ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಯಡ್ತರೆ ಗುರ್ಗಿಬೆಟ್ಟು ಶ್ರೀ ಜೈನ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ಶ್ರೀ ಜೈನ ಜಟ್ಟಿಗೇಶ್ವರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಜನವರಿ 19 ಹಾಗು 20ರಂದು ಜರುಗಲಿದೆ. ಜ.19ರ ಗುರುವಾರ ಸಂಜೆ ದೇವತಾ ಪ್ರಾರ್ಥನೆ, ಪುಣ್ಯಾಹ, ಗೇಹ ಪ್ರತಿಗ್ರಹ, ಸ್ಥಾನಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ, ಬಿಂಬ ಶುದ್ಧಿ, ಅಧಿವಾಸ ಪೂಜೆ, ಅಧಿವಾಸ ಹೋಮ, ಶ್ರೀ ದೈವಗಳ ಪ್ರತಿಷ್ಠೆ ನ್ಯಾಸಾದಿಗಳು ಜರುಗಿಲಿದೆ. ಜ.20ರ ಶುಕ್ರವಾರ ಬೆಳಿಗ್ಗೆ ಪುಣ್ಯಹ, ಕಲಾತತ್ವ ಹೋಮ, ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ಕಲಶಾಭಿಷೇಕ, ಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ 6-30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ಕ್ಕೆ ಯಕ್ಷಗಾನ ಕೇಂದ್ರ ಶಿವಪ್ರಭಾ ಇಂದ್ರಾಳಿ ಉಡುಪಿ ಇವರಿಂದ ಯಕ್ಷಗಾನ ‘ಸುದರ್ಶನ ವಿಜಯ’ ಜರುಗಿದೆ. ಈ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳುವಂತೆ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಕಟಣೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಏಕನಾ ಪ್ರೊಡಕ್ಷನ್ ನಿರ್ಮಾಣದ 5ನೇ ಪ್ರಾಜೆಕ್ಟ್ ‘ಹೇಯ್ ಲಡ್ಕಿ’ ಕನ್ನಡ ಮ್ಯೂಸಿಕಲ್ ವಿಡಿಯೋ ಸಾಂಗ್, ಮಕರ ಸಂಕ್ರಾತಿಯಂದು ಏಕನಾ ಪ್ರೊಡಕ್ಷನ್ಸ್ ಯುಟ್ಯೂಬ್ ಚಾನೆಲಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಕಲಾವಿದ ಆರ್. ಪ್ರಹ್ಲಾದ್ ಆಚಾರ್ಯ ಹೇಳಿದರು. ಕುಂದಾಪುರದಲ್ಲಿ ಗುರುವಾರ ಆಯೋಜಿಸಲಾದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹೇಯ್ ಲಡ್ಕಿ’ ಎಂಬ ಕನ್ನಡ ಮ್ಯೂಸಿಕಲ್ ವಿಡಿಯೋ ಸಾಂಗನ್ನು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಡಿರುವುದು ವಿಶೇಷ. ಖ್ಯಾತ ಕನ್ನಡ ಸಿನಿಮಾ ನಿರ್ದೇಶಕ ಸಿಂಪಲ್ ಸುನಿ ಆಲ್ಬಂ ಸಾಂಗ್ ಜ.14ರಂದು ಬಿಡುಗಡೆಗೊಳಿಸಲಿದ್ದಾರೆ. ಹಾಡಿನ ಸಂಗೀತ ನಿರ್ದೇಶನವನ್ನು ಗೌತಮ್ ಕೆ. ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣವನ್ನು ಸನತ್ ಉಪ್ಪುಂದ ನಿರ್ವಹಿಸಿರುತ್ತಾರೆ. ಸಂಕಲನ ತಕ್ಷಕ್ ಮಾಡಿದ್ದರೇ, ಸಾಹಿತ್ಯ, ನಿರ್ದೇಶನ ಹಾಗೂ ಮುಖ್ಯ ಪಾತ್ರವನ್ನು ಆರ್. ಪ್ರಹ್ಲಾದ್ ಆಚಾರ್ಯ ನಿರ್ವಹಿಸಿದ್ದಾರೆ. ನಾಯಕಿಯಾಗಿ ಚಿತ್ರಾ ಸೂರಜ್ ಆಚಾರ್ಯ ನಟಿಸಿದ್ದಾರೆ. ಆಲ್ಬಂ ಸಾಂಗನ್ನು ಮಂಜುನಾಥ ಸಾಲಿಯಾನ್ ತ್ರಾಸಿ, ಆರ್. ಪ್ರಹ್ಲಾದ್ ಆಚಾರ್ಯ ಹಾಗೂ ಗೌತಮ್ ಕೆ. ನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಸರ್ಕಾರಕ್ಕೆ 12,195 ಕೆ.ಎಲ್ ನೈಜ ಹಂಚಿಕೆಯಲ್ಲಿ, ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ 5,472 ಕೆ.ಎಲ್ ಮಾತ್ರ ಮಂಜೂರಾಗಿತ್ತು. ಆದ್ದರಿಂದ, ಕರ್ನಾಟಕದ ಬಡ ಮೀನುಗಾರರಿಗೆ ಸಹಾಯ ಮಾಡುಲು ಉಳಿದ 6,723 ಕೆಎಲ್ಗಳನ್ನು ಕರ್ನಾಟಕ ಸರ್ಕಾರಕ್ಕೆ ಮಂಜೂರು ಮಾಡಲು ಹಾಗೂ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ಸಂಸದರು ಡಿಸೆಂಬರ್ 2022ರ ಚಳಿಗಾಲದ ಅಧಿವೇಶನದ ಸಮಯದಲ್ಲಿ ಮಾನ್ಯ ಕೇಂದ್ರ ಸಚಿವರಲ್ಲಿ ವಿನಂತಿಸಿದ್ದರು. ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ 5,472 ಕೆ.ಎಲ್ ಹಿಂದಿನ ಹಂಚಿಕೆಗೆ ಹೆಚ್ಚುವರಿಯಾಗಿ 2500 ಕೆಎಲ್ ಸಬ್ಸಿಡಿ ರಹಿತ ಪಿಡಿಎಸ್ ಸೀಮೆಎಣ್ಣೆಯನ್ನು ಕರ್ನಾಟಕ ಸರ್ಕಾರಕ್ಕೆ ಮಂಜೂರು ಮಾಡಿದ್ದಕ್ಕಾಗಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ಪರ್ಧಾತ್ಮಕ ಯುಗದಲ್ಲಿ ಸ್ವರ್ಧಾ ಮನೋಭಾವ ಬೆಳೆಸಿಕೊಳ್ಳುವುದೂ ಅಗತ್ಯ: ಸೂರ್ಯ ಎಸ್. ಪೂಜಾರಿ ಕುಂದಾಪ್ರ ಡಾಟ್ ಕಾಂ ಸುದ್ದಿ.ಮುಂಬಯಿ,ಜ.11: ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ, ಸೋಲು ಗೆಲುವು ಮುಖ್ಯವಲ್ಲ. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ನುಡಿದರು. ಅವರು ಜ.8 ರಂದು ಸಯನ್ ಪೂರ್ವ ಜಿಟಿಬಿ ನಗರದಲ್ಲಿರುವ ಗುರುನಾನಾಕ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ ಕುಂದಾಪುರ ಬಿಲ್ಲವ ಕೋಟಿ-ಚೆನ್ನಯ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಾಲಕರು ತಮ್ಮ ಮಕ್ಕಳಿಗೆ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ಸಮುದಾಯ ಸಂಘಟನೆಗಳಲ್ಲಿ ಸಕ್ರಿಯಗೊಳ್ಳುವಂತೆ ಮಾಡಬೇಕು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದಾಗ ಇನ್ನು ಹಲವಾರು ಕಾರ್ಯಕ್ರಮಗಳನ್ನು ನೀಡುವ ಪ್ರೇರಣೆ ದೊರೆಯುತ್ತದೆ ಎಂದರು. ಮುಖ್ಯ ಅತಿಥಿ ಅಂತರಾಷ್ಟ್ರೀಯ ಕರಾಟೆ ಪಟು ವಿಜಯ ಪೂಜಾರಿ ಕೋಟ ಮಾತನಾಡಿ, ನಾನು ಮಹಾನಗರಕ್ಕೆ ಬಂದು ಕ್ಯಾಂಟೀನ್ ಮತ್ತು ಹೋಟೆಲ್ಗಳಲ್ಲಿ ದುಡಿದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರಸ್ತಾವಿತ ಕೊಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೂರು ಗ್ರಾಮ ಸೇರ್ಪಡೆಗೆ ಆಕ್ಷೇಪಿಸಿ ಬಿಜೂರು ಗ್ರಾಮಸ್ಥರು ಬೈಂದೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ವೇಳೆ ಗ್ರಾಮ ಪಂಚಾಯತ್ ಸದಸ್ಯ ವಿರೇಂದ್ರ ಶೆಟ್ಟಿ ಮಾತನಾಡಿ, ಈಗಿನ ಪ್ರಸ್ತಾವಿತ ಸೀಮಾ ನಿರ್ಣಯ ಮಾಡುವಾಗ ತಾಲ್ಲೂಕಿನ ನಕ್ಷೆಯನ್ನು ನೋಡದೇ ಮಾಡಿದ ಹಾಗೇ ತೋರುತ್ತದೆ. ಬಿಜೂರು ಗ್ರಾಮವನ್ನು ಕಂಬದಕೋಣೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಅಥವಾ ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಿದರೆ ಜನರಿಗೆ ಮತ್ತು ಮುಂದೆ ಆಯ್ಕೆಯಾಗಲಿರುವ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅನುಕೂಲವಾಗಲಿದೆ ಎಂದರು. ಗ್ರಾಮಸ್ಥರಾದ ಶ್ರೀಧರ ಬಿಜೂರು ಮಾತನಾಡಿ, ಹೊಸದಾಗಿ ರಚನೆಗೊಂಡಿರುವ ಕೊಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೂರು ಗ್ರಾಮ ಪ್ರಸ್ತಾವಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಕೊಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೂರು ಗ್ರಾಮವು ಸುಮಾರು 52 ಕಿಲೋ ಮೀಟರ್ ದೂರವಿದ್ದು, ಅಲ್ಲಿಂದ ಬಿಜೂರು ಗ್ರಾಮಕ್ಕೆ ನೇರ ರಸ್ತೆ ಕೂಡ ಇರುವುದಿಲ್ಲ. ಮುಂದೆ ಕೊಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗುವ ಸದಸ್ಯರು ಇಡೀ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ರೋಟರಿ ಕ್ಲಬ್ ವತಿಯಿಂದ ಚಿತ್ತೂರು ಸರಕಾರಿ ಪ್ರೌಢಶಾಲೆಯ ಇಂಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಾಲಿನ ಪರೀಕ್ಷೆ ಎದುರಿಸುವ ಕುರಿತು ಮಾಹಿತಿ ನೀಡಲಾಯಿತು. ಅತಿಥಿಯಾಗಿದ್ದ ಕುಮಾರ್ ಎಸ್. ಕಾಂಚನ್ ಪರೀಕ್ಷೆ ಭಯ, ಪರೀಕ್ಷೆ ಎದುರಿಸುವ ರೀತಿ, ಪರೀಕ್ಷೆಗೆ ತಯಾರಿ ಮತ್ತು ಶಿಕ್ಷಣದ ಬಗ್ಗೆ ಸುದೀರ್ಘವಾಗಿ ಮಾತನಾಡಿ ಶುಭ ಹಾರೈಸಿದರು. ಕುಂದಾಪುರ ರೋಟರಿ ಅಧ್ಯಕ್ಷ ರೊ.