Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಿರಿಮಂಜೇಶ್ವರದ ಶುಭದಾ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಗಂಗೊಳ್ಳಿ ಪೋಲಿಸ್ ಠಾಣೆಯ ಉಪನಿರೀಕ್ಷಕಿ ಜಯಶ್ರೀ ಹೆಚ್. ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸಿ ಗೆಲ್ಲುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಸೋಲು ಮತ್ತು ಗೆಲುವನ್ನು ಸಮಾನಾಗಿ ಸ್ವೀಕರಿಸಿದಾಗ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳುವುದು ಎಂದು ಮಕ್ಕಳ ಉತ್ಸಾಹ ಮತ್ತು ಸ್ವರ್ಧಾ ಮನೋಭಾವವನ್ನು ಪ್ರಶಂಸಿದರು. ಧ್ವಜಾರೋಹಣಗೈದು ವಂದನೆ ಸ್ವೀಕರಿಸಿದ ಬೈಂದೂರು ಪೋಲಿಸ್ ಠಾಣೆಯ ಉಪನಿರೀಕ್ಷಕ ನಿರಂಜನ್ ಗೌಡ ಕ್ರೀಡೆ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕರಿಯಾಗುತ್ತದೆ ಸದೃಢ ದೇಹದಲ್ಲಿ ಸಬಲ iನಸ್ಸು ಇರುತ್ತದೆ ಕ್ರೀಡೆ ವ್ಯಾಯಾಮದೊಂದಿಗೆ ಜೀವನೋತ್ಸಾಹ ನೀಡುತ್ತದೆ ಎಂದು ಸಂಸ್ಥೆಯ ಕ್ರೀಡಾಕೂಟದ ಅಚ್ಚುಕಟ್ಟನ ಆಯೋಜನೆಯನ್ನು ಶ್ಲಾಘಿಸಿದರು. ಸಂಸ್ಥೆಯ ಹಿತೈಷಿ ಪುಂಡಲಿಕ ನಾಯಕ ಕ್ರೀಡಾ ಕೂಟಕ್ಕೆ ಸಾಂಕೇತಿವಾಗಿ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶುಭದಾ ಶಾಲೆಯ ಪ್ರಾಂಶುಪಾಲರಾದ ರವಿದಾಸ್ ಶಟ್ಟಿ ಮಾತನಾಡಿ ಶಿಕ್ಷಣದ ಜೊತೆಜೊತೆಗೆ ಕ್ರೀಡೆಯಲ್ಲೂ ನಮ್ಮನ್ನು ನಾವು ತೊಡಗಿಸಿಕೊಂಡರೆ…

Read More

ದಕ್ಷಿಣಾಯನದಲ್ಲಿ ಬರುವ ಎರಡನೇ ಋತುವೇ ಶರತ್ ಋತು. ಶರತ್ ಋತುವು ಪ್ರಾರಂಭವಾಗುತಿದ್ದಂತೆ ಬಿಸಿಲು ಪ್ರಕರವಾಗುತ್ತದೆ. ಹಾಗಾಗಿ ಪಿತ್ತ ದೋಷ ಹೆಚ್ಚಾಗುತ್ತದೆ. ಋತುವಿಗೆ ಅನುಸಾರ ನಮ್ಮ ಆಹಾರ ವಿಹಾರಗಳಲ್ಲಿ ಬದಲಾವಣೆ ಯಾವಾಗ ಮಾಡಿಕೊಳ್ಳುವೆವೋ ಆಗ ಮಾತ್ರ ಕಾಲ ವೈಪರಿತ್ಯತೆಯಿಂದಾಗುವ ರೋಗಗಳಿಂದ ವಿಮುಕ್ತರಾಗಿ ಆರೋಗ್ಯವಂತರಾಗಿರಲು ಸಾಧ್ಯ. ಚಳಿಗಾಲ ಅಂದರೆ ಶುಷ್ಕ ಹವೆ ಎಲ್ಲೆಡೆ ಓಡಾಡುತ್ತವೆ. ಅದು ಮಾನವನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಚಳಿಗಾಲಕ್ಕೆ ಬದಲಾದ ಜೀವನಶೈಲಿ ಹಾಗೂ ವಾತಾವರಣ ನಿಮ್ಮ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಕಾಲಕ್ಕೆ ಅನುಗುಣವಾಗಿ ಪರಿಸರ ಬದಲಾದಂತೆ ಶರೀರದಲ್ಲೂ ಬದಲಾವಣೆಯಾಗುತ್ತದೆ.