Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನಮ್ಮ ಹೆಮ್ಮೆಯ ಹಳ್ಳಿ ಭಾಷೆಯಾದ ಕುಂದಾಪ್ರ ಕನ್ನಡ ಕೇವಲ ಮಾತನಾಡುವ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಬದುಕು ಮತ್ತು ಪರಂಪರೆಯ ಪ್ರತಿಬಿಂಬ ಎಂದು ಮಾಜಿ ಸಚಿವರು ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಪೋಷಕರಾದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಸೋಮವಾರ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಇಂಗ್ಲಿಷ್, ಶುದ್ಧ ಕನ್ನಡ ಕಲಿಯುವುದರ ಜೊತೆಗೆ, ನಮ್ಮ ಮಣ್ಣಿನ ಭಾಷೆಯಾದ ಕುಂದಾಪ್ರ ಕನ್ನಡವನ್ನು ಮನೆಯಲ್ಲಿ ಸದಾ ಬಳಸುವ ಮೂಲಕ ಅದನ್ನು ಜೀವಂತವಾಗಿರಿಸಬೇಕು ಎಂದರು. ತಮ್ಮ ಭಾಷಣದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಇಂದಿನ ತಲೆಮಾರಿನ ಮಕ್ಕಳಿಗೆ ಹಳ್ಳಿಯ ಸೊಗಡನ್ನು ಪರಿಚಯಿಸುವ ಅಗತ್ಯವನ್ನು ಒತ್ತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಯಕ್ಷಗಾನ ರಂಗದಲ್ಲಿ ಯಾವುದೇ ಪ್ರತ್ಯಕ್ಷಗುರು ಇಲ್ಲದಿದ್ದರೂ, ಹಿರಿಯರ ವಾದನವನ್ನು ದೂರದಿಂದಲೇ ನೋಡುತ್ತಾ ಸ್ವ-ಪ್ರಯತ್ನದಿಂದ ಚೆಂಡೆ ಕಲಿತ ಆಧುನಿಕ ಏಕಲವ್ಯ ನಮ್ಮ ಕೋಟ ಶಿವಾನಂದರು ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ತಾರಾನಾಥ್ ಹೊಳ್ಳ ಹೇಳಿದರು. ಅವರು ಶನಿವಾರ ಕೋಟ ಶಿವಾನಂದರ ಅಭಿಮಾನಿ ಬಳಗ ಮತ್ತು ಕಲಾ ವೇದಿಕೆ ಸಾಲಿಗ್ರಾಮದ ಆಶ್ರಯದಲ್ಲಿ ಹಿರಿಯ ಚಂಡೆ ವಾದಕ ಕೋಟ ಶಿವಾನಂದ ಅವರಿಗೆ ಗೌರವಾರ್ಪಣೆ ಹಾಗೂ ಮರಳಿ ಸಾಲಿಗ್ರಾಮದ ಯಕ್ಷರಂಗದಂಗಳಕ್ಕೆ ಎನ್ನುವ ಸಾಂಸ್ಕೃತಿಕ ರಂಗ ಸಂಜೆಯನ್ನು ಉದ್ಘಾಟಿಸಿ ಮಾತನಾಡಿದರು. ಖ್ಯಾತ ನಟಿ ಪ್ರತಿಮಾ ನಾಯಕ್ ಅವರು ಅಭಿನಂದನಾ ನುಡಿಗಳನ್ನಾಡಿದ ಕಾಂತಾರ ಚಿತ್ರದ ಯಕ್ಷಗಾನ ರಂಗದ ಧ್ರುವತಾರೆ ಕೋಟ ಶಿವಾನಂದ ಅವರು ಕಲಾ ಜಗತ್ತಿನ ಹಿರಿಯ ಸಾಧಕರಾಗಿದ್ದರೂ, ಚೂರು ಸಹ ಅಹಂಕಾರವಿಲ್ಲದ ಮಗುವಿನಂತಹ ನಿಷ್ಕಲ್ಮಶ ಮನಸ್ಸಿನ ಅಪರೂಪದ ವ್ಯಕ್ತಿ ಎಂದರು. ಕಾಂತಾರ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಶಿವಣ್ಣನ ಸರಳ ವ್ಯಕ್ತಿತ್ವ ನನಗೆ ಹತ್ತಿರದಿಂದ ಪರಿಚಯವಾಯಿತು. ಹಿರಿಯ ಸಾಧಕನೆಂಬ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಟ ಗ್ರಾಮಪಂಚಾಯತ್ ಭಾನುವಾರ ರಾತ್ರಿ ದಿಢೀರ ಪ್ರವೇಶಿಸಿದ ಸುಳಿಗಾಳಿಯಿಂದ ಹಾನಿಗೊಂಡ ಮನೆಗಳಿಗೆ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕದ್ರಿಕಟ್ಟು ಜಗನಾಥ ಕಾಂಚನ್,ರಾಜು ಟೈಲರ್ ಮನೆಗೆ ಭೇಟಿ ನೀಡಿ ಕುಂದಾಪುರ ಎಸಿ,ಇಲಾಖಾಧಿಕಾರಿ ಕರೆ ಮಾಡಿ ಶೀಘ್ರ ಸರಕಾರಕ್ಕೆ ವರದಿ ಒಪ್ಪಿಸಲು ಸ್ಥಳದಲ್ಲೆ ಸೂಚಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಕೋಟ ಬ್ಲಾಕ್ ಕಾಂಗ್ರೆಸ್ ನಿಯೋಚಿತ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಸ್ಥಳೀಯ ಮುಖಂಡರಾದ ಗೋಪಾಲ್ ಬಂಗೇರ, ಗಣೇಶ್ ಪೂಜಾರಿ, ಜಗನಾಥ್ ಕಾಂಚನ್ ಸೇರಿದಂತೆ ಹಲವರು ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಜೂನಿಯರ್‌ ಜೆಸಿ ಮತ್ತು ಲೇಡಿ ಜೆಸಿ ಸಮ್ಮೇಳನ ಸಿಂಧು ಇದರ ವತಿಯಿಂದ ಯಡ್ತರೆ ಜೆಎನ್‌ಆರ್‌ ಕಲಾ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ವಲಯ 15ರ ಜೆಸಿಐ ರೂರಲ್ ನ ಅಧ್ಯಕ್ಷರರಾದ ವಿನೋದ್ ಮೇಸ್ತ ಶಿರೂರ್ ಅವರಿಗೆ ಜೆಎಸಿ ಗೋಲ್ಡನ್ ಪ್ರೆಸಿಡೆಂಟ್ ಪ್ರಶಸ್ತಿ ಪಡೆದರು. ಕಾರ್ಯಕ್ರಮದಲ್ಲಿ ವಲಯದ ಅಧ್ಯಕ್ಷ ಸಂತೋಷ ಶೆಟ್ಟಿ, ಜೆಎಸಿ ವಲಯ ಚೇರ್ ಮೇನ್ ಜಬ್ಬಾರ್ ಸಾಹಬೆ, ಜೆಎಸಿ ವಲಯದ ಪೂರ್ವ ಅಧ್ಯಕ್ಷೆ ಆಶಾ, ಶಂಬಾವಿ, ಉಪಾಧ್ಯಕ್ಷರರಾದ ಪ್ರದೀಪ್ ಶೆಟ್ಟಿ, ಬೈಂದೂರು ಸಿಟಿ ಜೆಸಿಎ ಅಧ್ಯಕ್ಷೆ ಚೈತ್ರ, ವಿವಿಧ ಘಟಕಗಳ ಅಧ್ಯಕ್ಷರು, ಪೂರ್ವ ಅಧ್ಯಕ್ಷರು ಸದಸ್ಯರು ಹಾಗೂ ಜೆಸಿಐ ಸದಸ್ಯರು ಹಾಜರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪ್ರಸ್ತುತ ವಾತಾವರಣದ ವೈಪರೀತ್ಯ ಹೆಚ್ಚುತ್ತಿರುವ ತಾಪಮಾನಕ್ಕೆ ಮನುಕುಲವೇ ಕಾರಣವಾಗಿದೆ ಎಂದು ಕೋಟದ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್ ಹೇಳಿದರು. ಇಲ್ಲಿನ ಕೋಟದ ಸಹಕಾರಿ ವ್ಯವಸಾಯಕ ಸಂಘ, ಸಹಕಾರ ಇಲಾಖೆ ಉಡುಪಿ, ಜಿಲ್ಲಾ ಸಹಕಾರಿ ಯೂನಿಯನ್ ಸಂಯೋಜನೆಯೊಂದಿಗೆ ಸಹಕಾರಿ ಸಪ್ತಾಹದ ಅಂಗವಾಗಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಪೇತ್ರಿ ಅನ್ನಪೂರ್ಣ ನರ್ಸರಿ ಇವರ ಸಹಯೋಗದೊಂದಿಗೆ 308ನೇ ಭಾನುವಾರದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ ನೀ ನೋ ಎಂಬ ಉಷ್ಣ ಮಾರುತ ಇಡೀ ಜಗತ್ತಿಗೆ ಸಂಕಷ್ಟವನ್ನು ತಂದೊಡ್ಡುತ್ತಿದೆ ಇದರಕ್ಕೆ ಕಾರಣ ಜಗತ್ತಿನಾದ್ಯಂತ ಹಸಿರಿಗೆ ಕೊಡಲಿ ಆಧುನಿಕ ತಂತ್ರಜ್ಞಾನಗಳ ಅವಲಂಬನೆ ಪ್ರಕೃತಿಯ ಮೇಲೆ ಬಾರಿ ಪರಿಣಾಮ ಬಿರುತ್ತಿದೆ.ಈ ದಿಸೆಯಲ್ಲಿ ಪ್ರತಿಯೊಂದು ಭಾಗದಲ್ಲೂ ಪರಿಸರ ಉಳಿಸಿ ಬೆಳೆಸುವ ಕಾರ್ಯ ನಡೆದರೆ ಪ್ರಸ್ತುತ ಹಾಗೂ ಮುಂದಿನ ತಲೆಮಾರಿ ಸಹಕಾರಿಯಾಗಲಿದೆ ಎಂದರಲ್ಲದೆ ಪಂಚವರ್ಣದ ಪ್ರಕೃತಿ ಕಾಳಜಿಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜು (ಸ್ವಾಯತ್ತ) ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ, ರಂಗಭೂಮಿ, ಸಿನಿಮಾ, ಧಾರಾವಾಹಿ ಮತ್ತು ಕಿರುಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವವರಿಗಾಗಿ ಆಯೋಜಿಸಲಾದ ಎರಡು ದಿನಗಳ ಅಭಿನಯ ಸೂಕ್ಷ್ಮತೆಗಳ ತರಬೇತಿ ಕಾರ್ಯಾಗಾರಕ್ಕೆ ಸೋಮವಾರ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ಚಾಲನೆ ದೊರೆಯಿತು. ಕೇಂದ್ರದ ನಿರ್ದೇಶಕ ಡಾ. ಜೀವನ್‌ರಾಮ್ ಸುಳ್ಯರವರ ಮಾರ್ಗದರ್ಶನದಲ್ಲಿ ಜುಲೈ 6 ಮತ್ತು 7ರಂದು ನಡೆಯಲಿರುವ ಈ ಕಾರ್ಯಾಗಾರದಲ್ಲಿ ಅಭಿನಯದ ವಿವಿಧ ಆಯಾಮಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಅಭಿನಯವು ಕೇವಲ ರಂಗಭೂಮಿ ಅಥವಾ ಸಿನಿಮಾಕ್ಕೆ ಸೀಮಿತವಾಗಿಲ್ಲ. ಶಿಕ್ಷಕರು, ವೃತ್ತಿಪರರು, ಆಡಳಿತಗಾರರು ಸೇರಿದಂತೆ ಪ್ರತಿಯೊಬ್ಬರ ಬದುಕಿನಲ್ಲೂ ಪರಿಣಾಮಕಾರಿ ಅಭಿವ್ಯಕ್ತಿಗೆ ಅಭಿನಯದ ಕೌಶಲ್ಯ ಅತ್ಯಗತ್ಯ. ಇಂದಿನ ಯುವಜನರಲ್ಲಿ ದೇಹದ ಚಲನವಲನವು ಸಹಜತೆಯನ್ನು ಕಳೆದುಕೊಂಡು ಬಿಗಿತ ಹೆಚ್ಚಾಗಿದೆ. ಅದನ್ನು ನಿವಾರಿಸಿ ದೇಹಭಾಷೆ, ಆತ್ಮವಿಶ್ವಾಸ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ. ಯಾವುದೇ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೊಲ್ಲೂರು: