ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಚಿತ್ರಪಾಡಿಯ ಕಾರ್ತಟ್ಟು ಅಘೋರೇಶ್ವರ ಕಲಾರಂಗ ವತಿಯಿಂದ ಪ್ರತಿವರ್ಷ ನಡೆಸಲ್ಪಡುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಇದೇ ನವೆಂಬರ್ 29ರಂದು ಅಘೋರೇಶ್ವರ ದೇಗುಲದ ಸಭಾಂಗಣದಲ್ಲಿ ಜರಗಲಿದ್ದು ಈ ಬಾರಿಯ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ರಾಜ್ಯದ ಪ್ರಸಿದ್ಧ ಸಾಹಿತಿ, ಶಿಕ್ಷಕ, ಸಂಪನ್ಮೂಲ ವ್ಯಕ್ತಿ ನರೇಂದ್ರ ಕುಮಾರ್ ಕೋಟ ಆಯ್ಕೆಯಾಗಿದ್ದಾರೆ.
ವಿಶೇಷ ಪುರಸ್ಕಾರಕ್ಕೆ ಹಿರಿಯ ಪಾಕತಜ್ಞ ಕಾರ್ತಟ್ಟು ಸುಬ್ರಹ್ಮಣ್ಯ ಕಾರಂತ್, ಹಿರಿಯ ಕೃಷಿಕ ಸೀತಾರಾಮ ಭಟ್ ಹಂದಟ್ಟು, ಕರುನಾಡ ಬುಕ್ ಆಫ್ ರೇಕಾಡ್೯ ದರ್ಶನ್ ಜಿ.ಎನ್, ಕುಸ್ತಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸೃಷ್ಠಿ ಆರ್. ಕೋಟ ಆಯ್ಕೆಯಾಗಿದ್ದಾರೆ.ಪೂರ್ವಾಹ್ನ 08.30ರಿಂದ ಆರಂಭಗೊಳ್ಳುವ ವಾಹನ ಜಾಥ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.












