Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಾರತೀಯ ಸಂವಿಧಾನ ಬದುಕಿನ ಕೈಪಿಡಿಯಾಗಬೇಕು. ವಿದ್ಯಾರ್ಥಿಗಳು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ= ಪಡೆದುಕೊಳ್ಳಬೇಕು. ದಿನನಿತ್ಯದ ಬದುಕಿನಲ್ಲಿ ಕಾನೂನಿನ ಅರಿವು ಅತ್ಯಂತ ಅಗತ್ಯ ಎಂದು ಕುಂದಾಪುರದ ನ್ಯಾಯವಾದಿ ಸಂದೇಶ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಶ್ರೀ ವಿನಾಯಕ ಸಭಾಭವನದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಾನೂನು ಅರಿವು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಯ್ಕಾಡಿಯ ಬಜಾಜ್ ಎಲಿಯನ್ಸ್ ಡೆವಲಪ್ಮೆಂಟ್ ಆಫೀಸರ್ ಸುದರ್ಶನ್ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ರಮೇಶ್ ಮೊಗವೀರ ಗುಡ್ಡೆಯಂಗಡಿ, ಶಾರದೋತ್ಸವ ಸಮಿತಿಯ ಸದಸ್ಯ ಸುರೇಶ್ ಪೂಜಾರಿ ಹುಣ್ಸೆಮಕ್ಕಿ, ಸ.ಹಿ.ಪ್ರಾ. ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಮ್.ಸಿ. ಸದಸ್ಯರಾದ ಪವಿತ್ರ ಹಾಗೂ ಶಾಂತ, ದಿನೇಶ್ ಪೂಜಾರಿ ಹಳ್ನಿರು, ಶರತ್ ಕುಲಾಲ್ ಯಡಾಡಿ ಹಾಗೂ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶಿವರಾಮ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ತಾಲೂಕಿನ ಹಿರಿಯ ಪತ್ರಕರ್ತ ಹಾಗೂ ಖಾಸಗಿ ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಭಟ್ (45) ಅವರು ಶನಿವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ಉಪಪ್ರಾಂಶುಪಾಲರಾಗಿದ್ದ ಶೇಷಗಿರಿ ಭಟ್ ಅವರು ಆರೂರು ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದ್ದರೂ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಬ್ರಹ್ಮಾವರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಹೆಂಡತಿ, ಓರ್ವ ಪುತ್ರ ಹಾಗೂ ತಂದೆ – ತಾಯಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಎರಡು ದಿನಗಳ ವಿದ್ಯಾರ್ಥಿ ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆಯಲ್ಲಿ ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯು ಕಮ್ಯುನಿಟಿ ಸರ್ವಿಸ್ ಮತ್ತು ಕಾಮರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಮೊದಲ ಮತ್ತು ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು. ರಾಕೇಶ್ ಸೋನ್ಸ್ ಮತ್ತು ರಕ್ಷಾ ವಿ. ಶೆಣೈ ಅವರು ನಡೆಸಿಕೊಟ್ಟರು. ಈ ಕಾರ್ಯಾಗಾರವು ನಾಯಕತ್ವ ಕೌಶಲ್ಯಗಳು, ತಂಡದ ಕೆಲಸ, ಸಂವಹನ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದರ ಮೇಲೆ ಕೇಂದ್ರೀಕರಿಸಿತ್ತು. ವಿದ್ಯಾರ್ಥಿಗಳು ತಂಡದ ನಿರ್ಮಾಣ ಕಾರ್ಯಗಳು, ಮೂಲ ಕಾರಣ ವಿಶ್ಲೇಷಣೆ ಮತ್ತು ಮೈಕ್ರೋ-ಪ್ರಾಜೆಕ್ಟ್ ಪ್ರಸ್ತುತಿಗಳಲ್ಲಿ ಭಾಗವಹಿಸಿ, ನಾಯಕತ್ವದ ಪಾತ್ರಗಳಿಗೆ ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವ ಮೂಲಕ ಅನುಭವ ಪಡೆದುಕೊಂಡರು. ಸಮಾರೋಪ ಸಮಾರಂಭದೊಂದಿಗೆ ತರಬೇತಿಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಾನದಲ್ಲಿ ಪರಿಮಳ ಪ್ರಶಸ್ತಿ ಕಾರ್ಯಕ್ರಮದ ವೇದಿಕೆಯಲ್ಲಿ ಸಾಲಿಗ್ರಾಮದ ಲಕ್ಷ್ಮೀಕೃಷ್ಣಮೂರ್ತಿ ಮರಕಾಲ ಇವರ ಪುತ್ರಿ ಬಹುಮುಖ ಪ್ರತಿಭೆ ಸುಶ್ಮಿತಾ ಇವರ ಭರತನಾಟ್ಯ ಹಾಗೂ ಕರಾವಳಿಯ ಗಂಡುಕಲೆ ಯಕ್ಷಗಾನ ನೃತ್ಯ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿಮಂತ್ರಾಲಯ ಶ್ರೀ ಮತ್ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಸುಶ್ಮಿತಾ ಸಾಲಿಗ್ರಾಮ ತನ್ನ ಕೈಚಳಕದಿಂದ ಶ್ರೀ ರಾಘುವೇಂದ್ರಸ್ವಾಮಿಯವರ ಹಾಗೂ ಶ್ರೀ ಸುಭುದೇಂದ್ರಸ್ವಾಮಿಗಳ ನೂಲಿನ ಕಲಾ ಕಸೂತಿಯ ಚಿತ್ರವನ್ನು ರಚಿಸಿ ಸಮರ್ಪಿಸಿದರು. ವೇದಿಕೆಯಲ್ಲಿ ತನ್ನ ಎಲ್ಲಾ ಕಲಾಪ್ರತಿಭೆಗಳನ್ನು ಪ್ರದರ್ಶಿಸಿ ಗುರುಗಳ ಮೆಚ್ಚುಗೆ ಪಾತ್ರರಾದ ಸುಶ್ಮಿತಾವರಿಗೆ ಮಂತ್ರಾಕ್ಷತೆಯ ಆಶೀವದಿಸಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ವಿಧಾನಸಭಾ ಸದಸ್ಯ ಬಸವನಗೌಡ ಪಾಟೀಲ್ ಯತ್ನಳ್ , ಹರೀಶ ಪ್ರಾಂಜ, ಡಾ ಶಾಲಿನಿ ರಜನೀಶ್, ಡಾ.ಸಿ.ಎನ್ ಅಶ್ವತನಾರಾಯಣ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು Entrepreneurship ವಿಷಯದ ಬಗ್ಗೆ ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಶೇ. 70% ಮೊತ್ತ ಅಥವಾ ಗರಿಷ್ಠ ರೂ. 5.00 ಲಕ್ಷಗಳ ಸಹಾಯಧನ ನೀಡಲಾಗುತ್ತಿದ್ದು ಸದರಿ ತರಬೇತಿ ಹಾಗೂ ಸಹಾಯಧನಕ್ಕಾಗಿ ಪರಿಶಿಷ್ಟ ಜಾತಿಗೆ ಸೇರಿದ 04 ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 03 ಅಭ್ಯರ್ಥಿಗಳು ಸೇರಿದಂತೆ ಒಟ್ಟು 07 ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10 ನೇ ತರಗತಿ ಉತ್ತೀರ್ಣರಾಗಿದ್ದು, 20 ರಿಂದ 55 ವರ್ಷ ವಯೋಮಿತಿಯಲ್ಲಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 13. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಉಡುಪಿ ಜಿಲ್ಲೆ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಎ ಬ್ಲಾಕ್, 2 ನೇ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಅಮೃತೇಶ್ವರಿ ದೇವಸ್ಥಾನದ ವತಿಯಿಂದ ಮಾ.1ರಂದು ನಡೆಯುವ ಏಕ ಪವಿತ್ರ ನಾಗಮಂಡಲೋತ್ಸವದ ಪೂರ್ವಬಾವಿಯಾಗಿ ಹೊರೆಕಾಣಿಕೆ ಸಮರ್ಪಣೆಯ ಸಂಭ್ರಮದ ಸತತ ಮೂರು ದಿನಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ಹೊರೆಕಾಣಿಕೆ ಸಮರ್ಪಿಸಿದರು. ಕೋಟ 14 ಗ್ರಾಮಗಳ ವತಿಯಿಂದ 3 ದಿನಗಳ ಕಾಲ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಸಲ್ಲಿಸುವ ಪ್ರಯಕ್ತ ಬುಧವಾರ, ಗುರುವಾರ, ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ಕೋಟ ಹದಿನಾಲ್ಕು ಗ್ರಾಮಗಳ ಹಾಡಿಕೆರೆ, ಅಚ್ಲಾಡಿ, ಬನ್ನಾಡಿ, ಹಿರೇದೇವಸ್ಥಾನಬೆಟ್ಟು, ಕೋಟತಟ್ಟು ಬಾರಿಕೆರೆ, ಅರ್ಚಕ ಯುವ ಸಂಘ ಕೋಟ,ತೆಕ್ಕಟ್ಟೆ ಗ್ರಾಮಸ್ಥರು, ಮಣೂರು ಪಡುಕರೆ, ಮೂಡುಗಿಳಿಯಾರು, ಹಂದಟ್ಟು, ಕೋಟ ಹೊಸಬೆಟ್ಟು, ಕಾಸನಗುಂದು, ಕೋಟತಟ್ಟು ಪಡುಕರೆ, ಸಾಲಿಗ್ರಾಮ ಕಾರ್ಕಡ,ಪಾರಂಪಳ್ಳಿ, ಕೋಡಿ ಗ್ರಾ.ಪಂ ವ್ಯಾಪ್ತಿ,ಕೋಟ ಪಡುಹರ್ತಟ್ಟು ಮೂಡುಹಡು, ಪಾಂಡೇಶ್ವರ, ಗೋಳಿಗರಡಿ, ಕೋಟತಟ್ಟು ಪಡುಕರೆ, ಐರೋಡಿ ಬಾಳೆಕುದ್ರು, ಮಣೂರು ಮಳಲುತಾಯಿ, ಬೆಟ್ಲಕ್ಕಿ ಚಿತ್ರಪಾಡಿ, ಕಾರ್ಕಡ, ಪಾರಂಪಳ್ಳಿ, ಕೋಟ ಅಮೃತೇಶ್ವರೀ ಮಹಿಳಾ ಮೀನುಗಾರರ ಸಹಕಾರಿ ಸಂಘ,ಆನೆಗುಡ್ಡೆ ಶ್ರೀವಿನಾಯಕ ದೇಗುಲ,ಮಣೂರು ಮಹಾಲಿಂಗೇಶ್ವರ ದೇಗುಲ ಹೀಗೆ ಅನೇಕ ಭಾಗಗಳಿಂದ ಹೊರೆ ಕಾಣಿಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಬೆಂಗಳೂರು ಇವರು ಅಯೋಜಿಸಿದ ಅಖಿಲ ಭಾರತ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಇಶಾನಿ ಪಿ. (2ನೇ ಸ್ಥಾನ), ಶ್ರೀಶುಭಂ ಶ್ರೀಕಾಂತ್ ಶೆಟ್ಟಿ  (9ನೇ ಸ್ಥಾನ) ಹಾಗೂ ಶ್ರಾವಣಿ ಮಂಜುನಾಥ್ ನಾಯಕ್ (13ನೇ ಸ್ಥಾನ)ವನ್ನು ಪಡೆದಿರುತ್ತಾರೆ. ಅವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಅಖಿಲ ಭಾರತ ಅಂತರ್ ವಿವಿ ಮಹಿಳಾ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್‌ನ ಮಹಿಳೆಯರ ತಂಡ ಸಮಗ್ರ ಚಾಂಪಿಯನ್ಸ್ ಪಟ್ಟ ಪಡೆಯಿತು. ಮಹಿಳೆಯರ ತಂಡವು ನಾಲ್ಕನೇ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಂಗಳೂರು ವಿವಿ ಪ್ರತಿನಿಧಿಸಿದ ಮಹಿಳೆಯರ ತಂಡದಲ್ಲಿದ್ದ 06 ಜನ ಕ್ರೀಡಾಳುಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾಗಿದ್ದರೆ. ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿವಿ 26 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಪುಣೆಯ ಸಾವಿತ್ರಿ ಭಾಯಿಫುಲೆ ವಿವಿ 67 ಅಂಕಗಳೊಂದಿಗೆ ದ್ವಿತೀಯ ಸ್ಥಾನ, 73 ಅಂಕಗಳೊಂದಿಗೆ ರೋಹ್ಟಕ್ ವಿವಿ ತೃತೀಯ ಸ್ಥಾನ ಗಳಿಸಿತು. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್‌ನ ತಾಮ್ಸಿ ಪ್ರಥಮ ಸ್ಥಾನ, ಯಾಶಿ ಸಾಚನ್ ತೃತೀಯ ಸ್ಥಾನ, ಜ್ಯೋತಿ ಒಂಬತ್ತನೇ ಸ್ಥಾನ, ಭಾಗೀರಥಿ ಹದಿಮೂರನೇ ಸ್ಥಾನ ಪಡೆದರು. