Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೊಸೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಬುಧವಾರ ಕೊಲ್ಲೂರು ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು “ರಜತ ಸಂಭ್ರಮ”ದ ಪೋಸ್ಟರ್ ಅನಾವರಣಗೊಳಿಸಿದರು. ಡಿಸೆಂಬರ್ 25ರ ಬೆಳಿಗ್ಗೆ 8ರಿಂದ ಮರುದಿನ ಬೆಳಿಗ್ಗೆ 8ರ ತನಕ ವಿವಿಧ ಕಾರ್ಯಕ್ರಮಗಳು ರಜತ ಸಂಭ್ರಮದ ಅಂಗವಾಗಿ ನಡೆಯಲಿದೆ. ಪೋಸ್ಟರ್ ಅನಾವರಣಗೊಳಿಸಿ ಬಳಿಕ ಅವರು ಮಾತನಾಡಿ, ದೇವಳದ ವತಿಯಿಂದ ನಡೆಸಲಾಗುತ್ತಿರುವ ಪ್ರೌಢಶಾಲೆ ಮೌಲ್ಯದಾರಿತ ಶಿಕ್ಷಣದ ಮೂಲಕ ನೂರಾರು ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಸತ್ಪಜೆಯಾಗಿ ರೂಪಿಸಿದೆ. ಸಂಸ್ಥೆಯಿಂದ ಶಿಕ್ಷಣ ಪಡೆದವರೆಲ್ಲರೂ ಒಂದಾಗಿ ಈ ಸಂಭ್ರಮವನ್ನು ಆಚರಿಸಬೇಕಿದೆ. ಹಳೆ ವಿದ್ಯಾರ್ಥಿಗಳು, ಊರವರು, ಶಿಕ್ಷಕರು ಹಾಗೂ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಹಳೇ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಕೆ. ಎಲ್. ಜಯರಾಮ್ ಶೆಟ್ಟಿ ಕಾನಬೇರು ಅವರು ಮಾತನಾಡಿ ಡಿಸೆಂಬರ್ 25ರ ಬೆಳಿಗ್ಗೆ 8ರಿಂದ ಮರುದಿನ 8ರ ತನಕ ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಜತ ಮಹೋತ್ಸವದ ನೆನಪಿಗಾಗಿ ವಾಹನ ವ್ಯವಸ್ಥೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಮತ್ತೊಂದು ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರಿಯಾಂಕಾ ಅವರ ಹೊಸ ಸಿನಿಮಾಗೆ ಕ್ಯಾಪ್ಚರ್ ಎಂದು ಟೈಟಲ್ ಇಡಲಾಗಿದೆ. ಸದ್ಯ ಕ್ಯಾಪ್ಚರ್ ತಂಡ ಟೈಟಲ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಅಭಿಮಾನಿಗಳ ಮಧ್ಯೆ ಕ್ಯಾಪ್ಚರ್ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷವಾಗಿತ್ತು. ಸ್ಯಾಂಡಲ್ವುಡ್ನಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರ ಪೋಸ್ಟರ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ 60 ಅಡಿಯ ಕಟೌಟ್ ನಿಲ್ಲಿಸುವ ಮೂಲಕ ಬಿಡುಗಡೆ ಮಾಡಿರುವುದು