ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ವರುಣತೀರ್ಥ ವೇದಿಕೆ ವತಿಯಿಂದ ಆಯೋಜಿಸಲಾದ ನಿರಂತರ- 2024ರ ಸಮಾರಂಭದಲ್ಲಿ50 ವರ್ಷ ಪುರೈಸಿದ ಸಾಲಿಗ್ರಾಮ ಮಕ್ಕಳ ಮೇಳಕ್ಕೆ ಗೌರವ ಅಭಿನಂದನಾ ಪುರಸ್ಕಾರ ಪ್ರದಾನ ಮಾಡಲಾಯಿತು. ಸಾಲಿಗ್ರಾಮ ಮಕ್ಕಳ ಮೇಳದ ಪರವಾಗಿ ಸಂಸ್ಥೆಯ ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ ಅವರು ಪುರಸ್ಕಾರ ಸ್ವೀಕರಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮಂಗಳೂರು ಕಂಕನಾಡಿ ರೋಷನಿ ನಿಲಯ ಕಾಲೇಜು ಆಯೋಜಿಸಲಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಕರಾಟೆ ಸ್ಪರ್ಧೆಯಲ್ಲಿ ಬೈಂದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಲಕ್ಷ್ಮಿಕಾಂತ, ನೀಲೇಶ್ ಮತ್ತು ಸುಶನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕದೊಂದಿಗೆ ಸೌತ್ ವೆಸ್ಟ್ ಜೋನ್ ಮಧ್ಯಪ್ರದೇಶದಲ್ಲಿ ನಡೆಯುವ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಟೀಮ್ ಚಾಂಪಿಯನ್ ಶಿಪ್‍ನಲ್ಲಿ ಲಕ್ಷ್ಮಿಕಾಂತ, ನೀಲೇಶ, ಆಯುಷ್ ಪುತ್ರನ್, ಸುಶನ್, ಮಹಮ್ಮದ್ ಶಮ್ಮಜ್, ಆಯುಷ್ ನಾಯಕ್ ಭಾಗವಹಿಸಿ, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಬೈಂದೂರು ಕಾಲೇಜಿನ ಇತಿಹಾಸದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುವುದು ವಿಶೇಷ ಸಾಧನೆಯಾಗಿದೆ. ಈ ಸಾಧನೆಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಹಾಗೂ ಬೈಂದೂರಿನ ಗೌರವವನ್ನು ಹೆಚ್ಚಿಸಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ, ಕಾಲೇಜು ಅಭಿವೃಧ್ಧಿ ಸಮಿತಿ, ಕ್ರೀಡಾ ತರಬೇತುದಾರರಾದ ಪ್ರಭಾಕರ ಗೌಡ, ಕಾಲೇಜಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ನವೆಂಬರ್ 7 ರಂದು ಬೆಳಗ್ಗೆ 10 ಗಂಟೆಯಿಂದ 9 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳು ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು ಇಲ್ಲಿ ನಡೆಯುವ ರಾಜ್ಯ ಮಟ್ಟದ “ಕಲಾಶ್ರೀ” ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸ್ಪರ್ಧೆಯ ವಿವರ:ಸೃಜನಾತ್ಮಕ ಪ್ರದರ್ಶನ ಕಲೆ: ಶಾಸ್ರ್ತೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಶಾಸ್ರ್ತೀಯ ಸಂಗೀತ, ಹಿಂದು ಶಾಸ್ರ್ತೀಯ ಸಂಗೀತ, ಸುಗಮ ಸಂಗೀತ (ವೈಯಕ್ತಿಕ)ವಿಜ್ಞಾನದಲ್ಲಿ ನೂತನ ಆವಿಷ್ಕಾರ: ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ.ಸೃಜನಾತ್ಮಕ ಕಲೆ: ಚಿತ್ರಕಲಾ ಸ್ಫರ್ಧೆ.ವಾದ್ಯ ಸಂಗೀತ: ತಬಲಾ, ಮೃದಂಗ, ಕೀಬೋರ್ಡ್, ಕೊಳಲು, ಡೊಳ್ಳು ಮತ್ತು ನಗಾರಿ ಹಾಗೂ ಅಂಗವಿಕಲ, ಬುಡಕಟ್ಟು ಪ್ರದೇಶದ ಮಕ್ಕಳಿಗಾಗಿ (ಯಾವುದೇ ಪ್ರಕಾರ). ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದೂರವಾಣಿ ಸಂಖ್ಯೆ: 0820-2574978 ಅನ್ನು ಸಂಪರ್ಕಿಸಬಹುದಾಗಿದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: “ಕನ್ನಡ ನಾಡು ತನ್ನದೇ ಆದ ಇತಿಹಾಸ ಪರಂಪರೆಯನ್ನು ಹೊಂದಿದ್ದು, ಈ ನಾಡನ್ನು ಕಟ್ಟುವಲ್ಲಿ ಅನೇಕ ಮಹನೀಯರ ತ್ಯಾಗ, ಹೋರಾಟ, ಬಲಿದಾನಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಕನ್ನಡ ನಾಡಿನ ನೆಲ, ಜಲ, ಭಾಷೆಯನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಕ್ರಿಯೇಟಿವ್ ಸಂಸ್ಥೆಯು ಸಾಹಿತ್ಯ ಕ್ಷೇತ್ರದಲ್ಲಿನ ಮಹನೀಯರನ್ನು ಗುರುತಿಸಿ ಗೌರವಿಸಿ ಅವರ ಸಾಧನೆ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವಲ್ಲಿ ಕಾರ್ಯೋನ್ಮುಖವಾಗಿದೆ”. ಎಂದು ಕ್ರಿಯೇಟಿವ್ ಸಂಸ್ಥೆಯ ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್. ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ನಮನಗಳನ್ನು ಸಲ್ಲಿಸುತ್ತಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕರಾದ ಶಿವಕುಮಾರ್, ಸಂತೋಷ್ ಹಾಗೂ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾದ ರಾಘವೇಂದ್ರ ಮತ್ತು ನಿಲಯ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಕನ್ನಡ ಗೀತ ಗಾಯನ ನೆರವೇರಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೋಟಗಾರಿಕೆ ಇಲಾಖೆಯ ವತಿಯಿಂದ ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರು ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ಉತ್ತಮ ಗುಣಮಟ್ಟದ ಅಡಿಕೆ (ರೂ.25) ಹಾಗೂ ತೆಂಗು (ರೂ.75) ಗಿಡಗಳನ್ನು ಉತ್ಪಾದಿಸಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಹಾಗೂ ತೆಂಗು ಗಿಡಗಳು ಲಭ್ಯವಿದ್ದು ಗಿಡಗಳನ್ನು ಖರೀದಿಸಲು ಮೊ.ನಂ: 8527225123, ಕುಂದಾಪುರ ತಾಲೂಕಿನ ಕೆದೂರು ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಗಿಡಗಳು ಲಭ್ಯವಿದ್ದು, ಗಿಡಗಳನ್ನು ಖರೀದಿಸಲು ಮೊ.ನಂ: 9482166313, ಕುಂದಾಪುರ ತಾಲೂಕಿನ ಕುಂಭಾಶಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಹಾಗು ತೆಂಗು ಗಿಡಗಳು ಲಭ್ಯವಿದ್ದು ಗಿಡಗಳನ್ನು ಖರೀದಿಸಲು ಮೊ.