Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಪ್ರಸಿದ್ಧ ವೈದ್ಯ, ಪರಿಸರ ಪ್ರೇಮಿ, ಪಕ್ಷಿ ತಜ್ಞ, ಯಡ್ತರೆ ನರ್ಸಿಂಗ್ ಹೋಂ ಮಾಲೀಕ ಡಾ. ಹೆಚ್. ಶುಭೋದ್ ಕುಮಾರ್ (ಹೆಚ್.ಎಸ್.ಮಲ್ಲಿ) ಮಲ್ಲಿ ವಯೋಸಹಜವಾಗಿ ಸೋಮವಾರ ರಾತ್ರಿ ನಿಧನರಾದರು. ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಡಾ. ಮಲ್ಲಿ, ಪರಿಸರ ಪ್ರೇಮಿಯಾಗಿದ್ದವರು. ಪಕ್ಷಿ ಸಂಕುಲ, ಪ್ರಕೃತಿ ನಿಸರ್ಗ ಸಾಮಾಜಿಕ ಸ್ವಾಸ್ತ್ಯದ ಕುರಿತು ಅಪಾರ ಕಾಳಜಿ ಹಾಗೂ ಕಳಕಳಿ ಹೊಂದಿದ್ದ ಅವರು, ಸಾಕಷ್ಟು ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಸ್ತ್ರೀ ರೋಗ ತಜ್ಞರಾಗಿಯೂ ಸೇವೆ ಸಲ್ಲಿಸಿದ್ದ ಡಾ. ಮಲ್ಲಿ, ರೋಟರಿ ಕ್ಲಬ್ ಸದಸ್ಯರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಾಮಾಜಿಕ ಸೇವೆ ಮಾಡಿದ್ದಾರೆ. ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಉಚಿತವಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಇಬ್ಬರು ವಿವಾಹಿತ ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಅವರ ‘ಮನೋರಮಾ’ ಮನೆಯಲ್ಲಿ ವೀಕ್ಷಿಸಿಲು ಸಂಜೆಯ ತನಕ ಅವಕಾಶ…

Read More

ಕುಂದಾಪ್ರ ಡಾಟ್ ಕಾಂಕುಂದಾಪುರ: ಪ್ರಕೃತಿ ಪ್ರಿಯರು ಹಾಗೂ ಸಾಹಸ ಪ್ರಿಯರಿಗೆ ವೈವಿಧ್ಯಮಯ ಸಾಹಸದ ಅನುಭವವನ್ನು ನೀಡುವ ಸುಂದರ ತಾಣವೊಂದು ಉಡುಪಿ ಗೋಳಿಯಂಗಡಿ – ಬೆಳ್ವೆ ಪರಿಸರದಲ್ಲಿದೆ. ಅದುವೇ ಟಿಂಟನ್ ಅಡ್ವೆಂಚರ್ ರೆಸಾರ್ಟ್. ಹಚ್ಚಹಸಿರು ಪರಿಸರ, ಪ್ರಶಾಂತವಾಗಿ ಹರಿಯುವ ನದಿ. ಇದಕ್ಕೆ ಹೊಂದಿಕೊಂಡಿರುವ ರೆಸಾರ್ಟ್, ಪ್ರಕೃತಿ ಸೌಂದರ್ಯದ ನಡುವೆ ಶಾಂತಿ ಮತ್ತು ನೆಮ್ಮದಿಯನ್ನು ಬಯಸುವವರಿಗೆ ಒಂದು ಉತ್ತಮ ಪ್ರವಾಸಿ ತಾಣವಾಗಲಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗಳ ಅನುಕೂಲಕ್ಕೆ ಬೇಕಾದ ವಸತಿ ವ್ಯವಸ್ಥೆಯನ್ನು ಹೊಂದಿದೆ. ಪ್ರಕೃತಿ ಸೊಬಗಿನ ನಡುವೆ ಆಧುನಿಕ ಸೌಕರ್ಯದೊಂದಿಗೆ ವಿಶಾಲವಾದ ಒಳಾಂಗಣ ಹೊಂದಿರುವ ಐಷಾರಾಮಿ ವಸತಿ ವ್ಯವಸ್ಥೆಯನ್ನು ಹೊಂದಿದೆ. ವಿಶೇಷ ರಿಯಾಯಿತಿ:ಈ ಬೇಸಿಗೆ ರಜೆಯನ್ನು ಆನಂದದಿಂದ ಕಳೆಯಬೇಕು ಎನ್ನುವವರಿಗೆ ಈ ರೆಸಾರ್ಟ್ ಉತ್ತಮ ರಿಯಾಯಿತಿ ಕೊಡುಗೆಯನ್ನು ನೀಡುತ್ತಿದೆ. ಇಲ್ಲಿ ಶಾಲಾ ಪ್ರವಾಸ, ಫ್ಯಾಮಿಲಿ ಔಟಿಂಗ್, ಕಛೇರಿ ಕೆಲಸದಿಂದ ಸ್ವಲ್ಪ ಬಿಡುವು ಮಾಡಿಕೊಂಡು ಸ್ವಲ್ಪ ರಿಫ್ರೆಶ್ ಆಗಬೇಕು ಎನ್ನುವವರಿಗಾಗಿಯೇ ವಿಶೇಷವಾಗಿ ಶೇ. 