ಈ ಸಮಯದಲ್ಲಿ ಸಾಂಕ್ರಾಮಿಕ ಜ್ವರ ಕಾಡುವುದು ಹೆಚ್ಚು. ನೆಗಡಿ, ಕೆಮ್ಮು, ತಲೆನೋವಂತೂ ಸಹಜ. ಉಸಿರಾಟದ ಸಮಸ್ಯೆ ಹೆಚ್ಚಾ ಗಿ ಕಾಡುವುದು ಇದೇ ಸಮಯದಲ್ಲೇ. ಅಸ್ತಮಾ ಇರುವವರು ಈ ಸಮಯದಲ್ಲಿ ಮತ್ತಷ್ಟು ನರಳುತ್ತಾರೆ. ಚಳಿಗಾಲದಲ್ಲಿ ಆಗಾಗ ಮಳೆಯಾದರಂತೂ ಅಲ್ಲಲ್ಲಿ ನಿಂತ ನೀರಲ್ಲಿ ಸೊಳ್ಳೆಗಳ ಉತ್ಪತ್ತಿ ಆಗುತ್ತವೆ. ಅವು ಮಲೇರಿಯಾ, ಡೆಂಘೆಗಳಂಥ ಮಾರಕ ರೋಗಗಳನ್ನು ಹರಡುತ್ತವೆ. ವಾಂತಿ, ಭೇದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಾಹಿತಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಬೈಂದೂರಿನಲ್ಲಿ ನಿರ್ಮಿಸಲು ಹೊರಟಿರುವ ಪುರಭವನವನ್ನು ಗಾಂಧಿ ಮೈದಾನ ಹೊರತುಪಡಿಸಿ, ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೇರೆ ಭಾಗದಲ್ಲಿ ನಿರ್ಮಿಸಲಿ ಎಂದು ಬೈಂದೂರು ಗಾಂಧಿ ಮೈದಾನ / ಕ್ಯಾಂಪಸ್ ಗ್ರೌಂಡ್ / ಬಂಗಲಿ ಝೆಡ್ ಮೈದಾನ ಸಂರಕ್ಷಣಾ ಸಮಿತಿಯ ಸುಬ್ರಹ್ಮಣ್ಯ ಬಿಜೂರು ಹೇಳಿದರು. ಅವರು ಬೈಂದೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಗಾಂಧಿ ಮೈದಾನದ ಜಾಗ ರಕ್ಷಣಾ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಪದವಿಪೂರ್ವ ಕಾಲೇಜಿನ ಆಟದ ಮೈದಾನವಾಗಿ ಮಾತ್ರ ಬಳಸಿಕೊಳ್ಳುವಂತೆ ಹಿಂದಿನ ದ.ಕ ಜಿಲ್ಲಾಧಿಕಾರಿ ಷರತ್ತುಬದ್ಧ ಅನುಮತಿ ನೀಡಿದ್ದರು. ಈ ಜಾಗದಲ್ಲಿ ಪುರಭವನ ನಿರ್ಮಿಸಿ ಬೈಂದೂರು ಹೃದಯ ಭಾಗದಲ್ಲಿರುವ ಏಕೈಕ ಮೈದಾನವನ್ನು ಹಾಳು ಮಾಡುವುದರ ಬದಲಿಗೆ, ಬೇರೆಡೆ ಪುರಭವನ ನಿರ್ಮಿಸುವುದು ಒಳಿತು ಎಂದರು. ಸಮಿತಿಯ ಗಿರೀಶ್ ಬೈಂದೂರು ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಮೈದಾನದ ಜಾಗವನ್ನು ಕಬಳಿಸಿದರೆ ಮತ್ತೊಂದು ಮೈದಾನ ನಿರ್ಮಿಸಲು ಸಾಧ್ಯವಿಲ್ಲ. ಮಕ್ಕಳಿಂದ ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ಮೈದಾನದ ಅಗತ್ಯವಿದೆ. ಮೈದಾನ ಕಿರಿದಾಗುತ್ತಾ ಹೋದರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಡಿ.1: ಕುಂದಾಪುರದ ಸಾಹಿತಿ, ಶಿಕ್ಷಕಿ ಸುಮಿತ್ರಾ ಐತಾಳ್ (58) ಅವರು