ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾಡಿನೆಲ್ಲೆಡೆ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದು, ಗಣಪತಿಯ ಭಕ್ತವರ್ಗದಲ್ಲಿ ಸಂಭ್ರಮ ಮನೆಮಾಡಿದೆ. ಈ ನಡುವೆ ಉಡುಪಿಯ ’ಸ್ಯಾಂಡ್ ಥೀಂʼ ಕಲಾವಿದರ ತಂಡವೊಂದು ಕೋಟೇಶ್ವರದ ಅಳೆಅಳಿವೆ ಕಡಲತೀರದಲ್ಲಿ ’ಜೈ ಗಣೇಶ’ ಎಂಬ ಶೀರ್ಷಿಕೆಯೊಂದಿಗೆ ಮರಳು ಶಿಲ್ಪಾಕೃತಿಯನ್ನು ರಚಿಸಿದೆ. ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಅವರುಗಳು ಮರಳುಶಿಲ್ಪವನ್ನು ರಚಿಸಿದ್ದಾರೆ. ಗಣೇಶ ಚತುರ್ಥಿಯ ಅಂಗವಾಗಿ ’ಜೈ ಗಣೇಶ’ ಎಂಬ ಶೀರ್ಷಿಕೆಯೊಂದಿಗೆ 4 ಅಡಿ ಮತ್ತು 6 ಅಡಿ ಎತ್ತರ ಅಗಲಗಳುಳ್ಳ ಕಲಾಕೃತಿಯನ್ನು ರಚಿಸಲಾಗಿದ್ದು, ಆಕರ್ಷಕವಾಗಿ ಮೂಡಿಬಂದಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ಪದವಿ / ಡಿಪ್ಲೋಮಾ ಮತ್ತು ವೃತ್ತಿಪರ ಪದವಿಯವರೆಗೆ ರಾಜ್ಯದಲ್ಲಿರುವ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಮೂಲನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯವೇತನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ ಡಿಪ್ಲೋಮಾ ವರೆಗೆ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಕ್ಟೋಬರ್ 15 ರ ಒಳಗಾಗಿ ಹಾಗೂ ವೃತ್ತಿಪರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ನವೆಂಬರ್ 15 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ ಗ್ರಾಮದ ತೋಟಬೈಲು ಪ್ರದೇಶದ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಸಂಪರ್ಕ ರಸ್ತೆಯಿಂದ ತೋಟಬೈಲು, ಗಾಣಿಗರಕೇರಿಗೆ ಹೋಗುವ ಅನಾದಿ ಕಾಲದ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಿಸಿ, ಬಂದ್ ಮಾಡಿದ್ದು, ಸೋಮವಾರದಂದು ಹಟ್ಟಿಯಂಗಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಬಂದ್ ಮಾಡಲಾದ ರಸ್ತೆಯನ್ನು ತೆರವುಗೊಳಿಸಿ, ಸಾರ್ವಜನಿಕ ಸಂಪರ್ಕಕ್ಕೆ ಮುಕ್ತಗೊಳಿಸಲಾಯಿತು. ತೋಟಬೈಲು ಪ್ರದೇಶ, ಗಾಣಿಗರಕೇರಿ, ಪರಿಸರದಲ್ಲಿ 35ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮ ಪಂಚಾಯತ್ ಈ ರಸ್ತೆಯನ್ನು ಹಲವು ಬಾರಿ ಅಭಿವೃದ್ಧಿ ಪಡಿಸಿತ್ತು. ಈ ಭಾಗದ ಜನರು, ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಮುಖ್ಯರಸ್ತೆಗೆ ಬರಬೇಕು. ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ರಸ್ತೆಯಿಂದ ತೋಟಬೈಲು ಪ್ರದೇಶಕ್ಕೆ ಹೋಗುವ ರಸ್ತೆಯನ್ನು ಜಾಗದ ನಕ್ಷೆಯಲ್ಲಿ ಸ್ಪಷ್ಟವಾಗಿ ನಮೊದಿಸಿದರೂ ಕೂಡಾ ಪಕ್ಕದ ಸ್ಥಳದವರು ರಸ್ತೆಯ ಸಂಪರ್ಕವನ್ನು ಎರಡು ಕಡೆಗಳಿಂದ ಬಂದ್ ಮಾಡಿ, ಅತಿಕ್ರಮಿಸಿಕೊಂಡಿದ್ದರು. ಪಂಚಾಯತ್ ಹಾಗೂ ಕಂದಾಯ ಇಲಾಖೆ ಈ ಹಿಂದೆ ಕೂಡಾ ತೆರವು ಗೊಳಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಹಾಗೂ ಶಾಲೆಯವರು ಗಣೇಶ ಚತುರ್ಥಿಯ ಅಂಗವಾಗಿ ನಡೆಸಿದ ತಾಲೂಕು ಮಟ್ಟದ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 11 ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಪ್ರಾಥಮಿಕ ವಿಭಾಗ:ಭಾವಗೀತೆ – ಸುಹಾನ್, ತೃತೀಯ ಸ್ಥಾನ, ಕನ್ನಡ ಉಕ್ತಲೇಖನ – ಅಧಿತಿ, ಪ್ರಥಮ ಸ್ಥಾನ, ಆಕಾಂಕ್ಷ – ದ್ವಿತೀಯ ಸ್ಥಾನ, ರಸ ಪ್ರಶ್ನೆ – ಅರ್ಷ್, ಪ್ರಥಮ ಸ್ಥಾನ, ಶ್ರೀಯಾ – ದ್ವಿತೀಯ ಸ್ಥಾನ. ಪ್ರೌಢ ವಿಭಾಗ:ಕುಂದಾಪ್ರ ಕನ್ನಡ ಭಾಷಣ – ಹನಿ ಶೆಟ್ಟಿ, ಪ್ರಥಮ ಸ್ಥಾನ, ಇಂಗ್ಲೀಷ್ ಭಾಷಣ – ಅವನಿ – ದ್ವಿತೀಯ ಸ್ಥಾನ, ಸ್ಪರ್ಶ – ತೃತೀಯ ಸ್ಥಾನ ಕ್ರೀಡಾ ವಿಭಾಗ:ಗುಂಡು ಎಸೆತ – ಶ್ರದ್ದಾ – ತೃತೀಯ ಸ್ಥಾನ, ಸುಡೋಕು – ಸಮೀಕ್ಷಾ – ತೃತೀಯ ಸ್ಥಾನ, ಸುಡೋಕು – ವನ್ಮಯಿ – ತೃತೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮ ಗುರಿಯಲ್ಲಿ ಸ್ಪಷ್ಟತೆ, ಅದನ್ನು ಕಾರ್ಯಪ್ರವೃತ್ತವಾಗಿಸುವ ಆತ್ಮವಿಶ್ವಾಸ ಮತ್ತು ಹಂತ ಹಂತದ ಪರೀಕ್ಷೆಗಳಲ್ಲಿ ಯಶಸ್ಸು ಸಿಕ್ಕಿದಾಗ ಮುಂದಿನ ತಯಾರಿ- ಇಂಥ ಸರಳ ಗುಣಗಳನ್ನು ಕಲಿತರೆ ಸಿಎ ಮತ್ತು ಸಿಎಸ್ ಸಂಬಂಧಿತ ಕೋರ್ಸ್ಗಳನ್ನು ಮಾಡಲು ಸುಲಭವಾಗುತ್ತದೆ ಎಂದು ಉಡುಪಿಯ ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನ ತರಬೇತುದಾರರಾದ ಅಲ್ಬನ್ ಹೇಳಿದರು. ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಅಯೋಜಿಸಿದ ಸಿಎ ಮತ್ತು ಸಿಎಸ್ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ತಿಳಿಸಿದರು. ತ್ರಿಷಾ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಯಾದ ಜಯದೀಪ್ ಪ್ರಭಾಕರ್ ಅಮೀನ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ದೀಪಾ ಶೆಟ್ಟಿ ಅವರು ಧನ್ಯವಾದ ಸಲ್ಲಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಆಗಸ್ಟ್ 27 ರಿಂದ ನಾಲ್ಕು ದಿನ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಸೇರಿದಂತೆ 20 ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ, ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಕರಾವಳಿಯಲ್ಲಿ ಗುಡುಗು ಸಹಿತ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪತ್ರಿಕೋದ್ಯಮದಲ್ಲಿ ನೀತಿಸಂಹಿತೆಗಳನ್ನು ಪಾಲಿಸುವುದು ಅತಿ ಮುಖ್ಯ ಎಂದು ಹಿರಿಯ ಪತ್ರಕರ್ತ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್. ಶೆಣೈ ಹೇಳಿದರು. ಅವರು ಸೋಮವಾರದಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಪತ್ರಿಕೋದ್ಯಮ ವಿಭಾಗ ಮತ್ತು ರೇಡಿಯೋ ಕುಂದಾಪ್ರ 89.6 ಎಫ್.