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಸ್ ಸಹಯೋಗದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜಿನ ಆಶ್ರಯದಲ್ಲಿ ಅಖಿಲ ಭಾರತ ಅಂತರ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪುರಾಣಗಳು ಕೇವಲ ಪೌರಾಣಿಕ ಕಥೆಗಳಲ್ಲ; ಅವು ಮೌಲ್ಯಪೂರ್ಣ ಜೀವನ ನಡೆಸಲು ಮಾರ್ಗದರ್ಶನ ನೀಡುವ ಗ್ರಂಥಗಳು. ಇಂದಿಗೂ ಪುರಾಣಗಳು ಸಾರ್ವಕಾಲಿಕ ಮೌಲ್ಯವನ್ನು ಒಳಗೊಂಡಿವೆ. ವಿದ್ಯಾರ್ಥಿಗಳು ಪುರಾಣ ಗ್ರಂಥಗಳನ್ನು ಅಧ್ಯಯನ ಮಾಡುವುದು ವರ್ತಮಾನದ ತುರ್ತು ಎಂದು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಉದಯ್ ಕುಮಾರ್ ಶೆಟ್ಟಿ ಕಾಳಾವರ ತಿಳಿಸಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಯಡಾಡಿ-ಮತ್ಯಾಡಿಯಲ್ಲಿ ನಡೆಸಿದ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಪುರಾಣ ಮತ್ತು ಮೌಲ್ಯಗಳು’ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಕರುಣಾಕರ್ ಹೆಗ್ಡೆ ಆನಗಳ್ಳಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಯಡಾಡಿ ಇದರ ಪ್ರಾಂಶುಪಾಲರಾದ ಶ್ರೀಮತಿ ಶೈಲಾ, ಸ.ಹಿ. ಪ್ರಾ. ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಂ.ಸಿ. ಸದಸ್ಯರಾದ ಮಂಜುನಾಥ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜೆಸಿಐ ಭಾರತದ ನಿರ್ದೇಶನದಂತೆ ಸದ್ದಿಲ್ಲದೆ ತಮ್ಮ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಗುರುವಾರದಂದು ಯಡ್ತರೆ ಮೊಗವೀರ ಭವನದಲ್ಲಿ ನಡೆಯಿತು. ಖಂಬದಕೋಣೆ ಪಂಚಾಯಿತಿಯ ಗ್ರೇಡ್ 2 ಕಾರ್ಯದರ್ಶಿಯಾಗಿ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪಾರ್ವತಿ ಲಕ್ಷ್ಮಣ ಹಾಗೂ ಬೈಂದೂರು ಪಟ್ಟಣಪಂಚಾಯತ್‌ನಲ್ಲಿ 24 ವರ್ಷಗಳಿಂದ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ರಾಜೇಶ್ ಇವರನ್ನು, ಅವರು ಜನಪರವಾಗಿ ಮಾಡಿದ ಸೇವೆಯನ್ನು ಗುರುತಿಸಿ ಜೆಸಿಐ ಬೈಂದೂರು ಸಿಟಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆಸಿಐ ಬೈಂದೂರು ಸಿಟಿ ಇದರ ಅಧ್ಯಕ್ಷರಾದ ಎಚ್‌ಜಿಎಫ್‌ ಚೈತ್ರ ಸತೀಶ್, ನಿಕಟಪೂರ್ವ ಅಧ್ಯಕ್ಷರಾದ ಎಚ್‌ಜಿಎಫ್‌ ರಾಜು ಕೆ. ಮೊಗವೀರ, ಕಾರ್ಯದರ್ಶಿ ಎಚ್‌ಜಿಎಫ್‌ ಪ್ರೇಮ ವಿ. ಶೆಟ್ಟಿ, ಲೇಡಿ ಜೆಸಿ ಸಂಯೋಜಕಿ ಸೂರ್ಯ ಕಾಂತಿ, ಸ್ಥಾಪಕ ಅಧ್ಯಕ್ಷರಾದ ಮಣಿಕಂಠ, ಪೂರ್ವಾಧ್ಯಕ್ಷರಾದ ಸವಿತಾ ದಿನೇಶ್ ಹಾಗೂ ಜೆಸಿಐ ಬೈಂದೂರು ಸಿಟಿ ಇದರ ಸರ್ವ ಸದಸ್ಯರು ಭಾಗವಹಿಸಿದ್ದರು.

Read More