ಇಂದು ಸಂಜೆ ಅಸೌಖ್ಯದಿಂದ ನಿಧನರಾದರು. ಕೆಲ ಸಮಯದಿಂದ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದ ಸೇವೆ ಸಲ್ಲಿಸುತ್ತಿದ್ದ ಸುಮಿತ್ರಾ ಐತಾಳ್ ಅವರು ಕುಂದಾಪ್ರ ಕನ್ನಡದಲ್ಲಿ ರೂಪಕ, ನಾಟಕ, ಸಾಹಿತ್ಯ ರಚನೆ ಮಾಡಿ ಕುಂದಗನ್ನಡಕ್ಕೆ ಅಪಾರ ಸೇವೆ ಸಲ್ಲಿಸಿದ್ದರು. ಬಿ.ಇಡ್, ಎಂ.ಎ ವ್ಯಾಸಂಗ ಪೂರೈಸಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸುಮಿತ್ರಾ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಭಾವಗಾನ, ಅಂತರಗಂಗೆ, ಗಡಿಯಾರ, ಹಣತೆ, ಮೌನರತಿ ಕವನ ಸಂಕಲನ, ಫಲಿತಾಂಶ ಕಥಾಸಂಕಲನವನ್ನು ಪ್ರಕಟಿಸಿದ್ದರು. ಅಲ್ಲದೇ ವಿಜಯ ಕರ್ನಾಟಕ, ಕುಂದಪ್ರಭ, ಕುಂದಾಪುರ ಮಿತ್ರ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿದ್ದವು. ’ಬಾ ಗೆಳತಿ’ ಮಹಿಳಾ ಸ್ಪಂದನ ಕಾರ್ಯಕ್ರಮ, ದೂರದರ್ಶನದಲ್ಲಿ ಸಾಹಿತ್ಯದ ನುಡಿ ಕಾರ್ಯಕ್ರಮದಲ್ಲಿ ಕೂಡಾ ಅವರು ಭಾಗವಹಿಸಿದ್ದರು. ಕೆಲವು ದಿನಗಳ ಹಿಂದೆ ಅವರ ಪುಸ್ತಕ ಬಿಡುಗಡೆ, ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಾನ್ ಹಾಫ್‌ಕಿನ್ಸ್, ಯುನಿಸೆಫ್, ಬೈರೂಟ್‌ನ ಅಮೇರಿಕನ್ ವಿಶ್ವವಿದ್ಯಾಲಯ, ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಡಿ. 5ರಿಂದ 9ರ ವರೆಗೆ ಉತ್ತರ ಆಫ್ರಿಕದ ಮೊರೊಕ್ಕೊದಲ್ಲಿ ನಡೆಯುವ ‘ಎಸ್‌ಬಿಸಿಸಿ’ ಶೃಂಗಸಭೆಯಲ್ಲಿ ಭಾಗವಹಿಸಲು ಕುಂದಾಪುರ ತಾಲೂಕು ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಆಯ್ಕೆಯಾಗಿದ್ದಾರೆ. ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ನೇತೃತ್ವದ ರಾಜ್ಯದ ನಾಲ್ಕು ಜನರ ತಂಡದಲ್ಲಿ ಉದಯಕುಮಾರ ಶೆಟ್ಟಿ, ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಎಲ್. ಮೋಹನ್ ಮತ್ತು ಅಧಿಕಾರಿ ಮಲ್ಲಿಕಾ ಇದ್ದಾರೆ. ಸಾಮಾಜಿಕ ಮತ್ತು ವರ್ತನೆ ಬದಲಾವಣೆ ಸಂವಹನ (Social and Behavior Change Communication) ಕುರಿತಾದ ಈ ಸಭೆಯಲ್ಲಿ ಕರ್ನಾಟಕದ ತಂಡ ಇಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ವಿಷಯ ಮಂಡಿಸಲಿದೆ. ಮೂರನೆ ಬಾರಿ ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಉದಯಕುಮಾರ ಶೆಟ್ಟಿ ಪಂಚಾಯಿತಿ ಕೇಂದ್ರಿತವಾಗಿ ಮಾದರಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಜತೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ಥೆರೆಸಾ ಪಿಯು ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂರ್ವಿತಾ ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತ್ರಿಬಲ್ ಜಂಪ್ ಎರಡನೇ ಸ್ಥಾನ ಹಾಗೂ ಹೈ ಜಂಪಿನಲ್ಲಿ ಮೂರನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿಜೇತ ವಿದ್ಯಾರ್ಥಿನಿಗೆ ಮದರ್ ಥೆರೆಸಾ ಪಿಯು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಳವಾಡಿಯ ಫ್ರೆಂಡ್ಸ್ ಮಾರಿಕಾಂಬಾ ಕ್ರಿಕೆಟರ್ಸ್ ಸಂಸ್ಥೆಯ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಆದೀಶ್ ದೇವಾಡಿಗ ಕಳವಾಡಿ ಹಾಗೂ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಕಳವಾಡಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ನಡೆಸಿದ ಎರಡನೇ ಹಂತದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2.50 ಅಂಕಗಳೊಂದಿಗೆ (CGPA) ” ಬಿ” ಮಾನ್ಯತೆ ಪಡೆದಿದೆ. “ನ್ಯಾಕ್ ಮೊದಲ ಹಂತದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಕಾಲೇಜು 2.05 CGPA ಅಂಕಗಳೊಂದಿಗೆ “ಬಿ ಮಾನ್ಯತೆ” ಪಡೆದಿದ್ದು, ಪ್ರಸ್ತುತ ಕಾಲೇಜಿನ ಕಾರ್ಯ ಕ್ರಮ ಚಟುವಟಿಕೆಗಳ ವಿಸ್ತರಣೆಯಿಂದಾಗಿ ಹೆಚ್ಚಿನ ಅಂಕಗಳೊಂದಿಗೆ (2.50 CGPA) “ನ್ಯಾಕ್ ಬಿ” ಮಾನ್ಯತೆ ದೊರೆತಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾಲೇಜು ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಅವರು, ನ್ಯಾಕ್ ‘ಬಿ’ ಮಾನ್ಯತೆ ದೊರೆಯುವಲ್ಲಿ ಸಹಕರಿಸಿದ ಐಕ್ಯೂಎಸಿ ಸಂಚಾಲಕರಾದ ಡಾ. ಅಶ್ವತ್ ದೇವರಾಯ್ ನಾಯ್ಕ್, ಸಹ ಸಂಚಾಲಕರಾದ ವಿನೋದ್ ನೀಲಪ್ಪ ಬಸುಪಟ್ಟದ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಸಂಸದರಾದ ಬಿ. ವೈ. ರಾಘವೇಂದ್ರ, ಹಳೆ ವಿದ್ಯಾರ್ಥಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು. ಚಂಪಾಷಷ್ಠಿ ಅಂಗವಾಗಿ ದೇವಳದಲ್ಲಿ ವಿಶೇಷವಾಗಿ ಅಭಿಷೇಕ, ಪಂಚಮೃತ ಪೂಜೆ, ಮಂಗಳಾರಾತಿ, ಹಣ್ಣುಕಾಯಿ, ಹೂಕಾಯಿ, ಕಲಶ ಸಮರ್ಪಣೆ, ದೇವರ ದರ್ಶನ, ತೀರ್ಥಪ್ರಸಾದ ವಿತರಣೆ, ಋತ್ವಿಜರಿಂದ ವೇದ ಪಾರಾಯಣ, ಕ್ಷೇತ್ರ ಪ್ರದಕ್ಷಿಣೆ ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಕಾಳಾವರ ನಮ್ಮ ಶಕ್ತಿ ಮಹಿಳಾ ಭಜನಾ ಮಂಡಳಿ ಭಜನಾ ಕಾರ್ಯಕ್ರಮ ಮತ್ತು ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಹಸ್ರಾರು ಭಕ್ತರು ಶ್ರೀ ದೇವರ ದರ್ಶನ ಪಡೆದು ಹೂ ಹಣ್ಣು ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆ ಮಾಡಿದರು. ಭಕ್ತರಿಂದ ಉರುಳು ಸೇವೆ ಬೆಳಗ್ಗೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್. ಚಂದ್ರಶೇಖರ್ ಹೆಗ್ಡೆ, ವ್ಯವಸ್ಥಾಪನ ಸಮಿತಿ ಸದಸ್ಯರುಗಳು, ಅರ್ಚಕರು, ತಂತ್ರಿಗಳು, ಊರ ಗ್ರಾಮಸ್ಥರು, ಭಕ್ತ ವರ್ಗ, ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸೇವೆ ಎಲ್ಲಕ್ಕಿಂತ ದೊಡ್ಡದು. ಅಪೇಕ್ಷೆಯೊಂದಿಗೆ ಮಾಡುವ ಕಾರ್ಯದಿಂದ ತಾತ್ಕಾಲಿಕವಾಗಿ ತೃಪ್ತಿ ದೊರೆತರೂ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗದು ಎಂದು ಏಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಹೇಳಿದರು. ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಬೈಂದೂರು ವತಿಯಿಂದ ಹಮ್ಮಿಕೊಂಡಿದ್ದ ಸಪ್ತಾಹ ಗೀತಾ ಜಯಂತಿ ಉತ್ಸವ – 2022 ಉದ್ಘಾಟಿಸಿ ಮಾತನಾಡಿ, ಕಲಿಯುಗದಲ್ಲಿ ಕರ್ಮಫಲ ತ್ಯಾಗ ಮಾಡುವುದು ಸುಲಭದ ಮಾತಲ್ಲ. ದೇವರ ಪೂಜಾಕಾರ್ಯದಲ್ಲಿ ಭಕ್ತಿಯಿಂದ ತೊಡಗಿಕೊಳ್ಳುವುದು ಕೂಡ ಕಷ್ಟದ ಕೆಲಸ. ಎಲ್ಲಾ ಅಪೇಕ್ಷೆಯನ್ನೂ ಮೀರಿ ಕರ್ಮಫಲ ತ್ಯಾಗ ಮಾಡುವವರೇ ನಿಜವಾದಿ ಸಂನ್ಯಾಸಿ ಎಂದೆನಿಸಿಕೊಳ್ಳುವರು ಎಂದು ನುಡಿದರು. ಬೈಂದೂರು ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಸ್ಪರ್ಧಾ ಸಮಿತಿ ಮುಖ್ಯಸ್ಥ ವಿಶ್ವೇಶ್ವರ ಅಡಿಗ, ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ…

Read More