10 ರಿಯಾಯ್ತಿಯೊಂದಿಗೆ ಗ್ರೂಪ್ ಬುಕ್ಕಿಂಗ್ ಆರಂಭಗೊಂಡಿದೆ. ಜೊತೆಗೆ ವಿದ್ಯಾರ್ಥಿಗಳಿಗಾಗಿ ಶೇ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಗಣಿತ ವಿಭಾಗದ ಮುಖ್ಯಸ್ಥೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ನೀಟ್ ಹಾಗೂ ಜೆಇಇ ಪರೀಕ್ಷೆಗಳ ಸಂಯೋಜಕರಾಗಿ ನಿರ್ಮಲಾ ಕುಮಾರಿ ಬಿ. ಅವರನ್ನು ನಿಯೋಜಿಸಲಾಗಿದೆ. ನಿರ್ಮಲಾ ಅವರು ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾಗಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳ ಸಂಯೋಜಕರಾಗಿ ಸುದೀರ್ಘ 23 ವರ್ಷಗಳ ಸೇವಾ ಅನುಭವವನ್ನು ಹೊಂದಿರುತ್ತಾರೆ. ಅದರೊಂದಿಗೆ ಮಂಗಳೂರಿನ ಬೋಸ್ಕೋಸ್ ಕಾಲೇಜಿನಲ್ಲಿ ಇದೇ ಕಾಯಕದ 3 ವರ್ಷದ ಸೇವಾ ಅನುಭವ ಹೊಂದಿರುತ್ತಾರೆ. ಗಣಿತ ವಿಷಯದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದು ಗಣಿತದ ಸಾಧನೆಗಾಗಿ ಹತ್ತು ಹಲವು ಪುರಸ್ಕಾರಗಳನ್ನ ಪಡೆದಿರುವ ಇವರು ಈ ಶೈಕ್ಷಣಿಕ ವರ್ಷದಲ್ಲಿ ಮದರ್ ತೆರೆಸಾ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತ ವಿಷಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದಾರೆ. ಇವರಿಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಮುಖ್ಯೋಪಾಧ್ಯಾಯರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರುದ್ರಭೂಮಿಯನ್ನು ಶಿವನ ಮೂರ್ತಿಯನ್ನು ನಿರ್ಮಿಸಿರುವುದು ದೇವಾಲಯ ನಿರ್ಮಿಸಿದಷ್ಟೇ ಪುಣ್ಯದ ಕೆಲಸ. ಶಿವನ ವಾಸಸ್ಥಾನವೇ ರುದ್ರಭೂಮಿ. ಹೀಗಾಗಿ ರುದ್ರಭೂಮಿಯ ಪಾವಿತ್ರ್ಯತೆ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ರುದ್ರಭೂಮಿಯನ್ನು ನವೀಕರಣಗೊಳಿಸಿ ಶಿವನ ಮೂರ್ತಿಯನ್ನು ನಿರ್ಮಿಸಿರುವುದು ಅತ್ಯಂತ ಪವಿತ್ರವಾದ ಕೆಲಸ. ಈ ಮಹತ್ಕಾರ್ಯದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ದೇವರು ಸನ್ಮಂಗಲವನ್ನುಂಟು ಮಾಡಲಿ ಎಂದು ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಿ. ರವೀಶ್ ಭಟ್ ಹೇಳಿದರು. ಶ್ರೀ ವೀರೇಶ್ವರ ಸೇವಾ ಟ್ರಸ್ಟ್ ಗಂಗೊಳ್ಳಿ ಮತ್ತು ವೀರ ಸಾವರ್ಕರ್ ಬಳಗ ಗಂಗೊಳ್ಳಿ ಇದರ ನೇತೃತ್ವದಲ್ಲಿ ಗಂಗೊಳ್ಳಿ ಗ್ರಾಮದ ದುರ್ಗಿಕೇರಿಯ ಸಾರ್ವಜನಿಕ ಹಿಂದು ರುದ್ರಭೂಮಿ ’ಮೋಕ್ಷ ಧಾಮʼ ದಲ್ಲಿ ನೂತನವಾಗಿ ನಿರ್ಮಿಸಲಾದ ಶಿವನ ಮೂರ್ತಿಯನ್ನು