ಖುಷಿಯ ವಿಚಾರವಾದ್ರೆ ಮತ್ತೊಂದು ಕಡೆ ಕನ್ನಡ ಸಿನಿಮಾರಂಗದಲ್ಲಿಯೇ ಇದೊಂದು ವಿನೂತನವಾದ ಪ್ರಯತ್ನವಾಗಿದೆ .. ವಿಶೇಷ ಎಂದರೆ ಈ ಸಿನಿಮಾಗೆ ಮಮ್ಮಿ, ದೇವಕಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್ನ 3ನೇ ಸಿನಿಮಾ ಇದಾಗಿದೆ. ಈ ಸಿನಿಮಾಗೆ ರವಿರಾಜ್ ಅವರು ತಮ್ಮ ಶ್ರಿ ದುರ್ಗಪರಮೇಶ್ವರಿ ಪ್ರೊಡಕ್ಷನ್ ಮೂಲಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಶ್ರೀ ರಾಮಕ್ಷತ್ರಿಯ ಯುವಕ ಸಮಾಜ ಶ್ರೀ ಸೀತಾರಾಮಚಂದ್ರ ದೇವಸ್ಥಾನದ 37ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭ ಅ.20ರಿಂದ 23ರ ತನಕ ವಿಜೃಂಭಣೆಯಿಂದ ಜರುಗಲಿದೆ. ಅ.20ರ ಬೆಳಿಗ್ಗೆ ಶ್ರೀ ಶಾರದಾಂಬೆಯನ್ನು ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿದ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅಂದು ಸಂಜೆ ನವಚಂಡಿಕಾ ಯಾಗ ನಡೆಯಲಿದೆ. ಅದೇ ದಿನ ಮಕ್ಕಳು ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳ ಜೊತೆಗೆಯಲ್ಲಿ, ಭಗವದ್ಗೀತಾ ಪಠಣ ಸ್ಪರ್ಧೆ, ಭಜನಾ ಕುಣಿತ ಸ್ಪರ್ಧೆಗಳು ಇರಲಿದೆ. ಅ.21ರಂದು ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದ್ದು ವಿವಿಧ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ. ಅಂದು ರಾಮಕ್ಷತ್ರಿಯ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಬಳಿಕ ನೃತ್ಯನಿಕೇತನ ಕೊಡವೂರು ತಂಡದಿಂದ ನೃತ್ಯ ಸಿಂಚನ ಜರುಗಲಿದೆ. ಅ.22ರ ಸಭಾ ಕಾರ್ಯಕ್ರಮದಲ್ಲಿಯೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ರಾಮಕ್ಷತ್ರಿಯ ಸಾಂಸ್ಕೃತಿಕ ವೈಭವ ಸ್ಪರ್ಧೆಗಳು ಜರುಗಲಿದೆ. ಅ.23ರಂದು ವೈಭವದ ನಗರೋತ್ಸವ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯಶಸ್ವಿಯಾಗಿ ಆಯೋಜಿಸಲಾಗುತ್ತಿರುವ ಕುಂದಗನ್ನಡ ಉತ್ಸವವನ್ನು ಈ ಭಾರಿಯೂ ಅದ್ದೂರಿಯಾಗಿ ನಡೆಸಲಾಗುತ್ತಿದ್ದು, ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದೆ ಎಂದು ಕುಂದಾಪ್ರ ಕನ್ನಡ ಬಳಗದ ಮುಂದಾಳು ಎನ್.