ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶಿವಮೊಗ್ಗ ಜಿಲ್ಲಾ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಎಸ್. ಪಿ. ದಿನೇಶ್ ಇತ್ತೀಚಿಗೆ ಶ್ರೀ ಕ್ಷೇತ್ರ ಹಲವು ಮಕ್ಕಳ ತಾಯಿ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಶಾಲು ಹೋದಿಸಿ ಗೌರವಿಸಿ ಪ್ರಸಾದ ವಿತರಿಸಿದರು.
ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ್ ಆಚಾರ್ ಕೋಟ, ಸುಭಾಸ್ ಶೆಟ್ಟಿ ಗಿಳಿಯಾರು, ಗಣೇಶ್ ಕೆ. ನೆಲ್ಲಿಬೆಟ್ಟು, ದೇವಸ್ಥಾನದ ವ್ಯವಸ್ಥಾಪಕರಾದ ಗಣೇಶ್ ಹೊಳ್ಳ, ಅರ್ಚಕರಾದ ಸಂದೇಶ ಜೋಗಿ, ಅರವಿಂದ ಜೋಗಿ ಹಾಗೂ ಸ್ಥಳೀಯರಾದ ಭುಜಂಗ ಗುರಿಕಾರ, ಸೋಮಶೇಖರ್ ಉಪಸ್ಥಿತರಿದ್ದರು.











