Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಜಿಲ್ಲೆ 3182 ವಲಯ 1ರ ಝೋನಲ್ ಕಲ್ಚರಲ್ ಮೀಟ್ ಕೋಟೇಶ್ವರದ ಸಹನಾ ಕನ್ವೆನ್ಶನ್ ಸೆಂಟರಿನಲ್ಲಿ ನಡೆಯಿತು. ವಿವಿಧ ಸಾಂಸ್ಕೃತಿಕ ಸ್ವರ್ಧೆಗಳಲ್ಲಿ ಗೆಲುವು ಸಾಧಿಸಿರುವುದಕ್ಕಾಗಿ ಬೈಂದೂರು ಕ್ಲಬ್ ಕಲ್ಚರಲ್ – ರನ್ನರ್ ಪ್ರಶಸ್ತಿಗೆ ಭಾಜನವಾಯಿತು. ವಲಯದ 8 ಕ್ಲಬ್’ಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಗುಂಪು ನೃತ್ಯ ವಿಭಾಗದಲ್ಲಿ ಪ್ರಥಮ, ಡ್ಯೂಯೆಟ್ ಸಾಂಗ್ನಲ್ಲಿ ಪ್ರಥಮ, ಭಾವಗೀತೆಯಲ್ಲಿ ಪೂರ್ಣಿಮಾ ಪೈ ಪ್ರಥಮ ಸ್ಥಾನಗಳನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು. ಏಕಪಾತ್ರಾಭಿನಯದಲ್ಲಿ ನಾಗೇಂದ್ರ ಬಂಕೇಶ್ವರ ಹಾಗೂ ಸೋಲೊ ಡಾನ್ಸ್ ನಲ್ಲಿ ನಿಧಿ ದ್ವಿತೀಯ ಸ್ಥಾನ ಪಡೆದರು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ವೇದಿಕೆಯಲ್ಲಿ ವಲಯ 1ರ ಸಹಾಯಕ ಗವರ್ನರ್ ಡಾ.ಸಂದೀಪ್ ಶೆಟ್ಟಿ, ಜಿಲ್ಲಾ ಕಲ್ಚರಲ್ ಚೇರ್ಮನ್ ಗಣೇಶ್ ಶೆಟ್ಟಿ ಝೋನಲ್ ಕಲ್ಚರಲ್ ಕೊ- ಆರ್ಡಿನೇಟರ್ ಮಹೇಂದ್ರ ಶೆಟ್ಟಿ, ಖ್ಯಾತ ನಟಿಯರಾದ ನಿರೀಕ್ಷಾ ಶೆಟ್ಟಿ, ರಚನಾ ರೈ, ಝೋನಲ್ ಲೆಫ್ಟಿನೆಂಟ್ ಗಳಾದ ರಂಜಿತ್ ಕುಮಾರ್ ಶೆಟ್ಟಿ, ಡಾ.ಉತ್ತಮ್ ಕುಮಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ 48ನೇ ರಾಜ್ಯೋತ್ಸವ ತಾಳಮದ್ದಳೆ ಹಾಗೂ ಡಾ.ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು. ಡಾ. ಪ್ರದೀಪ ವಿ ಸಾಮಗ ಅವರಿಗೆ 2023-24ನೇ ಸಾಲಿನ ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಪುರಸ್ಕಾರವನ್ನು ಸ್ವೀಕರಿಸಿದ ಡಾ. ಪ್ರದೀಪ ವಿ ಸಾಮಗ ಮಾತನಾಡಿ ಭಂಡಾರ್ಕಾರ್ಸ್ ಕಾಲೇಜು ನನಗೆ ಜೀವನವನ್ನು ಕಲಿಸಿದೆ. ಭಂಡಾರ್ಕಾರ್ಸ್ ಕಾಲೇಜು ನನ್ನನ್ನು ಯಕ್ಷಗಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಹೆಚ್ ಶಾಂತಾರಾಮ್ ವಹಿಸಿದ್ದರು. ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆ ಪಳ್ಳಿ ಅವರು ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು, ಕೆ.