ವೆಂಕಟೇಶ್ ನಾವುಂದ ಶುಭಹಾರೈಸಿದರು. ಇಂಟರಾಕ್ಟ್ ಅಧ್ಯಕ್ಷ ಶುಶಾಂತ್, ಕಾರ್ಯದರ್ಶಿ ಅಮೂಲ್ಯ, ಇಂಟರಾಕ್ಟ್ ಕೋ-ಆರ್ಡಿನೇಟರ್ ಶಿಕ್ಷಕಿ ಮೀನಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಜಗದೀಶ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹದಿನಾರನೆಯ ಶತಮಾನದ ವಿದೇಶಿ ಆಕ್ರಮಣಕಾರರು, ವಿಶೇಷವಾಗಿ ಬ್ರಿಟಿಷರು ಭಾರತದಲ್ಲಿ ನಿರಂತರವಾಗಿ ಕೇವಲ ಸಂಪತ್ತನ್ನು ಮಾತ್ರ ಲೂಟಿ ಮಾಡಲಿಲ್ಲ, ತಮ್ಮ ದುಷ್ಟ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಮ್ಮ ಆರ್ಥಿಕತೆಗೆ ಕೊಡಲಿ ಪೆಟ್ಟು ಕೊಟ್ಟು, ಸಮಾಜ ರಚನೆಯನ್ನು ಮತ್ತು ವಿವಿಧ ಉತ್ಪಾದನಾ ಕ್ಷೇತ್ರವನ್ನು ಹಾಳು ಮಾಡಿದರು. ಆದರೆ ಯುವಶಕ್ತಿಯ ಪ್ರಮಾಣ ಮತ್ತು ಅವರಲ್ಲಿನ ಅಂತರ್ಗತ ಪ್ರತಿಭೆಯಿಂದಾಗಿ ಕಳೆದ 30 ವರ್ಷಗಳಲ್ಲಿ ಭಾರತ ಬಲಿಷ್ಟವಾಗಿದೆ ಎಂದು ಉಡುಪಿ ಜಿಲ್ಲಾ ಸ್ವಾವಲಂಬಿ ಭಾರತ್ ಅಭಿಯಾನದ ಸಹ ಸಂಯೋಜಕ್ ಪ್ರಸನ್ನ ಉಪ್ಪುಂದ ಹೇಳಿದರು. ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾವಲಂಭಿ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ರಘು ನಾಯ್ಕ್ ಸ್ವಾಗತಿಸಿದರು. ರಾಘವೇಂದ್ರ ಬಿ. ಕೆ ವಂದಿಸಿದರು. ತುಳಸಿದಾಸ್ ಶಿರೂರು ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಪವರ್ ಪಾಯಿಂಟ್ ಪ್ರೆಸೆಂಟೇಶನ್ ತೋರಿಸಿಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ 11ನೇ ಇನಿದನಿ ಕಾರ್ಯಕ್ರಮ ಜನವರಿ 15ರ ಭಾನುವಾರ ಸಂಜೆ 6 ಗಂಟೆಗೆ ಇಲ್ಲಿನ ಬೋರ್ಡ್ ಹೈಸ್ಕೂಲಿನಲ್ಲಿ ಜರುಗಲಿದೆ. ಪ್ರಸಿದ್ಧ ಹಾಗೂ ಯುವ ಪ್ರತಿಭಾನ್ವಿತ ಕಲಾವಿದರು ಸೇರಿದಂತೆ ಒಟ್ಟು 27 ಮಂದಿ ಕಲಾವಿದರ ಇನಿದನಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಹೇಳಿದರು. ಅವರು ಕಲಾಕ್ಷೇತ್ರ ಕುಂದಾಪುರ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶಿವಮೊಗ್ಗದ ವೇಣುಗೋಪಾಲ, ಬೆಂಗಳೂರಿನ ರಮೇಶ್ಚಂದ್ರ ಮತ್ತು ಶೃತಿ ಭಿಡೆ, ಸಂಗೀತ ಬಾಲಚಂದ್ರ ಉಡುಪಿ, ರವೀಂದ್ರ ಪ್ರಭು ಮೂಲ್ಕಿ, ವೈ ಎನ್. ರವೀಂದ್ರ ಮಂಗಳೂರು, ಅಶೋಕ್ ಸಾರಂಗ್ ಕುಂದಾಪುರ ಹಾಗೂ ಯುವ ಪ್ರತಿಭೆ ಪ್ರಾಪ್ತಿ ಹೆಗ್ಡೆ, ಧಾರಿಣಿ ಕುಂದಾಪುರ ಮತ್ತು ಕಮಲ್ ಕುಂದಾಪುರ ಗಾಯಕ ಗಾಯಕಿಯರು ಭಾಗವಹಿಸಲಿದ್ದು, ಗಿಟಾರ್ ಮಾಂತ್ರಿಕ ಮಂಗಳೂರಿನ ರಾಜಗೋಪಾಲ್ ಮತ್ತು ಕೀಬೋರ್ಡ್ ಮಾಂತ್ರಿಕ ದೀಪಕ್ ಶಿವಮೊಗ್ಗ ಮತ್ತು ಇತರೇ ಪರಿಪಕ್ವ ಕಲಾವಿದರುಗಳನ್ನೊಳಗೊಂಡ ತಂಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಳೆದ 45 ವರ್ಷಗಳಿಂದ ಸಕ್ರೀಯವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಚಟುವಟಿಕೆಗಳ ಮೂಲಕ ರಾಜ್ಯದಾದ್ಯಂತ ಗುರುತಿಸಿಕೊಂಡಿರುವ ಪ್ರತಿಷ್ಠಿತ ಲಾವಣ್ಯ ಬೈಂದೂರು ಸಂಸ್ಥೆಯ 2023-25ನೇ ಸಾಲಿನ ನೂತನ ಅಧ್ಯಕ್ಷರಾಗಿ ನರಸಿಂಹ ಬಿ. ನಾಯಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಚ್. ವಿಶ್ವನಾಥ ಆಚಾರ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಲಾವಣ್ಯ ರಂಗಮನೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ನಡೆಯಿತು. ಗೌರವಾಧ್ಯಕ್ಷರಾಗಿ ಯು. ಶ್ರೀನಿವಾಸ ಪ್ರಭು, ವಿ. ಆರ್. ಬಾಲಚಂದ್ರ, ಉಪಾಧ್ಯಕ್ಷರಾಗಿ ರಾಮ ಕೆ., ರವೀಂದ್ರ ಶ್ಯಾನುಭಾಗ್, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಪರಮಾನಂದ, ರೋಶನ್ ಕುಮಾರ್, ರಾಜೇಶ್ ನಾಯ್ಕ, ಕೋಶಾಧಿಕಾರಿ ಸುರೇಶ್ ಹುದಾರ್, ಸಂಘಟನಾ ಕಾರ್ಯದರ್ಶಿಯಾಗಿ ಸುಮಂತ್ ಆಚಾರ್ಯ, ಶಶಾಂಕ್ ಕಾರಂತ್, ಶ್ರೀಧರ್ ವಸ್ರೆ. ವ್ಯವಸ್ಥಾಪಕರಾಗಿ ಹರೆಗೋಡು ಉದಯ್ ಆಚಾರ್ಯ, ಮೂರ್ತಿ ಬೈಂದೂರು, ಸುಬ್ರಹ್ಮಣ್ಯ ಎಸ್., ಗೌರವ ಸಲಹೆಗಾರರಾಗಿ ನಾಕಟ್ಟೆ ನಾಗರಾಜ ಶೆಟ್ಟಿ, ಸದಾಶಿವ ಡಿ. ಪಡುವರಿ, ನಾಗರಾಜ ಗಾಣಿಗ ಬಂಕೇಶ್ವರ, ವಿಶ್ವನಾಥ ಶೆಟ್ಟಿ, ಸುನಿಲ್ ಎಚ್. ಹಾಗೂ ಕಾರ್ಯಕಾರಿ ಸಮಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಎ/ಸಿಎಸ್ ಪ್ರೊಫೆಶನಲ್ ಕೋರ್ಸುಗಳ ತರಬೇತಿ ಸಂಸ್ಥೆ ಶಿಕ್ಷಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್)ನ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟ್ರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ ನವೆಂಬರ್ 2022ರಲ್ಲಿ ನೆಡೆಸಿದ ಸಿಎ ಇಂಟರ್ಮೀಡಿಯೇಟ್ ಮತ್ತು ಸಿಎ ಅಂತಿಮ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ್ (526) ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆಗೈದಿದ್ದಾರೆ. ಸಾತ್ವಿಕ್ (202), ಸಚಿನ್ (226) ಸಿಎ ಅಂತಿಮ ಪರೀಕ್ಷೆಯ ಮೊದಲನೇ ಹಂತ ಮತ್ತು ಷಣ್ಮುಖ (236) ಅಂತಿಮ ಪರೀಕ್ಷೆಯ ಎರಡನೇಯ ಹಂತದಲ್ಲಿ ತೇರ್ಗಡೆ ಹೊಂದಿದರೆ, ಸಂಸ್ಥೆಯ ವಿದ್ಯಾರ್ಥಿಗಳಾದ ಆನುಷ್ಕ ಕುಂದರ್ (545) ಸಂಸ್ಥೆಗೆ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ ಮತ್ತು ಎನ್. ಅಕ್ಷಯ್ ಕಾಮತ್ (215), ಕಿರಣ್ ಕಾಮತ್ (237), ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿಎ ಅಂತಿಮ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅಕ್ಷಿತಾ (258),…
