Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ಸುದೀರ್ಘಕಾಲ ಗುರುತಿಸಿಕೊಂಡಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಈ ಸಾಲಿನಲ್ಲಿ ರೂ.1140 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ.6.15 ಕೋಟಿ ಲಾಭಗಳಿಸಿದ್ದು, ಸದಸ್ಯರಿಗೆ ಶೇ.15 ಡೆವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಉಪ್ಪುಂದ ದುರ್ಗಾಪರಮೇಶ್ವರೀ ಸಭಾಂಗಣದಲ್ಲಿ ಭಾನುವಾರ ನಡೆದ 2024-25ನೇ ಸಾಲಿನ 48ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಘವು ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯಲ್ಲಿ ಜನ ಮನ್ನಣೆಗಳಿಸಿಗೊಂಡು ಸಹಕಾರಿ ರಂಗದಲ್ಲಿ ವಿಶಿಷ್ಟ ವಿನೂತನ ಸಾಧನೆಯಿಂದ ಜನಾನುರಾಗಿಯಾಗಿದೆ. ಕಳೆದ 23 ವರ್ಷಗಳಿಂದ ಸತತವಾಗಿ ’ಎ’ ವರ್ಗದ ಆಡಿಟ್ ವರ್ಗೀಕರಣ ಹೊಂದಿದ್ದು, ಸವಾಂಗೀಣ ನಿರ್ವಹಣೆಗೆ ಈ ವರ್ಷ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಕೊಡಮಾಡಿದ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ಅಲ್ಲದೇ ಸಂಘವು ಪ್ರಾಯೋಜಿಸಿರುವ ರೈತಸಿರಿ ರೈತಸೇವಾ ಒಕ್ಕೂಟಕ್ಕೆ ಜಿಲ್ಲಾಮಟ್ಟದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ,ಸೆ.14: ವಿಶ್ವ ರಾಮಕ್ಷತ್ರಿಯ ಮಹಾಸಂಘ ರಿ. ಕುಂದಾಪುರದ ಅಧ್ಯಕ್ಷರಾಗಿ ಎಚ್.‌ ಆರ್. ಶಶಿಧರ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ ಪಿ. ಎಸ್ ಅವರು ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಭಾನುವಾರ ಕುಂದಾಪುರ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಮಹಾಸಭೆಯ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯಾಧ್ಯಕ್ಷರಾಗಿ ಶ್ರೀನಿವಾಸ ಶೇರುಗಾರ್ ಹೆಬ್ರಿ, ಉಪಾಧ್ಯಕ್ಷರುಗಳಾಗಿ ನಾಗರಾಜ ಕಾಮಧೇನು, ಸೀತಾರಾಮ‌ ಹಳದಿಪುರ, ಮಂಜುನಾಥ ಕೆ.ಎನ್., ವಾಮನ ರಾವ್ ಬೇಕಲ್, ಬಿ.ಎಂ.‌ನಾಥ್, ಕಾರ್ಯದರ್ಶಿಗಳಾಗಿ ಷಣ್ಮುಕ, ಡಿ. ಸತೀಶ್, ಅಣ್ಣಪ್ಪ ನಾಯ್ಕ್, ಗಣಪತಿ ಹೋಬಳಿದಾರ್, ರಶ್ಮಿರಾಜ್ ಕುಂದಾಪುರ, ಕೋಶಾಧಿಕಾರಿಯಾಗಿ ಕರುಣಾಕರ ಯು, ಸಂಘಟನಾ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಪಿ. ನಾಯ್ಕ್, ಅನಿಲ್ ಹೊಸನಗರ, ಪದ್ಮನಾಭ ಕೊತ್ವಾಲ್, ಮಂಜುನಾಥ ಎನ್, ಲೆಕ್ಕ ಪರಿಶೋಧಕರಾಗಿ ಗಣಪತಿ ಎನ್. ಶೇರುಗಾರ್, ಕಾನೂನು‌ ಸಲಹೆಗಾರರಾಗಿ ಹೂವಯ್ಯ ಶೇರುಗಾರ್, ಸಂಪಾದಕರುಗಳಾಗಿ ರೇಖಾ‌ ಸುದೇಶ್ ಆಯ್ಕೆಯಾಗಿದ್ದಾರೆ. ಒಟ್ಟು 45 ಮಂದಿ ಕಾರ್ಯಕಾರಿ ಮಂಡಳಿಗೆ ನೇಮಕಗೊಂಡಿದ್ದು, ಎಲ್ಲಾ ಪಧಾಧಿಕಾರಿಗಳು ಅವಿರೋಧವಾಗಿ ಆಯ್ಕೆಗೊಂಡರು. /ಕುಂದಾಪ್ರ ಡಾಟ್‌…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇತ್ತೀಚಿಗೆ ಭರತನಾಟ್ಯದಲ್ಲಿ ವಿಶ್ವ ದಾಖಲೆ ಬರೆದ ಕಲಾವಿದೆ ದಿಕ್ಷಾ ಬ್ರಹ್ಮಾವರ ಕೋಟದ ಅಮೃತೇಶ್ವರೀ ದೇಗುಲಕ್ಕೆ ಶನಿವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಸದಸ್ಯರಾದ ಸುಭಾಷ್ ಶೆಟ್ಟಿ ಹಾಗೂ ಗಣೇಶ್ ನೆಲ್ಲಿಬೆಟ್ಟು ಶಾಲು ಹೋದಿಸಿ ಪ್ರಸಾದ ವಿತರಿಸಿ ಗೌರವಿಸಿದರು. ದೇಗುಲದ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ದೇಗುಲದ ಪ್ರಧಾನ ಅರ್ಚಕರಾದ ಲಕ್ಷ್ಮಣ್ ಜೋಗಿ, ಅಶ್ವಥ್ ಜೋಗಿ, ಮಹಾಬಲ ಜೋಗಿ, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಮತ್ತಿತರರು ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸುರಭಿ ರಿ. ಬೈಂದೂರು ಸಂಸ್ಥೆಯು ರಜತ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ ʼಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯದ ಕಥೆಗಾರರಿಂದ ಸ್ವತಂತ್ರ ರಚನೆಯ, ಪ್ರಕಟವಾಗಿರದ ಕಥೆಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿದ್ದು, ವಿಜೇತರಿಗೆ ಪ್ರಥಮ ರೂ.10,000, ದ್ವೀತಿಯ ರೂ.8,000, ಹಾಗೂ ತೃತೀಯ ರೂ.5,000 ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ. ನಿಮ್ಮ ಕಥೆಗಳನ್ನು 20 ಸೆಪ್ಟೆಂಬರ್ 2025ರ ಒಳಗೆ ಕಳಹಿಸಬಹುದಾಗಿದೆ. ಅಕ್ಟೋಬರ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಗುವುದು. ನಿಯಮಗಳು: ಹೆಚ್ಚಿನ ಮಾಹಿತಿಗಾಗಿ – 9945944269 ಕಥೆಗಳನ್ನು ಕಳುಹಿಸಬೇಕಾದ ವಿಳಾಸಸುಧಾಕರ ಪಿನಿರ್ದೇಶಕರುಸುರಭಿ ರಿ. ಬೈಂದೂರು,ಬೈಂದೂರು ತಾಲೂಕು, ಉಡುಪಿ ಜಿಲ್ಲೆ – 576214

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಜೀವನದಲ್ಲಿ ಸಾಧನೆಗೆ ಗಳಿಸಬೇಕಾದೆರೆ ಗುರಿ ಇರಬೇಕು ಆಗ ಮಾತ್ರ ಯಶಸ್ಸು ತಮ್ಮತ್ತ ಮುಖ ಮಾಡಲು ಸಾಧ್ಯ ಎಂದು ಇತ್ತೀಚಿಗೆ ಭರತನಾಟ್ಯದಲ್ಲಿ ವಿಶ್ವದಾಖಲೆ ಬರೆದ ಕಲಾವಿದೆ ವಿದೂಷಿ ದಿಕ್ಷಾ ಬ್ರಹ್ಮಾವರ ಹೇಳಿದರು. ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ವತಿಯಿಂದ ವಿಶ್ವಸಾಧಕಿ ದಿಕ್ಷಾ ಬ್ರಹ್ಮಾವರ ಇವರು ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರತಿಯೊಬ್ಬರಲ್ಲೂ ಕಲೆ ಇರುತ್ತದೆ ಅದು ಹೊರಸೂಸಲು ಪೋಷಕರ ಪ್ರೋತ್ಸಾಹ ಅತ್ಯಗತ್ಯ ಈ ನಿಟ್ಟಿನಲ್ಲಿ ನನ್ನ ಈ ಸಾಧನೆಗೆ ಪತಿ ಹಾಗೂ ಕುಟುಂಬಿಕರು,ಗುರುಗಳ ಶ್ರೀ ರಕ್ಷೆ ಜತೆಗೆ ನನ್ನ ಪರಿಶ್ರಮ ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ ಎಂದು ಪರಿಸರಸ್ನೇಹಿ ಪಂಚವರ್ಣ ಸಂಘಟನೆಯಿಂದ ಸ್ವೀಕರಿಸುವ ಭಾಗ್ಯ ಧನ್ಯತೆಯನ್ನು ಕಾಣುವಂತ್ತಾಗಿದೆ ಎಂದರು. ಈ ಸಂದರ್ಭದಲ್ಲಿ ಕೋಟದ ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ ಮತ್ತು ಗಣೇಶ್ ನೆಲ್ಲಿಬೆಟ್ಟು ಇವರು ದಿಕ್ಷಾ ಬ್ರಹ್ಮಾವರ ಇವರನ್ನು ಸನ್ಮಾನಿಸಿದರು. ದಿಕ್ಷಾ ಇವರ ಪತಿ ರಾಹುಲ್,ಪಂಚವರ್ಣದ ಅಧ್ಯಕ್ಷ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿ ಎಲ್.ಕೆ.ಜಿ., ಯು. ಕೆ. ಜಿ.ಹಾಗೂ ದ್ವಿಭಾಷಾ ಮಾಧ್ಯಮ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಬಹುತೇಕ ಪದವೀಧರ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಶ್ಲಾಘಿಸಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ನೀಡಿದ ಕೊಡುಗೆಗಳನ್ನು ಮಕ್ಕಳಿಗೆ ವಿತರಿಸಲಾಯಿತು. ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ವಿಜಯಲಕ್ಷ್ಮಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಜ್ ಕುಮಾರ್, ಸಾಸ್ತಾನ ಸಿಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಅಡಿಗ, ಎಸ್‌ಡಿಎಂಸಿ ಸಮನ್ವಯ ವೇದಿಕೆ ಬ್ರಹ್ಮಾವರ ತಾಲೂಕಿನ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಉದ್ಯಮಿ ಸುರೇಶ್ ಕುಂದರ್ ಐರೋಡಿ, ಪಟ್ಟಣ ಪಂಚಾಯತ್ ಸಾಲಿಗ್ರಾಮದ ಸದಸ್ಯೆ ಸುಲತಾ ಹೆಗ್ಡೆ, ನಿವೃತ್ತ ಮುಖ್ಯೋಪಾಧ್ಯಾಯ ಗಣೇಶ್. ಜಿ.,ನಿವೃತ್ತ ಪೊಲೀಸ್ ಅಧಿಕಾರಿ ಲಕ್ಷ್ಮೀನಾರಾಯಣ, ದಾನಿಗಳಾದ ಪ್ರತಾಪ್ ಖಾರ್ವಿ ಹಾಗೂ ಅಮಿತ್ ಕುಮಾರ್. ಸಾಮಾಜಿಕ ಕಾರ್ಯಕರ್ತ ಶಂಕರ್ ಕುಲಾಲ್,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಡುಪಿ ಜಿಲ್ಲೆ, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ,  ಗಂಗೊಳ್ಳಿ ಟೌನ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್  ಗಂಗೊಳ್ಳಿ,  