ವಿದ್ಯಾರ್ಥಿಗಳು ಬಾಲ್ಯದಲ್ಲಿ ಶಿಸ್ತು, ಸಂಯಮ ಹಾಗೂ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾಗಿರುವ ಸುಕೇಶ ಶೆಟ್ಟಿ ಹೊಸಮಠ ಹೇಳಿದರು. ಅವರು 2026-27ನೇ ಸಾಲಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ, ಅರೆಶಿರೂರು-ಗೋಳಿಹೊಳೆ ಇಲ್ಲಿನ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಅರೆಶಿರೂರು ಸ.ಹಿ.ಪ್ರಾ.ಶಾಲೆಯ ಇಲ್ಲಿನ ಮುಖ್ಯ ಶಿಕ್ಷಕಿ ಲಕ್ಷ್ಮಿ ಅವರು ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ದಿನಕರ ನಾಯ್ ಬಿ.ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿ, ಶ್ರೀ ದೇವಳದಿಂದ ಉಚಿತವಾಗಿ ನೀಡಿದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ, ಪ್ರೇಮ ಸಾಹಿತ್ಯ ಕ್ಷೇತದಲ್ಲಿ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು. ಕೊಲ್ಲೂರು ಶ್ರೀ ದೈವಳದಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಮರವಂತೆ ಗ್ರಾಮದ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ಮಾಂಗಲ್ಯ ಎಂಬ ಚಿನ್ನದ ಅಂಗಡಿಗೆ ಶನಿವಾರ ರಾತ್ರಿ ವೇಳೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಗಟ್ಟಿ, ನಗದು ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ. ಮರವಂತೆ ಗ್ರಾಮದ ಹರಿಶ್ಚಂದ್ರ ರಸ್ತೆಯ ಚಳ್ಳಿಕಳ್ಳಿ ನಿವಾಸಿ ವಿಶ್ವನಾಥ (35) ಅವರು ಈ ಅಂಗಡಿಯನ್ನು ನಡೆಸುತ್ತಿದ್ದು, ಜುಲೈ 4ರಂದು ರಾತ್ರಿ 9.00 ಗಂಟೆಯಿಂದ ಜುಲೈ 5ರಂದು ಬೆಳಿಗ್ಗೆ 5.40 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ಅಂಗಡಿಯ ಶಟರ್ ಮುರಿದು ಒಳನುಗ್ಗಿದ್ದಾರೆ. ಬಳಿಕ ಅಂಗಡಿಯ ಡ್ರಾವರ್ ಹಾಗೂ ಕ್ಯಾಬಿನ್‌ನಲ್ಲಿದ್ದ ಸುಮಾರು 600 ಗ್ರಾಂ ಬೆಳ್ಳಿಗಟ್ಟಿ (ಅಂದಾಜು ಮೌಲ್ಯ ₹1,44,000) ಹಾಗೂ ₹1,000 ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಯಶಸ್ಸಿನ ಪಥದಲ್ಲಿ ಮುನ್ನಡೆಯಲು ಪೋಷಕರು, ಸಕಾರಾತ್ಮಕ ಮನೋಭಾವ ಮತ್ತು ಪ್ರತಿಭೆ ಎಂಬ ಮೂರು ಅಂಶಗಳು ಅತ್ಯಂತ ಮಹತ್ವ ಪಡೆಯುತ್ತವೆ. ದೇಶದ ಪ್ರಗತಿಯಲ್ಲಿ ಯುವಜನತೆಯ ಪಾತ್ರ ಮಹತ್ವಪೂರ್ಣ. ಮಾನವೀಯ ಮೌಲ್ಯಗಳೊಂದಿಗೆ ಹೊಸ ಆಲೋಚನೆಗಳು, ನಿರ್ದಿಷ್ಟ ಗುರಿ ಹಾಗೂ ನವೀನ ಪರಿಹಾರಗಳನ್ನು ರೂಪಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎ.ಎಂ. ಖಾನ್‌ ಪದವೀಧರರಿಗೆ ಹೇಳಿದರು. ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವತಿಯಿಂದ ಆಯೋಜಿಸಲಾದ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಡೀನ್ ಅಕಾಡೆಮಿಕ್ ಗಿರಿರಾಜ್ ಭಟ್ ನೆoಪು ಉಪಸ್ಥಿತರಿದ್ದರು. ಐಕ್ಯೂಎಸಿ ಸಂಯೋಜಕಿ ದೀಪಿಕಾ ಜಿ. ಸ್ವಾಗತಿಸಿ, ಸಹ ಸಂಯೋಜಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಜೀವನದಲ್ಲಿ ನಾನಾ ರೀತಿಯ ಸವಾಲುಗಳು ಬರುವುದು ಸರ್ವೇ ಸಾಮಾನ್ಯ ಆದರೆ ಅದನ್ನು ಮೆಟ್ಟಿ ಮುಂದೆ ಸಾಗುವುದು ಜೀವನದ ಪರಮ ಗುರಿಗಳಲ್ಲೊಂದಾಗಿದೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಅವರು ಭಾನುವಾರ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ಹಾಗೂ ಓಂ ಫ್ರೆಂಡ್ಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ “ಉದ್ಯೋಗ ಸಂಕಲ್ಪ” ಎಂಬ ವಿಶೇಷ ಅಭಿಯಾನದಡಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆಯ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೋಲಿಸ್ ಇಲಾಖೆಯಲ್ಲಿ ಸಾಕಷ್ಟು ಸವಾಲುಗಳು ಬರುತ್ತವೆ ಎಂದರೆ ಅವುಗಳು ನಮ್ಮ ನಿರೀಕ್ಷೆಯನ್ನು ಮೀರಿ ಇರುತ್ತದೆ. ಆ ಸವಾಲುಗಳು ಬಂದಾಗ ತಾಳ್ಮೆ ಸಹನೆ ಸಮಯ ಸಂದರ್ಭಕ್ಕೆ ತಕ್ಕಂತೆ ರೂಡಿಸಿಕೊಂಡಾಗ ಪೆದೆಯಾಗಿ ಸಾರ್ಥಕ್ಯ ಸೇವೆಯನ್ನು ಕಂಡಂತೆ. ಕಾನ್ಸ್ಟೇಬಲ್ ಹುದ್ದೆಯ ಬಗ್ಗೆ ತಾತ್ಸಾರದ ಮನೋಭಾವನೆ ಸಲ್ಲ ಅದರಿಂದ ಹೊರಬಂದು ಹಂತ ಹಂತವಾಗಿ ಇಲಾಖೆಯಲ್ಲಿ ಮೇಲೆತ್ತರಕ್ಕೆ ಏರಲು ಸಾಧ್ಯವಿದೆ. ಉಡುಪಿ ಜಿಲ್ಲೆಯಲ್ಲಿ…

Read More