ದೇವದಾಸ್ ಕಾಮತ್ , ರಾಜೇಂದ್ರ ತೋಳಾರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ಮೇಲ್ಪoಕ್ತಿ ಅಂಬೇಡ್ಕರ್ ಕಾಲೋನಿಯ ದಲಿತ ಮಹಿಳೆ ಕುಟುಂಬ ವಾಸವಿರುವ ಮನೆಯ ಬುಡದ ತನಕ ಮಣ್ಣು ಅಗೆದು ಮನೆಯ ಅಡಿಪಾಯವೇ ಕುಸಿಯುವ ಭೀತಿ ಎದುರಾಗಿದೆ. ಮನೆ ಅಪಾಯಕ್ಕೆ ಸಿಲುಕುವ ಅರಿವಿದ್ದರೂ ಪಕ್ಕದಲ್ಲಿಯೇ ಸುಮಾರು 10 ಅಡಿ ತನಕ ಮಣ್ಣು ತೆಗೆದಿರುವುದನ್ನು ದಲಿತ ಸಂಘಟನೆಗಳು ಖಂಡಿಸಿವೆ. ಅಂಬೇಡ್ಕರ್ ಕಾಲೋನಿ ನಿವಾಸಿ ಮಂಗಳ ಎಂಬುವವರ ಪೂರ್ವಿಕರು ಅಂದಾಜು 5 ದಶಕಗಳಿಂದ ವಾಸವಿದ್ದ ಜಾಗದ ಪಕ್ಕದಲ್ಲಿಯೇ 20 ವರ್ಷಗಳ ಹಿಂದೆ ಮನೆ ಕಟ್ಟಿಕೊಂಡು ವಾಸಮಾಡಿಕೊಂಡಿದ್ದರು. ಈ ಜಾಗಕ್ಕಾಗಿ 94c ಹಕ್ಕು ಪತ್ರದ ಅರ್ಜಿ ಸಲ್ಲಿಸಿದ್ದರು. ಆದರೆ ಸ್ಥಳೀಯ ನಿವಾಸಿ, ಪಕ್ಕದ ಜಾಗದ ರಾಮನಾಥ ಭಟ್ ಎಂಬುವವರು ಏಕಾಏಕಿ ಮನೆಯ ನೆಲಗಟ್ಟಿನ ತನಕವೂ ವರೆಗೂ ಮಣ್ಣನ್ನು ಅಗೆಸಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯವೆಂದು ಕುಟುಂಬಿಕರು ಆರೋಪಿಸಿದ್ದಾರೆ. ಮನೆ ಅಡಿಪಾಯದ ತನಕ ಮಣ್ಣು ತೆಗೆದಿರುವುದನ್ನು ಗಮನಿಸಿದ ಸ್ಥಳೀಯರು ಮಂಗಳ ಅವರಿಗೆ ವಿಷಯ ಮುಟ್ಟಿಸಿ ಅವರು ಮನೆಗೆ ಬರುವಷ್ಟರಲ್ಲಿ ಮನೆಯ ಸಮೀಪದವರೆಗೂ ಮಣ್ಣನ್ನು ಕೊರೆದಿದ್ದು…

Read More

ಬೈಂದೂರು: ತಾಲೂಕಿನ ಶಿರೂರು ಗ್ರಾಮದ ಮೆಲ್ಪಂಕ್ತಿಯ ಸರ್ವೇ ನಂ. 325ರ ರಾಮನಾಥ್ ಭಟ್ ಇವರಿಗೆ ಸೇರಿದ ಪಟ್ಟಾ ಸ್ಥಳದಲ್ಲಿ ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡಿಕೊಂಡು ಬಂದ ದಲಿತ ಕುಟುಂಬಗಳಿಗೆ ಕೆಲ ದಿನಗಳ ಹಿಂದೆ ಮಣ್ಣು ತೆಗೆದ ಪರಿಣಾಮವಾಗಿ ತೊಂದರೆಯಾಗಿದೆ ಎಂದು ಅನೇಕ ಹೋರಾಟಗಳು ನಡೆದಿದೆ. ಇದಕ್ಕೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ದಲಿತ ಕುಟುಂಬಗಳಿಗೆ ಶಾಶ್ವತ ನ್ಯಾಯ ಕಲ್ಪಿಸುವ ಸಲುವಾಗಿ ಪಟ್ಟಾ ಸ್ಥಳವನ್ನು ದಲಿತರ ಹೆಸರಿಗೆ ಪಹಣಿ ದಾಖಲಿಸಿ ಸಂಪೂರ್ಣ ನ್ಯಾಯ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಈಗ ಬೈಂದೂರು ವಕೀಲರ ಸಂಘದ ಹಾಲಿ ಕಾರ್ಯದರ್ಶಿಯಾಗಿರುವ ಪ್ರಶಾಂತ್ ಪೂಜಾರಿ ಅವರು ತಿಳಿಸಿರುವುದಾಗಿ ಶ್ರೀಧರ್ ದೇವಾಡಿಗ ಹೇನಬೇರು ಹೇಳಿದ್ದಾರೆ. ವಕೀಲ ಪ್ರಶಾಂತ ಪೂಜಾರಿ ಅವರ ಮುಂದಾಳತ್ವದಲ್ಲಿ ಪಟ್ಟಾದಾರರು ಹಾಗೂ ದಲಿತ ಕುಟುಂಬದವರು ಇಬ್ಬರಿಗೂ ತಿಳಿ ಹೇಳಿ, ದಲಿತ ಕುಟುಂಬಗಳಿಗೆ ಶಾಶ್ವತ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ದಲಿತ ಮುಖಂಡರೊಂದಿಗೆ ಮತ್ತು ಸಂತ್ರಸ್ತರೊಂದಿಗೆ ದಿ:31.10.2023 ರಂದು ತಮ್ಮ ಕಚೇರಿಯಲ್ಲಿ ಸಮಾಲೋಚನೆ ನಡೆಸಿ ದಲಿತ ಮನೆಗಳು ಇರುವ…

Read More

