ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪಶುಪಾಲನಾ ಇಲಾಖೆ ಹಾಗೂ ಗ್ರಾಮ ಪಂಚಾಯತ್ ತ್ರಾಸಿ ವತಿಯಿಂದ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಉಚಿತವಾಗಿ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ತ್ರಾಸಿ ಗ್ರಾಮ ಪಂಚಾಯತ್ ವಠಾರದಲ್ಲಿ ಶುಕ್ರವಾರ ನಡೆಯಿತು. ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ದೇವಾಡಿಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಶು ವೈದ್ಯಾಧಿಕಾರಿ ಡಾ.ಅರುಣ್ ಕೆ.ಪಿ. ಹಾಗೂ ಸಿಬ್ಬಂದಿಗಳು ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡಿದರು. ಗ್ರಾಮಸ್ಥರು ತಮ್ಮ ಸಾಕು ನಾಯಿಗಳಿಗೆ ಲಸಿಕೆ ಹಾಕಿಸಿ ಸಹಕರಿಸಿದರು. ಲೆಕ್ಕ ಸಹಾಯಕ ಶಿವಾನಂದ, ಸದಸ್ಯರಾದ ರೆನ್ಸಮ್ ಪಿರೇರಾ, ಮಿಥುನ್ ದೇವಾಡಿಗ, ವಿಜಯ ಪೂಜಾರಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಯ ಜತೆಗೆ ಶೈಕ್ಷಣಿಕ ಪ್ರಗತಿ ಸಾಧಿಸಲು ಸ್ಥಿರವಾದ ಮಾನಸಿಕ ಆರೋಗ್ಯ ಇರಬೇಕಾದುದು ಅಗತ್ಯ. ನಮ್ಮ ದೇಹವು ಮನಸ್ಸಿನಿಂದ ನಿಯಂತ್ರಿಸಲ್ಪಡುತ್ತದೆ. ಆದುದರಿಂದ ಮನಸ್ಸು ಆರೋಗ್ಯಪೂರ್ಣವಾಗಿದ್ದರೆ ಮಾತ್ರ ಆರೋಗ್ಯಯುತ ದೇಹ, ಆರೋಗ್ಯಯುತ ಚಟುವಟಿಕೆ ಇರಲು ಸಾಧ್ಯ. ಇವೆರಡಕ್ಕೂ ಸಮಾನ ಮಹತ್ವ ನೀಡಬೇಕಾಗುತ್ತದೆ ಎಂದು ತ್ರಾಸಿಯ ಡಾನ್ ಬಾಸ್ಕೊ ಶಾಲೆಯ ರೆಕ್ಟರ್ ಫಾ. ಮ್ಯಾಕ್ಸಿಮ್ ಡಿಸೋಜ ಹೇಳಿದರು. ಈಚೆಗೆ ಶಾಲೆಯಲ್ಲಿ ನಡೆದ ಮಾನಸಿಕ ಆರೋಗ್ಯ ಅರಿವು ದಿನಾಚರಣೆಯನ್ನು ಸಂಬಂಧಿತ ಭಿತ್ತಿಚಿತ್ರವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಆಚರಣೆ ನಿಮಿತ್ತ ಒಂದು ವಾರ ನಡೆಯುವ ಚಟುವಟಿಕೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ, ಅದರ ಅರಿವು ಗಳಿಸಬೇಕು ಎಂದರು. ಶಾಲೆಯ ’ಜೀವನ ವಿಭಾಗ’ದ ಆಶ್ರಯದಲ್ಲಿ ಸ್ವಾಸ್ಥ್ಯ ವಿಭಾಗದ ಮುಖ್ಯಸ್ಥರ ಮಾರ್ಗದರ್ಶನ ಮತ್ತು ಸೀನಿಯರ್ ಸೆಕೆಂಡರಿ ವಿದ್ಯಾರ್ಥಿಗಳ ಸಹಯೋಗದಲ್ಲಿ ಜಾಗತಿಕ ಮಾನಸಿಕ ಆರೋಗ್ಯ ದಿನದಂದು ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಮಹತ್ವ ಹಾಗೂ ಸ್ವಾಸ್ಥ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತೋಟದಲ್ಲಿ ಏಣಿ ಹಿಡಿದು ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ. ಅವಘಡದಲ್ಲಿ ಉದ್ಯಮಿ, ಸಾಮಾಜಿಕ ಮುಂದಾಳು ಸತೀಶ ಸುಬ್ರಾಯ ಪ್ರಭು (52) ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ತೋಟಕ್ಕೆ ಬಂದಿದ್ದ ಕೆಲಸದವರ ಜೊತೆ ತೆಂಗಿನಕಾಯಿ ಕಟಾವು ಮಾಡುತ್ತಿದ್ದ ವೇಳೆ ಏಣಿ ಪಕ್ಕಕ್ಕಿಡುವ ಸಂದರ್ಭ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ತಗುಲಿ ಈ ದುರ್ಘಟನೆ ನಡೆದಿದೆ. ಮಂಗಳವಾರ ಬೆಳಿಗ್ಗೆ ಪವರ್ ಕಟ್ ಇರಲಿಲ್ಲ. ವಿದ್ಯುತ್ ತಂತಿಗಳು ಕೆಳಕ್ಕೆ ಜೋತು ಬಿದ್ದಿದ್ದು ಅವಘಡಕ್ಕೆ ಕಾರಣ ಎನ್ನಲಾಗಿದೆ. ಶಿರೂರಿನಲ್ಲಿ ಹಲವು ವರ್ಷಗಳ ಕಾಲ ಪ್ರಭು ಡ್ರೆಸ್‌ಲ್ಯಾಂಡ್ ಬಟ್ಟೆ ಮಳಿಗೆ ನಡೆಸಿದ್ದ ಸತೀಶ್ ಪ್ರಭು ಅವರು ಸಾಮಾಜಿಕ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರೊಂದಿಗೂ ಅನ್ಯೂನ್ಯತೆಯಿದ್ದಿದ್ದರು. ಶಿರೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸದಸ್ಯರಾದ ಸತೀಶ್ ಪ್ರಭು ಅವರು ಬಿಜೆಪಿ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದರು. ಶಿರೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗದಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಹೆಚ್‌ಸಿಇಎಸ್ ಪದವಿಪೂರ್ವ ಕಾಲೇಜು ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯಿಂದ ಪ್ರತಿನಿಧಿಸಿದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಶ ಶೆಟ್ಟಿ ಪ್ರಥಮ ಪಿ.ಯು.ಸಿ 97ಕೆ.ಜಿ ಮೇಲ್ಪಟ್ಟು ವಿಭಾಗದಲ್ಲಿಬೆಳ್ಳಿ ಪದಕ, ಆರ್ಯ ಮೊಗವೀರ ದ್ವಿತೀಯ ಪಿ.ಯು.ಸಿ 92 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಹಾಗೂ ರೋಹಿತ್ ದೇವಾಡಿಗ ಪ್ರಥಮ ಪಿ.ಯು.ಸಿ. 97ಕೆ.ಜಿ.ವಿಭಾಗದಲ್ಲಿ ಕಂಚಿನ ಪದಕ ಪಡೆದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಮೂಲಕ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರುಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದ ಅಖಿಲ ಭಾರತ ಕ್ಲಾಸ್ಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎಂ-1 66 ಕೆಜಿ ವಿಭಾಗದಲ್ಲಿ ಕುಂದಾಪುರದ ಸತೀಶ್ ಖಾರ್ವಿ ಡೆಡ್ ಲಿಫ್ಟ್’ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಕರ್ನಾಟಕ ತಂಡ ದಲ್ಲಿ ಪ್ರತಿನಿಧಿಸಿದ ಅವರು ಡೆಡ್ ಲಿಫ್ಟ್ ನಲ್ಲಿ 220 ಕೆಜಿ ಭಾರ ಎತ್ತುವ ಮೂಲಕ ಹೊಸ ದಾಖಲೆ ನಿರ್ಮಿಸಿ ಈ ಹಿಂದೆ ತಾವೇ ಮಾಡಿದ್ದ 217.5 ಕೆಜಿ ದಾಖಲೆ ಅಳಿಸಿದರು. ಅವರು ಚಾಂಪಿಯನ್’ಶಿಪ್’ನಲ್ಲಿ ಒಟ್ಟು 4 ಚಿನ್ನದ ಪದಕ ಪಡೆದಿರುತ್ತಾರೆ. ಸತೀಶ್ ಖಾರ್ವಿ ಅವರು ನ.24ರಂದು ನ್ಯೂಜಿಲ್ಯಾಂಡ್ ನಲ್ಲಿ ನಡೆಯುವ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಸ್ಪರ್ದೆಗೆ ಭಾರತ ತಂಡದಿಂದ ಪ್ರತಿನಿಧಿಸುತ್ತಾರೆ. ಈ ಸಾಧನೆಗೈದ ಸತೀಶ್ ಅವರಿಗೆ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ, ಕುಂದಾಪುರ ಕೊಂಕಣಿ ಸಮಾಜ, ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಖಾರ್ವಿಕೇರಿ ಹಾಗೂ ಹರ್ಕುಲಸ್ ಜಿಮ್ ಸಂಸ್ಥೆಯ ಹಿರಿಯ ಕಿರಿಯ ಕ್ರೀಡಾಪಟುಗಳು ಅಭಿಮಾನಿಗಳು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ/ಬೈಂದೂರು: ಯುಎಇನಲ್ಲಿ ನಡೆದ ಅಂತರಾಷ್ಟ್ರೀಯ ಕಿವುಡರ ಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಡಿಐಸಿಸಿ ಟಿ-20 ಚಾಂಪಿಯನ್ ಟ್ರೋಫಿ 2022 ವಿಜೇತ ಭಾರತ ಕಿವುಡರ ಕ್ರಿಕೆಟ್ ತಂಡದ ಸದಸ್ಯ, ಕರ್ನಾಟಕದಿಂದ ಆಯ್ಕೆಯಾದ ಏಕಮಾತ್ರ ಆಟಗಾರ ಪ್ರಥ್ವಿರಾಜ್ ಶೆಟ್ಟಿ ಅವರು ಭಾನುವಾರ ಹುಟ್ಟೂರಿಗೆ ಮರಳುವ ವೇಳೆ ಕುಂದಾಪುರ ಹಾಗೂ ಬೈಂದೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಕುಂದಾಪುರದಿಂದ ಗೋಳಿಹೊಳೆ ತನಕ ಬೈಂದೂರು ಮಾರ್ಗವಾಗಿ ಪ್ರಥ್ವಿರಾಜ ಶೆಟ್ಟಿ ಅವರನ್ನು ಪುರಮೆರವಣಿಗೆ ಮೂಲಕ ಕರೆತಂದು ಬಳಿಕ ಕುಂದಾಪುರದಲ್ಲಿ ಯುವ ಬಂಟರ ಸಂಘ ಹಾಗೂ ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್, ಬೈಂದೂರಿನಲ್ಲಿ ಬಂಟರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಗೌರವಿಸಿದವು. ಕುಂದಾಪುರದದ ಆರ್.ಎನ್. ಶೆಟ್ಟಿ ಮಿನಿ ಹಾಲ್’ನಲ್ಲಿ ಜರುಗಿದ ಸನ್ಮಾನ ಕಾರ್ಯಕ್ರಮದಲ್ಲಿ ಯುವ ಬಂಟರ ಸಂಘದ ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಸುಕೇಶ್ ಶೆಟ್ಟಿ ಹೊಸ್ಮಠ, ಸುನಿಲ್ ಶೆಟ್ಟಿ ಹೆರಿಕುದ್ರು, ಪದಾಧಿಕಾರಿಗಳಾದ ಸಚಿನ್ ಶೆಟ್ಟಿ ಹುಂಚನಿ, ರವಿಶಂಕರ ಹೆಗ್ಡೆ ಸಬ್ಬಾಡಿ, ನಿತಿನ್ ಶೆಟ್ಟಿ ಹುಂಚನಿ, ದಿನಕರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸಾಂಸ್ಕ್ರತಿಕ ಸೇವಾ ಪ್ರತಿಷ್ಠಾನ, ಸುರಭಿ ರಿ. ಬೈಂದೂರು ಇದರ ನೂತನ ಅಧ್ಯಕ್ಷರಾಗಿ ಎರಡನೇ ಅವಧಿಗೆ ನಾಗರಾಜ ಪಿ. ಯಡ್ತರೆ ಹಾಗೂ ಕಾರ್ಯದರ್ಶಿಯಾಗಿ ಭಾಸ್ಕರ ಬಾಡ ಅವರು ಪುನರಾಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಯು. ಚಂದ್ರಶೇಖರ ಹೊಳ್ಳ, ಉಪಾಧ್ಯಕ್ಷರಾಗಿ ಆನಂದ ಮದ್ದೋಡಿ ಹಾಗೂ ಅಬ್ದುಲ್ ರವೂಫ್, ಜೊತೆ ಕಾರ್ಯದರ್ಶಿಗಳಾಗಿ ನಿಶ್ಚಿತಾ, ಗಣೇಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಗಾಣಿಗ, ರಾಮಕೃಷ್ಣ ದೇವಾಡಿಗ ಉಪ್ಪುಂದ, ಖಜಾಂಚಿಯಾಗಿ ಸುರೇಶ್ ಹುದಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲಕೃಷ್ಣ ಜೋಶಿ, ನಾಗರಾಜ ಬೆಳ್ಳಿ, ರಾಘವೇಂದ್ರ ಕೆ., ಉದಯ ಗಾಣಿಗ, ಗಿರೀಶ್ ಮೇಸ್ತ, ರವಿರಾಜ ಮಯ್ಯಾಡಿ, ಲಕ್ಷ್ಮಣ ಕೊರಗ, ಸುನಿಲ್ ಹೆಚ್. ಜಿ., ಗಣೇಶ್ ಟೈಲರ್ ಆಯ್ಕೆಯಾಗಿದ್ದಾರೆ. ಸಂಸ್ಥೆಯ ನಿರ್ದೇಶಕರಾಗಿ ಸುಧಾಕರ ಪಿ., ಗಣಪತಿ ಹೋಬಳಿದಾರ್ ಹಾಗೂ ವ್ಯವಸ್ಥಾಪಕರಾಗಿ ಕೃಷ್ಣಮೂರ್ತಿ ಉಡುಪ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಪರಿಕಲ್ಪನೆಯೊಂದಿಗೆ ಕನಸನ್ನು ಕಂಡವರು ಡಾ ಬಾಬಾಸಾಹೇಬ್ ಅಂಬೇಡ್ಕರ್ ರವರು. ಮೀಸಲಾತಿ ಮಾತ್ರವಲ್ಲದೆ ಅನೇಕ ಸೌಲಭ್ಯಗಳಿಗೆ ಕಾರಣಿಭೂತವಾದ ಕಾನೂನುಗಳು ಜಾರಿಯಾಗಲು ಕಾರಣ ಮತ್ತು ಅದರ ಹಿನ್ನೆಲೆಗಳು ಆರ್ಥಿಕ ಅಭಿವೃದ್ಧಿ ನೀರಾವರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಸಕಾರಾತ್ಮಕ ಬದಲಾವಣೆಗಳಿಗೆ ಅಂಬೇಡ್ಕರ್ ರವರು ಶ್ರಮಿಸಿದ ಬಗೆಯನ್ನು ದೃಷ್ಟಾಂತಗಳ ಮೂಲಕ ಸಾಮಾಜಿಕ ಚಿಂತಕರಾದ ನಾರಾಯಣ ಮಣೂರು ಅವರು ವಿವರಿಸಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲ್ಲೂಕು ಘಟಕ ಸಹಯೋಗದೊಂದಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ನಡೆದ “ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು” ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ಘಟಕದ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಡಾ. ರಘು ನಾಯ್ಕ್ರರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ನುಡಿಗಳನ್ನು ಆಡಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಪ್ರಾಸ್ತಾವಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ‘ಕರ್ನಾಟಕ ರಾಜ್ಯ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿನ್ಶಿಪ್ 2022’ ರ ಜೂನಿಯರ್ ವಿಭಾಗದಲ್ಲಿ ಬೈಂದೂರು ತಗ್ಗರ್ಸೆಯ ಯುವತಿ ಸೌಮ್ಯ ಬಿ. ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾಳೆ. ಈ ಮೊದಲು ಮೈಸೂರಿನಲ್ಲಿ ನಡೆದಿದ್ದ ಕರ್ನಾಟಕ ರಾಜ್ಯ ಜ್ಯೂನಿಯರ್, ಸಬ್ ಜ್ಯೂನಿಯರ್ ಹಾಗೂ ಮಾಸ್ಟರ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ – 22ರ ಜ್ಯೂನಿಯರ್ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದರು. ಈಕೆ ಬೈಂದೂರು ತಗ್ಗರ್ಸೆಯ ಬಾಬು ಪೂಜಾರಿ ಹಾಗೂ ಮೋಹಿನಿ ದಂಪತಿಗಳ ಪುತ್ರಿಯಾಗಿದ್ದು, ಬ್ರಹ್ಮಾವರ ವೀರಮಾರುತಿ ಜಿಮ್’ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಇದನ್ನೂ ಓದಿ:► ಪವರ್ ಲಿಫ್ಟಿಂಗ್ ಜ್ಯೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಸೌಮ್ಯಗೆ ಕಂಚು – https://kundapraa.com/?p=59975 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್, ದ.ಕ ಮತ್ತು ಉಡುಪಿ ಜಿಲ್ಲೆ ಹಾಗೂ ಕುಂದಾಪುರ – ಬೈಂದೂರು ವಲಯ ಇವರ ನೇತೃತ್ವದಲ್ಲಿ ಬೀಜಾಡಿಯ ಐಶ್ವರ್ಯ ಮೀಡಿಯಾ ಮತ್ತು ಸ್ಟುಡಿಯೋ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆ, ಅಗ್ನಿಶಾಮಕ ಠಾಣೆ ಕುಂದಾಪುರ, ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕ ಇವರ ಸಹಯೋಗದೊಂದಿಗೆ ಕಾಲೇಜಿನಲ್ಲಿ ವಿಶ್ವ ಪ್ರಕೃತಿ ವಿಕೋಪ ನಿಯಂತ್ರಣ ದಿನಾಚರಣೆ ಕಾರ್ಯಕ್ರಮ ಜರುಗಿತು. ಕುಂದಾಪುರದ ಡಿ.ವೈ.ಎಸ್.ಪಿ ಕೆ. ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳು ಜಾಸ್ತಿಯಾಗುತ್ತಿವೆ. ಮನುಷ್ಯ ಮತ್ತು ಪ್ರಕೃತಿಯ ಒಡನಾಟದಲ್ಲಿ ಸಾಮರಸ್ಯ ತಪ್ಪಿರುವುದೇ ಇದಕ್ಕೆ ಕಾರಣ. ಅತಿವೃಷ್ಟಿ, ನೆರೆ ಹಾವಳಿ, ಭೂ ಕುಸಿತ, ಮೇಘ ಸ್ಪೋಟ ಇತ್ಯಾದಿಗಳು ಒಂದಿಲ್ಲೊಂಡೆದೆ ದಿನನಿತ್ಯ ಎಂಬಂತಾಗಿದೆ. ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಅಸಾಧ್ಯವಾದರೂ, ಅವುಗಳ ಬಗ್ಗೆ ಅರಿವು ಹೊಂದಿದ್ದರೆ, ಜೀವ ಮತ್ತು…