ರೋಟರಿ ಕ್ಲಬ್ ಗಂಗೊಳ್ಳಿ,  ಮತ್ತು ಎಸ್. ವಿ. ಹಳೆ ವಿದ್ಯಾರ್ಥಿಗಳ ಸಂಘ  ಟ್ರಸ್ಟ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ  ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್  ಮತ್ತು ಟೆನಿಕಾಯ್ಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ನಾಲ್ಕು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಬಾಲಕರ ಬಾಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪ್ರಥಮ ಸ್ಥಾನ, ಬಾಲಕಿಯರ ಟೆನ್ನಿಕಾಯ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ ಹಾಗೂ ಬಾಲಕರ ಟೆನಿಕಾಯ್ಟ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಆಯುರ್ವೇದದಲ್ಲಿ ತಿಳಿಸಿರುವ ದಿನಚರ್ಯೆ, ಋತುಚರ್ಯೆ, ಸದ್ವೃತ್ತ ಪಾಲನೆ ಮಾಡುವುದರಿಂದ ಆರೋಗ್ಯವಂತನು ರೋಗ ಬಾರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಯಲ್ಲಿ   ರೋಗಿಯ ರೋಗವನ್ನು ಕೂಡ ಗುಣಪಡಿಸಬಹುದು ಎಂದು  ಕಾಲ್ತೋಡು ಸ.ಆ.ಚಿ ವೈದ್ಯಾಧಿಕಾರಿ  ಡಾ. ವೀಣಾ ಕಾರಂತ್ ಹೇಳಿದರು. ಅವರು ಎಂದು ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – ಅಂಗನವಾಡಿ ಕೇಂದ್ರ ಹೇರಂಜಾಲು, ಆರೋಗ್ಯ ಇಲಾಖೆ – ಉಪಕೇಂದ್ರ ಹೇರಂಜಾಲು ಇವರ ಸಂಯುಕ್ತ ಆಶ್ರಯದಲ್ಲಿಅಂಗನವಾಡಿ ಕೇಂದ್ರ ಹೇರಂಜಾಲಿನಲ್ಲಿ ನಡೆದ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ – ಪೌಷ್ಟಿಕ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಮನೆಯಂಗಳದಲ್ಲಿ ಇರುವಂತಹ ಅನೇಕ ಸಸ್ಯಗಳನ್ನ ಆಹಾರವಾಗಿ ಉಪಯೋಗಿಸುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಜೊತೆಯಲ್ಲಿ ಅವುಗಳಿಂದಲೇ ಪೌಷ್ಟಿಕ ಆಹಾರವನ್ನು ಕೂಡ ನಾವು ಹೇಗೆ ತಯಾರಿಸಿ ಸೇವಿಸಬಹುದು. ಪೌಷ್ಟಿಕ ಆಹಾರ ಹೇಗಿರಬೇಕು ಎಂದು ತಿಳಿಸುತ್ತಾ ಅನೇಕ ಔಷಧೀಯ ಸಸ್ಯಗಳನ್ನು ಪರಿಚಯಿಸಿ, ಆಹಾರವಾಗಿ ಹಾಗೂ ಔಷಧವಾಗಿ ಹೇಗೆ ಬಳಸಬೇಕು, ಜೊತೆಯಲ್ಲಿ ನಮ್ಮ ಸಾಂಪ್ರದಾಯಿಕ ತಿನಿಸುಗಳ ಮಹತ್ವವನ್ನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿಕುಂದಾಪುರ: ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಫೋಟೋಗ್ರಫಿ ಮತ್ತು ಡಿಜಿಟಲ್ ಕ್ಲಬ್ ನ ಆಶ್ರಯದಲ್ಲಿ ಫೋಟೋಗ್ರಫಿ ಕುರಿತು ವಿಚಾರ ಸಂಕಿರಣ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳಿಸಿದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಜರುಗಿತು.  