ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಕೂಟ ಇತ್ತೀಚಿಗೆ ನಡೆದಿದ್ದು, “ಕುಂದಾಪುರ ಫೈಟರ್ಸ್” ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.

ಕುಂದಾಪುರದ ಮನ್ಸೂರ್ ಅವರ ಮಾಲಿಕತ್ವದ “ಕುಂದಾಪುರ ಫೈಟರ್ಸ್” ತಂಡವು ಇದರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. 3 ದಿನಗಳ ಈ ಪಂದ್ಯಕೂಟದಲ್ಲಿ ಒಟ್ಟಾರೆ 20 ತಂಡಗಳು ಭಾಗವಹಿಸಿದ್ದರು. ಪಂದ್ಯಾಕೂಟದಲ್ಲಿ ಭಾರತದಿಂದ ಸಹ ಹೆಸರಾಂತ ಆಟಗಾರನ್ನು ಕರೆಸಲಾಯಿತು. ಅದರಂತೆ ಕುಂದಾಪುರ ಫೈಟರ್ಸ್ ತಂಡದಲ್ಲಿ ಕ್ರೀಡಾಳುವಾಗಿ ಕರಾವಳಿಯ 4 ಸ್ಟಾರ್ ಆಟಗಾರರಾದ ರಾಜ ಸಾಲಿಗ್ರಾಮ, ಇಮ್ರಾನ್ ಕೋಟೇಶ್ವರ, ಸಾಗರ್ ಭಂಡಾರಿ ಹಾಗೂ ಸಂಪತ್ ಶೆಟ್ಟಿ ಸುರತ್ಕಲ್ ಅವರು ಸಹ ತೆರಳಿದ್ದರು. ಬಿಹಾರದ ಬಾಹುಬಲಿ ಖ್ಯಾತಿಯ ಸರ್ಫರಾಜ್ ಹಾಗೂ ಬಿಹಾರದ ಇನ್ನೊಬ್ಬ ಫೇಮಸ್ ಆಟಗಾರ ಕಾಶಿಮ್ ಬಾಬು ಸಹ ಕುಂದಾಪುರ ತಂಡವನ್ನು ಪ್ರತಿನಿಧಿಸಿದ್ದರು.
ಮೊದಲ ಪಂದ್ಯ ಸೋತ ಕುಂದಾಪುರ ತಂಡವು ಅಭಿಮಾನಿಗಳಿಗೆ ಬಹಳಷ್ಟು ನಿರಾಸೆ ಮೂಡಿಸಿತ್ತು, ಅದಾದ ನಂತರದ ಎಲ್ಲಾ ಪಂದ್ಯವನ್ನು ಗೆದ್ದು ಚಾಂಪಿಯನ್ ಪಟ್ಟ ಸ್ವೀಕರಿಸಿತು. ಸೆಮಿ ಫೈನಲ್ ಪಂದ್ಯದಲ್ಲಿ ಸೋಲುವ ಹಂತದಲ್ಲಿದ್ದ ಸಮಯದಲ್ಲಿ ರಾಜ ಸಾಲಿಗ್ರಾಮ ಅವರ ಬೌಲಿಂಗ್ ಕೈ ಚಳಕದಿಂದ ತಂಡವು ಫೈನಲ್ ಪ್ರವೇಶ ಪಡೆಯಿತು. ಹಾಗೆ ಫೈನಲ್ ಪಂದ್ಯದಲ್ಲಿ ಸಹ ರಾಜ ಅವರ ಕೊನೆಯ 6 ಎಸೆತದಲ್ಲಿ ಹೊಡೆದ 29 ರನ್ ಅನ್ನೋದು ಪಂದ್ಯಾಟದ ಚಿತ್ರಣವನ್ನು ಬದಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಕುಂದಾಪುರ ತಂಡ 6 ಓವರಿಗೆ 85 ರನ್ ಗಳ ಗುರಿಯನ್ನು ನೀಡಿತ್ತು ,,ಅದನ್ನು ಬೆನ್ನಟ್ಟಿದ ಸೂಪರ್ ಸ್ಟ್ರೈಕರ್ಸ್ ತಂಡವು ಸುಮಾರು 20 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು..ಫೈನಲ್ ಪಂದ್ಯದಲ್ಲಿ ಸಾಗರ್ ಭಂಡಾರಿ,ಸಂಪತ್ ಶೆಟ್ಟಿ, ರಾಜ ಸಾಲಿಗ್ರಾಮ ಮತ್ತೆ ಕುಂದಾಪುರದ ಮತ್ತೊಬ್ಬ ಯುವ ಬೌಲರ್ “ಇಮ್ರಾನ್” ಅವರು ಬಹಳಷ್ಟು ಉತ್ತಮವಾದ ಬೌಲಿಂಗನ್ನು ನಡೆಸಿದ್ದರು. ಇಮ್ರಾನ್ ಕೋಟೇಶ್ವರ ಅವರ ರಿವರ್ಸ್ ಆಟ ಹಾಗೂ ಸಾಗರ್ ಭಂಡಾರಿ ಅವರ ಆಲ್ ರೌಂಡರ್ ಆಟವು ಅಭಿಮಾನಿಗಳಿಗೆ ಬಹಳಷ್ಟು ಮನರಂಜನೆ ಮೂಡಿಸಿತು.
ಕುಂದಾಪುರ ತಂಡದ ಪರವಾಗಿ ಪ್ರೋತ್ಸಾಹಕ್ಕೆ ಸಂತೋಷ್ ಪೂಜಾರಿ (ಜೆಡಿ), ವಿವಿಂಜಿತ್ ಬಸ್ರೂರು, ಅಸ್ಫಕ್ ಕುಂದಾಪುರ, ಚೇತನ್ ಉಡುಪಿ, ಯಶ್ ಉಡುಪಿ, ಫಯಾಜ್ ಮಣಿಪಾಲ ಹಾಗೂ ಫಯಾಜ್ ಹಂಗಳೂರು ಅವರು ಸಹ ಜೊತೆಯಲ್ಲಿ ಇದ್ದರು.
















