ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೂಟ ಮಹಾಜಗತ್ತಿನ ಅಧಿದೇವ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ಆಂಜನೇಯ ದೇವರಿಗೆ ದಾನಿಗಳಾದ ಬೆಂಗಳೂರಿನ ಕೆ.ಯಜ್ಞನಾರಾಯಣ ಹೇರ್ಳೆ ಇವರು ಸಮರ್ಪಿಸಿದ ಸ್ವರ್ಣಲೇಪಿತ ಕವಚವನ್ನು ಶ್ರೀ ಗುರುನರಸಿಂಹ ದೇಗುಲದಿಂದ ಮೆರವಣಿಗೆಯ ಮೂಲಕ ಗುರುವಾರ ಸಮರ್ಪಿಸುವ ಕಾರ್ಯಕ್ರಮಗಳು ಜರಗಿದವು.
ದೇಗುಲದ ಪ್ರಧಾನ ಅರ್ಚಕ ವೇ.ಮೂ ಜನಾರ್ದನ ಅಡಿಗ,ಕೃಷ್ಣ ಸೋಮಯಾಜಿ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೆರಿತು.
ಶ್ರೀ ದೇಗುಲದಲ್ಲಿ ಪೂರ್ವಾಹ್ನ ನವಕಪ್ರಧಾನ ಕಲಾಶಾಭಿಷೇಕ,ಸಂಜೆ ರಂಗಪೂಜೆ,ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರಗಿದವು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಬಂಟ್ವಾಳ ನರಿಕೊಂಬು ಪ್ರಕಾಶ್ ಕಾರಂತ,ಮಾಜಿ ಅಧ್ಯಕ್ಷರಾದ ಜಗದೀಶ್ ಕಾರಂತ್, ಡಾ.ಕೆ ಎಸ್ ಕಾರಂತ್ ,ದೇಗುಲದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾ, ಕಾರ್ಯದರ್ಶಿ ಪರುಷರಾಮ್ ಭಟ್, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಹೊಳ್ಳ, ಸಮಿತಿಯ ಸದಸ್ಯರಾದ ಕೆ. ತಾರಾನಾಥ ಹೊಳ್ಳ,ಪ್ರಸನ್ನ ತುಂಗ, ಬಿ.ಜಿ ಕೃಷ್ಣಮೂರ್ತಿ ಮಯ್ಯ, ಮಾಜಿ ಉಪಾಧ್ಯಕ್ಷ ರಘುನಾಥ್ ಸೋಮಯಾಜಿ, ಬೈಂದೂರು ಚಂದ್ರಶೇಖರ್ ನಾವಡ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್, ಅಂಗಸಂಸ್ಥೆ ಪಿ.ಸಿ ಹೊಳ್ಳ, ದೇಗುಲದ ವ್ಯವಸ್ಥಾಪಕರಾದ ಗಣೇಶ್ ಭಟ್ ಉಪಸ್ಥಿತರಿದ್ದರು. ಪನಿವಾರ ಸೇವೆ ಜರಗಿತು.