‘ಕುಂದಾಪ್ರ ಡಾಟ್ ಕಾಂ’ ಸುದ್ದಿ.ಕುಂದಾಪುರ: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಹೊರನಾಡ ಕನ್ನಡಿಗ ದೀಪಕ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಕತಾರ್ನಲ್ಲಿ ವಾಸಿಸುತ್ತಿರುವ ದೀಪಕ್ ಶೆಟ್ಟಿ ಅವರ ಸಾಮಾಜಿಕ ರಂಗದ ಸೇವೆ ಹಾಗೂ ವಿದೇಶದಲ್ಲಿನ ಕನ್ನಡ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2013-15ರ ಸಾಲಿನಲ್ಲಿ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಅದಕ್ಕೂ ಹಿಂದಿನ ಅವಧಿಯಲ್ಲಿ ಸಂಘದ ಕಾರ್ಯದರ್ಶಿಯಾಗಿ, ಕ್ರೀಡಾ ಕಾರ್ಯದರ್ಶಿಯಾಗಿ, ಬಳಿಕ ಕರ್ನಾಟಕ ಸಂಘ ಕತಾರ್ನ ಸಲಹಾ ಸಮಿತಿ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಕಳೆದ ಒಂದೂವರೆ ದಶಕಗಳಿಂದ ಕತಾರಿನಲ್ಲಿ ನೆಲೆಸಿರುವ ಇವರು ಉದ್ಯೋಗದೊಂದಿಗೆ ತುಳುಕೂಟ, ಬಂಟರ ಸಂಘ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಇಂಡಿಯನ್ ಕಮ್ಯುನಿಟಿ ಬೆನವೊಲಂಟ್ ಪೋರಮ್ ಮುಂತಾದ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ. ಬಡ ಮಕ್ಕಳ ಹೃದಯ ಚಿಕಿತ್ಸೆಗೆ ಸಹಕಾರ, ಶಾಲೆ, ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಧನಸಹಾಯ ಹೀಗೆ ಹಲವು ತೆರನಾಗಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಕತಾರ್ನ ಭಾರತೀಯ ರಾಯಭಾರಿ ಕೇಂದ್ರ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಬಿಂಬಿಸುತ್ತದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಭಾಷೆಯನ್ನು ನಾವು ಬೆಳೆಸಬೇಕು. ಕನ್ನಡ ಮಾಧ್ಯಮ ಶಾಲೆಗಳು ಬೆಳೆಯಬೇಕು. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತವರು ಇಂದು ಮಹೋನ್ನತ ಹುದ್ದೆಯನ್ನು ಅಲಂಕರಿಸಿರುವುದು ಗಮನದಲ್ಲಿರಲಿ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಹೇಳಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತ, ಕುಂದಾಪುರ ಪುರಸಭೆ ವತಿಯಿಂದ ಜರುಗಿದ 68ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣಗೈದು ಅವರು ಮಾತನಾಡಿ ಕನ್ನಡ ಭಾಷೆಗೆ ತನ್ನದೇ ಆದ ವಿಭಿನ್ನತೆ ಇದೆ. ಧಾರವಾಡ, ಮೈಸೂರು, ಮಂಗಳೂರು, ಕುಂದಾಪುರ ಕನ್ನಡದಲ್ಲಿ ಬಹಳ ವೈವಿಧ್ಯತೆ ಇದೆ. ಆದರೆ ಕುಂದಾಪುರ ಕನ್ನಡ ಶುದ್ಧಕನ್ನಡವಾಗಿದೆ ಎಂದರು. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಶೋಭಾ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್,…

Read More