ಅಂತರಾಷ್ಟ್ರೀಯ ವೇದಿಕೆಯಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಗಳಿಸಿದ ವನ್ಯಜೀವಿ ಛಾಯಾಚಿತ್ರ ಗ್ರಾಹಕರಾದ ಸಂತೋಷ್ ಕುಂದೇಶ್ವರ್ ಅವರ ಛಾಯಾಚಿತ್ರ ಪ್ರದರ್ಶನಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾಲೇಜಿನ ಫೋಟೋಗ್ರಾಫಿ ಅಂಡ್ ಡಿಜಿಟಲ್ ಕ್ಲಬ್ ನ ವಾರ್ಷಿಕ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತಮ್ಮ 25 ವರ್ಷದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು ಮತ್ತು ಫೋಟೋಗ್ರಾಫಿ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಅವರ 30ಕ್ಕೂ ಹೆಚ್ಚಿನ ಪ್ರಶಸ್ತಿ ಗಳಿಸಿದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಜಯ ಕರ್ನಾಟಕ ದಿನಪತ್ರಿಕೆಯ ಹಿರಿಯ ಸಂಪಾದಕರಾದ ಜಾನ್ ಡಿಸೋಜ ಅವರು ಮಾತನಾಡಿ, ಫೋಟೋಗ್ರಾಫಿ ಕುರಿತ ಆಸಕ್ತಿ ಮತ್ತು ಅನುಭವವನ್ನು ಹಂಚಿಕೊಂಡರು. ಅಂತರಾಷ್ಟ್ರೀಯ ಮಟ್ಟದಲ್ಲಿ ವನ್ಯಜೀವಿ ಛಾಯಾಚಿತ್ರ ಗ್ರಹಣದಲ್ಲಿ ಸಾಕಷ್ಟು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.  ಗಂಗೊಳ್ಳಿ: ವಿದ್ಯಾರ್ಥಿಗಳು ಪಠ್ಯದ ಜೊತೆ ವ್ಯವಹಾರ ಜ್ಞಾನ ಮತ್ತು ಸಂವಹನ ಕೌಶಲ್ಯವನ್ನು  ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಇದು ಅತಿ ಮುಖ್ಯವಾಗುತ್ತದೆ ಎಂದು ಉದ್ಯಮಿ ವಿಠ್ಠಲ ಬಿ ಶಣೈ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಎಸ್‌.ವಿ. ಕಾಮರ್ಸ್ ಕ್ಲಬ್ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿಯ ಉದ್ಯಮಿ ರೋಷನ್ ಖಾರ್ವಿ ಎಸ್. ವಿ ಕಾಮರ್ಸ್ ಕ್ಲಬ್ ಲಾಂಛನವನ್ನು ಬಿಡುಗಡೆಗೊಳಿಸಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್‌.ವಿ.ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪಿ  ಪೈ ಮತ್ತು ಮುಖ್ಯ ಅತಿಥಿ ಪತ್ರಕರ್ತ ಬಿ ರಾಘವೇಂದ್ರ ಪೈ ಶುಭ ಹಾರೈಸಿದರು. ಎಸ್. ವಿ.ಕಾಮರ್ಸ್ ಕ್ಲಬ್ ಸಂಯೋಜಕ  ನರೇಂದ್ರ ಎಸ್ ಗಂಗೊಳ್ಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಬಿಸಿಯೂಟ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಾದ ಜಲಜ ಪೂಜಾರಿ, ಪದ್ಮಾವತಿ, ಶಾರದ…

Read More