Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕಸ್ತೂರಿ ರಂಗನ್ ವರದಿ ಜಾರಿಯ ಕಾಟಚಾರದ ಸಭೆ: ಕೆ. ವಿಕಾಸ್ ಹೆಗ್ಡೆ
    ಊರ್ಮನೆ ಸಮಾಚಾರ

    ಕಸ್ತೂರಿ ರಂಗನ್ ವರದಿ ಜಾರಿಯ ಕಾಟಚಾರದ ಸಭೆ: ಕೆ. ವಿಕಾಸ್ ಹೆಗ್ಡೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜಾರಿಯಾಗಲಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವಾಲಯ 7ನೇ ಕರಡು ಅಧಿಸೂಚನೆ ಪ್ರಕಟಿಸಿರುವಾಗ ಇದರ ಬಗ್ಗೆ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆ ಕೇವಲ ಕಾಟಚಾರದ ಸಭೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಗಂಭೀರ ಆರೋಪ ಮಾಡಿದ್ದಾರೆ.

    Click Here

    Call us

    Click Here

    ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು ಪಿ ಎ ಸರ್ಕಾರ ಇರುವಾಗ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಪರಿಸರ ತಜ್ಞ ಮಾಧವ್ ಗಾಡ್ಗಿಲ್ ರವರ ನೇತೃತ್ವದ ಒಂದು ಸಮಿತಿ ರಚನೆ ಮಾಡಿ ಅವರಿಂದ ಬಂದ ವರದಿ ಅತ್ಯಂತ ಜನವಿರೋಧಿಯಾಗಿತ್ತು ಎನ್ನುವ ಕಾರಣಕ್ಕೆ ಅದನ್ನು ಕೈಬಿಟ್ಟು ಪರಿಸರ ತಜ್ಞ ಕಸ್ತೂರಿ ರಂಗನ್ ರವರ ನೇತೃತ್ವದ ಸಮಿತಿ ರಚನೆ ಮಾಡಿ ವರದಿ ಪಡೆದು ಅದು ಈಗ ಜಾರಿ ಹಂತದಲ್ಲಿದೆ. ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಕೂಡ ಪಶ್ಚಿಮ ಘಟ್ಟ ಪ್ರದೇಶದ ತಪ್ಪಲಿನ ವಾಸಿಗಳಿಗೆ ಜನವಿರೋಧಿ ಅಂಶಗಳು ಇವೆ ಮತ್ತು ಅನಗತ್ಯವಾಗಿ ಅದೆಷ್ಟೋ ಗ್ರಾಮಗಳನ್ನು ಈ ವರದಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

    ಈ ವರದಿ ಜಾರಿಗೆ ಭೌತಿಕ ಸಮೀಕ್ಷೆ ಮಾಡದೆ ಅಧಿಕಾರಿಗಳು ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ವೈಮಾನಿಕ ಸಮೀಕ್ಷೆ ಮಾಡಿರುವುದರಿಂದ ಪುನಃ ಭೌತಿಕ ಸಮೀಕ್ಷೆ ಮಾಡಬೇಕು ಎನ್ನುವ ಆಗ್ರಹ ಪ್ರಾರಂಭದಿಂದ ಕೇಳಿಬಂದರೂ ಸಹ ಇಲ್ಲಿಯ ತನಕ ಇದು ಕಾರ್ಯರೂಪಕ್ಕೆ ಬರದೇ ಇರಲು ಇಲ್ಲಿಯ ಸಂಸದರ ಹಾಗೂ ಶಾಸಕರುಗಳ ನಿಷ್ಕ್ರಿಯತೆಯೆ ಕಾರಣ.

    ಸಂಬಂಧಪಟ್ಟ ಜನಪ್ರತಿನಿದಿನಗಳು ಅಧಿಕಾರಿಗಳ, ರೈತ ಸಂಘಟನೆಗಳ ಕಾಟಚಾರದ ಸಭೆ ಮಾಡಿ, ಪತ್ರಿಕೆಗಳಿಗೆ ಹೇಳಿಕೆ ಕೊಟ್ಟು ಕೈತೊಳೆದು ಕೊಳ್ಳುತ್ತಿದ್ದಾರೆ ಬಿಟ್ಟರೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಂಬಂಧ ಪಟ್ಟ ಸಚಿವರನ್ನು ಹಾಗೂ ಅಧಿಕಾರಿಗಳನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ಆಹ್ವಾನ ಮಾಡಿ ಸಾಧಕ ಬಾಧಕಗಳ ಕುರಿತು ಸಭೆಯನ್ನು ಇಲ್ಲಿಯ ತನಕ ನಡೆಸದೆ ಇರುವುದು ಅವರು ಪ್ರತಿನಿಧಿಸುವ ಜನರ ಬಗೆಗಿನ ನಿರ್ಲಕ್ಷ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    Click here

    Click here

    Click here

    Call us

    Call us

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಚಿತ್ರಕಲಾ ಸ್ಪರ್ಧೆ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶರಣ್ಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

    11/08/2026

    ಉಡುಪಿ ಜಿಲ್ಲಾಧಿಕಾರಿ ಅವರಿಂದ ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಗೆ ಅಗರಬತ್ತಿ ತಯಾರಿಕೆ ತರಬೇತಿ ವೀಕ್ಷಣೆ

    11/08/2026

    ಕಲಾತಂಡಗಳನ್ನು ಆಹ್ವಾನಿಸಿಕೊಂಡು ಅತಿಥಿ ಸತ್ಕಾರವೀಯುತ್ತಾ ಜನ ಮನ ಗೆದ್ದವರು ನಾಗರಾಜ ಹಂದೆ: ಕೆ. ತಾರಾನಾಥ ಹೊಳ್ಳ

    11/08/2026
    Leave A Reply Cancel Reply

    two × three =

    Call us

    Click Here

    Call us

    Call us

    Call us
    Highest Viewed Recently
    • ಚಿತ್ರಕಲಾ ಸ್ಪರ್ಧೆ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶರಣ್ಯ ಜಿಲ್ಲಾ ಮಟ್ಟಕ್ಕೆ ಆಯ್ಕೆ
    • ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
    • ಕಸ್ತೂರಿ ರಂಗನ್ ವರದಿ ಜಾರಿಯ ಕಾಟಚಾರದ ಸಭೆ: ಕೆ. ವಿಕಾಸ್ ಹೆಗ್ಡೆ
    • ಉಡುಪಿ ಜಿಲ್ಲಾಧಿಕಾರಿ ಅವರಿಂದ ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಗೆ ಅಗರಬತ್ತಿ ತಯಾರಿಕೆ ತರಬೇತಿ ವೀಕ್ಷಣೆ
    • ಕಲಾತಂಡಗಳನ್ನು ಆಹ್ವಾನಿಸಿಕೊಂಡು ಅತಿಥಿ ಸತ್ಕಾರವೀಯುತ್ತಾ ಜನ ಮನ ಗೆದ್ದವರು ನಾಗರಾಜ ಹಂದೆ: ಕೆ. ತಾರಾನಾಥ ಹೊಳ್ಳ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.