ಕುಂದಾಪ್ರ ಡಾಟ್ ಕಾಂಲಂಡನ್: ಬ್ರಿಟಿಷ್ ಸಂಸತ್ತಿನ ಪ್ರತಿಷ್ಠಿತ ಹೌಸ್ ಆಫ್ ಲಾರ್ಡ್ಸ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗು ಕೊಡುಗೈ ದಾನಿ ಡಾ. ರೊನಾಲ್ಡ್ ಕೊಲಾಸೊ ಅವರಿಗ ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ (IOD) ವತಿಯಿಂದ ಡಿಸ್ಟಿಂಗ್ವಿಶ್ಡ್ ಫೆಲೋಶಿಪ್ 2023 ಅವಾರ್ಡ್ ಅನ್ನು ನೀಡಿ ಗೌರವಿಸಲಾಯಿತು. ಕೊಲಾಸೊ ಅವರ ಅಸಾಧಾರಣ ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಜಗತ್ತಿನ ವಿವಿಧೆಡೆಗಳಿಂದ ಬಂದಿದ್ದ ಗಣ್ಯರು, ಕಾರ್ಪೊರೇಟ್ ದಿಗ್ಗಜರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು ಲಂಡನ್ ನಗರದ ಲಾರ್ಡ್ ಮೇಯರ್, ಮಿನಿಸ್ಟರ್ ಆಫ್ ಲಂಡನ್ ಹಾಗು ಪಾರ್ಲಿಮೆಂಟರಿ ಅಂಡರ್ ಸೆಕ್ರೆಟರಿ ಪೌಲ್ ಸ್ಕಲ್ಲಿ, ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ಇಂಡಿಯಾದ ಅಧ್ಯಕ್ಷ ಲೆ. ಜ. ಸುರಿಂದರ್ ನಾಥ್, ಕಾನ್ಫೆಡರೇಷನ್ ಆಫ್ ಬ್ರಿಟಿಷ್ ಇಂಡಸ್ಟ್ರಿನ ಉಪಾಧ್ಯಕ್ಷ ಲಾರ್ಡ್ ಕರಣ್ ಬಿಲ್ಲಿಮೋರಿಯ, ಹೌಸ್ ಆಫ್ ಲಾರ್ಡ್ಸ್ ನ ಮಾಜಿ ಡೆಪ್ಯುಟಿ ಸ್ಪೀಕರ್ ಲಾರ್ಡ್ ಸ್ವರಾಜ್ ಪಾಲ್, ಸದ್ಗುರು ಶ್ರೀ ಮಧುಸೂಧನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಜ್ಜರಕಾಡಿ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕನ್ನಡ ನುಡಿಯನ್ನು ಕಟ್ಟುವ ಹಾಗೂ ಉಳಿಸಿ ಬೆಳೆಸುವ ಕಾಯಕದಲ್ಲಿ ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾದುದು. ಜಿಲ್ಲೆಯಲ್ಲಿ ಕನ್ನಡದೊಂದಿಗೆ ತುಳು, ಕೊಂಕಣಿ, ಬ್ಯಾರಿ ಮೊದಲಾದ ಭಾಷೆಗಳಿವೆ. ಆದರೆ ಇವೆಲ್ಲವೂ ಬೇರೆ ಎಂದು ಭಾವಿಸಬೇಕಿಲ್ಲ. ಎಲ್ಲರೂ ಕನ್ನಡಿಗರೇ ಆಗಿದ್ದಾರೆ ಎಂದರು. ಪ್ರಾಕೃತಿಕ ಏರುಪೇರುವಿನಿಂದಾಗಿ ಈ ಭಾರಿ ವಾಡಿಕೆ ಮಳೆ ಬಾರದೇ ಇರುವುದರಿಂದ ರಾಜ್ಯದ 220 ತಾಲೂಕುಗಳಲ್ಲಿ ಬರ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿಯೂ ಶೇ.25ರಷ್ಟು ಮಳೆ ಕೊರೆಯಾಗಿದೆ. ಇದರಿಂದ ಈಗಾಗಲೇ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಹಾಗೂ ಬ್ರಹ್ಮಾವರ ತಾಲೂಕನ್ನು ಸಾಧಾರಣ ಬರಪೀಡಿತ ಎಂದು ಘೋಷಿಸಲಾಗಿದೆ. ಬೆಳೆ ಹಾನಿ ಅಂದಾಜಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು ಪಶ್ಚಿಮವಾಹಿನಿ ಯೋಜನೆಯಡಿ ಜಿಲ್ಲೆಯಲ್ಲಿ 450 ಕೋಟಿ ರೂ ವೆಚ್ಚದಲ್ಲಿ 56 ಕಿಂಡಿ ಅಣೆಕಟ್ಟು ನಿರ್ಮಾಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಅಜ್ಮನ್: ಅರಬ್ ರಾಷ್ಟ್ರದ ಕುಂದಾಪುರ ಕನ್ನಡಿಗರು ಸೇರಿದ ಕಟ್ಟಿದ ನಮ್ಮ ಕುಂದಾಪುರ ಕನ್ನಡ ಬಳಗ ಗಲ್ಪ್ ಸಂಘಟನೆಯ ವತಿಯಿಂದ ಅಜ್ಮನ್ ಹೆಬಿಟೆಟ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕುಂದಗನ್ನಡ ಉತ್ಸವ 2023 – ಕುಂದಾಪುರ ರತ್ನ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನ ಸಮಾರಂಭ ಯಶಸ್ವಿಯಾಗಿ ಜರುಗಿತು. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಮಂದರ್ತಿ ಮೂಲದ ಉದ್ಯಮಿ ವಿಶ್ವನಾಥ್ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಲ್ಫ್ ರಾಷ್ಟ್ರದಲ್ಲಿರುವ ಕುಂದಗನ್ನಡಿಗರ ಸಾಧನೆ ಮತ್ತು ಪರಿಶ್ರಮ ಜಗತ್ತಿಗೆ ಮಾದರಿಯಾಗಿದೆ. ವೃತ್ತಿ ಬದುಕಿನ ಜೊತೆಗೆ ತಾಯಿನೆಲದ ಅಭಿಮಾನ ಹಾಗೂ ಸಂಘಟಿತ ಶ್ರಮದ ಮೂಲಕ ಕುಂದಾಪುರದ ಜನತೆಗೆ ನೆರವಾಗುವ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಸಂಘಟನೆಯು ಕುಂದಾಪುರದ ಹೆಮ್ಮೆ ಎಂದರು. ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾದನ್ ದಾಸ್ ಮಾತನಾಡಿ, ಕುಂದಾಪುರ ಕನ್ನಡ ಬಳಗ ಗಲ್ಪ್ ರಾಷ್ಟ್ರದಲ್ಲಿ ಕುಂದಗನ್ನಡಗರಿಗೆ ಧ್ವನಿಯಾಗುವ ಜೊತೆಗೆ ಪ್ರತಿ ವರ್ಷ ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಪೈಪೋಟಿ ಇದೆ. ಶೈಕ್ಷಣಿಕ ಕ್ಷೇತ್ರ ಬಹಳಷ್ಟು ವಿಸ್ತಾರವಾಗಿದ್ದು, ಶಿಕ್ಷಣಕ್ಕೆ ನಮ್ಮ ದೇಶದಲ್ಲಿ ವಿಪುಲ ಅವಕಾಶಗಳಿವೆ. ಸಾಕಷ್ಟು ಸಂಪನ್ಮೂಲಗಳು, ಸಂಪನ್ಮೂಲ ವ್ಯಕ್ತಿಗಳಿದ್ದು, ಇವೆಲ್ಲವನ್ನೂ ಬಳಸಿಕೊಂಡು ಸಮೃದ್ಧ ದೇಶ ಕಟ್ಟುವ ಕಾಯಕದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ನಾವು ಹುಟ್ಟಿ ಬೆಳೆದ ಊರು ಮತ್ತು ಶಿಕ್ಷಣ ಪಡೆದ ಸಂಸ್ಥೆಗಳಲ್ಲಿ ನಾವೆಲ್ಲರೂ ತೊಡಗಿಸಿಕೊಂಡು, ಆ ಗ್ರಾಮದ, ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಿದ್ಧಾಪುರ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಯ ಸಂಚಾಲಕ ಡಿ.ಗೋಪಾಲಕೃಷ್ಣ ಕಾಮತ್ ಹೇಳಿದರು. ಗಂಗೊಳ್ಳಿಯ ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಾನಿಗಳಾದ ಡಾ.ಲೋಕೇಶ್ ಗಂಗೊಳ್ಳಿ ಸಹಕಾರದೊಂದಿಗೆ ನೂತನವಾಗಿ ನಿರ್ಮಿಸಲಾಗಿರುವ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶುಕ್ರವಾರ ಅವರು ಮಾತನಾಡಿದರು. ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶಾಲಾಕ್ಷಿ ಮತ್ತು ಪಾಂಡುರಂಗ ಶೇರುಗಾರ್ ಅವರು ನೂತನ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯವನ್ನು…

Read More