷವೂ ಶೇ. 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ 582 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸಿಂಚನ ಆರ್. ಹೆಚ್ 592 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್ , ಹಂಸಿನಿ ವಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್, ಸುಜಿತ್ ಡಿ. ಕೆ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್, ಸಮೀಕ್ಷಾ ಎಸ್ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್, ಪ್ರೇಮ್ ಸಾಗರ್ ಪಟೀಲ್ 589 ಅಂಕಗಳೊಂದಿಗೆ ರಾಜ್ಯಕ್ಕೆ 10 ನೇ ರ‍್ಯಾಂಕ್, ವರ್ಷ ಹೆಚ್. ವಿ 589 ಅಂಕಗಳೊಂದಿಗೆ ರಾಜ್ಯಕ್ಕೆ 10 ನೇ ರ‍್ಯಾಂಕ್ ಗಳಿಸಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಾನ್ವಿ ರಾವ್ 595 ಅಂಕಗಳೊಂದಿಗೆ ರಾಜ್ಯಕ್ಕೆ 3ನೇ ಸ್ಥಾನ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಶಂಕರನಾರಾಯಣ ಮದರ್ ತೆರೆಸಾ ಪದವಿ ಪೂರ್ವ ವಿದ್ಯಾರ್ಥಿಗಳು 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ವಾಣಿಜ್ಯ ವಿಭಾಗದ ಒಟ್ಟು 50 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿಜ್ಞಾನ ವಿಭಾಗದ 86 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ 588 ಅಂಕಗಳನ್ನು ಗಳಿಸುವ ಮೂಲಕ ಸಾತ್ವಿಕ್ ವಿ ಶೆಟ್ಟಿ ರಾಜ್ಯಕ್ಕೆ ಹತ್ತನೇ ಸ್ಥಾನವನ್ನು ಮತ್ತು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. 581 ಅಂಕಗಳನ್ನು ಗಳಿಸುವ ಮೂಲಕ ಅನನ್ಯ ಶೆಟ್ಟಿ ಹಾಗೂ ಆಯೇಷ ಸಮನ್ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪಿಯು ಕಾಲೇಜಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ 100 ಪ್ರತಿಶತ ಫಲಿತಾಂಶ ದಾಖಲಿಸಿದ್ದಾರೆ. 386 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 226 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, (ಡಿಸ್ಟ್ರಿಂಕ್ಷನ್) ಉತ್ತೀರ್ಣರಾಗಿದ್ದು, ಈ ವಿದ್ಯಾರ್ಥಿಗಳು ಅತ್ಯದಿಕ ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ. ಕಾಲೇಜು ಆರಂಭಗೊಂಡ 2ನೇ ವರ್ಷದಲ್ಲಿಯೇ ಉತ್ತಮ ದಾಖಲಾತಿ ಹೊಂದಿರುವುದಲ್ಲದೇ ಫಲಿತಾಂಶದಲ್ಲಿಯೂ ಉತ್ತಮ ಸಾಧನೆ ಮಾಡಿರುವುದು ಖುಷಿ ತಂದಿದೆ. ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಕ್ರೀಡೆ, ಕಲೆ, ಸಾಹಿತ್ಯ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