ರಘುರಾಮ ದೇವಾಡಿಗ ರಘುರಾಮ ದೇವಾಡಿಗ ಹೇಳಿದರು. ಅಕ್ಟೋಬರ್ 29ರಂದು ಯುಎಇ ಅಜ್ಮನ್ ನಗರದಲ್ಲಿ ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯ ತನಕ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಗಲ್ಫ್ ದೇಶದಲ್ಲಿ ಮಂದರ್ತಿ ಮೇಳದಿಂದ ಮೊದಲ ಭಾರಿಗೆ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಮೇಳದ ಕಲಾವಿದರು ಹಾಗೂ ಅನಿವಾಸಿ ಭಾರತೀಯ ಕಲಾವಿದರಿಂದ ‘ಪಾಪಣ್ಣ ವಿಜಯ – ಗುಣಸುಂದರಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದು ಕುಂದಗನ್ನಡ ಉತ್ಸವದಲ್ಲಿ ಮೂವರು ಎಲೆಮರೆಯ ಸಾಧಕರಿಗೆ ಕುಂದಾಪ್ರ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪಡುಕೋಣೆಯ ಖ್ಯಾತ ನಾಟಿ ವೈದ್ಯ ಮ್ಯಾಕ್ಸಿಮ್ ಒಲಿವೆರಾ, ಗೋಪ್ರೇಮಿ ಸಮಾಜ ಸೇವಕ ಸಂಜೀವ ದೇವಾಡಿಗ ಹಾಗೂ ಜೀವರಕ್ಷಕ ಮುಳುಗುತಜ್ಞ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್ ಬೈಂದೂರು ನೇತೃತ್ವದಲ್ಲಿ ಜೆ ಸಿ ಐ ಉಪ್ಪುಂದ, ಫ್ರೆಂಡ್ಸ್ ಕ್ಲಬ್ ಉಪ್ಪುಂದ, ಜೇಸಿಐ ಬೈಂದೂರು ಸಿಟಿ, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜ ಸಂಘ (ರಿ), ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಉಪ್ಪುಂದ , ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಟ್ರಸ್ಟ್ ರಿ ಉಪ್ಪುಂದ, ಆನೆ ಗಣಪತಿ ಆಟೋ ರಿಕ್ಷಾ ಮಾಲಕ ಚಾಲಕರ ಸಂಘ ಅಂಬಾಗಿಲು , ಆಸರೆ ಬಳಗ ಫಿಶರೀಸ್ ಕಾಲೋನಿ ಉಪ್ಪುಂದ, ಲಯನ್ಸ್ ಕ್ಲಬ್ ಉಪ್ಪುಂದ- ಬೈಂದೂರು, ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ ಇವರುಗಳ ಸಹಯೋಗದಲ್ಲಿ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಇವರ ಸಹಕಾರದೊಂದಿಗೆ ಕೆಎಂಸಿ ಮಣಿಪಾಲ ಆಸ್ಪತ್ರೆಯ ವೈದ್ಯರುಗಳಿಂದ ಉಪ್ಪುಂದದ ರೈತ ಸಿರಿ ಸಭಾಭವನದಲ್ಲಿ ಬೃಹತ್ ಉಚಿತ ಹೃದಯ ತಪಾಸಣೆ, ಬಾಯಿ ಸ್ತನ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಶಿಬಿರ ಬಿಪಿ ಶುಗರ್, ಜನರಲ್ ಮೆಡಿಸನ್ ತಪಾಸಣಾ ಸೌಲಭ್ಯದೊಂದಿಗೆ ನಡೆಯಿತು. ಕಂಬದಕೋಣೆ ರೈತರ ಸೇವಾ ಸಹಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಮೂರು ಬೈಕ್‌ಗಳು ಮುಖಮುಖಿಯಾಗಿ ಡಿಕ್ಕಿಯಾಗಿ ಓರ್ವ ಯುವಕ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಭಾನುವಾರ ರಾತ್ರಿ ಕೋಡಿ ಕನ್ಯಾಣ ಅಂಗನವಾಡಿ ಸಮೀಪ ನಡೆದಿದೆ. ಘಟನೆಯಲ್ಲಿ ಪಾರಂಪಳ್ಳಿಯ ರವೀಂದ್ರ ಪೂಜಾರಿ (30) ಮೃತಪಟ್ಟಿದ್ದಾರೆ. ಕೋಡಿ ಕನ್ಯಾಣದಿಂದ ಪಾರಂಪಳ್ಳಿಗೆ ಹೋಗುತ್ತಿದ್ದ ಎರಡು ಬೈಕ್ಗಳು ಪಾರಂಪಳ್ಳಿಯಿಂದ ಬರುತ್ತಿದ್ದ ಬೈಕ್ಗೆ ಮುಖಮುಖಿ ಡಿಕ್ಕಿ ಸಂಭವವಿಸಿದ ಹಿನ್ನಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಲ್ಲದೆ ಅಪಘಾತ ನಡೆದ ಸ್ಥಳದ ವಿರುದ್ದ ದಿಕ್ಕಿನಲ್ಲಿ ಯಾವುದೇ ಪಾರ್ಕಿಂಗ್ ಸಿಗ್ನಲ್ ಇಲ್ಲದೆ ರಸ್ತೆ ಬದಿಯಲ್ಲಿ ಕಾರೊಂದು ಪಾರ್ಕಿಂಗ್ ಮಾಡಿದ್ದು ಬೈಕ್ ಸವಾರರಿಗೆ ಮುಂದೆ ಬರುತ್ತಿದ್ದ ಬೈಕ್ ಕಾಣಿಸದೆ ಇರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಅಪಘಾತದ ತೀವ್ರತೆಯು ಬೈಕ್ ಮುಖಮುಖಿ ಡಿಕ್ಕಿಯಾಗಿ ನಿಂತ ಕಾರಿಗೆ ಅಪ್ಪಳಿಸಿ ಬೈಕ್ ಸವಾರರು ಗಂಭೀರ ಗಾಯಗೊಂಡರು. ಮೃತ ಯುವಕ ಕೋಟ ಮೂರಕೈ ಸಮೀಪ ಟೂ-ವೀಲರ್ ಗ್ಯಾರೇಜ್ ಹೊಂದಿದ್ದಾರೆ. ಇನ್ನು ಗಂಭೀರ ಗಾಯಗೊಂಡ ಸ್ಥಳೀಯ ಚರಣ್ ಹಾಗೂ ಪ್ರಶಾಂತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ ಎಂಟು ವರ್ಷಗಳಿಂದ ವಿಭಿನ್ನವಾಗಿ ಯಕ್ಷಗಾನ ಸಂಘಟನೆ ಮಾಡುತ್ತಿರುವ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳಿಗೆ ಮಾದರಿಯಾದ ಯಕ್ಷರಾತ್ರಿ, ಈ ಬಾರಿ ಡಿಸೆಂಬರ್ 2ರ ಶನಿವಾರ ಕುಂದಾಪುರದ ನೆಹರೂ ಮೈದಾನದಲ್ಲಿ ನಡೆಯಲಿದ್ದು ಈ ವೇಳೆ ಸಾಧಕರಿಗೆ ಗೌರವ ಪುರಸ್ಕಾರ, ಕಲಾ ಪುರಸ್ಕಾರ ನೀಡಲಾಗುತಿದೆ. ಯಕ್ಷಕಾಶಿಯ ಮೊದಲ ಆಟ ‘ಯಕ್ಷರಾತ್ರಿ’ಯಲ್ಲಿ ಗೌರವ ಪುರಸ್ಕಾರವನ್ನು ಮುಳುಗು ತಜ್ಞ ಸಮಾಜಸೇವಕ ಈಶ್ವರ ಮಲ್ಪೆ ಹಾಗೂ ಸ್ವಾವಲಂಬಿ ಬದುಕು ನಡೆಸುವ ರಾಜ್ಯದ ಪ್ರಥಮ ಮಂಗಳಮುಖಿ ರಿಕ್ಷಾ ಚಾಲಕಿ ಕಾವೇರಿ ಮೇರಿ ಡಿಸೋಜ ಅವರನ್ನು ಆಯ್ಕೆ ಮಾಡಲಾಗಿದೆ. ಯಕ್ಷರಾತ್ರಿ ಕಲಾ ಪುರಸ್ಕಾರವಾಗಿ ಬಡಗಿನ ಪ್ರಸಿದ್ದ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರು ಅವರನ್ನು ಆಯ್ಕೆಮಾಡಲಾಗಿದೆ. ಶ್ರೀ ಪೆರ್ಡೂರು ಮೇಳದವರಿಂದ ಪ್ರೊ. ಪವನ್ ಕಿರಣಕೆರೆ ವಿರಚಿತ ಗಂಗೆ- ತುಂಗೆ-ಕಾವೇರಿ ಎನ್ನುವ ನೂತನ ಸಾಮಾಜಿಕ ಪ್ರಸಂಗವನ್ನು ಕುಂದಾಪುರದಲ್ಲಿ ಮೊಟ್ಟಮೊದಲ ಭಾರಿಗೆ ಆಯೋಜಿಸಲಾಗಿದೆ ಎಂದು ಸಂಘಟಕ ಗಜೇಂದ್ರ ಆಚಾರ್ ಕೋಣಿ ತಿಳಿಸಿದ್ದಾರೆ ಯಕ್ಷರಾತ್ರಿ ಜೊತೆಗೆ ಸಾಧಕರಿಗೆ ಪುರಸ್ಕಾರ, ವಿದ್ಯಾರ್ಥಿ ವೇತನ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ನೂತನ ಶಿಲಾಮಯ ಮಹಾಪ್ರವೇಶದ್ವಾರ ಗೋಪುರ ನಿರ್ಮಾಣ ಯೋಜನೆ ಮನವಿಪತ್ರವನ್ನು ದೇವಳದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು. ದೇವಳದ ಸೇವಾಸಮಿತಿ ಗೌರವಾಧ್ಯಕ್ಷರಾದ ಎಸ್. ರಾಜು ಪೂಜಾರಿ ಮನವಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ದೇವಸ್ಥಾನದಲ್ಲಿ ಬೈಂದೂರು ಭಾಗದ ಪ್ರಮುಖ ಶ್ರದ್ಧಾಕೇಂದ್ರವಾಗಿ ಮಾರ್ಪಾಡಾಗಿದ್ದು, ನಿತ್ಯ ಸೇವೆ ವಾರ್ಷಿಕ ಜಾತ್ರೆಯ ಜೊತೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯುತ್ತಿದೆ. ಮುಂದುವರಿದ ಭಾಗವಾಗಿ ಮಹಾಪ್ರವೇಶದ್ವಾರ ಗೋಪುರ ನಿರ್ಮಾಣವಾಗುತ್ತಿದ್ದು, ರೂ. 60 ಲಕ್ಷ ವೆಚ್ಚವಾಗುವ ಅಂದಾಜಿದೆ. ದೇವಳದ ಎಲ್ಲಾ ಅಭಿವೃದ್ಧಿ ಕಾರ್ಯದಲ್ಲಿ ಕೈಜೊಡಿಸಿರುವ ಭಕ್ತರು ಪ್ರವೇಶದ್ವಾರ ನಿರ್ಮಾಣದಲ್ಲಿಯೂ ಭಾಗಿಯಾಗುವಂತೆ ಕೋರಿದರು. ಪ್ರಧಾನ ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವಡ ಅವರು ಮಾತನಾಡಿ ಶಕ್ತಿದೇವತೆ ಮಹಾಸತಿ ಅಮ್ಮನವರ ದೇವಸ್ಥಾನದ ಶಿಲಾಮಯ ಗರ್ಭಗುಡಿಯನ್ನು 2010ರಲ್ಲಿ ನಿರ್ಮಾಣ ಮಾಡಲಾಗಿತ್ತು. ಪ್ರವೇಶದ್ವಾರವನ್ನ ಮಾತ್ರವೇ ಅಂದು ನಿರ್ಮಿಸಿದ್ದರಿಂದ ನೂತನ ಶಿಲಾಮಯ ಮಹಾಪ್ರವೇಶದ್ವಾರ ಗೋಪುರವನ್ನು ನಿರ್ಮಿಸಲು ಸಮಿತಿ ನಿರ್ಧರಿಸಿದ್ದು, ಭಕ್ತರ ಸಹಕಾರ ಅಗತ್ಯವಾಗಿ ಬೇಕಿದೆ ಎಂದರು. ಇದನ್ನೂ ಓದಿ: ►…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಚ್‌ಡಿಎಫ್‌ಸಿ ಬ್ಯಾಂಕ್ ಕುಂದಾಪುರ ಶಾಖೆಯ ಉದ್ಯೋಗಿ ನಾಗೇಂದ್ರ ಹೆಚ್ ಅವರು 2022-23 ಸಾಲಿನ ಆರ್ಥಿಕ ವರ್ಷದಲ್ಲಿ ವೃತ್ತಿಯಲ್ಲಿ ತೋರಿದ ಸಾಧನೆಗಾಗಿ ಸೌತ್ ಕೊರಿಯಾದಲ್ಲಿ ನಡೆದ ಎಂಡಿಆರ್‌ಟಿ ಸಭೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದ ಸಭೆಯಲ್ಲಿ “ಬೆಸ್ಟ್ ಬ್ಯಾಂಕರ್” ಮತ್ತು ಮಲೇಷಿಯಾದಲ್ಲಿ ನೆಡೆದ ಸಭೆಯಲ್ಲಿ “ಪರ್ಪಾರ್ಮರ್ ಆಫ್ ದಿ ಇಯರ್” ಪ್ರಶಸ್ತಿಯನ್ನು ಪಡೆದಿದ್ದರು. ನಾಗೇಂದ್ರ ಅವರು ಮಯ್ಯಾಡಿ ಹೆಬ್ಬಾಗಿಲು ಮನೆ ಪ್ರೇಮ ಮತ್ತು ಅಶ್ವಥನಾರಾಯಣ ಅವರ ಪುತ್ರ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರಕಾರಿ ಕಾಲೇಜುಗಳಲ್ಲಿ ಕಲಿಯುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಿದ್ದ ಬಹುದೊಡ್ಡ ಕೊರತೆಯನ್ನು ನೀಗಿಸುವಲ್ಲಿ ಸಮೃದ್ಧ ಬೈಂದೂರು ತಂಡ ಪ್ರಥಮ ಹೆಜ್ಜೆ ಇರಿಸಿದ್ದು, ಉಚಿತ ಕೆಸಿಇಟಿ ಹಾಗೂ ನೀಟ್ ತರಬೇತಿ ನೀಡಲು ಯೋಜಿಸಿದೆ. ಗುಣಮಟ್ಟದ ತರಬೇತಿ ನೀಡುವ ಮೂಲಕ ಅವಕಾಶವನ್ನು ಸೃಷ್ಟಿಸಿಕೊಡುವ ಜವಾಬ್ದಾರಿ ನಮ್ಮದಾಗಿದ್ದು, ಆಸಕ್ತಿಯ ಕಲಿಕೆ ಹಾಗೂ ಫಲಿತಾಂಶವನ್ನು ತೋರಿಸುವ ಹೊಣೆ ವಿದ್ಯಾರ್ಥಿಗಳದ್ದಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ಸಮೃದ್ಧ ಬೈಂದೂರು ಪರಿಕಲ್ಪನೆಯಡಿಯಲ್ಲಿ ಬೈಂದೂರು ಹಾಗೂ ಉಪ್ಪುಂದ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗಾಗಿ, ಜ್ಞಾನದೀಪ ಟುಟೋರಿಯಲ್ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಂಡ ಉಚಿತ ಕೆಸಿಇಟಿ ಹಾಗೂ ನೀಟ್ ತರಬೇತಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಬಡತನವೆಂಬುದು ಕೊರತೆಯಾಗಬಾರದು. ಅದನ್ನೇ ಸವಾಲಾಗಿ ಸ್ವೀಕರಿಸಿದ ಅದೇಷ್ಟೋ ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆದ್ದ ನೂರಾರು ಉದಾಹರಣೆಗಳು ನಮ್ಮ ಮುಂದಿದೆ. ಅಂತಹದ್ದೊಂದು ಇಚ್ಚಾಶಕ್ತಿಯನ್ನು ಬೆಳಿಸಿಕೊಳ್ಳಿ ಎಂದರು. ತರಗತಿಗಳಲ್ಲಿ ಕಲಿಕೆಯಲ್ಲಿ ಉತ್ತಮ ಹಾಗೂ ಸಾಧಾರಣವಿರುವ ವಿದ್ಯಾರ್ಥಿಗಳಿಗೂ ಪಾಠ ಮಾಡಬೇಕಾಗುತ್ತದೆ. ಬಾಹ್ಯ ತರಬೇತಿಗಳಲ್ಲಿ ಕಲಿಕೆಯಲ್ಲಿ ಉತ್ತಮವಿರುವ…

Read More