ಎಮ್ ಅವರು ಜಂಟಿಯಾಗಿ ಆಯೋಜಿಸಿದ್ದ “ತಿಂಗಳ ಅತಿಥಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಿಕೋದ್ಯಮ ಇಂದು ತುಂಬಾ ಬೆಳೆದಿದೆ. ಮುದ್ರಣ ತಂತ್ರಜ್ಞಾನದಿಂದ ಆರಂಭಿಸಿ ಇಂದು ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿ ವಸ್ತು ವಿಷಯಗಳನ್ನು ಕ್ಷಣ ಕ್ಷಣಕ್ಕೂ ಮಾಹಿತಿಯನ್ನು ನೀಡುವವರೆಗೆ ಬೆಳೆದಿದೆ. ಅಂತರ್ಜಾಲವನ್ನು ಬಳಸಿಕೊಂಡು ವಿಷಯಗಳನ್ನು ಪಸರಿಸುವಲ್ಲಿ ಸಾಮಾಜಿಕ ಮಾಧ್ಯಮಗಳು ಮೇಲುಗೈ ಸಾಧಿಸುತ್ತಿದೆ. ಹೀಗಿರುವಾಗ ನಾವು ವಿಷಯಗಳನ್ನು ನೀಡುವಲ್ಲಿನ ಧಾವಂತವೋ ಅಥವಾ ಪ್ರಚಾರಕ್ಕಾಗಿ ಸುದ್ದಿಯನ್ನು ನೀಡಬಾರದು. ಆದರೆ ಸುದ್ದಿಯನ್ನು ಸಾರ್ವಜನಿಕರಿಗೆ ಕೊಡುವಾಗ ಕೂಲಂಕಷವಾಗಿ ಗಮನಿಸಿ ಪತ್ರಿಕೋದ್ಯಮದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತಿ ಮುಖ್ಯ ಎಂದು ಅಭಿಪ್ರಾಯಪಟ್ಟರು. ಬರವಣಿಗೆಯ ನಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಬರೆಯಬೇಕು ಎಂಬ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ರಿ. ಪ್ರವರ್ತಿತ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೊತ್ತಾಡಿ ಉಮೇಶ್ ಶೆಟ್ಟಿ ಅವರು ಮಂಡಿಸಿದ “ಕರಾವಳಿ ಕರ್ನಾಟಕದಲ್ಲಿರುವ ಗ್ರಾಮೀಣ ಮಹಿಳಾ ಉದ್ಯಮಿಗಳಿಗಿರುವ ಅವಕಾಶಗಳು ಮತ್ತು ಸವಾಲುಗಳು” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಕೊಯಮುತ್ತೂರಿನ ಭಾರತೀಯಾರ್ ವಿಶ್ವ ವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ. ಅವರ ಸಂಶೋಧನೆಗೆ ಉಡುಪಿ ಜಿಲ್ಲೆಯ ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ನಿವೃತ್ತ ವಾಣಿಜ್ಯ ಪ್ರಾಧ್ಯಾಪಕರಾದ ಡಾ|. ಎಸ್. ಗಣೇಶ ಭಟ್ ಮಾರ್ಗದರ್ಶನ ನೀಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ವರ್ಗಗಳಿಗೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು ಮತ್ತು ಸಿಖ್ಖರು) ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಿ, ಶಿಷ್ಯವೇತನ ಮಂಜೂರಾತಿಗಾಗಿ ಅರ್ಹ ಆಸಕ್ತ ಕಾನೂನು ಪದವೀಧರರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟಂಬರ್ 5 ರ ವರೆಗ ವಿಸ್ತರಿಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574596 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ (ಕೆವೈಎಸ್ಎ) ಆಯೋಜಿಸಿದ್ದ 6ನೇ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ ನಲ್ಲಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಲಾಸ್ಯಾ ಮಧ್ಯಸ್ಥ ಅತ್ಯುತ್ತಮ ಪ್ರದರ್ಶನದ ಮೂಲಕ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. ಸಾಂಪ್ರದಾಯಿಕ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಟ್ವಿಸ್ಟಿಂಗ್ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ, ಸಾಂಪ್ರದಾಯಿಕ ತಂಡ ವಿಭಾಗದಲ್ಲಿ ಪ್ರಥಮ ಸ್ಥಾನ, ಬ್ಯಾಕ್ಬೆಂಡ್ ವೈಯಕ್ತಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ 3 ಚಿನ್ನದ ಪದಕಗಳನ್ನು ಹಾಗೂ 1 ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ. ಹಾಗೂ ಸಂಸ್ಥೆಯ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವಿಜೇತ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.