ಇತ್ತಿಚಿಗೆ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಶಿಲ್ಪಿ ಕುಮಾರ್ ಶಿವಮೊಗ್ಗ ಅವರನ್ನು ಸನ್ಮಾನಿಸಲಾಯಿತು. ರುದ್ರಭೂಮಿಯ ನವೀಕರಣ ಹಾಗೂ ಶಿವನಮೂರ್ತಿ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು, ಗುತ್ತಿಗೆದಾರರು ಹಾಗೂ ಸಹಕರಿಸಿದವರನ್ನು ಗೌರವಿಸಲಾಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ನ ಪಿಡಿಒ ಉಮಾಶಂಕರ, ಗ್ರಾಪಂ.ನ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮೊದಲ ಬಾರಿಗೆ “ಭಂಡಾರ್ಕಾರ್ಸ್ ಪ್ರೀಮಿಯರ್ ಲೀಗ್” ಪಂದ್ಯ ವಿದ್ಯಾರ್ಥಿಗಳಿಗಾಗಿ ಜರುಗಿತು. ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ ಪ್ರಭು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಂದಾಪುರ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ʼನ ಅಧ್ಯಕ್ಷ ಗೌತಮ್ ಶೆಟ್ಟಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯಕುಮಾರ್ ಕೆ.ಎಂ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ನಿರ್ದೇಶಕರಾದ ಶಂಕರನಾರಾಯಣ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಮೀಳಾ ವಂದಿಸಿದರು. ವಿದ್ಯಾರ್ಥಿನಿ ಖುಷಿ ಕಾರ್ಯಕ್ರಮ ನಿರೂಪಿಸಿದರು. ಐಪಿಎಲ್ ಮಾದರಿಯಲ್ಲಿ 150 ವಿದ್ಯಾರ್ಥಿ ಆಟಗಾರರನ್ನು 10 ತಂಡಗಳನ್ನಾಗಿ ರಚಿಸಿ 4 ಓವರ್ ಗಳ ಮ್ಯಾಚ್, 3 ದಿನಗಳ ಕಾಲ ನಡೆಯಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ ಮತ್ತು ರೇಂಜರ್ಸ್ ಮತ್ತು ರೋವರ್ಸ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಕುಂದಾಪುರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಜಯಕರ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಶರಣ್ ಎಸ್, ರೇಂಜರ್ಸ್ ಮತ್ತು ರೋವರ್ಸ್ ಸಂಯೋಜಕರಾದ ರಿತಿನ್ ಎಸ್. ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ ಸ್ವಾಗತಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಘಟಕದ ಕಾರ್ಯಕ್ರಮಾಧಿಕಾರಿ ವಿದ್ಯಾರಾಣಿ ವಂದಿಸಿದರು. ಎನ್.ಸಿ.ಸಿ ಕೆಡೆಟ್ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆಯ ಸಮಾರೋಪ ಸಮಾರಂಭ ಇತ್ತಿಚಿಗೆ ಜರುಗಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಕುಂದಾಪುರದ ವಸಂತನಾಟ್ಯಲಯದ ನೃತ್ಯ ತರಬೇತುದಾರರಾದ ಪ್ರವಿತಾ ಅಶೋಕ್, ಮಂದರ್ತಿ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ಸಂಖ್ಯಾಶಾಸ್ತç ಉಪನ್ಯಾಸಕ ಪ್ರಭಾಕರ್ ಶೆಟ್ಟಿಗಾರ್ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕಿ ಸಂಗೀತಾ ಶೆಟ್ಟಿ ಉಪಸ್ಥಿತರಿದ್ದರಿದ್ದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ಉಪನ್ಯಾಸಕಿ ದೀಪಿಕಾ ಜಿ. ಉಪಸ್ಥಿತರಿದ್ದರು. ಅತ್ಯುತ್ತಮ ನಿರೂಪಣೆ ಶೃದ್ಧಾ, ದ್ವಿತೀಯ ಬಿಬಿಎ, ಅತ್ಯುತ್ತಮ ಗುಂಪು ನೃತ್ಯ ಬಹುಮಾನ ದ್ವಿತೀಯ ಬಿಸಿಎ (ಬಿ), ವೈಯಕ್ತಿಕ ಪ್ರತಿಭೆ – ಬ್ರಾಹ್ಮಿ ಪ್ರಥಮ ಬಿಸಿಎ (ಎ), ಒಟ್ಟು ಸಮಗ್ರ ಪುರಸ್ಕಾರವನ್ನು ಕ್ರಮವಾಗಿ ತೃತೀಯ ಬಿ.ಕಾಂ. (ಬಿ), ತೃತೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರ ಜನ್ಮದಿನದ ಅಂಗವಾಗಿ ಭಾನುವಾರ ಶಾಸಕ ಗಂಟಿಹೊಳೆ ಅವರ ಅಭಿಮಾನಿಗಳು ಕ್ಷೇತ್ರದ ವಿವಿಧ ಭಾಗಗಳಲ್ಲಿ ಹತ್ತಾರು ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದರು. ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಉಪ್ಪುಂದದಲ್ಲಿ ಸಮೃದ್ಧ ಹಸಿರು ಕಾರ್ಯಕ್ರಮದಡಿಯಲ್ಲಿಗಿಡಗಳನ್ನು ನೆಡಲಾಯಿತು. ಸಿದ್ಧಾಪುರದಲ್ಲಿ ಜರುಗಿದ ಸಮೃದ್ಧ ಹಸಿರು ಕಾರ್ಯಕ್ರಮದಲ್ಲಿ ಸ್ವತಃ ಶಾಸಕ ಗುರುರಾಜ ಗಂಟಿಹೊಳೆ ಅವರು ಪಾಲ್ಗೊಂಡರು. ಚಿತ್ತೂರು, ಆಲಂದೂರು, ವಂಡ್ಸೆ, ನೆಂಪು, ಯಡ್ತರೆ ಗುಲ್ವಾಡಿ, ತ್ರಾಸಿ ಮೊದಲಾದೆಡೆ ಗೀಡಗಳನ್ನು ನೆಡಲಾಯಿತು. ಬೈಂದೂರಿನಲ್ಲಿ ರಥೋತ್ಸವಕ್ಕೆ ತೆರಳುವ ಭಕ್ತಾಧಿಗಳಿಗೆ ತಂಪುಪಾನೀಯಗಳನ್ನು ವಿತರಿಸಲಾಯಿತು. ಮಧ್ಯಾಹ್ನ ಕುಂದಾಪುರ ಚೈತನ್ಯ ವೃದ್ಧಾಶ್ರಮಕ್ಕೆ ಊಟದ ವ್ಯವಸ್ಥೆ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಮಂಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿಯನ್ನು ಮಂಕಿಯ ಯುವಕರ ತಂಡ ಶ್ರಮದಾನದ ಮೂಲಕ ದುರಸ್ತಿ ಮಾಡಿತು. ವಸ್ರೆ ಭಾಗದಲ್ಲಿ ಯುವಕರ ತಂಡ ಬಡಕುಟುಂಬದ ಮನೆಯ ಮಾಡು ನಿರ್ಮಿಸಿಕೊಡಲು ಶ್ರಮಿಸಿತು. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಮನ್ಮಹಾ ರಥೋತ್ಸವ, ರಥಾರೋಹಣ ಭಾನುವಾರ ಬೆಳಿಗ್ಗೆ ಜರುಗಿತು. ಚಾರಿತ್ರಿಕ ಹಿನ್ನೆಲೆಯುಳ್ಳ ರಥೋತ್ಸವದಲ್ಲಿ ಊರ ಪರವೂರ ಭಕ್ತಸಮೂಹ ಪಾಲ್ಗೊಂಡು ಪುನೀತರಾದರು. ಕಲಾವೈಭವಗಳಿಂದ ಕಂಗೊಳಿಸುವ ದೇವಾಲಯ ಈ ಭಾರಿ ಮತ್ತಷ್ಟು ಅಲಂಕೃತಗೊಂಡಿದ್ದು, ವಾರ್ಷಿಕ ರಥೋತ್ಸವ ಇನ್ನಷ್ಟು ಮೆರಗನ್ನು ನೀಡಿತು. ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಡಿ ನಗರವೇ ಸಜ್ಜಾಗಿದೆ. ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಸಂಜೆಯ ವೇಳೆಗೆ ರಥವನ್ನು ರಥಬೀದಿಯಲ್ಲಿ ಏಳೆಯಲಾಗುತ್ತದೆ. ರಥಕ್ಕೆ ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳಿಗೆ ರಥೋತ್ಸವ ನಡೆಯುವುದೆಂಬ ಸೂಚನೆ ದೊರೆಯುತ್ತದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಉತ್ಸವವು ಧಾರ್ಮಿಕ ಕಾರ್ಯಗಳಿಂದ ಆರಂಭಗೊಳ್ಳುತ್ತದೆ. ಈ ಮಧ್ಯೆ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ ನಡೆದ ಬಳಿಕ ರಥೋತ್ಸವ, ಅವಭೃಥೋತ್ಸವ ಕೊನೆಯಲ್ಲಿ ನಗರೋತ್ಸವ ನಡೆಯುತ್ತದೆ. ನಗರೋತ್ಸವದಲ್ಲಿ ಜಾತಿ ಮತ ಭೇದವಿಲ್ಲದೇ ಎಲ್ಲಾ ಧರ್ಮಿಯರೂ ಪಾಲ್ಗೊಂಡು ಸಂಭ್ರಮಿಸುತ್ತಾರೆ. ರಥೋತ್ಸವದ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ’ವೈಯಕ್ತಿಕ ಬದುಕನ್ನು ಸಮಾಜದಲ್ಲಿ ಅತ್ಯುತ್ತಮವಾಗಿ ಕಟ್ಟುಕೊಳ್ಳುವುದೇ ದೇಶ ಕಟ್ಟುವ ಕಾರ್ಯ’ ಎಂದು ಐಪಿಎಸ್ ಅಧಿಕಾರಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎನ್. ಶಶಿಕುಮಾರ್ ಹೇಳಿದರು. ಆಳ್ವಾಸ್ ಪದವಿ ಕಾಲೇಜು ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ವಿವಿಧ ವಿದ್ಯಾರ್ಥಿ ಘಟಕಗಳ ದಿನಾಚರಣೆ ’ಇನಾಮು – ೨೦೨೪’ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ಯುವಕರು ನಾವು ದೇಶ ಕಟ್ಟುತ್ತೇವೆ.. ಎಂಬಿತ್ಯಾದಿಯಾಗಿ ಉತ್ಪ್ರೇಕ್ಷೆಯಿಂದ ಹೇಳುತ್ತಾರೆ. ಒಂದೇ ಬಾರಿಗೆ ಭಾರಿ ಭಾರ ಹೊರಬೇಡಿ. ನಮ್ಮ ಬದುಕು, ಮನೆಯವರ ಬದುಕು, ಊರು- ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಮಾತ್ರ ದೇಶ ಕಟ್ಟಲು ಸಾಧ್ಯ. ಅದಕ್ಕೆ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳಿ ಎಂದರು. ವ್ಯಕ್ತಿತ್ವ ವಿಕಸನದಲ್ಲಿ ತರಗತಿ ಶಿಕ್ಷಣ ಎನ್ನುವುದು ಒಂದು ಭಾಗವ?. ಅದನ್ನು ಹೊರತುಪಡಿಸಿ ಪಠ್ಯೇತರ ಚಟುವಟಿಕೆಗಳು ಸಾಕಷ್ಟಿವೆ. ಇವುಗಳಲ್ಲಿ ತೊಡಗಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿಯುತ ಕಾರ್ಯವನ್ನು ಆಳ್ವಾಸ್ ಮಾಡುತ್ತಿದೆ ಎಂದು ಶ್ಲಾಘಿಸಿದರು. ಗುರಿ ಸ್ಪ?ವಿದ್ದಾಗ ಮಾತ್ರ ಆ…

Read More