ನಂ:8792644127 ಹಾಗೂ ಕಾರ್ಕಳ ತಾಲೂಕಿನ ಕುಕ್ಕಂದೂರು ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಹಾಗೂ ತೆಂಗು ಗಿಡಗಳು ಲಭ್ಯವಿದ್ದು, ಗಿಡಗಳನ್ನು ಖರೀದಿಸಲು ಮೊ.ನಂ: 7996394553 ಅನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ನರಿಂಗಾಣ ಗ್ರಾಮದ ಸಪಾಝ್ (29), ಉಡುಪಿ ಸಂತೆಕಟ್ಟೆಯ ಚರಣ್ ಯು. ಭಂಡಾರಿ (19) ಬಂಧಿತ ಆರೋಪಿಗಳು. ಇವರಿಂದ 53,300 ರೂ. ಮೌಲ್ಯದ 740 ಗ್ರಾಂ ತೂಕದ ಗಾಂಜಾ, 25 ಸಾವಿರ ರೂ. ಮೌಲ್ಯದ ಸ್ಕೂಟರ್, 2170ರೂ. ನಗದು, 2 ಮೊಬೈಲ್, ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 98,770ರೂ. ಎಂದು ಅಂದಾಜಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರನಾಯಕ್ ಮತ್ತು ಪ್ರೊಬೆಶನರಿ ಡಿ.ವೈ.ಎಸ್.ಪಿ. ಗೀತಾ ಪಾಟೀಲ್ ನೇತೃತ್ವದಲ್ಲಿ ಉಪನಿರೀಕ್ಷಕ ಪವನ್ ನಾಯಕ್, ಸೆನ್ ಪೊಲೀಸ್ ಠಾಣಾ ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್, ವೆಂಕಟೇಶ್, ನಿಲೇಶ್, ರಾಘವೇಂದ್ರ, ಪ್ರಶಾಂತ್ ಮತ್ತು ಚರಣ್‌ರಾಜ್ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ವಿನೋದ್ ಕ್ರಾಸ್ತಾ ನೇಮಕ ಗೊಂಡಿದ್ದಾರೆ. ಸದಸ್ಯರಾಗಿ ಚಂದ್ರಶೇಖರ ಶೆಟ್ಟಿ, ಚಂದ್ರ ಅಮೀನ್, ಮೊಹಮ್ಮದ್ ಅಲ್ಪಾಝ್ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ನೇಮಕಗೊಳಿಸಿ ಆದೇಶಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪತ್ರಿಕೆ, ರೇಡಿಯೋ, ಟಿವಿ ಮಾಧ್ಯಮಗಳು ತಮ್ಮ ಇತಿಮಿತಿಯಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿರುವುದರಿಂದ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯವಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ನವ ಮಾಧ್ಯಮಗಳು ಲಂಗು ಲಗಾಮಿಲ್ಲದೇ ಮುನ್ನುಗ್ಗುತ್ತಿರುವುದು ಬಹಳ ಅಪಾಯಕಾರಿಯಾಗಿದೆ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಇವುಗಳಿಗೆ ಸ್ವಯಂ ನಿಯಂತ್ರಣ ಹೆಚ್ಚಿಸುವ ಅಗತ್ಯವಿದೆ ಎಂದು ಮಾಹೆ ಮಣಿಪಾಲದ ಗಾಂಯನ್ ಸೆಂಟರ್ ಫಾರ್ ಫಿಲೋಸೋಫಿಕಲ್ ಆರ್ಟ್ಸ್ ಮತ್ತು ಸೈನ್ಸ್‌ಸ್ ಮುಖ್ಯಸ್ಥ ವರದೇಶ್ ಹಿರೇಗಂಗೆ ಹೇಳಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಬೈಂದೂರು ಉತ್ಸವದ ಅಂಗವಾಗಿ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿವೃದ್ದಿ ಪತ್ರಿಕೋಧ್ಯಮ – ವಾಸ್ತವ, ಸವಾಲು ಮತ್ತು ಸಾಧ್ಯತೆಗಳು ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿ, ಇತರ ಕ್ಷೇತ್ರಗಳಂತೆ ಮಾಧ್ಯಮವೂ ಕೂಡ ಬದಲಾವಣೆಗೆ ಒಗ್ಗಿಕೊಂಡು ಮುನ್ನೆಡೆಯುತ್ತಿದೆ. ಪ್ರಚಲಿತ ಸವಾಲಿನೊಂದಿಗೆ ಪತ್ರಕರ್ತ ನಿತ್ಯ ಸೆಣಸಬೇಕಿದೆ ಎಂದರು. ಕುಂದಾಪುರ ಪತ್ರಕರ್ತ ಲಕ್ಷ್ಮೀಮಚ್ಚಿನ ಕರಾವಳಿ ಪತ್ರಿಕೋದ್ಯಮದ ಸವಾಲು ಎಂಬ ವಿಷಯದ ಬಗ್ಗೆ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆ ಓದುವವರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮನೆಯೊಂದರಲ್ಲಿ ಗಾಂಜಾವನ್ನು ದಾಸ್ತಾನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಗುಲ್ವಾಡಿಯಲ್ಲಿ ನಡೆದಿದೆ. ಗುಲ್ವಾಡಿ ಉದಯ ನಗರ ನಿವಾಸಿಗಳಾದ ನಜರುಲ್ಲಾ ಖಾನ್ (40) ಹಾಗೂ ಆತನ ಪತ್ನಿ ಫಾತಿಮಾ (33) ಬಂಧಿತರು. ಮನೆಯಲ್ಲಿದ್ದ 6.43 ಲಕ್ಷ ರೂ. ಮೌಲ್ಯದ 5 ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ತುಂಬಿಸಿಟ್ಟಿದ್ದ 8.37 ಕೆ.ಜಿ. ಗಾಂಜಾ ಜೊತೆಗೆ ಟ್ರಾಲಿ ಸೂಟ್‌ಕೇಸ್, ಆರೋಪಿಗಳು ಗಾಂಜಾ ಮಾರಾಟ ಮಾಡಲು ಬಳಸುತ್ತಿದ್ದ ಮೊಬೈಲ್ ಫೋನ್‌ಗಳನ್ನು ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಗೆ ಹಸೈನಾರ್ ಎಂಬಾತ ಗಾಂಜಾ ಪೂರೈಕೆ ಮಾಡಿದ್ದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಅಭಿನಂದನ್ ಶೆಟ್ಟಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಯು.ಸುರೇಂದ್ರ ಶೆಣೈ ಅವರಿಗೆ ಇಂದು ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಅಭಿನಂದನ್ ಶೆಟ್ಟಿ, ಯಶಸ್ಸು, ಹಣ ಸ್ಥಾನ ಮಾನ ಮತ್ತು ಸಂಪತ್ತಿಗಿಂತ ಮೊದಲು ಬದುಕಲು ಕಲಿಯಬೇಕು. ನಿಮ್ಮ ಮುಂದಿನ ಭವಿಷ್ಯ ರೂಪಿಸುವ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾರ್ಥಕ್ಯಗೊಳಿಸುವತ್ತ ಗಮನ ಇರಬೇಕು. ನಕಾರಾತ್ಮಕವಾದ ಡ್ರಗ್ಸ್ ಮತ್ತು ಮಾದಕ ಜಗತ್ತಿನ ಕುರಿತು ಜಾಗೃತರಾಗಿರಬೇಕು. ಅವುಗಳಿಂದ ದೂರವಿದ್ದು ನಿಮ್ಮ ಹಿರಿಯರು ಪೋಷಕರು ಮತ್ತು ಶಿಕ್ಷಕರ ಒಳ್ಳೆಯ ಆಶಯವನ್ನು ಪರಿಪೂರ್ಣವಾಗಿ ಪೂರ್ಣಗೊಳಿಸಿ. ಶಿಕ್ಷಣ ಎಲ್ಲವನ್ನೂ ಕೊಡುತ್ತದೆ. ನೀವು ಈ ಶಿಕ್ಷಣದ ಮೂಲಕ ಶಿಸ್ತು ಮತ್ತು ಸಂಯಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಆಡಳಿತ ಮಂಡಳಿಯ ಸದಸ್ಯರಾದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಯು. ಎಸ್ ಶೆಣೈ ಮಾತನಾಡಿ, ನೀತಿವಂತರಾಗಿ…
