ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೌಹೀದ್ ಶಾಲೆ ಶಿರೂರಿನಲ್ಲಿ ನಡೆದಿರುವ ಬೈಂದೂರು ಶೈಕ್ಷಣಿಕ ತಾಲೂಕು ಥ್ರೋಬಾಲ್ ಪಂದ್ಯಾಟದಲ್ಲಿ ಆಲೂರು ಸರಕಾರಿ ಪ್ರೌಢಶಾಲೆಯ ಮೂರು ವಿಭಾಗದ ತಂಡದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

14ರ ವಯೋಮಾನದ ಬಾಲಕಿಯರ ತಂಡ, 17ರ ವಯೋಮಾನದ ಬಾಲಕರ ತಂಡ, 17ರ ವಯೋಮಾನದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ.












